Jothe Jotheyali: ಆರಾಧನಾ ಅಮೆರಿಕಾಗೆ ಹೋಗದೇ ವಾಪಸ್ ಬಂದಿದ್ದೇಕೆ..?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಮ್ಯಾ, ಕರುಣಾಕರ ಮನದಲ್ಲಿದ್ದರು ಮರೆತು ಸುಮ್ಮನಿದ್ದಾಳೆ. ಹೇಗಾದರೂ ಮಾಡಿ ಇವರಿಬ್ಬರನ್ನು ಒಂದು ಮಾಡಬೇಕು ಎಂದು ಸಂಪತ್ ಪ್ರಯತ್ನ ಪಡುತ್ತಿದ್ದಾನೆ. ಹೀಗಾಗಿ ಸಂಪತ್ ಬೇಕಂತಲೇ ಪ್ರೀತಿಯ ವಿಚಾರವನ್ನು ತೆಗೆಯುತ್ತಾನೆ. ಆದಷ್ಟು ಬೇಗ ಕರುಣಾಕರನನ್ನು ಒಪ್ಪಿಕೊ ಬೇಗ ಮದುವೆಯಾಗು ಎಂದು ಬುದ್ಧಿವಾದ ಹೇಳುತ್ತಾನೆ. ಈ ಮಾತಿಗೆ ರಮ್ಯಾ, ಸಂಪತ್‌ಗೆ ಬೈಯುತ್ತಾಳೆ.
ಆಗ ಸಂಪತ್ ನನಗೆ ಪ್ರೀತಿ ಮಾಡಬೇಕು. ಮದುವೆಯಾಗಿ ನನ್ನದೇ ಆದ ಸಂಸಾರವನ್ನು ಪಡೆಯಬೇಕು ಎಂದು ಆಸೆ ಪಟ್ಟಿದ್ದೇನೆ. ಆದರೆ, ಎಲ್ಲರೂ ನನ್ನನ್ನ ಕಾಮಿಡಿಯನ್ ಆಗಿ ನೋಡುತ್ತಾರೆ. ಮದುವೆಯಾಗಲು ಒಪ್ಪುವುದೂ ಇಲ್ಲ. ಇರುವ ಅವಕಾಶವನ್ನು ಕಳೆದುಕೊಳ್ಳಬೇಡ ಎಂದು ಹೇಳುತ್ತಾನೆ. ರಮ್ಯಾಗೆ ಸಂಪತ್ ಹೇಳಿದ ಮಾತುಗಳು ಅರ್ಥವಾಗುತ್ತದೆ.

ವರ್ಧನ್ ಮನೆಯಲ್ಲಿ ಅನು, ಆರಾಧನಾ ಹಾಗೂ ಆರ್ಯ ಮೂವರು ಅಮೆರಿಕಾಗೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಸಂಜೀವಿನಿ ಮಾಡಿದ ಪ್ಲ್ಯಾನ್‌ನಿಂದ ಶಾರದಾ ದೇವಿ ಕಾಲು ಉಳುಕಿಸಿಕೊಂಡು ಹಾಸಿಗೆ ಸೇರಿದ್ದಾರೆ. ಹರ್ಷನಿಗೆ ಜ್ವರವೂ ಬಂದಿದೆ. ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ಸಂಜೀವಿನಿ ಮಾನ್ಸಿ ಮತ್ತು ಹರ್ಷನನ್ನು ದೂರ ಮಾಡಿ, ಭಾವನಾಳ ಜೊತೆಗೆ ಹರ್ಷನ ಮದುವೆ ಮಾಡಿಸಲು ಯೋಜನೆ ರೂಪಿಸಿಕೊಂಡಿದ್ದಾಳೆ. ಹೀಗಾಗಿ ಭಾವನಾಳನ್ನು ತಯಾರಿಸುತ್ತಿದ್ದಾಳೆ.

ಮಾನ್ಸಿ ಹರ್ಷನಿಗೆ ಜ್ವರ ಇರುವುದನ್ನು ತಿಳಿದು, ಕಷಾಯ ಮಾಡಿಸುತ್ತಿದ್ದಾಳೆ. ಇದು ತಿಳಿದ ಸಂಜೀವಿನಿ ನನ್ನ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದೀಯಾ ಎಂದು ಕಪಾಳಕ್ಕೆ ಹೊಡೆಯುತ್ತಾಳೆ. ಆಗ ಮಾನ್ಸಿ, ಸಂಜೀವಿನಿ ಗ್ರಹಚಾರ ಕೆಡುತ್ತಿದೆ. ಎಲ್ಲವನ್ನೂ ಸೇರಿಸಿ ಒಟ್ಟಿಗೆ ವಾಪಸ್ ಕೊಡಬೇಕು ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾಳೆ.
ಇತ್ತ ಸಂಜೀವಿನಿ ಆ ಕಷಾಯವನ್ನು ಭಾವನಾಳಿಗೆ ಕೊಟ್ಟು ಹರ್ಷನಿಗೆ ಕೊಟ್ಟು ಕುಡಿಸು. ಈ ಸಂದರ್ಭವನ್ನು ನಿನ್ನದಾಗಿಸಿಕೊಂಡು ಹರ್ಷನನ್ನು ನಿನ್ನ ಕಡೆ ಸೆಳೆದುಕೊ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಮಾನ್ಸಿ ಶಾಕ್ ಆಗುತ್ತಾಳೆ. ಇನ್ನು ಭಾವನಾ ಕಷಾಯ ಕೊಟ್ಟು ಬರುತ್ತಾಳೆ. ಹರ್ಷ ಸ್ವಲ್ಪ ಕಾಮಿಡಿಯಾಗಿ ಮಾತನಾಡುತ್ತಾನೆ. ಇದನ್ನು ಕೇಳಿಸಿಕೊಂಡು ಮಾನ್ಸಿ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನು ಹರ್ಷ ಕಷಾಯ ಕುಡಿಯದ ಕಾರಣ, ಮಾನ್ಸಿ ಹೋಗಿ ಅನು ಮೇಡಂ ಬೈಯುತ್ತಾರೆ ಕಷಾಯ ಕುಡಿಯಿರಿ ಎಂದು ಹೇಳುತ್ತಾಳೆ. ಆಗ ಹರ್ಷ ಕಷಾಯವನ್ನು ಕುಡಿಯುತ್ತಾಳೆ.
ಪುಷ್ಪಾ, ಶಾರದಮ್ಮನವರನ್ನು ನೋಡಲು ತೈಲವನ್ನು ತರುತ್ತಾಳೆ. ಮನಸ್ಸಿಗೆ ಸಮಾಧಾನವಿಲ್ಲದ ಕಾರಣ ಮೀರಾಳಿಗೆ ಫೋನ್ ಮಾಡುತ್ತಾಳೆ. ಆಗ ಮೀರಾ ಆಫಿಸಿನಲ್ಲಿ ಎಲ್ಲವೂ ತಲೆಕೆಳಗಾಗಿದೆ. ಆರಾಧನಾ, ಆರ್ಯ ಸರ್ ಹಾಗೂ ಅನುನನ್ನು ಬೇರೆ ಮಾಡುವ ಸಾಧ್ಯತೆ ಇದೆ. ಆದರೆ, ಅದನ್ನು ತಪ್ಪಿಸಲು ನಾವು ಬೇರೆ ಪ್ಲ್ಯಾನ್ ಅನ್ನು ಮಾಡಿದ್ದೇನೆ. ಯಾರೂ ಕೂಡ ಆರ್ಯ ಸರ್ ಹಾಗೂ ಅನುಳನ್ನು ಬೇರೆ ಮಾಡುವುದಕ್ಕೆ ಸಾಧ್ಯವಿಲ್ಲ. ನೀವು ಆರಾಮಾಗಿರಿ. ಅವರಿಬ್ಬರಿಗೂ ಏನೂ ಆಗುವುದಿಲ್ಲ ಎಂದು ಹೇಳುತ್ತಾಳೆ.
ಪುಷ್ಪಾಳಿಗೆ ಮೀರಾ ಹೇಳುವುದು ಅರ್ಥವಾಗುವುದಿಲ್ಲ. ಅವಳ ತಲೆಯಲ್ಲಿ ಜೋಗ್ತವ್ವ ಹೇಳಿದ್ದಷ್ಟೇ ಕಾಡುತ್ತಿದೆ. ಇನ್ನು ಶಾರದ ಅವರನ್ನು ನೋಡಲು ಹೋಗಬೇಕು ಎಂದು ಅನ್ನುತ್ತಾಳೆ. ಆದರೆ ಸುಬ್ಬು ತಾನು ಬರುವುದಿಲ್ಲ ಎಂದು ಹೇಳುತ್ತಾನೆ. ಇನ್ನು ಸಂಜೀವಿನಿ ಆರಾಧನಾ ಸ್ಟೇಟಸ್ ಏನಾಗಿದೆ ಎಂದು ತಿಳಿಯಲು ಕಾಲ್ ಮಾಡುತ್ತಾಳೆ.
ಮೊದಲು ಆರಾಧನಾ ಕಾಲ್ ರಿಸೀವ್ ಮಾಡುವುದಿಲ್ಲ. ಪದೇ ಪದೇ ಸಂಜೀವಿನಿ ಕಾಲ್ ಮಾಡಿದಾಗ ರಿಸೀವ್ ಮಾಡುವ ಆರಾಧನಾ ಕೂಗಾಡುತ್ತಾಳೆ. ಆಗ ಆರಾಧನಾ ಪ್ಯಾಸೆಂಜರ್ ಫ್ಲೈಟ್ ಗೆ ಕಾದು ಕಾದು ಸಾಕಾಗಿ ವಾಪಸ್ ಮನೆಗೆ ಬರುತ್ತಿದ್ದೀನಿ ಎಂದು ಹೇಳುತ್ತಾಳೆ. ಅನು ಮತ್ತು ಆರ್ಯ ಜೆಟ್ ನಲ್ಲಿ ಹೋಗಿದ್ದಾರೆ ಎಂದು ಕೋಪ ಮಾಡಿಕೊಳ್ಳುತ್ತಾಳೆ.


Click it and Unblock the Notifications











