Jothe Jotheyali: ಮಗಳಿಗೆ ಡಿವೋರ್ಸ್ ಕೊಡಿಸಲು ಮುಂದಾದ ಸುಬ್ಬು
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮನೆಯಲ್ಲಿ ಎಲ್ಲರೂ ಅಷ್ಟಮಿ ಪೂಜೆಗೆ ಸಿದ್ಧರಾಗಿರುತ್ತಾರೆ. ಆದರೆ ಆರ್ಯ ಕಾಣಿಸದೇ ಕಾರಣ ಗಾಬರಿಯಾಗುತ್ತಾರೆ. ಆದರೂ ಪೂಜೆಯನ್ನು ಮುಂದುವರಿಸಲು ಶಾರದಾ ಹೇಳುತ್ತಾಳೆ.
ಇನ್ನು ಪೂಜೆ ನಡೆಯುವಾಗ ಹರ್ಷ, ದಾದನ ಹುಡುಕುತ್ತೇನೆ ಎಂದು ಹೇಳುತ್ತಾನೆ. ಆದರೆ ಅನು ಬೇಡ ಪೂಜೆ ಮುಗಿಯುವುದರ ಒಳಗೆ ಆರ್ಯ ಸರ್ ಬರುತ್ತಾರೆ ಯಾರೂ ಹುಡುಕಬೇಡಿ ಎಂದು ಹೇಳುತ್ತಾಳೆ.
ಪುಷ್ಪಾ ಹಾಗೂ ಸುಬ್ಬು ಇಬ್ಬರೂ ಕೂಡ ಮಗಳ ಜೀವನದ ಬಗ್ಗೆ ಯೋಚಿಸಲು ಶುರು ಮಾಡುತ್ತಾರೆ. ನೋಡುವುದಕ್ಕೆ ದೊಡ್ಡ ಮನೆಯಾದರೂ ಮಗಳಿಗೆ ಯಾವ ಸುಖವೂ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ.

ಝೇಂಡೇಗೆ ಶಿಕ್ಷೆ ಕೊಟ್ಟ ಆರ್ಯ
ಮನೆಯಿಂದ ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿರುವ ಆರ್ಯ, ಝೇಂಡೇ ಅನ್ನು ಕರೆದುಕೊಂಡು ಹೋಗಿರುತ್ತಾನೆ. ಝೇಂಡೇ ಅನ್ನು ನಿನ್ನ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಇನ್ಮುಂದೆ ನೀನು ಜೀವನ ಪೂರ್ತಿ ಈ ರೂಮಿನಲ್ಲೇ ಕಳೆಯಬೇಕು. ಆದರೆ, ನಿನಗೆ ಊಟ, ತಿಂಡಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಝೇಂಡೇ ಇದಕ್ಕೆ ಒಪ್ಪುವುದಿಲ್ಲ. ಆದರೆ, ಆರ್ಯ ಬೇರೆ ದಾರಿ ಇಲ್ಲದೇ, ರೂಮ್ ಲಾಕ್ ಮಾಡುತ್ತಾನೆ. ಝೇಂಡೇ ಎಷ್ಟು ಕೇಳಿಕೊಂಡರೂ ಬಿಡುವುದಿಲ್ಲ. ಆರ್ಯ ಅಲ್ಲಿಂದ ಬೇಸರದಲ್ಲೇ ಹೊರಟು ಬಿಡುತ್ತಾನೆ.

ಅನು ಮೇಲೆ ಆರ್ಯನ ಕೋಪ
ಅನು ಪೂಜೆಗೆ ತನ್ನಿಷ್ಟದ ಸಂಪಿಗೆ ಹೂವನ್ನು ತರಿಸಿರುತ್ತಾಳೆ. ಆರ್ಯ ಪೂಜೆಯ ವೇಳೆಗೆ ಮನೆಗೆ ಬರುತ್ತಾನೆ. ಆರ್ಯನನ್ನು ನೋಡಿದ ಎಲ್ಲರೂ ಖುಷಿ ಪಡುತ್ತಾರೆ. ಆದರೆ ಆರ್ಯ ಸಂಪಿಗೆ ಹೂವನ್ನು ನೋಡಿ ಕೋಪ ಮಾಡಿಕೊಳ್ಳುತ್ತಾನೆ. ಈ ಮನೆಯಲ್ಲಿ ಯಾರಿಗೂ ನನ್ನ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ಈ ಮನೆಯಲ್ಲಿ ನೆಮ್ಮದಿಯೇ ಇಲ್ಲ ಎಂದು ಕೂಗಾಡುತ್ತಾನೆ. ಸಂಪಿಗೆ ಹೂವನ್ನು ನೋಡಿ ಆರ್ಯ ಹೀಗೆ ನಡೆದುಕೊಂಡ ಎಂಬುದು ಹೊಸಮನಿ ಅಜ್ಜನಿಗೂ ಅನುಗೂ ಅರ್ಥವಾಗುತ್ತದೆ. ಆದರೆ ಪುಷ್ಪಾ, ಸುಬ್ಬುಗೆ ಗೊತ್ತಾಗುವುದಿಲ್ಲ.

ಮಗಳಿಗೆ ಡಿವೋರ್ಸ್ ಕೊಡಿಸಿ ಎಂದ ಸುಬ್ಬು
ಮಗಳ ಬದುಕು ಸುಖವಾಗಿಲ್ಲ. ನಿತ್ಯ ಕಷ್ಟದಲ್ಲೇ ಬದುಕುತ್ತಿದ್ದಾಳೆ ಎಂದು ತಿಳಿಯುವ ಸುಬ್ಬು, ಶಾರದಾ ದೇವಿ ಬಳಿ ಮಾತನಾಡಲು ಮುಂದಾಗುತ್ತಾನೆ. ನಾನು ಕಷ್ಟದಲ್ಲೇ ನನ್ನ ಮಗಳನ್ನು ಬೆಳೆಸಿದ್ದೇನೆ. ಆದರೆ, ಯಾವತ್ತೂ ಅವಳು ಉಸಿರುಗಟ್ಟಿ ಬದುಕುವ ಸ್ಥಿತಿ ತಂದಿರಲಿಲ್ಲ. ಇಲ್ಲಿ ಎಲ್ಲಾ ಇದೆ. ಆದರೆ, ನನ್ನ ಮಗಳಿಗೆ ನೆಮ್ಮದಿ, ಖುಷಿ ಎರಡೂ ಇಲ್ಲ. ಹಾಗಾಗಿ ಆರ್ಯನಿಂದ ನನ್ನ ಮಗಳಿಗೆ ಡಿವೋರ್ಸ್ ಕೊಡಿಸಿ. ನನ್ನ ಮಗಳನ್ನು ನಾನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಶಾರದಾ ಮತ್ತು ಪುಷ್ಪಾ ಇಬ್ಬರೂ ಸುಬ್ಬುಗೆ ಸಮಾಧಾನ ಹೇಳುತ್ತಾರೆ.

ಮತ್ತೆ ಹೊಸ ಟ್ವಿಸ್ಟ್
ಆರ್ಯ, ಝೇಂಡೇ ಅನ್ನು ಕೂಡಿ ಹಾಕಿದ್ದರೂ ಮನದಲ್ಲೇ ಅವನಿಗಾಗಿ ಪರಿತಪಿಸುತ್ತಿದ್ದಾನೆ. ಇತ್ತ ಅನು, ರಾಜನಂದಿನಿಯಂತೆ ನಾಟಕವಾಡುತ್ತಿದ್ದಾಳೆ ಎಂದು ತಿಳಿದಿದ್ದಾನೆ. ಹೀಗಾಗಿ ಅನು, ಆರ್ಯನನ್ನು ಮಾತನಾಡಿಸಲು ಬಂದಾಗ, ರಾಜನಂದಿನಿ ಥರ ನಾಟಕ ಮಾಡಬೇಡ ಎಂದು ಬೈಯುತ್ತಾನೆ. ಆದರೆ ಅನು ತಮ್ಮ ಮದುವೆಯ ಸಾಕ್ಷಿ ತೋರಿಸಿ, ತಾನೇ ರಾಜನಂದಿನಿ ಎಂಬುದನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಾಳೆ. ಆದರೆ, ಆರ್ಯ ನೀನು ಬೇಕಂತಲೇ ನನ್ನ ಮತ್ತು ಝೇಂಡೇ ಅನ್ನು ದೂರ ಮಾಡುತ್ತಿದ್ದೀಯಾ ಎಂದು ಆರೋಪಿಸುತ್ತಾನೆ. ಈಗ ಧಾರಾವಾಹಿಯಲ್ಲಿ ಇದು ಹೊಸ ಟ್ವಿಸ್ಟ್ ಪಡೆದುಕೊಂಡಿರುವುದು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.


Click it and Unblock the Notifications











