Jothe Jotheyali: ಆರ್ಯವರ್ಧನ್‌ನನ್ನು ಅಪಹರಿಸಿದವರು ಯಾರು..?

By ಪ್ರಿಯಾ ದೊರೆ

Article desc: 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹರ್ಷ, ಆರಾಧನಾ ಹೇಳಿದರೂ ಕೇಳದ ಆರ್ಯ, ವಠಾರಕ್ಕೆ ಹೋಗೇ ಹೋಗುತ್ತೇನೆ ಎಂದು ಹೇಳುತ್ತಾನೆ. ಆರ್ಯನ ನಡವಳಿಕೆಯಿಂದ ಆರಾಧನಾ ಭಾವನೆಗಳಿಗೆ ಹರ್ಟ್ ಆಗುತ್ತೆ.

ಹರ್ಷ ಕೂಡ ಆರ್ಯನ ಮಾತಿನಿಂದ ಬೇಸರ ಮಾಡಿಕೊಳ್ಳುತ್ತಾನೆ. ಇದರಿಂದ ಶಾರದಾ ದೇವಿ ಅನ್ನು ಪ್ರಶ್ನೆ ಮಾಡುತ್ತಾನೆ. ಅನು ನಿಮ್ಮ ಸೊಸೆಯಷ್ಟೇ ಅಲ್ಲ ಮಗಳು ಕೂಡ ಹೌದು. ಸುಬ್ಬು ಮಾತಿಗೆ ಯಾಕೆ ತಲೆದೂಗುತ್ತೀರಾ ಎಂದು ಕೇಳುತ್ತಾನೆ.

ಅದಕ್ಕೆ ಶಾರದಾ ದೇವಿ ಅವರು ನಾನು ಅನು ವಿಚಾರದಲ್ಲಿ ಆಕೆ ನನ್ನ ಮಗಳು ಎಂದು ಪ್ರೂವ್ ಮಾಡಲು ಹೆಚ್ಚು ಸಮಯ ಬೇಕಿಲ್ಲ. ಆದರೆ, ಅದಕ್ಕೆಲ್ಲಾ ಸಮಯ ಬರಬೇಕು ಎಂದು ಹರ್ಷನನ್ನು ಸಮಾಧಾನ ಮಾಡುತ್ತಾಳೆ.

 ವಠಾರಕ್ಕೆ ಬಂದ ಆರ್ಯ

ವಠಾರಕ್ಕೆ ಬಂದ ಆರ್ಯ

ಸುಬ್ಬು ಆರ್ಯನ ಫೋಟೋ ಜೊತೆಗೆ ಅನು ಫೋಟೋ ಹಾಕಿ ಪೋಸ್ಟರ್ ರೆಡಿ ಮಾಡಿರುವುದಕ್ಕೆ ಗಲಾಟೆ ಮಾಡುತ್ತಾನೆ. ವಠಾರದ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಟೆರೆಸ್ ಮೇಲೆ ಕುಳಿತಿರುತ್ತಾನೆ. ಪುಷ್ಪಾ ಹೋಗಿ ಸುಬ್ಬುಗೆ ಬೈಯುತ್ತಾಳೆ. ಹೀಗೆಲ್ಲಾ ಹಠ ಮಾಡಬೇಡ, ಎಲ್ಲರ ಎದುರಿಗೂ ಅನು ಮತ್ತು ಆರ್ಯನಿಗೆ ಮದುವೆ ಮಾಡಿಕೊಟ್ಟಿದ್ದೇವೆ ಎಂದು ಬುದ್ಧಿ ಹೇಳಿ ಬರುತ್ತಾಳೆ. ಸುಬ್ಬು ಮೇಲಿಂದ ನಿಂತು ಎಲ್ಲವನ್ನೂ ನೋಡುತ್ತಿರುತ್ತಾನೆ. ಆರ್ಯ ವಠಾರಕ್ಕೆ ಬಂದಾಗ ವಠಾರದ ಜನರೆಲ್ಲರೂ ಸ್ವಾಗತ ಮಾಡುತ್ತಾರೆ. ಆರ್ಯ ಮತ್ತು ಅನು ಇಬ್ಬರೂ ಸೇರಿ ಟೇಪ್ ಕಟ್ ಮಾಡುತ್ತಾರೆ.

ಅನುಗೆ ಕಷ್ಟ ಕೊಟ್ಟೆ ಎಂದ ಆರ್ಯ

ಅನುಗೆ ಕಷ್ಟ ಕೊಟ್ಟೆ ಎಂದ ಆರ್ಯ

ಕಾರ್ಯಕ್ರಮದಲ್ಲಿ ಮಾತನಾಡುವ ಆರ್ಯ, ಅನುಳನ್ನು ಇಲ್ಲಿಂದ ಮದುವೆ ಆಗಿ ಕರೆದುಕೊಂಡ ಹೋದಮೇಲೆ ನಿತ್ಯ ಅನು ಕಷ್ಟಪಡುತ್ತಿದ್ದಾಳೆ. ಒಂದು ದಿನವೂ ಅವಳಿಗೆ ಸುಖ ಕೊಡಲಿಲ್ಲ. ನನಗೆ ಆಕ್ಸಿಡೆಂಟ್ ಆದ ಮೇಲೆ ಅನುಳನ್ನ ಮದುವೆಯಾಗಿರುವುದೇ ಮರೆತು ಹೋಗಿದೆ. ಆದರೂ, ಕೂಡ ಅನು ಎಲ್ಲಾ ಕಷ್ಟವನ್ನು ಸಹಿಸಿಕೊಂಡಳು ಎಂದು ಹೇಳುತ್ತಾನೆ. ಆಗ ಅನು ಮಾತು ಆರಂಭಿಸುತ್ತಾಳೆ. ನನಗೆ ಆರ್ಯ ಸರ್ ಇಂದ ಕಷ್ಟ ಆಗಿದ್ದು ನಿಜ. ಆದರೆ, ಆರ್ಯ ಸರ್ ಅನುಭವಿಸಿದಷ್ಟು ಕಷ್ಟವನ್ನು ನಾನೇನು ಅನುಭವಿಸಿಲ್ಲ. ಯಾರು ಏನೇ ಅಂದರೂ ಏನೇ ಆದರೂ ನಾವಿಬ್ಬರು ಸದಾ ಜೊತೆ ಜೊತೆಯಲಿ ಎಂದು ಹೇಳುತ್ತಾಳೆ.

ವಠಾರದಲ್ಲಿ ರಮ್ಯಾಗೆ ಕರುಣಾಕರ ಪ್ರಪೋಸ್

ವಠಾರದಲ್ಲಿ ರಮ್ಯಾಗೆ ಕರುಣಾಕರ ಪ್ರಪೋಸ್

ಇದೇ ವೇಳೆಗೆ ಆರ್ಯನನ್ನು ಕಿಡ್ನ್ಯಾಪ್ ಮಾಡುವ ಸಲುವಾಗಿ ಝೇಂಡೇ ಪ್ಲ್ಯಾನ್ ಮಾಡಿರುತ್ತಾನೆ. ಕರುಣಾಕರನ ತಲೆ ಕೆಡಿಸಿ ರಮ್ಯಾಗೆ ಪ್ರೊಪೋಸ್ ಮಾಡುವಂತೆ ವಠಾರಕ್ಕೆ ಕಳಿಸುತ್ತಾನೆ. ಕರುಣಾಕರ ವಠಾರಕ್ಕೆ ಬಂದು ಮೈಕ್ ಹಿಡಿದು ರಮ್ಯಾಗೆ ಪ್ರಪೋಸ್ ಮಾಡುತ್ತಾನೆ. ಇದರಿಂದ ಎಲ್ಲರೂ ಶಾಕ್ ಆಗುತ್ತಾರೆ. ರಮ್ಯಾಗೆ ಕೋಪವೇ ಬರುತ್ತದೆ. ಅಷ್ಟರಲ್ಲಿ ಆರ್ಯನಿಗೆ ಫೋನ್ ಕಾಲ್ ಒಂದು ಬರುತ್ತದೆ. ಹಾಗಾಗಿ ಸೈಡ್‌ಗೆ ಹೋಗುತ್ತಾನೆ.

ಅನುಗೆ ಮತ್ತೊಂದು ಸಂಕಷ್ಟ

ಅನುಗೆ ಮತ್ತೊಂದು ಸಂಕಷ್ಟ

ಆರ್ಯ ಆಚೆ ಬರುತ್ತಿದ್ದಂತೆ ಕಾಯುತ್ತಿದ್ದ ಝೇಂಡೇ ಅಪಹರಿಸುತ್ತಾನೆ. ಝೇಂಡೇ ಮುಂದೆ ಏನು ಮಾಡುತ್ತಾನೋ ಗೊತ್ತಿಲ್ಲ. ಆರ್ಯನನ್ನು ಮತ್ತೆ ಯಾವುತ್ತೂ ಸಿಗದಂತೆ ಕರೆದುಕೊಂಡು ಹೋಗುತ್ತಾನೋ ಇಲ್ಲವೇ ಅನುಳನ್ನು ಆಟ ಆಡಿಸಲು ಈ ಪ್ಲ್ಯಾನ್ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಅನುಗಂತೂ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

More from Filmibeat

English summary
Jothe Jotheyali Serial 8th March Episode Written Update. karunakara comes to vatara and proposes ramya. Ramya feels irritated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X