ಅಪ್ಪನಿಗೆ ಮಾತು ಕೊಟ್ಟ ಅನು: ಆರ್ಯನನ್ನು ಬಿಟ್ಟು ಬರುವುದು ಗ್ಯಾರೆಂಟಿನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಳೆದ ಐದಾರು ತಿಂಗಳಿನಿಂದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ಒಂದಾದ ಮೇಲೆ ಒಂದು ಕಥೆಯನ್ನು ಹೆಣೆಯಲಾಗುತ್ತಿದೆ. ಸಂಜು ಕಥೆ, ಬಳಿಕ ರಾಜನಂದಿನಿ ಕಥೆಯಾದ ಮೇಲೆ ರಾಜವರ್ಧನ್ ಕತೆಯನ್ನು ಆರ್ಯ ಹೇಳುತ್ತಾನೆ.

ನಂತರ ವಿಶ್ವಾಸ್ ದೇಸಾಯಿ, ಬಳಿಕ ಪ್ರಿಯದರ್ಶಿನಿ, ಅಪಘಾತ, ಆರ್ಯನ ಸಾವು, ಝೇಂಡೇ ಪ್ಲ್ಯಾನ್ ಹೀಗೆ ಕಥೆ ನಿಲ್ಲದೇ, ಒಂದಾದ ಮೇಲೆ ಒಂದು ಮುಂದುವರೆಯುತ್ತಲೇ ಇದೆ.

ಈಗ ಮತ್ತೆ ಆರ್ಯ ಹೊಸ ಕಥೆಯನ್ನು ಶುರು ಮಾಡಿದ್ದಾನೆ. ಝೇಂಡೇ ಅನ್ನು ಕೂಡಿ ಹಾಕಿ, ಅನುಳನ್ನು ನಿನ್ನ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾನೆ. ಇದೆಲ್ಲಾ ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡುತ್ತಿದೆ.

ಎಲ್ಲರಿಗೂ ಮಂಗಳಾರತಿ ಕೊಟ್ಟ ಅನು

ಎಲ್ಲರಿಗೂ ಮಂಗಳಾರತಿ ಕೊಟ್ಟ ಅನು

ಆರ್ಯನ ನಡವಳಿಕೆಯಿಂದ ಅನುಗೆ ಕಷ್ಟವಾಗುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ, ತನ್ನ ಪಾಡಿಗೆ ತಾನು ಏನೂ ಆಗಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಬೆಳಗ್ಗೆದ್ದು, ದೇವರಿಗೆ ಪೂಜೆ ಮಾಡಿದ ಅನು ಎಲ್ಲರಿಗೂ ಮಂಗಳಾರತಿಯನ್ನು ಕೊಡುತ್ತಾಳೆ. ಆಗ ಸುಬ್ಬುಗೆ ಶಾಕ್ ಆಗುತ್ತೆ. ನನ್ನ ಮಗಳು ಎಷ್ಟು ಆರಾಮಾಗಿದ್ದಾಳೆ ಎಂದು ಮನದಲ್ಲೇ ಯೋಚಿಸಲು ಶುರು ಮಾಡುತ್ತಾನೆ.

ಅನುನ ನೋಡಿ ಹರ್ಷಗೆ ಆಶ್ಚರ್ಯ

ಅನುನ ನೋಡಿ ಹರ್ಷಗೆ ಆಶ್ಚರ್ಯ

ಮಂಗಳಾರತಿ ಕೊಡಲು ಹೋದಾಗ ಹರ್ಷ, ಅನುಳನ್ನು ನೋಡಿ ಆಶ್ಚರ್ಯ ಪಡುತ್ತಾನೆ. ಇದೆಲ್ಲಾ ಹೇಗೆ ಸಾಧ್ಯ ಅತ್ತಿಗೆ. ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ನೀವು ಹೇಗೆ ದೇವರಿಗೆ ನೆಮ್ಮದಿಯಿಂದ ಪೂಜೆ ಮಾಡುತ್ತಿದ್ದೀರಾ ಎಂದು ಕೇಳುತ್ತಾನೆ. ಇದಕ್ಕೆ ಅನು ದೇವರು ನಮಗೆ ಕಷ್ಟ ಕೊಡುವುದಕ್ಕೂ ಕಾರಣ ಇರುತ್ತೆ. ನಾವು ದೇವರನ್ನು ನಂಬಿದರೆ ನಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾಳೆ. ಇತ್ತ ಶಾರದಾ, ಅನು ಹಾಗೂ ಆರ್ಯನಿಗೆ ಡಿವೋರ್ಸ್ ಕೊಡಸಿ ಎಂದು ಕೇಳಿದ ಸುಬ್ಬು ಬಗ್ಗೆಯೇ ಯೋಚಿಸುತ್ತಿದ್ದಾಳೆ. ಅನು ಮತ್ತು ಆರ್ಯ ಬೇರೆ ಆಗಬಾರದು ಎಂಬುದು ಶಾರದಾ ಆಲೋಚನೆ.

ಝೇಂಡೇಯನ್ನು ಭೇಟಿಯಾದ ಆರ್ಯ

ಝೇಂಡೇಯನ್ನು ಭೇಟಿಯಾದ ಆರ್ಯ

ಮನೆಯಲ್ಲಿ ಮತ್ತೆ ಆರ್ಯ ಕಾಣಿಸುತ್ತಿರುವುದಿಲ್ಲ. ಮೊಬೈಲ್ ಫೋನ್ ಅನ್ನು ಕೂಡ ಮನೆಯಲ್ಲೇ ಇಟ್ಟು ಹೋಗಿರುತ್ತಾನೆ. ಆರ್ಯ ಯಾಕೆ ಹೀಗೆ ಪದೇ ಪದೇ ಹೇಳದೇ ಕೇಳದೇ ಹೋಗುತ್ತಿದ್ದಾನೆ ಎಂಬುದು ಗೊತ್ತಾಗುವುದಿಲ್ಲ. ಆದರೆ ಆರ್ಯ, ಝೇಂಡೇ ಅನ್ನು ನೋಡಲು ಹೋಗಿರುತ್ತಾನೆ. ಝೇಂಡೇ, ಆರ್ಯ ಬರುವ ದಾರಿಯನ್ನೇ ಎದುರು ನೋಡುತ್ತಿರುತ್ತಾನೆ. ಆರ್ಯ ಗೇಟ್ ಬಳಿ ಬಂದಿದ್ದನ್ನು ನೋಡಿದ ಝೇಂಡೇ ಖುಷಿ ಪಡುತ್ತಾನೆ. ನನ್ನನ್ನು ಆರ್ಯ ಕರೆದುಕೊಂಡು ಹೋಗುತ್ತಾನೆ ಎಂದು ರೆಡಿಯಾಗುತ್ತಾನೆ. ಆದರೆ ಆರ್ಯ, ಝೇಂಡೇಗೆ ತಿಂಡಿಯನ್ನು ತೆಗೆದುಕೊಂಡು ಬಂದಿರುತ್ತಾನೆ.

ಡಿವೋರ್ಸ್ ಮಾಡಲು ಹೇಳುತ್ತಾನಾ ಸುಬ್ಬು

ಡಿವೋರ್ಸ್ ಮಾಡಲು ಹೇಳುತ್ತಾನಾ ಸುಬ್ಬು

ಸುಬ್ಬು ಮಗಳ ಬಳಿ ಮಾತು ತೆಗೆದುಕೊಳ್ಳುತ್ತಾನೆ. ನನ್ನ ನಿರ್ಧಾರಕ್ಕೆ ಬೆಲೆ ಕೊಡುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಅನು ಖಂಡಿತವಾಗಿಯೂ. ನೀವು ಏನೇ ಹೇಳಿದರೂ ಅದನ್ನು ನಾನು ಪಾಲಿಸುತ್ತೀನಿ ಎಂದು ಹೇಳುತ್ತಾಳೆ. ಅದಕ್ಕೆ ಸುಬ್ಬು ನಾನು ಕೇಳುವ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ಕೊಡುತ್ತೀಯಾ ಎಂದು ಕೇಳುತ್ತಾನೆ. ಆಗ ಅನು ನೀವು ಕೇಳುವುದಕ್ಕೆ ಸತ್ಯವನ್ನೇ ಹೇಳುತ್ತೀನಿ. ಸತ್ಯವನ್ನ ಬಿಟ್ಟು ಬೇರೆನನ್ನೂ ಹೇಳಲ್ಲ ಎಂದು ಹೇಳುತ್ತಾಳೆ. ಸುಬ್ಬು ಆರ್ಯನನ್ನು ಬಿಟ್ಟು ಬಾ ಎಂದು ಅನುಗೆ ಹೇಳುತ್ತಾನಾ..? ಮಗಳಿಗೆ ಡಿವೋರ್ಸ್ ಕೊಡಿಸುವುದಕ್ಕೆ ಮುಂದಾಗುತ್ತಾನಾ ಎಂಬುದೇ ಈಗ ಕುತೂಹಕವಾಗಿದೆ.

More from Filmibeat

English summary
Jothe Jotheyali Serial 9th February Episode Written Update. Subbu decides to give divorce for anu. Now the worry is Anu promised subbu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X