For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ಊಹೆ ಸತ್ಯವಾಯ್ತು: ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್!

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲೀಗ ಮತ್ತೊಂದು ಮಹಾಟ್ವಿಸ್ಟ್. ಪ್ರಿಯದರ್ಶಿನಿ ಅವರ ಇಬ್ಬರೂ ಮಕ್ಕಳು ಆಸ್ಪತ್ರೆ ಪಾಲಾಗಿದ್ದಾರೆ. ವಿಶ್ವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆರ್ಯವರ್ಧನ್‌ಗೆ ಅಪಘಾತವಾಗಿದೆ.

  ವಿಶ್ವಾಸ್ ತಾನು ಮಾಡಿಕೊಂಡ ಸಾಲವನ್ನು ತೀರಿಸಲಾಗದು ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾನೆ. ಈ ಸುದ್ದಿಯನ್ನು ತಿಳಿದು ಪ್ರಿಯದರ್ಶನಿ ಅವರು ದುಃಖಿತರಾಗಿದ್ದಾರೆ.

  ಲೀಲಾಗೆ ಸವಾಲು ಹಾಕಿದ ದುರ್ಗಾ? ಲೀಲಾ ಪ್ಲಾನ್ ವರ್ಕ್ ಆಗುತ್ತಾ?ಲೀಲಾಗೆ ಸವಾಲು ಹಾಕಿದ ದುರ್ಗಾ? ಲೀಲಾ ಪ್ಲಾನ್ ವರ್ಕ್ ಆಗುತ್ತಾ?

  ಇತ್ತ ಶಾರದಾ ದೇವಿ ಆರ್ಯವರ್ಧನ್‌ಗೆ ಅಪಘಾತವಾಗಿರುವ ವಿಚಾರವನ್ನು ಯಾವುದೇ ಕಾರಣಕ್ಕೂ ಅನುಗೆ ತಿಳಿಯಬಾರದು ಎಂದು ಹರ್ಷನಿಗೆ ಹೇಳಿದ್ದಾಳೆ. ಶಾರದಾ, ಆರ್ಯವರ್ಧನ್‌ನ ನೋಡಲು ಬೆಳಗಾವಿಗೆ ಹೊರಟಿದ್ದಾಳೆ. ಧಾರಾವಾಹಿಯಲ್ಲಿನ ಈ ಘಟ್ಟ ಕುತೂಹಲಕಾರಿಯಾಗಿದ್ದು, ಮುಂದೇನಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

  ಬಿಕ್ಕಿ ಬಿಕ್ಕಿ ಅಳುತ್ತಿರುವ ಪ್ರಿಯದರ್ಶಿನಿ

  ಬಿಕ್ಕಿ ಬಿಕ್ಕಿ ಅಳುತ್ತಿರುವ ಪ್ರಿಯದರ್ಶಿನಿ

  ವಿಶ್ವಾಸ್ ತಾನು ಮಾಡಿದ ಸಾಲದ ಹೊರೆಯನ್ನು ಹೊರಲಾಗದೇ, ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಪ್ರಿಯದರ್ಶನಿ ಮಗನ ಕಷ್ಟಗಳನ್ನು ನಿವಾರಿಸಲು ಆರ್ಯವರ್ಧನ್ ನನ್ನು ಕರೆಸಿದ್ದಳು. ಆದರೆ ಅಮ್ಮನಿಗೆ ತನ್ನ ಜವಾಬ್ದಾರಿಯ ಬಗ್ಗೆ ಅರ್ಥವಾಗಿಲ್ಲ ಎಂದು ತಿಳಿದು ವಿಶ್ವಾಸ್ ಸೂಸೈಡ್ ಮಾಡಿಕೊಂಡಿದ್ದಾನೆ. ವೈದ್ಯರ ಚಿಕಿತ್ಸೆಗೂ ಸ್ಪಂದಿಸದೇ ವಿಶ್ವಾಸ್ ಕೊನೆಯುಸಿರೆಳೆದಿದ್ದಾನೆ. ಈ ಸುದ್ದಿಯನ್ನು ಕೇಳಿದ ಪ್ರಿಯದರ್ಶಿನಿ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾರೆ. ಯಾಕೆ ಮಗನೇ ಹೀಗೆ ಮಾಡಿದೆ. ಎಲ್ಲರಿಗೂ ನಾನೇನು ಎಂದು ಉತ್ತರಿಸಲಿ ಎಂದು ಗೋಳಾಡಿದ್ದಾಳೆ.

  'ಜೊತೆ ಜೊತೆಯಲಿ' ಇರೋಣ ಸ್ವಲ್ಪ ತಾಳ್ಮೆಯಿಂದಿರಿ ಎಂದ ನಟ ಅನಿರುದ್ಧ್; ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್'ಜೊತೆ ಜೊತೆಯಲಿ' ಇರೋಣ ಸ್ವಲ್ಪ ತಾಳ್ಮೆಯಿಂದಿರಿ ಎಂದ ನಟ ಅನಿರುದ್ಧ್; ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್

  ಆರ್ಯವರ್ಧನ್‌ಗೆ ಪ್ಲಾಸ್ಟಿಕ್ ಸರ್ಜರಿ

  ಆರ್ಯವರ್ಧನ್‌ಗೆ ಪ್ಲಾಸ್ಟಿಕ್ ಸರ್ಜರಿ

  ಇತ್ತ ವೈದ್ಯರು ಪ್ರಿಯದರ್ಶಿನಿ ಆರ್ಯವರ್ಧನ್ ಅವರ ತಾಯಿ ಎಂದು ತಿಳಿದು, ಪ್ಲಾಸ್ಟಿಕ್ ಸರ್ಜರಿ ಮಾಡಿಸುವ ಬಗ್ಗೆ ಮಾತನಾಡಿದ್ದಾರೆ. ಪ್ರಿಯದರ್ಶಿನಿ ಒಬ್ಬ ಮಗನನ್ನಂತೂ ಕಳೆದುಕೊಂಡೆ. ಅದೇ ಮಗನ ಮುಖವನ್ನು ಮತ್ತೊಬ್ಬ ಮಗನ ರೂಪದಲ್ಲಿ ನೋಡಲು ಮುಂದಾಗಿದ್ದಾಳೆ. ಹೀಗಾಗಿ ವೈದ್ಯರ ನಿರ್ಧಾರಕ್ಕೆ ಒಪ್ಪಿಗೆ ಕೊಟ್ಟಿದ್ದಾಳೆ. ವಿಶ್ವಾಸ್ ಮುಖದ ಚರ್ಮವನ್ನು ಆರ್ಯವರ್ಧನ್ ಗೆ ಅಳವಡಿಸಲು ವೈದ್ಯರು ಮುಂದಾಗಿದ್ದಾರೆ. ಅಲ್ಲಿಗೆ ಪ್ರೇಕ್ಷಕರ ಊಹೆ ಸರಿಯಾಗಿದೆ. ಆರ್ಯವರ್ಧನ್ ಪಾತ್ರವನ್ನು ಇನ್ಮುಂದೆ ಹರೀಶ್ ರಾಜ್ ಮಾಡುತ್ತಾರೆ ಎಂಬುದು ಪಕ್ಕಾ ಆಗಿದೆ. ಅನಿರುದ್ಧ್ ಬದಲು ಹರೀಶ್ ರಾಜ್ ಅವರು ಇನ್ಮುಂದೆ ಆರ್ಯವರ್ಧನ್ ಆಗಿ ಧಾರಾವಾಹಿಯಲ್ಲಿ ಮುಂದುವರೆಯಲಿದ್ದಾರೆ.

  ಆಸ್ಪತ್ರೆಗೆ ಬಂದ ವೇದಾಂತ್, ಎಜೆ, ಆದಿತ್ಯ

  ಆಸ್ಪತ್ರೆಗೆ ಬಂದ ವೇದಾಂತ್, ಎಜೆ, ಆದಿತ್ಯ

  ವಿಶ್ವಾಸ್ ಪರಿಸ್ಥಿತಿ ತಿಳಿದ ಉದ್ಯಮಿಗಳಾದ ವೇದಾಂತ್, ಎಜೆ, ಆದಿತ್ಯ ಎಲ್ಲರೂ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಪ್ರಿಯದರ್ಶಿನಿ ಅವರೊಂದಿಗೆ ಮಾತನಾಡಿದ್ದಾರೆ. ವಿಶ್ವಾಸ್ ಕಷ್ಟಕ್ಕೆ ನಾವಿದ್ದೇವೆ ಎಂದು ಹೇಳಿದ್ದಾರೆ. ಆದರೆ, ವಿಶ್ವಾಸ್ ತೀರಿಕೊಂಡ ಸುದ್ದಿ ಕೇಳಿ ಬೇಸರಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಯವರ್ಧನ್‌ಗೆ ಅಪಘಾತವಾಗಿದ್ದು, ಅವರ ಮುಖ ಬದಲಾವಣೆ ಬಗ್ಗೆಯೂ ತಿಳಿದುಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಈ ವಿಚಾರವನ್ನು ಯಾವುದೇ ಕಾರಣಕ್ಕೂ ಯಾರಿಗೂ ಹೇಳುವುದಿಲ್ಲ ಎಂದು ಪ್ರಿಯದರ್ಶಿನಿ ಅವರಿಗೆ ಮಾತುಕೊಟ್ಟಿದ್ದಾರೆ.

  ಅನು ಬಗ್ಗೆ ಆತಂಕಗೊಂಡ ಮನೆಯವರು

  ಅನು ಬಗ್ಗೆ ಆತಂಕಗೊಂಡ ಮನೆಯವರು

  ಆಸ್ಪತ್ರೆಗೆ ಶಾರದಾ ದೇವಿ ಭೇಟಿ ಕೊಟ್ಟಿದ್ದಾರೆ. ಇದೇ ವೇಳೆ ಸುದ್ದಿವಾಹಿನಿಗಳಲ್ಲಿ ಆರ್ಯವರ್ಧನ್ ಅವರಿಗೆ ಅಪಘಾತವಾಗಿದ್ದು, ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಿತ್ತರವಾಗಿದೆ. ಇದನ್ನು ಕೇಳಿದ ಶಾರದಾ ಶಾಕ್ ಆಗಿದ್ದಾರೆ. ಈ ವಿಚಾರ ಯಾವುದೇ ಕಾರಣಕ್ಕೂ ಅನುಗೆ ತಿಳಿಯಬಾರದು ಎಂದು ಪುಷ್ಪಾಗೆ ಕರೆ ಮಾಡಿದ್ದಾರೆ. ಆದರೆ ಪುಷ್ಪಾ ಕೂಡ ಈ ಸುದ್ದಿಯನ್ನು ಕೇಳುತ್ತಿದ್ದು, ದಂಗಾಗಿದ್ದಾರೆ. ಆದರೆ ಆರ್ಯವರ್ಧನ್ ಬಗ್ಗೆ ಅನುಗೆ ಯಾವ ಸುದ್ದಿಯೂ ತಿಳಿಯದಂತೆ ನೋಡಿಕೊಳ್ಳಿ, ಸೀದಾ ನಮ್ಮ ಮನೆಗೆ ಹೋಗಿ ಎಂದಿದ್ದಾಳೆ. ಪುಷ್ಪಾ, ಅನುಳನ್ನು ವರ್ಧನ್ ಮನೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

  English summary
  Aryavardhan charater yet to be changed. Harish raj continues as arya.
  Sunday, September 11, 2022, 15:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X