Apoorva Shree: ಸೀರಿಯಲ್ ನಟಿ ಅಪೂರ್ವ ಶ್ರೀ ಸಿನಿಮಾ ಜರ್ನಿ ಇಲ್ಲಿದೆ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಹಿಟ್ ಆದ ನಟಿ ಅಪೂರ್ವಶ್ರೀ. ಹಲವು ವರ್ಷಗಳಿಂದ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಜೊತೆ ಜೊತೆಯಲಿ ಧಾರಾವಾಹಿ ಇವರಿಗೆ ಹೆಸರು ತಂದುಕೊಟ್ಟಿದೆ. ಇದೀಗ ಅಪೂರ್ವಶ್ರೀ ಅವರ ನಟನೆಯ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮುಂದಿನ ತಿಂಗಳು ಅಪೂರ್ವಶ್ರೀ ನಟಿಸಿದ ಸೀರಿಯಲ್ ತೆರೆಗೆ ಬರಲಿದೆ.

ಓದುವುದು, ಬರೆಯುವುದು ಗೊತ್ತಿಲ್ಲದಿದ್ದರೂ ಕನಸನ್ನು ನನಸು ಮಾಡಿಕೊಂಡ ಅಪೂರ್ವಶ್ರೀ ಅವರು 1992ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅಪೂರ್ವಶ್ರೀ ಅವರ ಮೊದಲ ಚಿತ್ರ ಮಲ್ಲಿಗೆ ಹೂವೇ. ಒಂದೇ ಟೇಕ್ ನಲ್ಲಿ ಡೈಲಾಗ್ ಹೇಳಿ ಮುಗಿಸುತ್ತಿದ್ದ ಅಪೂರ್ವಶ್ರೀ ಅವರು ನಟಿಸುವುದನ್ನು ಕರಗತ ಮಾಡಿಕೊಂಡಿದ್ದರು. ಗುರಿ ಬಗ್ಗೆ ಶ್ರದ್ಧೆ ಒಂದು ಇದ್ದರೆ ಸಾಕು ಎನ್ನುತ್ತಾರೆ ಅಪೂರ್ವಶ್ರೀ. ಸುಂದರಿ ಗಂಡ ಸದಾನಂದ, ದಾಸ, ಜಾಕಿ, ಅಣ್ಣಬಾಂಡ್, ಕಲ್ಪನ, ಮಿಲನ, ಸುಂಟರಗಾಳಿ, ಗಾಜಿನ ಮನೆ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೀರೋಯಿನ್ ಆಗಿ ನಟಿಸಲು ಅವಕಾಶ ಸಿಕ್ಕರೂ, ಆಗಿನ ಕಾಲದಲ್ಲಿ ತಬ್ಬಿಕೊಳ್ಳಬೇಕು, ಮುತ್ತು ಕೊಡಬೇಕು ಎಂಬ ಕಾರಣಕ್ಕೆ ಸಿಕ್ಕ ಅವಕಾಶಗಳನ್ನು ಬಿಟ್ಟು ಮಂಜುಳಾ ಗುರುರಾಜ್ ಅವರ ಜೊತೆಗೆ ಆರ್ಕೆಸ್ಟ್ರಾಗಳಲ್ಲಿ ಸುಮಾರು 5-6 ವರ್ಷಗಳ ಕಾಲ ಡ್ಯಾನ್ಸ್ ಮಾಡುತ್ತಿದ್ದರು. ನಂತರ ಮದುವೆ ಮಕ್ಕಳು ಎಂದು ಸುಮ್ಮನಾಗಿ ಬಿಟ್ಟಿದ್ದರು.

Jothe Jotheyali Serial Actress Apoorva Shree Upcoming Movie List Is Here

ಸುಮಾರು ಎಂಟು ವರ್ಷಗಳ ಕಾಲ ಮನೆಯಲ್ಲೇ ಇದ್ದರು. ನಟಿಸುವ ಆಸೆ ಇದ್ದರೂ, ಸಂಪರ್ಕವಿಲ್ಲದೇ ಸುಮ್ಮನಿದ್ದರು. ಒಮ್ಮೆ ಅವಕಾಶ ಸಿಕ್ಕಿ ಮತ್ತೆ ನಟಿಸಲು ಆರಂಭಿಸಿದರು. ಲಕುಮಿ ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಅಪೂರ್ವಶ್ರೀ ಅವರು ಈಗ ತಮ್ಮ ನಟನೆಯ ಮೂಲಕವೇ ಮನೆ ಮಾತಾಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲೇ ಅಪೂರ್ವಶ್ರೀ ಅವರು ನಮ್ಮನೆ ಯುವರಾಣಿ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Jothe Jotheyali Serial Actress Apoorva Shree Upcoming Movie List Is Here

ಪಾಪ ಪಾಂಡು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅಪೂರ್ವಶ್ರೀ ಅವರು ಈಗ ಕ್ರಿಟಿಕಲ್ ಕೀರ್ತನೆಗಳು ಎಂಬ ಕಂಗ್ಲೀಷ್ ಹೆಸರಿರುವ ವಿಭಿನ್ನ ಕಥೆಯುಳ್ಳ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ವಿಚಿತ್ರವಾಗಿದ್ದು, ಮೇ 12ರಂದು ತೆರೆಗೆ ಬರುತ್ತಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಕುಮಾರ್ ಎಲ್ ಮಾಡಿದ್ದು, ಇದೊಂದು ಐಪಿಎಲ್ ಬೆಟ್ಟಿಂಗ್ ಕಥಾಹಂದರವನ್ನು ಹೊಂದಿದೆ. 'ಐಪಿಎಲ್ ನಲ್ಲಿ ಎತ್ಕೊಂಡೆ ಕಾಲು' ಎಂಬ ಹಾಡು ಈಗಾಗಲೇ ತುಂಬಾ ಫೇಮಸ್ ಆಗಿದೆ.

Recommended Video

Raveena Tandon | KGF 2 | ರವೀನಾ, ರಮಿಕಾಸೇನ್ ಆಗಿದ್ದು ಹೇಗೆ | Ramika Sen | Yash

More from Filmibeat

English summary
Jothe Jotheyali Serial Actress Apoorva Shree Upcoming Movie List Is Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X