ಇಲ್ಲಿದೆ ಮಾನಸ ಮನೋಹರ್ ಫಿಟ್ನೆಸ್ ಸೀಕ್ರೆಟ್ !
ನಟಿ ಮಾನಸ ಮನೋಹರ್. ಈಗ ಕಿರುತೆರೆಯಲ್ಲಿ ಮೀರಾ ಹೆಗಡೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಮಾನಸ ಮನೋಹರ್ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ವಿಲನ್ ಎನ್ನುವುದಕ್ಕಿಂತ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸಿನಿ ಲೈಫ್‌ಗೆ ಬಂದಿದ್ದು ಹೇಗೆ ಗೊತ್ತಾ?
ಎಂಬಿಎ ಓದಿದ ನಟಿ ಮಾನಸ ಮನೋಹರ್, ನಟಿ, ನಿರೂಪಕಿಯಾಗಿ ಈಗ ಫೇಮಸ್ ಆಗಿದ್ದಾರೆ. ಮಾನಸ ಮನೋಹರ್ ಮಾಡೆಲ್ ಕೂಡ ಆಗಿದ್ದು, ಯಾವ ಸಿನಿಮಾ ನಟಿಯರಿಗೇನು ಕಡಿಮೆ ಇಲ್ಲ ಎಂಬಂತಿದ್ದಾರೆ. ಮಾನಸ ಮನೋಹರ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದ ಇಷ್ಟದ ಆಹಾರವನ್ನು ಸವಿದು ದಪ್ಪಗಾಗಿದ್ದರು. ಆದರೆ, ಮಾನಸ ಮನೋಹರ್ ಮಾತ್ರ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಮಾನಸ ಮನೋಹರ್ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು.

ಮಾನಸ ಮನೋಹರ್‌ಗೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ 'ಶುಭವಿವಾಹ' ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡರು. ತದನಂತರ ಮಾನಸಗೆ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. ಎಲ್ಲಾ ಧಾರಾವಾಹಿಗಳಲ್ಲೂ ಮಾನಸ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಇಷ್ಟವಂತೆ. ನೆಗೆಟಿವ್ ರೋಲ್ ಮೂಲಕವಾದರೂ ಜನರ ಮನ ಗೆಲ್ಲುವ ಪ್ರಯತ್ನ ಮಾನಸರದ್ದು. ಇನ್ನು ಕಳೆದೆರಡು ವರ್ಷಗಳಿಂದ ಮಾನಸ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಮಾನಸ ಮನೋಹರ್ ಸದಾ ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿಯೇ ಲಾಕ್‌ಡೌನ್ ಸಂದರ್ಭದಲ್ಲಿ ಬರೋಬ್ಬರಿ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಪ್ರತಿನಿತ್ಯ 2 ಗಂಟೆ ವರ್ಕೌಟ್ ಮಾಡುವ ಮಾನಸ ಮನೆಯ ಮಹಡಿಯಲ್ಲಿ 1 ಗಂಟೆ ನಡೆಯುತ್ತಿದ್ದರಂತೆ. ಓದಿನಲ್ಲಿ ಮುಂದಿದ್ದ ಮಾನಸ ಆಕ್ಟಿಂಗ್‌ನಲ್ಲೂ ಮೊದಲಿದ್ದಾರೆ. ಮನೆಯಲ್ಲಿ ತಾವು ನಟಿಸುವುದಕ್ಕೆ ವಿರೋಧವಿತ್ತಂತೆ. ಎರಡು ವರ್ಷಗಳ ಕಾಲ ಪ್ರಯತ್ನ ಪಟ್ಟು ಮನೆಯಲ್ಲಿ ಒಪ್ಪಿಸಿದರಂತೆ. ಸದ್ಯ ಮಾನಸ ಮನೋಹರ್ ಎಲ್ಲರ ಅಚ್ಚುಮೆಚ್ಚಿನ ಮೀರಾ ಹೆಗಡೆ ಆಗಿದ್ದಾರೆ.


Click it and Unblock the Notifications











