For Quick Alerts
  ALLOW NOTIFICATIONS  
  For Daily Alerts

  ಇಲ್ಲಿದೆ ಮಾನಸ ಮನೋಹರ್ ಫಿಟ್ನೆಸ್ ಸೀಕ್ರೆಟ್ !

  By ಪ್ರಿಯಾ ದೊರೆ
  |

  ನಟಿ ಮಾನಸ ಮನೋಹರ್. ಈಗ ಕಿರುತೆರೆಯಲ್ಲಿ ಮೀರಾ ಹೆಗಡೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಮಾನಸ ಮನೋಹರ್ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ವಿಲನ್ ಎನ್ನುವುದಕ್ಕಿಂತ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸಿನಿ ಲೈಫ್‌ಗೆ ಬಂದಿದ್ದು ಹೇಗೆ ಗೊತ್ತಾ?

  ಎಂಬಿಎ ಓದಿದ ನಟಿ ಮಾನಸ ಮನೋಹರ್, ನಟಿ, ನಿರೂಪಕಿಯಾಗಿ ಈಗ ಫೇಮಸ್ ಆಗಿದ್ದಾರೆ. ಮಾನಸ ಮನೋಹರ್ ಮಾಡೆಲ್ ಕೂಡ ಆಗಿದ್ದು, ಯಾವ ಸಿನಿಮಾ ನಟಿಯರಿಗೇನು ಕಡಿಮೆ ಇಲ್ಲ ಎಂಬಂತಿದ್ದಾರೆ. ಮಾನಸ ಮನೋಹರ್‌ಗೆ ದೊಡ್ಡ ಅಭಿಮಾನಿಗಳ ಬಳಗವಿದೆ.

  ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದ ಇಷ್ಟದ ಆಹಾರವನ್ನು ಸವಿದು ದಪ್ಪಗಾಗಿದ್ದರು. ಆದರೆ, ಮಾನಸ ಮನೋಹರ್ ಮಾತ್ರ ತಮ್ಮ ಫಿಟ್‌ನೆಸ್ ಬಗ್ಗೆ ಕಾಳಜಿ ವಹಿಸಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಮಾನಸ ಮನೋಹರ್ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು.

  ಮಾನಸ ಮನೋಹರ್ ರಾಜ್ ಮ್ಯೂಸಿಕ್‌ನಲ್ಲಿ ಮೊದಲು ಕ್ಯಾಮೆರಾ ಎದುರಿಸಿದ್ದರು. ಮಾನಸ ಎಂಬಿಎ ಓದುವಾಗ ಇವೆಂಟ್ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ರಾಜ್ ಮ್ಯೂಸಿಕ್‌ನಲ್ಲಿ ಇಂಟರ್ನ್‌ಶಿಪ್‌ಗೆ ತೆರಳಿದ್ದರು. ಆಗ ಮಾನಸಗೆ ರಾಜ್ ಮ್ಯೂಸಿಕ್‌ನಲ್ಲಿ ನಿರೂಪಕಿಯಾಗುವ ಅವಕಾಶ ಸಿಕ್ಕಿತ್ತು. ಓದುತ್ತಲೇ ನಿರೂಪಣೆ ಮಾಡುತ್ತಿದ್ದ ಮಾನಸ ಒಂದು ವರ್ಷ ನಿರೂಪಕಿಯಾಗಿಯೂ, ಅಸಿಸ್ಟೆಂಟ್ ಪ್ರೊಡ್ಯೂಸರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

  ಮಾನಸ ಮನೋಹರ್‌ಗೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ 'ಶುಭವಿವಾಹ' ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡರು. ತದನಂತರ ಮಾನಸಗೆ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. ಎಲ್ಲಾ ಧಾರಾವಾಹಿಗಳಲ್ಲೂ ಮಾನಸ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಇಷ್ಟವಂತೆ. ನೆಗೆಟಿವ್ ರೋಲ್ ಮೂಲಕವಾದರೂ ಜನರ ಮನ ಗೆಲ್ಲುವ ಪ್ರಯತ್ನ ಮಾನಸರದ್ದು. ಇನ್ನು ಕಳೆದೆರಡು ವರ್ಷಗಳಿಂದ ಮಾನಸ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

  Jothe Jotheyali Serial Actress Manasa Manohar Life Journey, Biography Is here
  ಮಾನಸ ಮನೋಹರ್ ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಮಿಂಚಿದ್ದಾರೆ. ಅಲ್ಲೂ ಮಾನಸಗೆ ಅಭಿಮಾನಿಗಳ ಬಳಗವಿದೆ. ಕೇವಲ ಧಾರಾವಾಹಿಗಳಲ್ಲದೇ, ಮಾನಸ ಕೆಲ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಮಾನಸ ಮನೋಹರ್ ಮಾಡೆಲ್ ಕೂಡ ಹೌದು. 2014ನೇ ಸಾಲಿನ ಮಿಸ್ ಕರ್ನಾಟಕ ಪಟ್ಟವನ್ನು ಕೂಡ ಮಾನಸ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮೋಸ್ಟ್ ಡಿಸೈರಬಲ್ ವುಮೆನ್-ಬೆಂಗಳೂರು ಎಂಬ ಗರಿಯನ್ನೂ ಅಲಂಕರಿಸಿದ್ದಾರೆ. ಇನ್ನು ಮಾನಸ ನಟಿಸಿದ ಮೊದಲ ಚಿತ್ರ ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ 'ಮೈ ಡಾರ್ಲಿಂಗ್'. ಸದ್ಯ ಮಾನಸ ಒಳ್ಳೆಯ ಪಾತ್ರದ ಸಿನಿಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೇ ಅವರಿಗೆ ವೆಬ್ ಸಿರೀಸ್‌ನಲ್ಲಿ ನಟಿಸುವ ಆಸೆ ಇದೆಯಂತೆ.

  ಮಾನಸ ಮನೋಹರ್ ಸದಾ ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿಯೇ ಲಾಕ್‌ಡೌನ್ ಸಂದರ್ಭದಲ್ಲಿ ಬರೋಬ್ಬರಿ 12 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಪ್ರತಿನಿತ್ಯ 2 ಗಂಟೆ ವರ್ಕೌಟ್ ಮಾಡುವ ಮಾನಸ ಮನೆಯ ಮಹಡಿಯಲ್ಲಿ 1 ಗಂಟೆ ನಡೆಯುತ್ತಿದ್ದರಂತೆ. ಓದಿನಲ್ಲಿ ಮುಂದಿದ್ದ ಮಾನಸ ಆಕ್ಟಿಂಗ್‌ನಲ್ಲೂ ಮೊದಲಿದ್ದಾರೆ. ಮನೆಯಲ್ಲಿ ತಾವು ನಟಿಸುವುದಕ್ಕೆ ವಿರೋಧವಿತ್ತಂತೆ. ಎರಡು ವರ್ಷಗಳ ಕಾಲ ಪ್ರಯತ್ನ ಪಟ್ಟು ಮನೆಯಲ್ಲಿ ಒಪ್ಪಿಸಿದರಂತೆ. ಸದ್ಯ ಮಾನಸ ಮನೋಹರ್ ಎಲ್ಲರ ಅಚ್ಚುಮೆಚ್ಚಿನ ಮೀರಾ ಹೆಗಡೆ ಆಗಿದ್ದಾರೆ.

  English summary
  Jothe Jotheyali Serial Actress Manasa Manohar Life Journey, Biography Is here

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X