Megha Shetty: ವಿಡಿಯೋದಲ್ಲಿ ಮೇಘಾ ಶೆಟ್ಟಿ ಫುಲ್ ಬೋಲ್ಡ್: ನೆಟ್ಟಿಗರು ಟ್ರೋಲ್ ಮಾಡಿದ್ದೇಕೆ?

By ಎಸ್ ಸುಮಂತ್

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದಾರೆ. ಫೋಟೋಶೂಟ್, ವಿಡಿಯೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುತ್ತಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಎಲ್ಲರ ಮನೆ ಮನ ಗೆದ್ದಿರೋ ನಟಿ ಧಾರಾವಾಹಿಯಲ್ಲಿ ಮುಗ್ಧ ಹುಡುಗಿ. ಯಾವಾಗಲೂ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿಯನ್ನು ಹುಡುಗರು ಹೆಚ್ಚಾಗಿ ಇಷ್ಟಪಟ್ಟಿದ್ದು ಅದೇ ಟ್ರೆಡಿಷನಲ್ ಲುಕ್‌ನಿಂದಾಗಿಯೇ. ಶ್ರೀಮಂತರ ಮನೆಯ ಸೊಸೆಯಾದರೂ ಕೂಡ ಮೇಘಾ ಶೆಟ್ಟಿ ಲುಕ್ ಬದಲಾಗಿರಲೇ ಇಲ್ಲ. ಈ ಒಂದು ವಿಚಾರವೇ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು. ಆದ್ರೆ ಇದೀಗ ಅದ್ಯಾಕೋ ಹುಡುಗರೆಲ್ಲಾ ಮೇಘಾ ಶೆಟ್ಟಿ ಹೊಸ ವಿಡಿಯೋಗೆ ಬೇಸರ ಮಾಡಿಕೊಂಡಂತೆ ಕಾಣುತ್ತಿದೆ.

ಹೊಸ ಲುಕ್‌ನಲ್ಲಿ ಮೇಘಾ ಶೆಟ್ಟಿ ಎಂಟ್ರಿ..!

ಹೊಸ ಲುಕ್‌ನಲ್ಲಿ ಮೇಘಾ ಶೆಟ್ಟಿ ಎಂಟ್ರಿ..!

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದುವೇ ಫುಲ್ ಬೋಲ್ಡ್ ಆಗಿರುವ ಲುಕ್ ಜೊತೆಗೆ ಸಖತ್ ಹಾಟ್ ಎನಿಸುವಂತೆ ಕಾಣಿಸುತ್ತಿದ್ದಾರೆ. ಪಡ್ಡೆ ಹೈಕ್ಳು ಈ ವಿಡಿಯೋ ನೋಡಿದ್ರೆ ಖಂಡಿತ ನಿದ್ದೆ ಕೆಡುವುದು ಗ್ಯಾರಂಟಿ. ಆ ರೀತಿಯಾಗಿ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಶೇರ್ ಮಾಡಿಕೊಂಡಿದ್ದು, ಹಲ್ ಚಲ್ ಎಬ್ಬಿಸಿದೆ.

ಏನಿದು ವಿಡಿಯೋ..?

ಏನಿದು ವಿಡಿಯೋ..?

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೊಸ ಹೊಸ ಫೋಟೋಶೂಟ್ ಇದೆ. ಇತ್ತೀಚೆಗೆ ಜಾನಪದ ಶೈಲಿಯಲ್ಲೂ ಫೋಟೋಶೂಟ್ ಮಾಡಿಸಿದ್ದರು. ಆ ಫೋಟೋಗಳಿಗೆ ಎಲ್ಲರೂ ಸಿಕ್ಕಾಪಟ್ಟೆ ಲೈಕ್ಸ್ ಒತ್ತಿದ್ರು. ಕಮೆಂಟ್ ಪಾಸ್ ಮಾಡಿದ್ರು. ಆದ್ರೆ ಈ ಬಾರಿ ಹಂಚಿಕೊಂಡಿರುವ ವಿಡಿಯೋಗೆ ಬೇರೆ ರೀತಿಯಾಗಿಯೇ ಕಮೆಂಟ್ ಗಳು ಪಾಸಾಗುತ್ತಿವೆ. ನದಿಯ ಬಳಿ, ಲ್ಯಾಟಿನ್ ಹಿಡಿದುಕೊಂಡು, ಬಿಳಿ ಬಣ್ಣದ ಗೌನ್ ತೊಟ್ಟು ನಡೆದು ಹೋದ ಮೇಘಾ ಶೆಟ್ಟಿ, ಬಳಿಕ ಮೋಹಕವಾಗಿ ಲುಕ್ ಕೊಟ್ಟಿದ್ದಾರೆ. ಇದನ್ನು ನೋಡಿದವರು ಹಾಗೆ ಕುಸಿದು ಬೀಳುವ ಲೆವೆಲ್‌ಗೆ ಆ ಲುಕ್ ಇದೆ.

ಮೇಘಾ ಶೆಟ್ಟಿ ಟ್ರೋಲ್ ಆಗಿದ್ದೇಕೆ?

ಮೇಘಾ ಶೆಟ್ಟಿ ಟ್ರೋಲ್ ಆಗಿದ್ದೇಕೆ?

ಮೇಘಾ ಶೆಟ್ಟಿಯ ಒಂದೊಂದು ವಿಡಿಯೋ, ಫೋಟೋಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬರುತ್ತಾ ಇತ್ತು. ಅದೆಲ್ಲವೂ ಬಂಗಾರ, ಅನು ಎಂಬ ಪ್ರೀತಿಯ ಪದಗಳೇ ಆಗಿದ್ದವು. ಆದರೆ ಈ ವಿಡಿಯೋಗೆ ಬಂದಿದ್ದು ಮಾತ್ರ ಎಲ್ಲವೂ ನೆಗೆಟಿವ್ ಕಮೆಂಟ್ಸ್ ಆಗಿದೆ. ಒಂದಷ್ಟು ಜನ ವಾವ್ ಅಂತ ಹೊಗಳಿದ್ದರು ಕೂಡ, ಅದರ ನಡುವೆ ಹೆಚ್ಚು ಬಂದಿದ್ದು ನೆಗೆಟಿವ್ ಕಮೆಂಟ್ಸ್. "ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತಂತೆ, ಈ ರೀತಿಯ ಬಟ್ಟೆಯೆಲ್ಲಾ ಇರುವಂತಹ ವಿಡಿಯೋ ಬೇಕಾ..?, ನಿಮ್ ಇಮೇಜ್ ಹಾಳು ಮಾಡಿಕೊಳ್ಳುತ್ತಿದ್ದೀರಿ" ಹೀಗೆ ತರಹೇವಾರಿ ಕಮೆಂಟ್ಸ್ ಬರುತ್ತಿವೆ.

ಮೇಘಾ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿ

ಮೇಘಾ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸದ್ಯ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಅವರ ಪ್ರೀತಿ ಮತ್ತೆ ಹೊಸದಾಗಿ ಅರಳುತ್ತಿದೆ. ಕಥೆ ಮುಗಿದೇ ಹೋಯ್ತು ಎನ್ನುವಾಗಲೇ ಹೊಸ ಹೊಸ ಟರ್ನಿಂಗ್ ತೆಗೆದುಕೊಳ್ಳುತ್ತಿದೆ. ಹೀಗಾಗಿ ಮೇಘಾ ಶೆಟ್ಟಿ ಧಾರಾವಾಹಿಯ ಜೊತೆ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಾ, ಬ್ಯಾಲೆನ್ಸ್ ಮಾಡುತ್ತಿದ್ದಾರೆ.

More from Filmibeat

English summary
Jothe Jotheyali Serial Actress Megha Shetty Bold video gets Trolled Heavily. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X