For Quick Alerts
  ALLOW NOTIFICATIONS  
  For Daily Alerts

  ಒಂದಲ್ಲ ಎರಡು ಐಷಾರಾಮಿ ಕಾರಿನ ಒಡತಿಯಾದ ಕಿರುತೆರೆಯ ನಟಿ ಮೇಘಾ ಶೆಟ್ಟಿ

  |

  ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಅನು ಸಿರಿಮನೆಯಾಗಿ ಚಿರಪರಿಚಿತರಾಗಿರುವ ನಟ ಮೇಘಾ ಶೆಟ್ಟಿ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ತಾನು ನಟಿಸಿದ ಮೊದಲ ಧಾರಾವಾಹಿ ಜೊತೆ ಜೊತೆಯಲಿ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೇ ನಟಿ ಮೇಘಾ ಶೆಟ್ಟಿ ಐಷಾರಾಮಿ ಕಾರಿನ ಒಡತಿಯಾಗಿದ್ದಾರೆ. ಮೇಘಾ ಶೆಟ್ಟಿ ಒಂದಲ್ಲ ಎರಡು ದುಬಾರಿ ಕಾರನ್ನು ಕೊಂಡುಕೊಂಡಿದ್ದಾರೆ. ಮನೆಗೆ ಹೊಸ ಕಾರು ಬಂದ ಖುಷಿಯನ್ನು ಮೇಘಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಮೇಘಾ ಶೆಟ್ಟಿ ಮನೆಗೆ ಬಂದ ಎರಡು ದುಬಾರಿ ಕಾರುಗಳು

  ಬಿಎಂಬ್ಲ್ಯೂ ಮತ್ತು ಎಂಜಿ ಹೆಕ್ಟರ್ ಎರಡು ಕಾರು ಮನೆಗೆ ಆಗಮಿಸಿದ ಫೋಟೋವನ್ನು ನಟಿ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿ ಆಗಮಿಸಿದ ಸಂತಸವನ್ನು ಫೋಟೋ ಶೇರ್ ಮಾಡಿ ಹಂಚಿಕೊಂಡಿದ್ದಾರೆ. ಎರಡು ಕಾರಿನ ಫೋಟೋ ಶೇರ್ ಮಾಡಿ, ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

  ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ

  ಮೇಘಾ ಶೆಟ್ಟಿ ಈಗಾಗಲೇ ಕಿರುತೆರೆಯಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಮೇಘಾ ಶೆಟ್ಟಿ ಎನ್ನುವುದಕ್ಕಿಂತ ಅನು ಸಿರಿಮನೆ ಎಂದರೇ ಪ್ರೇಕ್ಷಕರಿಗೆ ಥಟ್ ಆಂತ ಗೊತ್ತಾಗುತ್ತೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ ಜೊತೆ ಜೊತೆಯಲಿಯಲ್ಲಿ ಮೇಘಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ಅನಿರುದ್ಧ್ ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಮೇಘಾ ಉತ್ತಮ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

  ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಮೇಘಾ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಶೆಟ್ಟಿ ಬೆಳ್ಳಿ ಪರದೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ಮೇಘಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಇತ್ತ ಮೇಘಾ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಮೇಗಾ ಸ್ಪಷ್ಟನೆ ನೀಡಿದ್ದರು. ಕುಟುಂಬ ಎಂದಮೇಲೆ ಗೊಂದಲ ಸಹಜ. ಈಗ ಬಗೆಹರಿದಿದೆ. ಜೊತೆ ಜೊೆತೆಯಲಿ ಧಾರಾವಾಹಿ ಮುಗಿಯುವವರೆಗೂ ಅನು ಸಿರಿಮನೆ ಪಾತ್ರವನ್ನು ತಾನೆ ಮಾಡುವುದಾಗಿ ಹೇಳುವ ಮೂಲಕ ಪ್ರೇಕ್ಷಕರಲ್ಲಿ ಸಂತಸ ಮೂಡಿಸಿದ್ದರು. ಮೇಘಾ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿತ್ತು. ಬಳಿಕ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆದರು.

  ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಸಮಾರಂಭ ನಡೆಯುತ್ತಿದೆ. ಅದ್ದೂರಿಯಾಗಿ ಮದುವೆ ನಡೆಯುತ್ತಿದ್ದು, ಯಾವುದೇ ರಿಯಲ್ ಮದುವೆಗೆ ಕಮ್ಮಿ ಇಲ್ಲದ ಹಾಗೆ ಚಿತ್ರೀಕರಣ ಮಾಡುತ್ತಿದೆ ಧಾರಾವಾಹಿ ತಂಡ. ಈಗಾಗಲೇ ಇಡೀ ತಂಡ ಸಂತಸದಲ್ಲಿದ್ದು, ಅದ್ದೂರಿ ಸೆಟ್ ನಲ್ಲಿ ಆರ್ಯವರ್ಧನ್ ಮತ್ತು ಅನು ಸಿರಿಮನೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

  Jothe Jotheyali serial Actress Megha Shetty buys 2 luxury cars

  ಆರ್ಯವರ್ಧನ್ ಮತ್ತು ಅನು ಮದುವೆ ಅನೇಕ ವಿಘ್ನಗಳು ಎದುರಾಗಿದ್ದವು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ತೆಗೆದುಕೊಂಡಿದ್ದ ಧಾರಾವಾಹಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲದೊಂದಿಗೆ ನೋಡಿಸಿಕೊಂಡು ಹೋಗುತ್ತಿದೆ. ಇದೀಗ ಮದುವೆ ಸಂಭ್ರಮ ನಡೆಯುತ್ತಿದ್ದು, ಅಗರ್ಭ ಶ್ರೀಮಂತ ಆರ್ಯವರ್ಧನ್ ಮನೆಗೆ ಅನು ಸಿರಿಮನೆ ಸೊಸೆಯಾಗಿ ಹೋಗುತ್ತಿದ್ದಾರೆ. ಈ ಸಂಭ್ರಮ ಧಾರಾವಾಹಿ ತಂಡದಲ್ಲೂ ಮನೆಮಾಡಿದೆ.

  ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆ ಸೆಟ್ ಹಾಕಲಾಗಿದೆ. ಯಾವುದೇ ರಿಯಲ್ ಮದುವೆಗೂ ಕಮ್ಮಿ ಇಲ್ಲದ ಹಾಗೆ ಸಂಭ್ರಮ, ಸಡಗರ, ಅದ್ದೂರಿತನ ನೋಡಿ ಪ್ರೇಕ್ಷಕರು ಸಹ ಅಚ್ಚರಿ ಪಡುತ್ತಿದ್ದಾರೆ. ತನಗಿಂತ ತುಂಬಾ ದೊಡ್ಡವರಾದ ಆರ್ಯವರ್ಧನ್ ಪ್ರೀತಿಯಲ್ಲಿದ್ದ ಅನು, ಮದುವೆಯಾಗ್ತಾರೋ ಇಲ್ವೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ.

  English summary
  Jothe Jotheyali serial Actress Megha Shetty buys 2 luxury cars, Shares photos on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X