Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Megha Shetty:ಶೂಟಿಂಗ್ ಜಾಗದಲ್ಲಿ ಮೇಘಾ ಶೆಟ್ಟಿ ಫುಲ್ ಮಸ್ತಿ!
ಕೆಲಸ ಯಾವುದೇ ಇರಲಿ ಒಂದಷ್ಟು ಫನ್ ಮೂಮೆಂಟ್ ಇರಲೇಬೇಕು. ಆಗ ಮಾತ್ರ ಆ ಕೆಲಸದಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗೋದು, ಎನರ್ಜಿ ಜಾಸ್ತಿ ಆಗೋದು. ಅದು ಸಿನಿಮಾದ ಶೂಟಿಂಗ್ ಸ್ಪಾಟ್ ಆಗಲಿ, ಆಫೀಸ್‌ನ ಕೆಲಸವಾಗಲಿ. ಕೆಲಸದ ಜೊತೆ ಜೊತೆಗೆನೆ ಮನರಂಜನೆ ನೀಡುವವರು ಇರಲೇಬೇಕು. ಟೀಂನಲ್ಲಿ ಒಬ್ಬರು ಆ ರೀತಿ ಇದ್ದರೂ ಸಾಕು. ಇದೀಗ 'ಜೊತೆ ಜೊತೆಯಲಿ' ಟೀಂಗೆ ಅಂಥಹವರೊಬ್ಬರು ಸಿಕ್ಕಿ ಆಗಿದೆ.
ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನೋಡುಗರಿಗೆ ಅನು ಸಿರಿಮನೆಯಾಗಿ, ಅಪ್ಪಂದಿರಿಗೆ ಬಂಗಾರ ಆಗಿ ಪರಿಚಿತರಾದವರು. ಧಾರಾವಾಹಿ ಶುರುವಾದಾಗಿನಿಂದ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಈಗ ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್ ಹುಟ್ಟಿಕೊಂಡಿದೆ. ಆದರೆ ಅಷ್ಟೊಂದು ಸೀರಿಯಸ್ ಕಥೆಯ ನಡುವೆ ಮೇಘಾ ಶೆಟ್ಟಿ ಏನು ಮಾಡುತ್ತಾರೆ ಗೊತ್ತಾ..?
Katheyondu
Shuruvagide:ಹಸೆಮಣೆಯಲ್ಲಿ
ಕೂತು
ಯುವ
ಕನಸು:
ಕಾರಲ್ಲಿ
ಕೂತ
ಸಾಮ್ರಾಟ್‌ಗೆ
ಖುಷಿ
!

ಶೂಟಿಂಗ್ ಸೆಟ್‌ನಲ್ಲಿ ಮೇಘಾ ಶೆಟ್ಟಿ ಕಾಮಿಡಿ
ಧಾರಾವಾಹಿಯಾಗಲಿ, ಸಿನಿಮಾವಾಗಲಿ ಶೂಟಿಂಗ್ ಇತ್ತು ಅಂದರೆ ಅದು ಹಗಲು - ರಾತ್ರಿಯೆನ್ನದೆ ಶೂಟಿಂಗ್ ಮಾಡುತ್ತಾರೆ. ಅಲ್ಲಿ ತೆರೆ ಮೇಲೆ ಕಾಣುವ ಕುಟುಂಬದವರು ಸ್ವಂತ ಕುಟುಂಬದವರಂತೆ ಇರುತ್ತಾರೆ. ತೆರೆ ಮೇಲೆ ದುಷ್ಮನ್ ಆದವರು, ತೆರೆಯ ಹೊರಗೆ ಕ್ಲೋಸ್ ಫ್ರೆಂಡ್ಸ್ ಆಗಿರುವುದನ್ನು ಗಮನಿಸಬಹುದು. ಶೂಟಿಂಗ್ ಸ್ಪಾಟ್‌ನಲ್ಲಿ ಬರೀ ಇಷ್ಟೇ ನಡೆಯೋದಿಲ್ಲ. ಅದರ ಜೊತೆಗೆ ರೀಲ್ಸ್ ಮಾಡುತ್ತಾರೆ. ಮೇಘಾ ಶೆಟ್ಟಿ ಕೂಡ ರೀಲ್ಸ್ ಅನ್ನು ಮಾಡುತ್ತಾರೆ. ಅದರ ಜೊತೆಗೆ ಎಲ್ಲರೊಟ್ಟಿಗೆ ಸೇರಿ, ಕ್ಯಾಮೆರಾ ಮೆನ್ ಕೆಲಸವನ್ನು ಕಡಿಮೆ ಮಾಡಿಸಿದ್ದಾರೆ.

ಲೆಫ್ಟ್, ರೈಟ್ ಸೂಚನೆ ಕೊಟ್ಟವರು ಯಾರು..?
ಇತ್ತೀಚೆಗೆ ಧಾರಾವಾಹಿಗಳನ್ನು ಹೆವಿ ರಿಚ್ ಆಗಿ ಶೂಟ್ ಮಾಡಲಾಗುತ್ತದೆ. ಶೂಟಿಂಗ್ ಸ್ಪಾಟ್‌ನಲ್ಲಿ ಟ್ರ್ಯಾಕ್ ಇದ್ದೆ ಇರುತ್ತದೆ. ಅದರ ಮೇಲಿಟ್ಟು ಕ್ಯಾಮರಾವನ್ನು ಮೂವ್ ಮಾಡುತ್ತಾ ಶೂಟಿಂಗ್ ಮಾಡುತ್ತಾರೆ. ಇದನ್ನು ತಳ್ಳುವುದಕ್ಕೆ ಅಂತಾನೇ ಒಂದಿಬ್ಬರು ಚಿತ್ರೀಕರಣದ ಜಾಗದಲ್ಲಿ ಇರುತ್ತಾರೆ. ಆದರೆ ಮೇಘಾ ಶೆಟ್ಟಿ ಅವರಿಗೊಂದಿಷ್ಟು ಬ್ರೇಕ್ ಕೊಟ್ಟಿದ್ದಾರೆ. ಲೆಫ್, ರೈಟ್ ಅಂದುಕೊಂಡು ಕ್ಯಾಮೆರಾದ ಟ್ರ್ಯಾಕ್ ಅನ್ನು ಅವರೇ ತಳ್ಳಿ ಮನರಂಜನೆ ತೆಗೆದುಕೊಂಡಿದ್ದಾರೆ.

ಸರಳತೆ ಕೊಂಡಾಡಿದ ಫ್ಯಾನ್ಸ್
ಮೇಘಾ ಶೆಟ್ಟಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟುಕೊಂಡಿದ್ದಾರೆ. ಅವರು ಹಾಕುವ ಒಂದೊಂದು ಪೋಸ್ಟ್‌ಗೂ ಕಮೆಂಟ್ ಮಿಸ್ ಆಗಲ್ಲ. ಈ ವಿಡಿಯೋ ನೋಡಿದ ಬೆಂಬಲಿಗರು, ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ಈ ರೀತಿಯಾದ ಗುಣಗಳೇ ನಮಗೆ ಇಷ್ಟವಾಗುವುದು. ನೀವೂ ಸೂಪರ್, ಸದಾ ಹೀಗೆ ನಗುತ್ತಾ, ಎಂಜಾಯ್ ಮಾಡಿಕೊಂಡು ಇರಿ. ಹೀಗೆ ತರಹೇವಾರಿ ಕಮೆಂಟ್‌ಗಳನ್ನು ಆ ವಿಡಿಯೋಗೆ ಹಾಕಿದ್ದಾರೆ.
ಹೊಸ ಫೋಟೋ ಹಾಕಿರುವ ಮೇಘಾ
ಮೇಘಾ ಶೆಟ್ಟಿ ಧಾರಾವಾಹಿ ಹಾಗೂ ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ವಿವ್ ಆಗಿ ಇರುತ್ತಾರೆ. ಸದ್ಯ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ 1M ಇದ್ದಾರೆ. ಯಾವಾಗಲೂ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ, ವೈಟ್ ಕಲರ್‌ನ ಫುಲ್ ಗುಲಾಬಿ ಡಿಸೈನ್ ಇರುವಂತ ಡ್ರೆಸ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ಒಂಥರ ಡಿಫ್ರೆಂಟ್ ಆಗಿ ಕಾಣುತ್ತಿದ್ದು, ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ನಾ ಮುಂದು ತಾ ಮುಂದು ಅಂತ ಕಮೆಂಟ್ ಹಾಕುತ್ತಿದ್ದಾರೆ. ಲುಕ್ಕಿಂಗ್ ಬ್ಯೂಟಿಫುಲ್ ಅಂತ ಹೊಗಳುತ್ತಿದ್ದಾರೆ.