Megha Shetty: ದರ್ಶನ್ ಜೊತೆ ಮೇಘಾ ಶೆಟ್ಟಿ ಡ್ಯುಯೆಟ್.. ಅಭಿಮಾನಿಗಳ ಸ್ಪೆಷಲ್ ಗಿಫ್ಟ್ ಸೀಕ್ರೆಟ್ ಏನು?
ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ನಟ ಅಂದ್ರೆ ಅದು ದರ್ಶನ್. ದರ್ಶನ್ ಫ್ಯಾನ್ಸ್ ಕಳೆದ ಕೆಲವು ದಿನಗಳಿಂದ 'ಕ್ರಾಂತಿ' ಉತ್ಸವದಲ್ಲಿ ಮಿಂದೆದ್ದಿದ್ದಾರೆ. ಈಗ ಅವರ ಹುಟ್ಟುಹಬ್ಬದ ತಯಾರಿಯಲ್ಲಿದ್ದಾರೆ. ತಮ್ಮ ನೆಚ್ಚಿನ ನಟನ ಆಸೆಯಂತೆ ಅಭಿಮಾನಿಗಳೆಲ್ಲಾ ಅದಾಗಲೇ ಅವರ ಮನೆಗೆ ದವಸ - ಧಾನ್ಯಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆ. ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬವನ್ನು ಕಳೆದ ಎರಡು ವರ್ಷದಿಂದ ಆಚರಣೆ ಮಾಡಿರಲಿಲ್ಲ. ಆದರೆ, ಈ ವರ್ಷ ಆಚರಣೆ ಮಾಡುವುದಕ್ಕೆ ಯಾವುದೇ ಕಂಡೀಷನ್ ಇಲ್ಲ. ದರ್ಶನ್ ಹೇಳಿರುವ ಕೆಲವೊಂದು ಅನುಸರಿಸಬೇಕಾದ ಕಂಡೀಷನ್ ಬಿಟ್ಟು. ಅದಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿರುವ ಅಭಿಮಾನಿಗಳಿಂದ ಹೊಸ ವಿಡಿಯೋವೊಂದು ಸೃಷ್ಟಿಯಾಗಿದೆ.

ದರ್ಶನ್‌ಗೆ ಮೇಘಾ ಶೆಟ್ಟಿ ಫಿದಾ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಾಮಾನ್ಯ ಜನರಷ್ಟೇ ಅಭಿಮಾನಿಗಳಲ್ಲ ಕಲಾವಿದರು ಕೂಡ ಅಭಿಮಾನಿಗಳು. ಎಷ್ಟೋ ಜನ ಕಲಾವಿದರು ಅವರನ್ನು ಫಾಲೋ ಮಾಡುತ್ತಾರೆ. ಅದರಲ್ಲಿ ನಟಿ ಮೇಘಾ ಶೆಟ್ಟಿಗೆ ದರ್ಶನ್ ಅಂದ್ರೆ ಇನ್ನಿಲ್ಲದ ಪ್ರೀತಿ. ಮೇಘಾ ಶೆಟ್ಟಿ ಕಳೆದ ಕೆಲವು ತಿಂಗಳ ಹಿಂದಷ್ಟೆ ಒಂದಷ್ಟು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದರು. ಅದುವೆ ದರ್ಶನ್ ಜೊತೆಗಿದ್ದ ಫೊಟೋ. ಅದರ ಮೂಲಕ ಒಂದಷ್ಟು ಕುತೂಹಲವನ್ನು ಮೂಡಿಸಿದ್ದರು. ಕ್ಯಾಪ್ಶನ್ ಕೂಡ ಹಾಕದೆ ಫೋಟೋ ಹಂಚಿಕೊಂಡು ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರಾ ಎಂಬ ಕುತೂಹಲವನ್ನು ಕೆರಳಿಸಿದ್ದರು.

ದರ್ಶನ್ ಜೊತೆ ಜೊತೆಗೆ ಸಾಗುತ್ತಿರುವ ಮೇಘಾ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವಿಷ್ಟಪಡುವ ಒಂದಷ್ಟು ಸ್ಥಳಗಳಿದ್ದಾವೆ. ಅದರಲ್ಲಿ ರಾಜರಾಜೇಶ್ವರಿ ನಗರದಲ್ಲಿ ಸ್ಟೋನ್ ಬ್ರೂಕ್ ರೆಸ್ಟೊರೆಂಟ್ ಕೂಡ ಒಂದು ಎಂದು ಆಪ್ತ ಮೂಲಗಳು ತಿಳಿಸುತ್ತವೆ. ಆ ರೆಸ್ಟೊರೆಂಟ್‌ನಲ್ಲಿ ದರ್ಶನ್ ಗಾಗಿಯೇ ಒಂದು ಸ್ಪೆಷಲ್ ಪ್ಲೇಸ್ ಕೂಡ ಇದೆ. ಅದರಲ್ಲಿ DBoss ಸಫಾರಿಯನ್ನು ಮಾಡಲಾಗಿದೆ. ಕಾಡಿನ ರೀತಿ ಅಲಂಕಾರ ಕೂಡ ಮಾಡಲಾಗಿದೆ. ಮೊದಲೇ ದರ್ಶನ್‌ಗೆ ಕಾಡು, ಕಾಡಿನ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹೀಗಾಗಿ ಅಲ್ಲಿ ಕಾಡಿನ ರೀತಿಯೇ ಅಲಂಕಾರ ಮಾಡಲಾಗಿದೆ. ಆ ಸ್ಥಳಕ್ಕೆ ಮೇಘಾ ಶೆಟ್ಟಿ ಭೇಟಿ ನೀಡಿ, ಫೋಟೋಗೆ ಪೋಸ್ ಕೂಡ ನೀಡಿದ್ದರು.

ಅಭಿಮಾನಿಗಳಿಂದ ಸ್ಪೆಷಲ್ ಗಿಫ್ಟ್
ದರ್ಶನ್ ಅಭಿಮಾನಿಗಳು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಅವರ ಬಾಸ್‌ನ ಸೆಲೆಬ್ರೆಟ್ ಮಾಡುತ್ತಾ ಖುಷಿ ಪಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಹಾಗೂ ದರ್ಶನ್ ಫೋಟೋಗಳನ್ನು ಎಡಿಟ್ ಮಾಡಿ, ಡ್ಯುಯೆಟ್ ಸಾಂಗ್ ರೆಡಿ ಮಾಡಿದ್ದಾರೆ. ರಚಿತಾ ರಾಮ್ ಹಾಗೂ ದರ್ಶನ್ ಅಭಿನಯದ 'ಬುಲ್ ಬುಲ್' ಸಿನಿಮಾದ ಹಾಡಿಗೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಂಗ್ ಕೂಡ ಹಾಕಿ ಎಡಿಟ್ ಮಾಡಿದ್ದಾರೆ.

ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಮೇಘಾ
ಮೇಘಾ ಶೆಟ್ಟಿ ದರ್ಶನ್ ಫ್ಯಾನ್ ಅನ್ನೋದು ಗೊತ್ತಾದಾಗಿನಿಂದ ಅಭಿಮಾನಿಗಳು ಮೇಘಾ ಶೆಟ್ಟಿಗೆ ಸ್ಪೆಷಲ್ ವಿಡಿಯೋಗಳನ್ನು ಕಳುಹಿಸುತ್ತಿರುತ್ತಾರೆ. ಇದೀಗ ದರ್ಶನ್ ಹಾಗೂ ಮೇಘಾ ಫೋಟೋ ಹಾಕಿ ಎಡಿಟ್ ಮಾಡಿರುವ ವಿಡಿಯೋವನ್ನು ಮೇಘಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











