'ಜೊತೆಜೊತೆಯಲಿ' ಧಾರಾವಾಹಿ ನಟಿ ಮೇಘಾ ಶೆಟ್ಟಿ ತೊಟ್ಟ ಡ್ರೆಸ್ ಬೆಲೆ 24 ಸಾವಿರ!
ಮೇಘಾ ಶೆಟ್ಟಿ ಈಗ ಎಲ್ಲರ ಅಚ್ಚುಮೆಚ್ಚಿನ ನಟಿ. ಅಷ್ಟೇ ಅಲ್ಕ ಇಂಡಸ್ಟ್ರಿಯಲ್ಲಿ ನೋಡ ನೋಡುತ್ತಲೆ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತಿರುವ ನಟಿ. ಅನು ಸಿರಿಮನೆಯಾಗಿ ಪರಿಚಿತರಾದ ನಟಿ ಇದೀಗ ಕಿರುತೆರೆ ಜೊತೆಗೆ ಸಿನಿಮಾದಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ಇತ್ತೀಚೆಗೆ 'ಜೊತೆ ಜೊತೆಯಲಿ' ಧಾರಾವಾಹಿ ಬೇರೆ ರೀತಿಯಲ್ಲಿಯೇ ಸಾಗುತ್ತಿದೆ. ಪ್ರೇಕ್ಷಕರ ಮನಸ್ಸಿಗೂ ಅನುಸಿರಿಮನೆ ಇನ್ನು ಹತ್ತಿರವಾಗುತ್ತಿದ್ದಾಳೆ. ಗೆಲುವು ಅನುಸಿರಿಮನೆಗೆ ಸಿಗಲಿ ಎಂದು ನೋಡಿದವರು ಹಾರೈಸುತ್ತಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಹೆಚ್ಚು ಚೂಡಿದಾರ್ ಬಳಕೆ ಮಾಡುತ್ತಾರೆ. ಮೊದ ಮೊದಲಿಗೆ ನಾರ್ಮಲ್ ಕಾಟನ್ ಡ್ರೆಸ್ ಬಳಸುತ್ತಿದ್ದ ಮೇಘಾ ಶೆಟ್ಟಿ, ಶ್ರೀಮಂತರ ಮನೆ ಸೊಸೆಯಾದ ಬಳಿದ ಸಿಲ್ಕ್ ರೀತಿಯಲ್ಲಿರುವ ಚೂಡಿದಾರ್ ಬಳಕೆ ಮಾಡುತ್ತಿದ್ದಾರೆ. ಆದರೆ ಮೇಘಾ ರಿಯಲ್ ಲೈಫ್‌ನಲ್ಲಿ ಇರುವುದೇ ಮತ್ತೊಂದು ರೀತಿ. ಅವರ ಸೋಶಿಯಲ್ ಮೀಡಿಯಾದಲ್ಲಿ ಚೆಕ್ ಮಾಡಿದರೆ ಅದು ಗೊತ್ತಾಗುತ್ತೆ.

ದುಬಾರಿ ಡ್ರೆಸ್‌ಗಳನ್ನೇ ಬಳಸುವ ಮೇಘಾ ಶೆಟ್ಟಿ
ಸೆಲೆಬ್ರೆಟಿಗಳ ಲೈಫ್ ಸ್ಟೈಲ್ ಮೇಲೆ ಸಹಜವಾಗಿಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಅವರು ಯಾವ ರೀತಿಯಾದ ಡ್ರೆಸ್‌ಗಳನ್ನು ಹಾಕಿರುತ್ತಾರೆ? ಮತ್ತು ಆ ಡ್ರೆಸ್ ಎಲ್ಲಿ ಸಿಗುತ್ತದೆ? ಅದರ ಬೆಲೆ ಎಷ್ಟಿರಬಹುದು ಎಂಬೆಲ್ಲಾ ಆಲೋಚನೆಗಳು ಆಗಾಗ ಸುಳಿದಾಡಿರುತ್ತದೆ. ಒಮ್ಮೊಮ್ಮೆ ಹುಡುಕಾಡಿದರೂ ಆ ರೀತಿಯಾದ ಡ್ರೆಸ್ ಸಿಗದೆ ಹೋಗಬಹುದು. ಇನ್ನೊಮ್ಮೆ ಹಠ ಮಾಡಿಯಾದರೂ ಅಂತಹದ್ದೇ ಡ್ರೆಸ್‌ಗಳನ್ನು ಕೊಂಡುಕೊಳ್ಳುತ್ತೇವೆ. ಅದೇ ಕುತೂಹಲದಿಂದ ಮೇಘಾ ಶೆಟ್ಟಿ ಬಳಸುವಂತ ಡ್ರೆಸ್‌ಗಳನ್ನು ಆನ್‌ಲೈನ್‌ನಲ್ಲಿ ನೋಡಿದಾಗ ಒಂದಷ್ಟು ಡ್ರೆಸ್‌ಗಳು ಸಿಕ್ಕಿದ್ದು, ಬೆಲೆ ಕೇಳಿದರೆ, ಸಾಮಾನ್ಯರು ತಲೆ ತಿರುಗಿ ಬೀಳುವುದು ಗ್ಯಾರಂಟಿ. ಮೇಘಾ ಶೆಟ್ಟಿ ಡ್ರೆಸ್‌ನ ಬೆಲೆ ಮಾಹಿತಿ ಮುಂದಿದೆ ಓದಿ.

ನೀಲಿ ಫ್ರಾಕ್‌ನಲ್ಲಿ ಮೇಘಾ ಮಿಂಚಿಂಗ್
ಇತ್ತೀಚೆಗೆ ಫ್ರಾಕ್ ಹಾಕುವ ಕ್ರೇಜ್ ಹೆಚ್ಚಾಗಿದೆ. ಅದರಲ್ಲಿ ವೆರೈಟಿ ವೆರೈಟಿ ಡಿಸೈನ್ ಮಾಡಿಸಿಕೊಳ್ಳಬಹುದು. ಎಲ್ಲಾ ಥರಹದ ಕಾರ್ಯಕ್ರಮಗಳಿಗೂ ಫ್ರಾಕ್ ಡ್ರೆಸ್ ಸೂಟಬಲ್ ಅಂತಾನೆ ಹೇಳಬಹುದು. ಸ್ವಲ್ಪ ಶಾರ್ಟ್ ಇದ್ದರೆ ಪಾರ್ಟಿಗಳಿಗೆ, ಇನ್ನು ಸ್ವಲ್ಪ ಲಾಂಗ್ ಇದ್ದರೆ ಟ್ರೆಡಿಷನಲ್ ಫಂಕ್ಷನ್‌ಗಳಿಗೆ ವೇರ್ ಮಾಡಬಹುದು. ಇದೀಗ ಮೇಘಾ ಶೆಟ್ಟಿ ತೊಟ್ಟಿರುವ ನೀಲಿ ಬಣ್ಣದ ಫ್ರಾಕ್ ಎಲ್ಲರ ಗಮನ ಸೆಳೆಯುತ್ತಿದೆ. ಅದೇ ರೀತಿಯಾದ ಡ್ರೆಸ್ ಬೇಕೆಂದು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದರೆ, ಸಿಮಿಲಾರ್ ಡ್ರೆಸ್ ಒಂದು ದೊಡರೆತಿದ್ದು, ಅದರ ಬೆಲೆ 23, 297 ರೂಪಾಯಿ ತೋರಿಸುತ್ತಿದೆ. ಆಫರ್ ನಲ್ಲಿ 6,995 ರೂಪಾಯಿಗೆ ಸಿಗಲಿದೆ. ಆದರೆ ಮೇಘಾ ಶೆಟ್ಟಿಯ ಡ್ರೆಸ್ ನೋಡುತ್ತಿದ್ದರು, ಫ್ಯಾಷನ್ ಡಿಸೈನರ್ ಶಾಪ್ ನಿಂದ ಸಿದ್ಧ ಮಾಡಿ, ಸ್ಪಾನ್ಸರ್ ಕೂಡ ಮಾಡಿರಬಹುದು.

ಮೇಘಾ ಶೆಟ್ಟಿ ಪಾರ್ಟಿ ವೇರ್ ಡ್ರೆಸ್‌ಗೆ ಎಷ್ಟು ಬೆಲೆ
ಫ್ರೆಂಡ್ಸ್, ಫ್ಯಾಮಿಲಿ, ಧಾರಾವಾಹಿ ಟೀಂ, ಸಿನಿಮಾ ಟೀಂ ಹೀಗೆ ಅನೇಕ ಟೀಂಗಳ ಪಾರ್ಟಿ ಆಗಾಗ ನಡೆಯುತ್ತಲೆ ಇರುತ್ತದೆ. ಅಷ್ಟೇ ಅಲ್ಲ ಸೆಲೆಬ್ರೆಟಿಗಳು ಎಂದಾದ ಮೇಲೆ ಒಂದಷ್ಟು ಕಾರ್ಯಕ್ರಮಗಳು ಇದ್ದೇ ಇರುತ್ತದೆ. ಧಾರಾವಾಹಿ ಸಕ್ಸಸ್ ಪಾರ್ಟಿ, ಶುರು ಪಾರ್ಟಿ ಹೀಗೆ. ಇದಕ್ಕೆಲ್ಲಾ ಸೆಲೆಬ್ರೆಟಿಗಳು ಮಿಂಚುವುದು ಸಹಜ. ಮೇಘಾ ಶೆಟ್ಟಿ ಒಂದು ಪಾರ್ಟಿ ಡ್ರೆಸ್ ಹಾಕಿಕೊಂಡಿದ್ದಾರೆ. ಲೈಟ್ ಬ್ಲೂ ಕಲರ್‌ನಲ್ಲಿ, ಲೈಟ್ ಆಗಿ ಮಿಂಚುತ್ತಿರುವ ಡ್ರೆಸ್ ಅದು. ನೋಡಿದಾಕ್ಷಣ ಎಂಥವರಿಗೂ ಆಕರ್ಷಣೆಯಾಗದೆ ಇರದು. ನಾವೂ ಕೂಡ ಪಾರ್ಟಿಗೆ ಹೋಗುವಾಗ ಇಂಥದ್ದೇ ಡ್ರೆಸ್ ತೆಗೆದುಕೊಳ್ಳಬೇಕು ಎನಿಸದೆ ಇರದು. ಆ ಡ್ರೆಸ್ ಆನ್‌ಲೈನ್‌ನಲ್ಲಿ ಚೆಕ್ ಮಾಡಿದಾಗ ಅದರ ಬೆಲೆ ಸುಮಾರು 11,797 ರೂಪಾಯಿ ಕಾಣುತ್ತಿದೆ. ಅದೇ ಡ್ರೆಸ್ ಆಫರ್‌ನಲ್ಲಿ 5,887 ರೂಪಾಯಿಗೆ ಸಿಗುತ್ತೆ.

ಮೇಘಾ ಶೆಟ್ಟಿ ಬಳಿ ಇನ್ನೆಷ್ಟು ದುಬಾರಿ ಡ್ರೆಸ್ ಇದೆ
ಪಾರ್ಟಿ ವೇರ್ ಎಂದರೆ ಒಂದೋ ಎರಡೋ ಇರುವುದಿಲ್ಲ. ಮೇಘಾ ಶೆಟ್ಟಿ ಬಳಿ ಲೆಕ್ಕವಿಲ್ಲದಷ್ಟು ಕಣ್ಣಿಗೆ ಬೀಳುತ್ತದೆ. ಅದು ಅವರ ಇನ್‌ಸ್ಟಾಗ್ರಾಂಗೆ ಹೋಗಿ ನೋಡಿದರೆ ತಿಳಿಯದೆ ಇರುವುದಿಲ್ಲ. ಮತ್ತೊಂದು ಡ್ರೆಸ್ ಗ್ರೀನ್ ಮಿಕ್ಸ್ ನೋಡಿದಾಕ್ಷಣ ಬ್ಲೂ ಎನಿಸುವಂತಹ ಪಾರ್ಟಿ ವೇರ್. ಆ ಡ್ರೆಸ್ ಬೆಲೆ ಸುಮಾರು 14,797 ರೂಪಾಯಿ ಇದೆ. ಆಫರ್‌ನಲ್ಲಿ 7,395 ರೂಪಾಯಿ ಆಗಿದೆ.


Click it and Unblock the Notifications











