Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿರುತೆರೆ ನಟಿ ನಯನಾಗೆ ನೆಗೆಟಿವ್ ಪಾತ್ರಗಳಲ್ಲಿ ನಟಿಸುವುದೆಂದರೆ ತುಂಬಾ ಇಷ್ಟ
ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ತಮ್ಮ ಹರ್ಷವರ್ಧನನ ಹೆಂಡತಿ ಮಾನ್ಸಿ ಆಗಿ ಅಭಿನಯಿಸುತ್ತಿರುವ ನಯನಾ ವೆಂಕಟೇಶ್ ಎಂದಿಗೂ ನಟಿಯಾಗಬೇಕು ಎಂಬ ಕನಸು ಕಂಡವರಲ್ಲ. ಸ್ನಾತಕೋತ್ತರ ಪದವೀಧರೆಯಾಗಿರುವ ನಯನಾ ವೆಂಕಟೇಶ್ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ತದ ನಂತರ ನಟನೆಯತ್ತ ವಾಲಿದ ಈಕೆ ಸದ್ಯ ಬಣ್ಣದ ಲೋಕದಲ್ಲಿ ಬ್ಯುಸಿ.
'ಯುಗಾಂತರ'
ಧಾರಾವಾಹಿಯ
ಮೂಲಕ
ಕಿರುತೆರೆಗೆ
ಮರಳಿದ
ದೀಪಾ
ಭಾಸ್ಕರ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಖಳನಾಯಕಿ ತಾಪ್ಸಿ ಆಗಿ ಅಭಿನಯಿಸಿದ್ದ ನಯನಾ ಗರ್ಭಿಣಿಯಾಗಿದ್ದ ಕಾರಣ ನಟನೆಯಿಂದ ದೂರ ಉಳಿದಿದ್ದರು. ಮುಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ನಯನಾ ಮಗ ಪ್ರಯಾನ್ ಭಾರಧ್ವಾಜ್ ಆರೈಕೆ, ಪಾಲನೆ ಪೋಷಣೆ ಸಲುವಾಗಿ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದರು.

ದಿಶಾ ಆಗಿ ಕಂ ಬ್ಯಾಕ್
ಎರಡು ವರ್ಷಗಳ ಕಾಲ ನಟನೆಯಿಂದ ದೂರವಿದ್ದ ನಯನಾ ಸ್ಟಾರ್ ಸುವರ್ಣ ವಾಹಿನಿಯ ಇಂತಿ ನಿಮ್ಮ ಆಶಾ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು ನಯನಾ. ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಹಿರಿಮಗ ಅಕ್ಷಯ್ ಮಡದಿ ದಿಶಾ ಆಗಿ ಕಿರುತೆರೆಗೆ ಮರಳಿದ ನಯನಾ ಅಲ್ಲೂ ಕಾಣಿಸಿಕೊಂಡಿದ್ದ ವಿಲನ್ ಆಗಿ.

'ಇಂತಿ ನಿಮ್ಮ ಆಶಾ'ದಲ್ಲಿ ನಯನಾ
'ಇಂತಿ ನಿಮ್ಮ ಆಶಾ' ಧಾರಾವಾಹಿಯ ನಂತರ ನಯನಾ ಬಣ್ಣ ಹಚ್ಚಿದ್ದು 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ. 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರಕ್ಕೆ ಜೀವ ತುಂಬಿದ್ದ ಶಿಲ್ಪಾ ಅಯ್ಯರ್ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದರು. ಆಗ ನಯನಾ ಅವರಿಗೆ ಮಾನ್ಸಿ ಪಾತ್ರದಲ್ಲಿ ನಟಿಸುವ ಅವಕಾಶ ದೊರಕಿತು. ಈಗಾಗಲೇ ಶಿಲ್ಪಾ ನಟಿಸುತ್ತಿದ್ದ ಪಾತ್ರ ದೊರೆತಾಗ ನಯನಾ ಅವರಿಗೆ ಸಂತಸಕ್ಕಿಂತಲೂ ಭಯವಾಗಿದ್ದು ಹೆಚ್ಚು. ಜನ ಸ್ವೀಕರಿಸುತ್ತಾರಾ ಎಂಬ ಅಳುಕಿತ್ತು. ಆದರೆ ಈಗ ವೀಕ್ಷಕರು ಮೆಚ್ಚಿಕೊಂಡಿದ್ದು ನಯನಾಗೆ ಖುಷಿ ತಂದಿದೆ.

'ಚಿಕ್ಕಮ್ಮ' ಧಾರಾವಾಹಿ ಮೂಲಕ ಎಂಟ್ರಿ
'ಚಿಕ್ಕಮ್ಮ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಯನಾ ವೆಂಕಟೇಶ್ ಮುಂದೆ ಗಾಳಿಪಟ, ಪುಟ್ಟಗೌರಿ ಮದುವೆ, ವಸುದೈವ ಕುಟುಂಬ, ಕನಕ, ಕರ್ಪೂರದ ಗೊಂಬೆ ಧಾರಾವಾಹಿಗಳಲ್ಲಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದುಬಿಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಾರಸ್ದಾರ' ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬಿದ್ದ ನಯನಾ ನಂತರದ ದಿನಗಳಲ್ಲಿ ಖಳನಾಯಕಿ ಪಾತ್ರಕ್ಕೆ ಬ್ರಾಂಡ್ ಆದರು.

ಖಳನಾಯಕಿ ಪಾತ್ರದಲ್ಲಿ ಮಿಂಚಿಂಗ್
'ವಾರಸ್ದಾರ' ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿಯೂ ಖಳನಾಯಕಿಯಾಗಿ ನಟಿಸಿದ್ದರು. ತದ ನಂತರ ಸ್ಟಾರ್ ಸುವರ್ಣ ವಾಹಿನಿಯ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿಯೂ ಈಕೆ ನಟಿಸಿದ್ದು ಖಳನಾಯಕಿ. ಈಗ ಸದ್ಯ ಮಾನ್ಸಿಯಾಗಿ ಮೋಡಿ ಮಾಡುತ್ತಿದ್ದಾರೆ ನಯನಾ.

ಖಳನಾಯಕಿ ಪಾತ್ರದ ಮೇಲೆ ಒಲವು
ಸದ್ಯ ಖಳನಾಯಕಿ ಪಾತ್ರಗಳನ್ನೇ ಅತಿಯಾಗಿ ಮೆಚ್ಚಿಕೊಳ್ಳುವ ನಯನಾ ಆರಂಭದ ದಿನಗಳಲ್ಲಿ ನಟಿಸುವ ಪಾತ್ರಗಳಲ್ಲಿ ಬದಲಾವಣೆಯಿರಲಿ ಎಂಬ ಕಾರಣಕ್ಕೆ ಒಪ್ಪಿಕೊಂಡರು. ಆದರೆ ತದ ನಂತರ ಖಳನಾಯಕಿಯ ಪಾತ್ರಕ್ಕೆ ಈಕೆ ಬ್ರಾಂಡ್ ಆದಾಗ ಸಂತಸವಾಯಿತು. ಯಾಕೆಂದರೆ ಖಳನಾಯಕಿಯಾಗಿ ನಟಿಸಿದರೆ ನಟನೆಗೆ ಪ್ರಾಮುಖ್ಯತೆ ಜಾಸ್ತಿ ಎಂದು ಹೇಳುತ್ತಾರೆ ನಯನಾ. ಜೊತೆಗೆ ಪಾಸಿಟಿವ್ ಪಾತ್ರಗಳನ್ನು ಎತ್ತಿ ತೋರಿಸಲು ನೆಗೆಟಿವ್ ಪಾತ್ರಗಳು ಬೇಕು ಎಂಬುದು ನಯನಾ ಅವರ ಅಂಬೋಣ.