Actress Nayana: 'ಜೊತೆ ಜೊತೆಯಲಿ' ಬಳಿಕ ಹೊಸ ಸಾಹಸಕ್ಕೆ ಕೈ ಹಾಕಿದ ನಯನಾ.. ಏನದು?
ನಟಿ, ಬ್ಲಾಗರ್ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ನಯನಾ ಕೆ ಎಂ ಇದೀಗ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ನಟನೆ ಜೊತೆಗೆ ಬಿಜಿನೆಸ್ ವುಮನ್ ಅಂತಲೂ ಎನಿಸಿಕೊಂಡಿದ್ದಾರೆ. ಕೊನೆಯದಾಗಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಯನಾ ಕೆ ಎಂ ಈ ಸೀರಿಯಲ್‌ನಲ್ಲಿ ಮಾನ್ಸಿ ಎಂಬ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಾ ಬಂದಿದ್ದರು. ನಟನೆಯ ಮೂಲಕ ಕಿರುತೆರೆಯಲ್ಲಿ ಮಿಂಚಿದ ನಟಿಯೀಗ ಬೆಂಗಳೂರಿನಲ್ಲಿ ಹೊಸ ಬಿಸಿನೆಸ್ ಶುರು ಮಾಡಿದ್ದಾರೆ.
ಹೌದು! ತಮ್ಮ ಫ್ಯಾಶನ್ ಸೆನ್ಸ್ ಗೆ ಬಹಳಷ್ಟು ಹೆಸರಾಗಿರುವ ನಟಿ ನಯನಾ ಕೆ ಎಂ ಅವರು ಬೆಂಗಳೂರಿನಲ್ಲಿ ಫ್ಯಾಷನ್ ಸ್ಟೋರ್ ಅನ್ನು ತೆರೆದಿದ್ದಾರೆ. ಅವರು ಕೈಯಾರೆ ಆರಿಸಿರುವ ಸೀರೆಗಳ ದೊಡ್ಡ ಕಲೆಕ್ಷನ್ ಇದೆ. ಈ ಸ್ಟೋರ್‌ನಲ್ಲಿ ಅದ್ಭುತ ದುಪ್ಪಟ್ಟಗಳು ಹಾಗೂ ಬ್ಲೌಸ್‌ಗಳನ್ನು ಕೂಡ ಹೊಂದಿದೆ. ಜೊತೆ ಜೊತೆಗೆ ಆರ್ಗಾನಿಕ್ ಹೇರ್ ಪ್ರಾಡಕ್ಟ್‌ಗಳನ್ನು ಅಂಗಡಿಯಲ್ಲಿಟ್ಟಿರುವ ಇವರು ಈ ಹೊಸ ಬಿಜಿನೆಸ್ ಸಾಹಸಕ್ಕೆ ಕೈ ಹಾಕಿರುವುದು ವಿಶೇಷ.

ಇದಿಷ್ಟೇ ಅಲ್ಲದೆ ಬ್ಲಾಗರ್ ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಬೇರೆ ಬೇರೆ ರೀತಿಯಲ್ಲಿ ಜನರನ್ನು ಇನ್‌ಫ್ಲ್ಯೂಯೆನ್ಸ್ ಮಾಡುವ ಈಕೆ ಒಂದು ಮಗುವಿಗೆ ತಾಯಿಯು ಹೌದು. ತಮ್ಮ ಹೊಸ ಬ್ಯುಸಿನೆಸ್ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿರುವ ನಯನಾ ಅಭಿಮಾನಿಗಳನ್ನು ಫಾಲೋವರ್ಸ್ ಗಳನ್ನು ಗ್ರಾಹಕರಾಗಿ ಹೊಸ ಅಂಗಡಿಗೆ ಬರಲು ಆಹ್ವಾನಿಸಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿ ಮೊದಲು ಒಂದೆರಡು ಧಾರವಾಹಿಯಲ್ಲಿ ಕಾಣಿಸಿಕೊಂಡ ಈ ಕಿರುತೆರೆ ನಟಿ ಇದೀಗ ಬ್ಯುಸಿನೆಸ್ ಶುರು ಮಾಡಿರುವುದು ಬಹಳ ದೊಡ್ಡ ವಿಚಾರವೇ. ಕಿರುತೆರೆಯಲ್ಲಿ ಚೆನ್ನಾಗಿ ಹೆಸರು ಹಣ ಮಾಡಿದ ಅದೆಷ್ಟೋ ಕಲಾವಿದರು ಹೊಸ ಹೊಸ ಬಿಸಿನೆಸ್‌ಗಳಿಗೆ ಕೈ ಹಾಕುವುದು ಸರ್ವೆ ಸಾಮಾನ್ಯ. ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳನ್ನು ಪಡೆದು ಅದರಲ್ಲೂ ಒಳ್ಳೆಯ ಹಣ ಮಾಡುತ್ತಾರೆ

ಕೆಲವರು ನಟನೆಯನ್ನು ಬಿಟ್ಟು ಫೋಟೋಗ್ರಫಿ, ವಿಡಿಯೋಗ್ರಾಫಿ ಇವೆಂಟ್ ಮ್ಯಾನೇಜ್ಮೆಂಟ್ ಈ ರೀತಿ ತಮ್ಮ ಫ್ಯಾಶನ್ ಕಡೆಗೆ ಹೋಗುವುದೂ ಇದೆ. ಆದರಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಂಡಿರುವ ನಟಿ ನಯನ ಕೆ ಎಂ ತಮ್ಮ ಫ್ಯಾಶನ್ ಸೆನ್ಸ್ ಅನ್ನು ಚೆನ್ನಾಗಿ ಬಳಸುವುದರಲ್ಲಿ ಸಂಶಯವೇ ಇಲ್ಲ. ಅಂಗಡಿಯಲ್ಲಿ ಕಲೆಕ್ಷನ್ ಹೇಗಿದೆ ಎಂಬುದನ್ನು ಅಂಗಡಿಗೆ ಹೋಗಿಯೇ ನೋಡಬೇಕಿದೆ.


Click it and Unblock the Notifications











