ಅನು ಸಿರಿಮನೆ - ಆರ್ಯವರ್ಧನ್ ನಡುವೆ ಬಿರುಕು!

ಕಿರುತೆರೆಯಲ್ಲಿ ಹೆಚ್ಚು ಹೆಸರು ಮಾಡಿರುವ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿ ಕೂಡ ಒಂದು. ಸದ್ಯ ಈ ಧಾರಾವಾಹಿಯಲ್ಲಿ ರೋಚಕ ತಿರುವುಗಳು ಬರುತ್ತಿವೆ. ಅದರಲ್ಲೂ ಆರ್ಯವರ್ಧನ್ ಪಾತ್ರಕ್ಕೆ ಸಂಬಂಧ ಪಟ್ಟ ಹಾಗೆ ಹತ್ತಾರು ಟ್ವಿಸ್ಟ್‌ಗಳು ಹುಟ್ಟುಕೊಳ್ಳುತ್ತಿವೆ. ಅದರಲ್ಲಿ ಆರ್ಯವರ್ಧನ್ ನಡೆಯಲ್ಲಿ ಆಗುತ್ತಿರುವ ಬದಲಾವಣೆ ಪ್ರಮುಖ ಆಗಿದೆ.

ಧಾರಾವಾಹಿ ನೋಡುವವರಲ್ಲಿ ಇದು ಯಾಕೆ ಹೀಗಾಗುತ್ತಿದೆ. ಆರ್ಯವರ್ಧನ್ ಯಾಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎನ್ನುವ ಶಂಕೆ ಮೂಡಿದೆ. ಇದು ಇಷ್ಟು ದಿನ ಪ್ರೇಕ್ಷರ ಕಣ್ಣಗೆ ಮಾತ್ರ ಬೀಳುತ್ತಾ ಇತ್ತು. ಆದರೆ ಈಗ ಇದು ಅನು ಕಣ್ಣಿಗೂ ಕಾಣಿಸುತ್ತಾ ಇದೆ.

ಆರ್ಯವರ್ಧನ್ ನಡೆಯ ಬಗ್ಗೆ ಅನು ಮನಸಲ್ಲಿ ಅನುಮಾನ ಮೂಡುತ್ತಿದೆ. ಇಷ್ಟು ದಿನ ಅನುಗೆ ಎಂದು ಬೈಯದಿದ್ದ ಆರ್ಯವರ್ಧನ್ ಈಗ ಇದ್ದಕ್ಕಿದ್ದ ಹಾಗೆ ಅನುಳನ್ನು ತನ್ನ ವ್ಯವಹಾರಗಳಿಂದ ದೂರ ಇಡಲು ಪ್ರಯತ್ನ ಮಾಡುತ್ತಾ ಇದ್ದಾರೆ. ಅದು ಅನು ಮನಸ್ಸಲ್ಲಿ ಅನುಮಾನದ ಬೀಜ ಬಿತ್ತಿದೆ.

ಅನು ನಿರ್ಧಾರಗಳನ್ನು ಒಪ್ಪಿಕೊಳ್ಳದ ಆರ್ಯವರ್ಧನ್!

ಅನು ನಿರ್ಧಾರಗಳನ್ನು ಒಪ್ಪಿಕೊಳ್ಳದ ಆರ್ಯವರ್ಧನ್!

ಆರ್ಯವರ್ಧನ್ ನಿಧಾವಾಗಿ ತನ್ನ ನಿಜ ರೂಪವನ್ನು ಬಯಲಿಗೆ ಹಾಕುತ್ತಾ ಇದ್ದಾನೆ. ಅನು ತನ್ನ ವ್ಯವಹಾರಗಳಿಗೆ ಅಡ್ಡಿ ಆಗುತ್ತಿದ್ದಾಳೆ ಎಂದು, ತಿಳಿದ ತಕ್ಷಣ ಅನು ಆಫೀಸಿಗೆ ಬರುವುದು ಬೇಡ ಎಂದು ಆರ್ಯವರ್ಧನ್ ಆಕೆಯನ್ನು ಒಪ್ಪಿಸಿ, ಮನೆಯಲ್ಲೇ ಬಿಟ್ಟು ಹೋಗುತ್ತಾನೆ. ಆದರೆ ಅನು ತಾನು ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಲು ಆಫೀಸಿಗೆ ಬರುತ್ತಾಳೆ ಇದು ಆರ್ಯವರ್ಧನ್‌ಗೆ ದೊಡ್ಡ ಶಾಕ್ ಕೊಡುತ್ತದೆ.

ಆರ್ಯವರ್ಧನ್ ನಡೆ ಬಗ್ಗೆ ಅನುಗೆ ಅನುಮಾನ!

ಆರ್ಯವರ್ಧನ್ ನಡೆ ಬಗ್ಗೆ ಅನುಗೆ ಅನುಮಾನ!

ಆಫೀಸಿನಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಆರ್ಯವರ್ಧನ್ ಬಳಿ ಅನು ಹೇಳಿದಾಗ,ಆರ್ಯವರ್ಧನ್ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಆಫೀಸಿನಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಜಾಲವನ್ನು ಕಂಡು ಹಿಡಿಯಲು ಅನು ಮುಂದಾದಾಗ ಆರ್ಯ ವರ್ಧನ್ ಅದನ್ನು ನಿಲ್ಲುಸುವಂತೆ ಅನುಗೆ ತಾಕೀತು ಮಾಡುತ್ತಾನೆ. ಹಾಗಾಗಿ ಆರ್ಯವರ್ಧನ್ ಬಗ್ಗೆ ಅನು ಮನಸಲ್ಲಿ ಅನುಮಾನ ಮೂಡಿದೆ. ಕಂಪನಿಗೆ ಒಳ್ಳೆಯದನ್ನು ಮಾಡಲು ಆರ್ಯವರ್ಧನ್ ಯಾಕೆ ಬಿಡುತ್ತಿಲ್ಲ ಎಂದು ಅನು ಯೋಚಿಸುತ್ತಿದ್ದಾಳೆ.

ಮೊದಲ ಬಾರಿಗೆ ಅನುಗೆ ಬೈದ ಆರ್ಯವರ್ಧನ್!

ಮೊದಲ ಬಾರಿಗೆ ಅನುಗೆ ಬೈದ ಆರ್ಯವರ್ಧನ್!

ಇನ್ನು ಅನು ಸಿರಿಮನೆಯನ್ನು ಆರ್ಯವರ್ಧನ್ ಪ್ರೀತಿಸಿ ಮದುವೆ ಆಗಿದ್ದಾನೆ. ಅಷ್ಟೇ ಯಾಕೆ ಅನು ಅದರೆ ತನ್ನ ಪ್ರಾಣ ಎಂದೇ ಆರ್ಯ ವರ್ಧನ್ ಇಷ್ಟು ದಿನ ತೋರಿಸಿಕೊಂಡಿದ್ದಾನೆ. ಆದರೆ ಈಗ ಅನು ಕಂಪನಿ ವಿಚಾರಗಳಿಗೆ ತಲೆ ಹಾಕದಂತೆ ಬೈಯುತ್ತಿದ್ದಾನೆ. ಇದು ಅನು ಮನಸಲ್ಲಿ ಅನುಮಾನ ಹುಟ್ಟು ಹಾಕಿದೆ. ಸದ್ಯ ಈಗ ಅನು ಆರ್ಯವರ್ಧನ್ ಬಗ್ಗೆ ಹೆಚ್ಚು ತಿಳಿಯಲು ಮುಂದಾಗುವ ಸಾಧ್ಯತೆ ಕೂಡ ಇದೆ.

ಇಬ್ಬರ ನಡುವೆ ಬಿರುಕು ಖಚಿತ!

ಇಬ್ಬರ ನಡುವೆ ಬಿರುಕು ಖಚಿತ!

ಇನ್ನು ಇಬ್ಬರ ನಡುವೆ ಬಿರುಕು ಮೂಡುವ ಎಲ್ಲಾ ಲಕ್ಷಣಗಳು ಕೂಡ ಕಂಡು ಬರುತ್ತಿವೆ. ಅಂದರೆ ಆರ್ಯವರ್ಧನ್ ಹೀಗೆ ಮುಂದುವರೆದರೆ, ಅನು ಆರ್ಯ ವರ್ಧನ್ ನಿಜ ರೂಪ ತಿಳಿಯಲು ಪ್ರಯತ್ನ ಪಡುತ್ತಾಳೆ. ಆರ್ಯವರ್ಧನ್ ಬೇಕು, ಬೇಕು ಅಂತಲೇ ಹೀಗೆ ಮಾಡುತ್ತಿದ್ದಾರೆ ಎಂದು ತಿಳಿದರೆ, ಆರ್ಯವರ್ಧನ್ ಮತ್ತು ಅನು ನಡುವೆ ಬಿರುಕು ಮೂಡುವುದು ಖಚಿತ.

More from Filmibeat

English summary
Anu Sirimane Got Doubt On Aryavardhan In Jothe Jotheyali Serial, What Happens Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X