ಜೊತೆ ಜೊತೆಯಲಿ ಖ್ಯಾತಿಯ ನಯನ ಮೊದಲು ಟೀಟರಮ್ಮ ಆಗಿದ್ರು!
ಕನ್ನಡದ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ನಯನ ನಟಿಸಿದ್ದಾರೆ. ಸದ್ಯ ಜೊತೆ-ಜೊತೆಯಲಿ ಸೀರಿಯಲ್ ನಲ್ಲಿ ಮಾನ್ಸಿ ಪಾತ್ರದ ಮೂಲಕ ಫೇಮಸ್ ಆಗಿದ್ದಾರೆ. ಈ ಮೊದಲು ಮಾನ್ಸಿ ಪಾತ್ರವನ್ನು ನಟಿ ಶಿಲ್ಪಾ ಐಯ್ಯರ್ ಅವರು ನಿಭಾಯಿಸಿದ್ದರು. ಕಾರಣಾಂತರಗಳೀಂದ ಅವರು ಧಾರಾವಾಹಿಯಿಂದ ಹೊರ ನಡೆದ ಕಾರಣ ಆ ಜಾಗಕ್ಕೆ ನಯನ ಎಂಟ್ರಿ ಕೊಟ್ಟರು.
ಕಳೆದ ಒಂದು ವರ್ಷದಿಂದ ನಯನಾ, ಮಾನ್ಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ಸ್ಟೈಲಿಶ್ ಆಗಿ ಮಾತನಾಡುವ ನಯನ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಹೆಚ್ಚು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನ ಈ ಧಾರಾವಾಹಿಯಲ್ಲಿ ದಡ್ಡಿಯಂತೆ ನಟಿಸಿದ್ದಾರೆ.
ಇನ್ನು ನಯನಾ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಸುಮಾರು ಎರಡು ವರ್ಷಗಳ ಬ್ರೇಕ್ ಪಡೆದಿದ್ದ ಅವರು ಸೋಶಿಯಲ್ ಮೀಡಿಯದಲ್ಲಿ ಮಾತ್ರ ಸಕ್ರಿಯರಾಗಿದ್ದರು. ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರುವ ನಯನ ಸ್ಟೈಲಿಶ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಉಪನ್ಯಾಸಕಿಯಾದ ನಯನಾ!
ನಯನಾ ನಟನೆಗೆ ಬರುವ ಮುನ್ನ ಉಪನ್ಯಾಸಕಿ ಆಗಿದ್ದರು. ಸ್ನಾತಕೋತ್ತರ ಪದವಿ ಪಡೆದ ಇವರು ಸುಮಾರು ಎರಡು ವರ್ಷಗಳ ಕಾಲ ಉಪನ್ಯಾಸಕಿ ಆಗಿ ಕೆಲಸ ಮಾಡಿದ್ದರು. ನಂತರ ಅಚಾನಕ್ ಆಗಿ ನಯನ ಬಣ್ಣದ ಲೋಕಕ್ಕೆ ಬರಬೇಕಾಯ್ತು. ವೆಂಕಟೇಶ್ ಪ್ರಸಾದ್ ಎಂಬುವರ ಜೊತೆಗೆ ವಿವಾಹವಾಗಿರುವ ನಯನ ಅವರಿಗೆ ಪ್ರಯಾನ್ ಭಾರದ್ವಾಜ್ ಎಂಬ ಮುದ್ದಾದ ಗಂಡು ಮಗುವಿದೆ. ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಇದ್ದು, ತಾಯಿಯಾದ ಕಾರಣ ಕೆಲ ಕಾಲ ಬ್ರೇಕ್ ಪಡೆದಿದ್ದರು.

'ಚಿಕ್ಕಮ್ಮ' ಸೀರಿಯಲ್ ಮೂಲಕ ಎಂಟ್ರಿ!
ಯಾವುದೇ ಹೆಚ್ಚಿನ ಪ್ಲ್ಯಾನ್ ಇಲ್ಲದೆ, ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಯನಾ ನಂತರ ಧಾರಾವಾಹಿ ಲೋಕದಲ್ಲೆ ಪ್ರಸಿದ್ಧಿ ಪಡೆದರು. ವಿಲನ್ ಪಾತ್ರದ ಮೂಲಕ ಖ್ಯಾತಿ ಪಡೆದ ಇವರು 'ಚಿಕ್ಕಮ್ಮ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಮನೆದೇವ್ರು, ಗಾಳಿಪಟ, ಪುಟ್ಟಗೌರಿ ಮದುವೆ, ವಸುದೈವ ಕುಟುಂಬ, ಕನಕ, ಕರ್ಪೂರದ ಬೊಂಬೆ, ವಾರಾಸ್ದಾರ, ಸತ್ಯ ಶಿವಂ ಸುದಂರಂ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಬ್ರೇಕ್ ಬಳಿಕ ಬಂದ ನಟಿ!
ನಯನ ಗರ್ಭಿಣಿಯಾಗಿದ್ದಾಗ ನಟನೆಗೆ ಬ್ರೇಕ್ ಕೊಟ್ಟಿದ್ದರು. ಎರಡು ವರ್ಷದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟರು. ಅದೂ ಕೂಡ ಇಂತಿ ನಿಮ್ಮ ಆಶಾ ಎಂಬ ಧಾರಾವಾಹಿ ಮೂಲಕ. ಇದಾದ ಬಳಿಕ ನಯನ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹರ್ಷವರ್ಧನ್ ಪತ್ನಿಯಾಗಿ ಮಾನ್ಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿನ ಮಾನ್ಸಿ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇನ್ನೂ ಒಳ್ಳೊಳ್ಳೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ನಯನ ಅವರಿಗೆ ಖಳನಾಯಕಿಯ ಪಾತ್ರವೇ ಹೆಚ್ಚು ಇಷ್ಟವಾಗುತ್ತದೆಯಂತೆ. ವಿಲನ್ ಪಾತ್ರದ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್!
ನಯನ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ಬ್ಯೂಟಿ ಟಿಪ್ಸ್, ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಬಟ್ಟೆಗಳನ್ನು ಹೇಗೆ ಜೋಪಾನ ಮಾಡಬೇಕು. ಸೀರೆಗಳಿಗೆ ಮ್ಯಾಚಿಂಗ್ ಬ್ಲೌಸ್ ಹೇಗಿರಬೇಕು ಎಂದೆಲ್ಲಾ ಟಿಪ್ಸ್ ಕೊಡುತ್ತಿರುತ್ತಾರೆ. ಅಲ್ಲದೇ, ಆಗಾಗ ಫೋಟೋಶೂಟ್ ಮಾಡಿಸುವ ನಯನ ರೀಲ್ಸ್ ಕೂಡ ಮಾಡುತ್ತಿರುತ್ತಾರೆ. ಅಲ್ಲದೇ ಹೆಲ್ತ್ ಬಗ್ಗೆಯೂ ಮಾಹಿತಿ ನೀಡುವ ನಯನಳನ್ನು ಸಾವಿರಾರು ಮಂದಿ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications











