Megha Shetty: ದರ್ಶನ್ ಜೊತೆ ಸಿನಿಮಾ ಮಾಡ್ತಾರಾ ಜೊತೆ ಜೊತೆಯಲಿ ಮೇಘಾ ಶೆಟ್ಟಿ..?
ಹೀಗೊಂದು ವಿಚಾರ ಬೆಳಗ್ಗೆಯಿಂದ ಅಭಿಮಾನಿಗಳ ತಲೆಯನ್ನು ತಿರುಗಿಸುತ್ತಲೇ ಇದೆ. ಹೀಗೆಲ್ಲಾ ಟೆನ್ಶನ್ ಕೊಟ್ಟು, ಯೋಚನೆಯಲ್ಲಿ ಮುಳುಗುವಂತೆ ಮಾಡಿದ್ದು ಬೇರೆ ಯಾರು ಅಲ್ಲ, ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ. ಇದು ಬರೀ ಮೇಘಾ ಶೆಟ್ಟಿ ಫ್ಯಾನ್ಸ್ ಮಾಡುತ್ತಿರುವ ಚರ್ಚೆ ಅಲ್ಲ. ದರ್ಶನ್ ಅಭಿಮಾನಿ ಬಳಗವೂ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
ನಮ್ ಬಾಸ್ ನಮ್ಗೆಲ್ಲಾ ಗೊತ್ತಾಗದಂಗೆ ಮತ್ತೊಂದು ಸಿನಿಮಾ ಏನಾದ್ರೂ ಮಾಡ್ತಾ ಇದ್ದಾರಾ? ಅಥವಾ ಮೇಘಾ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾದಲ್ಲಿ ದರ್ಶನ್ ಅತಿಥಿಯಾಗಿ ನಟಿಸುತ್ತಿದ್ದಾರಾ? ಇಲ್ಲಾ 'ಕ್ರಾಂತಿ' ಸಿನಿಮಾ ಶೂಟಿಂಗ್‌ಗೆ ಮೇಘಾ ಹೋಗಿದ್ರಾ? ಇಂಹದ್ದೇ ಒಂದು ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಾ 'ಕ್ರಾಂತಿ' ಸಿನಿಮಾಗೇನಾದ್ರೂ ಹೊಸ ಹೀರೊಯಿನ್ ಎಂಟ್ರಿ ಕೊಟ್ರಾ..? ಹೀಗೆ ಹತ್ತು ಹಲವು ಪ್ರಶ್ನೆಗಳನ್ನ ಬ್ರೈನ್ ಒಳಗೆ ಬಿಟ್ಟುಕೊಂಡು ಕೂತಿದ್ದಾರೆ.

ಮೇಘಾ ಶೆಟ್ಟಿ ಫೋಟೊ ಹಿಂದಿನ ರಹಸ್ಯವೇನು?
ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ಆಗಾಗ ಅವರು ಮಾಡುವ ಯೋಗ, ಅವರ ವರ್ಕೌಟ್, ರೀಲ್ಸ್ ಹೇಗೆ ಹಲವಾರು ವಿಡಿಯೋಗಳು ಪೋಸ್ಟ್‌ಗಳನ್ನ ಶೇರ್ ಮಾಡುತ್ತಾರೆ. ಈ ಮೂಲಕ ನಿರಂತರ ಅವರ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ ಪ್ರತಿಸಲ ಶೇರ್ ಮಾಡೋದಕ್ಕಿಂತ ಸ್ಪೆಷಲ್ ಎನಿಸೋ ಫೋಟೊವೊಂದನ್ನಈ ಬಾರಿ ಹಂಚಿಕೊಂಡಿದ್ದಾರೆ.

ಮೇಘಾಗೆ ಫ್ಯಾನ್ಸ್ ಹೇಳಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿರುವ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಡಿ ಬಾಸ್ ಅಂತ ಹಾಕಿ ಲವ್ ಸಿಂಬಲ್ ಕೂಡ ಹಾಕಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲವೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಆದಷ್ಟು ಬೇಗ ಲೈವ್ ಬಂದು ಎಲ್ಲವನ್ನೂ ಹೇಳಿ ಅಂತ ಅಭಿಮಾನಿಗಳು ಮೇಘಾ ಶೆಟ್ಟಿಗೆ ಒತ್ತಡ ಹೇರಿದ್ದಾರೆ.

ದರ್ಶನ್ ಭೇಟಿ ಮಾಡಿದ್ದು ಎಲ್ಲಿ?
ಮೇಘಾ ಶೆಟ್ಟಿ ಕೂಡ ಕಿರುತೆರೆಯಲ್ಲಷ್ಟೇ ಅಲ್ಲ. ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಜೊತೆ ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೊತೆಜೊತೆಯಲಿ'ಯಲ್ಲೂ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಭೇಟಿ ಮಾಡಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕ್ಯಾರಾ ವ್ಯಾನ್‌ನಲ್ಲಿ ಭೇಟಿ ಮಾಡಿದ್ದರಿಂದ, ಶೂಟಿಂಗ್ ಸ್ಪಾಟ್‌ನಲ್ಲೇ ಈ ಫೋಟೊ ತೆಗಿಸಿಕೊಂಡಿದ್ದಾರೆ ಅನ್ನೋದ ಕನ್ಫರ್ಮ್. ಈ ಕಾರಣಕ್ಕೆ 'ಕ್ರಾಂತಿ' ಸಿನಿಮಾದಲ್ಲಿ ಏನಾದರೂ ನಟಿಸುತ್ತಿದ್ದಾರಾ? ಎನ್ನುವ ಅನುಮಾನ ಮೂಡಿದೆ. ಮೇಘಾ ಪೋಸ್ಟ್‌ಗಳಿಗೂ ಅದೇ ಕಮೆಂಟ್ ಬಂದಿವೆ. "ನಿಮಗೆ ದರ್ಶನ್ ಅಂದ್ರೆ ಇಷ್ಟ ಅಲ್ವಾ" ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ವಾವ್ ಸೂಪರ್, ಬೆಂಕಿ" ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ.

ಕುತೂಹಲಕ್ಕೆ ತೆರೆ ಬೀಳೋದು ಯಾವಾಗ..?
ದರ್ಶನ್ ಸದ್ಯ 'ಕ್ರಾಂತಿ' ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಹೀಗಾಗಿ ಅಭಿಮಾನಿಗಳ ತಲೆಯಲ್ಲಿ ಕುತೂಹಲ ಮನೆ ಮಾಡಿ ಕೂತಿದೆ. ಈ ಕಾರಣಕ್ಕೆ ಸ್ವತ: ಧಾರಾವಾಹಿ ನಟಿ ಮೇಘಾ ಶೆಟ್ಟಿನೇ ಉತ್ತರ ಕೊಡಬೇಕಿದೆ. ಮೇಘಾ ಶೆಟ್ಟಿ ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಅವಕಾಶ ಗಿಟ್ಟಿಸಿಕೊಂಡು 'ತ್ರಿಬಲ್ ರೈಡಿಂಗ್' ಮಾಡಿ ಬಂದಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆಗೆ 'ದಿಲ್ ಪಸಂದ್' ತಿನ್ನೋದಕ್ಕೆ ರೆಡಿಯಾಗಿದ್ದಾರೆ. ಈ ಎಲ್ಲದರ ನಡುವೆ ದರ್ಶನ್ ಜೊತೆ ಫೋಟೊ ಹಾಕಿ ಶೇರ್ ಮಾಡಿದ್ದು ಕುತೂಹಲ ಕೆರಳಿಸಿದೆ.


Click it and Unblock the Notifications











