Megha Shetty: ಮೂಗುತಿ ಹಾಕಿದ ವಿಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ.. ಮದುವೆ ಫಿಕ್ಸ್ ಆಯ್ತಾ ಬಂಗಾರ ಎಂದ ಫ್ಯಾನ್ಸ್?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಬರುತ್ತಿದ್ದಂತ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಎಲ್ಲರಿಗೂ ನೆನಪಿರಲೇ ಬೇಕು ಅಲ್ಲವಾ. ಮರೆಯುವಂತ ಪಾತ್ರ ಅಲ್ಲ ಅದು. ಸುಬ್ಬು ಪ್ರೀತಿಯಿಂದ ಬಂಗಾರ ಅಂತಿದ್ದರೆ ಎಲ್ಲರ ಮನಸ್ಸಲ್ಲೂ ಬಂಗಾರ ಬಂಗಾರವೆಂಬ ವಾಯ್ಸ್ ಪದೇ ಪದೇ ಕೇಳಿಸುತ್ತಾ ಇತ್ತು. ಅಭಿಮಾನಿಗಳ ಮುದ್ದು ಬಂಗಾರ ಈಗ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಮತ್ತೆ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Jothe Jotheyali Serial fame Megha Shetty nose ring video goes viral

ಮೂಗು ಚುಚ್ಚಿಸಿದ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾ ಇದ್ದಾರೆ. ಮೂಗು ಚುಚ್ಚಿಕೊಳ್ಳುವ ವಿಡಿಯೋ ಹರಿಬಿಟ್ಟು, ಫ್ಯಾನ್ಸ್ ಗೆಲ್ಲಾ ಫುಲ್ ಖುಷಿ ಕೊಟ್ಟಿದ್ದಾರೆ. ಅದುವೇ ಮೂಗು ಚುಚ್ಚಿಸಿಕೊಂಡಿರುವುದು. ಈ ವಿಡಿಯೋ ನೋಡಿದ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಮೂಗು ಚುಚ್ಚಿಸಿಕೊಳ್ಳುವುದಕ್ಕೂ ಮುನ್ನ ಸಹಜವಾಗಿಯೇ ಮೇಘಾ ಕೂಡ ಹೆದರಿದ್ದಾರೆ. ಆದರೆ, ಮೂಗು ಚುಚ್ಚುವವರು ಕೊಂಚ ಧೈರ್ಯ ಹೇಳಿದ್ದಾರೆ. ಬಳಿಕ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಚುಚ್ಚಿದ್ದಾರೆ.

ಬಂಗಾರದ ಮೂಗುತ್ತಿಗೆ ಏನಂದ್ರು ಫ್ಯಾನ್ಸ್?

ಮೂಗು ಚುಚ್ಚಿದ ಬಳಿಕ ಮೇಘಾ ಶೆಟ್ಟಿ ಕಣ್ಣಲ್ಲಿ ನೀರು ಬಂದಿದೆ. ಆ ನೋವಿನ ನಡುವಲ್ಲೂ ನಗುವುದಕ್ಕೆ ಪ್ರಯತ್ನಿಸಿದ್ದಾರೆ. ಹೀಗಾಗಿ ಫ್ಯಾನ್ಸ್ ಎಲ್ಲಾ ಸಮಾಧಾನ ಮಾಡುವುದಕ್ಕೆ ಯತ್ನಿಸಿದ್ದಾರೆ. "ಕ್ಯಾಮರಾ ಆಫ್ ಮಾಡಿ ಅಳುತ್ತಿದ್ದೀರಾ, ಮೂಗುತ್ತಿ ಸುಂದರಿ, ಮೂಗುತ್ತಿಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ, ಬಂಗಾರ ಈಗ ಇನ್ನು ಮುದ್ದಾಗಿ ಕಾಣಿಸುತ್ತಿದ್ದೀಯಾ" ಅಂತೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಈ ವಿಡಿಯೋ ಬಿಟ್ಟು ಕಡಿಮೆ ಸಮಯಕ್ಕೇನೆ 35 ಸಾವಿರ ವೀವ್ಸ್ ಆಗಿದೆ.

ಮದುವೆ ಏನಾದ್ರೂ ಫಿಕ್ಸ್ ಆಯ್ತಾ ಬಂಗಾರ..?

ಭಾರತೀಯ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಮೂಗು ಚುಚ್ಚಿಸುವುದು ರೂಢಿಯಲ್ಲಿದೆ. ಚಿಕ್ಕವಯಸ್ಸಿನಲ್ಲಿಯೇ ಮೂಗನ್ನು ಚುಚ್ಚಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿ ಈ ಸಂಪ್ರದಾಯ ಮರೆಯಾಗಿದೆ‌. ಆದರೆ ಮದುವೆ ಸಮಯದಲ್ಲಿ ಅದನ್ನು ಪಾಲನೆ ಮಾಡುವವರು ಹೆಚ್ಚು ಜನ. ಇತ್ತೀಚೆಗೆ ಮದುವೆಯಾದ ನಟಿ ಹರಿಪ್ರಿಯಾ ಕೂಡ ಮದುವೆ ಸಂದರ್ಭದಲ್ಲಿಯೇ ಮೂಗು ಚುಚ್ಚಿಸಿಕೊಂಡಿದ್ದರು. ಈಗ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಇಷ್ಟಪಟ್ಟು ಚುಚ್ಚಿಸಿಕೊಂಡಿರುವ ಸಾಧ್ಯತೆ ಇದೆ. ಎಲ್ಲವನ್ನು ಊಹೆ ಮಾಡಿಕೊಳ್ಳುವುದಕ್ಕೆ ಕಷ್ಟ.

ಮೇಘಾ ಶೆಟ್ಟಿಯ ಈಗಿನ ಪ್ರಾಜೆಕ್ಟ್ ಏನು..?

ಮೇಘಾ ಶೆಟ್ಟಿ ಧಾರಾವಾಹಿಗಳ ನಡುವೆಯೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಧಾರಾವಾಹಿ ಮುಗಿದು ಆಗಿದೆ. 'ಜೊತೆ ಜೊತೆಯಲಿ' ಮುಗಿದ ಮೇಲೆ‌ ಮುಂದೆ ಏನು ಎಂಬುದು ಫ್ಯಾನ್ಸ್ ಪ್ರಶ್ನೆಯಾಗಿತ್ತು. ಅದಕ್ಕೆ‌ ಅಪ್ಡೇಟ್ ನೀಡಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಕಾಲಿಟ್ಟಿದ್ದಾರೆ. 'ಲಂಡನ್ ಕೆಫೆ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆದ ನಟಿ ಈಗ ಸಿನಿಮಾಗಳತ್ತ ಸಾಕಷ್ಟು ಗಮನಹರಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಮೇಘಾ ಶೆಟ್ಟಿಗೆ ಫ್ಯಾನ್ ಕ್ರೇಜ್ ಕಡಿಮೆ ಏನು ಇಲ್ಲ. Instagramನಲ್ಲಿ ಸುಮಾರು 1.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

More from Filmibeat

English summary
Jothe Jotheyali Serial fame Megha Shetty nose ring video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X