ಜೊತೆ ಜೊತೆಯಲಿ ಸೀರಿಯಲ್‌ನ ಇದೊಂದು ಟ್ವಿಸ್ಟ್‌ಗೆ ವೀಕ್ಷಕರು ಬೇಸರ!

ಕನ್ನಡ ಕಿರುತೆರೆಯ ಲೋಕದಲ್ಲಿ ಈಗಾಗಲೇ ಸಾಕಷ್ಟು ಸೀರಿಯಲ್‌ಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಸಾಕಷ್ಟು ಮಹಿಳೆಯರೂ ಸಂಜೆ ಹೊತ್ತಿನಲ್ಲಿ ಸೀರಿಯಲ್‌ಗಳನ್ನು ನೋಡಿಕೊಂಡು ಸಮಯ ಕಳೆಯುತ್ತಾರೆ. ಕೆಲವೊಂದು ಜನಪ್ರಿಯ ಸೀರಿಯಲ್‌ ಕೂಡ ಸಾಕಷ್ಟು ವೀಕ್ಷಕರನ್ನು ರಂಜಿಸುತ್ತಿದ್ದು, ಅದರಲ್ಲಿ ಒಂದು ಜೊತೆ ಜೊತೆಯಲಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ಇದೀಗ ದೊಡ್ಡದೊಂದು ಟ್ವಿಸ್ಟ್ ಎದುರಾಗಿದೆ.

ಆರ್ಯವರ್ಧನ್ ಮತ್ತು ಅನು ಸಿರಿಮನೆಯ ಪ್ರೇಮ ಕಥೆಯೇ ಈ ಜೊತೆ ಜೊತೆಯಲಿ ಸೀರಿಯಲ್. ಈ ಸೀರಿಯಲ್ ಸೆಟ್ಟೇರಿದಾಗಿನಿಂದಲೂ ಬಾರಿ ಸದ್ದು ಮಾಡಿತ್ತು. ಈ ಸೀರಿಯಲ್ ಪ್ರೋಮೊ ಸಾಂಗ್ ಕೂಡ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿತ್ತು. ಸೀರಿಯಲ್ ಕೂಡ ದಿನದಿಂದ ದಿನಕ್ಕೆ ಟಿಆರ್‌ಪಿ ಕೂಡ ಹೆಚ್ಚೆಚ್ಚು ಪಡೆದುಕೊಂಡು ಜನ ಮನ ಗೆದ್ದಿದೆ.

ಅನು ಸಿರಿಮನೆ ಮತ್ತು ಆರ್ಯವರ್ಧನ್ ಇಬ್ಬರು ಪ್ರೀತಿಸಿ ಮದುವೆ ಆದ ನಂತರ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಚಿಕ್ಕ ಚಿಕ್ಕ ಟ್ವಿಸ್ಟ್‌ಗಳು ಬಂದು ಹೋಗಿದೆ. ಆದರೇ ಈಗ ಸೀರಿಯಲ್‌ನಲ್ಲಿ ಬಹು ದೊಡ್ಡ ತಿರುವೊಂದು ಬಂದಿದ್ದು, ಇದನ್ನು ವೀಕ್ಷಕರು ಒಪ್ಪಿಕೊಳ್ಳುತ್ತಿಲ್ಲ. ಈ ಬದಲಾವಣೆ ಬೇಡ ಎನ್ನುತ್ತಿದ್ದಾರೆ. ಹಾಗಿದ್ದರೆ ಆ ಟ್ವಿಸ್ಟ್ ಏನು ಅಂತ ಮುಂದೆ ಓದಿ

ಈ ಬದಲಾವಣೆಯನ್ನು ಯಾರು ನೀರಿಕ್ಷಿಸಿರಲಿಲ್ಲ!

ಈ ಬದಲಾವಣೆಯನ್ನು ಯಾರು ನೀರಿಕ್ಷಿಸಿರಲಿಲ್ಲ!

ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಎಂದರೆ ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಸಿರಿಮನೆ, 45 ವಯಸ್ಸಿನ ನಾಯಕನಿಗೆ 21 ವಯಸ್ಸಿನ ನಾಯಕಿ ಎಂದಾಗಲೇ ಒಂದು ಕುತೂಹಲ ಖಂಡಿತ ಮೂಡಿತ್ತು. ಆರ್ಯವರ್ಧನ್ ಪಾತ್ರದಲ್ಲಿ ನಟ ಅನಿರುದ್ಧ್ ಜೀವ ತುಂಬಿ ನಟಿಸಿದರು, ದೊಡ್ಡ ಮಟ್ಟದ ಜನಾದರಣೆ ಪಡೆದರು. ಆರ್ಯವರ್ಧನ್ ಎಂದರೆ ಅಲ್ಲೊಂದು ಗಾಂಭೀರ್ಯ, ನಂಬಿಕೆ, ಮಿಸ್ಟರ್ ಪರ್ಫೆಕ್ಟ್, ಒಬ್ಬ ಪರ್ಫೆಕ್ಟ್ ಜಂಟಲ್ ಮ್ಯಾನ್ ಪಾತ್ರ. ಆ ಪಾತ್ರದಲ್ಲಿ ಅನಿರುದ್ದ್ ಅವರು ಅಷ್ಟೇ ಪರ್ಫೆಕ್ಟ್ ಆಗಿದ್ದಾರೆ ಎನ್ನುವುದು ಪ್ರೇಕ್ಷಕರ ಮಾತು ಕೂಡಾ ಹೌದು.

ಆರ್ಯವರ್ಧನ್ ನಿಜವಾದ ಪಾತ್ರ ಏನು ಅಂತ ರಿವೀಲ್ !

ಆರ್ಯವರ್ಧನ್ ನಿಜವಾದ ಪಾತ್ರ ಏನು ಅಂತ ರಿವೀಲ್ !

ಆದರೆ ಈಗ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಹಾಗೂ ಅನು ಮದುವೆಯ ನಂತರ ಬಹುದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ. ಹೌದು ಇಷ್ಟು ದಿನ ಯಾವ ಆರ್ಯವರ್ಧನ್ ಪಾತ್ರವು ಮಾದರಿ ಎನಿಸಿತ್ತೋ, ಆ ಪಾತ್ರದಲ್ಲಿ ಇನ್ನೊಂದು ನೆರಳು ಅಡಗಿದೆ, ಅದು ಖಳನಾಯಕನದ್ದು ಎನ್ನುವಂತೆ ಆರ್ಯವರ್ಧನ್‌ನ ಹೊಸ ರೂಪ ಅನಾವರಣಗೊಳ್ಳುತ್ತಿದೆ. ಅನಿರುದ್ಧ್ ಅವರಿಗೆ ಕೂಡಾ ಈಗ ಹೊಸ ರೂಪದಲ್ಲಿ ತಮ್ಮನ್ನು ತಾವು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುವ ಅವಕಾಶವೂ ದೊರೆತಿದೆ.

ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾದ ಪೋಸ್ಟ್ !

ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾದ ಪೋಸ್ಟ್ !

ಈ ವಿಷಯವಾಗಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೂಡಾ ಬರೆದುಕೊಂಡಿದ್ದು, ಜೆಜೆ ಅಂದರೆ ತಿರುವುಗಳು ನಾನು ನಾಯಕನ ? ಖಳನಾಯಕನ ? ಒಬ್ಬ ಕಲಾವಿದನಾಗಿ ಈ ಹೊಸ ಸವಾಲು ನನಗೆ ಸಂತೋಷ ಕೊಡುತ್ತಿದೆ. ವೀಕ್ಷಿಸುವಾಗ ಖಂಡಿತವಾಗ್ಲೂ ತಾವೂ ಕೂಡ ಸಂತೋಷ ಪಡುತ್ತಿರ. ಈ ಪ್ರವಾಸನ ನಾವೆಲ್ಲರೂ ಸೇರಿ ಆನಂದಿಸೋಣ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಇನ್ನಷ್ಟು ರೋಚಕತೆ ಇರಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿಯ ಟ್ವಿಸ್ಟ್‌ಗಳಿಗೆ ವೀಕ್ಷಕರು ಬೇಸರ

ಜೊತೆ ಜೊತೆಯಲಿ ಧಾರವಾಹಿಯ ಟ್ವಿಸ್ಟ್‌ಗಳಿಗೆ ವೀಕ್ಷಕರು ಬೇಸರ

ಇಷ್ಟು ದಿನ ಸೀರಿಯಲ್‌ನಲ್ಲಿ ಆರ್ಯವರ್ಧನ್ ಅವರನ್ನು ಆದರ್ಶ ವ್ಯಕ್ತಿಯಂತೆ ನೋಡುತ್ತಿದ್ದ ಹಲವರಿಗೆ ಈ ಬದಲಾವಣೆ ಇಷ್ಟವಾಗುತ್ತಿಲ್ಲ. ಈ ಬಗ್ಗೆ ಕಮೆಂಟ್‌ಗಳನ್ನು ಮಾಡುತ್ತಿರುವ ವೀಕ್ಷಕರು, ಸೀರಿಯಲ್‌ನಲ್ಲಿ ಈ ಬದಲಾವಣೆ ಸರಿಯಿಲ್ಲ ಎನ್ನುತ್ತಿದ್ದಾರೆ. ಆರ್ಯವರ್ಧನ್ ಅವರನ್ನು ಹೀರೋ ಆಗಿಯೇ ನೋಡಲು ನಾವು ಇಚ್ಚಿಸುತ್ತೇವೆ. ವಿಲನ್ ಆಗಿ ಅವರನ್ನು ನೋಡಲು ಇಷ್ಟ ಆಗುತ್ತಿಲ್ಲ. ದಯವಿಟ್ಟು ಈ ಬದಲಾವಣೆ ಬೇಡ ಎಂದು ಹೇಳುತ್ತಿದ್ದಾರೆ. ಆದರೇ ಜೊತೆ ಜೊತೆ ಸೀರಿಯಲ್‌ನಲ್ಲಿ ಆರ್ಯವರ್ಧನ್ ಪಾತ್ರ ಹೀಗೆ ಮುಂದುವರೆಯುತ್ತಾ? ಅಥವ ಮುಂದಿನ ದಿನಗಳಲ್ಲಿ ಬದಲಾಗುತ್ತಾ ಅನ್ನೋದನ್ನ ನೋಡಬೇಕಿದೆ.

More from Filmibeat

English summary
Jothe Jotheyali Serial Get New twist Fans Shows their Sadness over anirudh jatkar and Megha Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X