ಜೊತೆ ಜೊತೆಯಲಿ: ಅನುಗೆ ರಾಜನಂದಿನಿ ಸೀರೆ ಕೊಟ್ಟಿದ್ದೇಕೆ ಆರ್ಯ ವರ್ಧನ್?
ಅನು ಸಿರಿಮನೆ ಮತ್ತು ಆರ್ಯವರ್ಧನ್ ಜೀವನದಲ್ಲಿ ಕ್ಷಣ ಕ್ಷಣಕ್ಕೂ ತಿರುವುಗಳು ಎರುಗಾಗುತ್ತಿವೆ. ಅಚಾನಕ್ ಆಗಿ ಬರುವ ಸವಾಲುಗಳನ್ನು ಅನು ಮತ್ತು ಆರ್ಯವರ್ಧನ್ ಎದುರಿಸುತ್ತಿದ್ದಾರೆ. ಅನು, ಆರ್ಯನ್ ನಡುವೆ ಮುನಿಸು ತರುವ ಘಟನೆಗಳೇ ಹೆಚ್ಚಾಗಿ ಸಂಭವಿಸುತ್ತವೆ. ಆದರೆ ಅದೆಲ್ಲವನ್ನೂ ಮೀರಿ ನಿಂತಿದೆ ಅನು, ಆರ್ಯ ವರ್ಧನ್ ಪ್ರೀತಿ.
ಇನ್ನು ಮೊದಲಿನಿಂದಲೂ ಅನು, ಆರ್ಯವರ್ಧನ್ ಮೊದಲ ಪತ್ನಿ ರಾಜ ನಂದಿನಿಯ ಮರು ಜನ್ಮ ಎಂದು ಹಲವು ಸುಳಿವುಗಳನ್ನು ಕೊಡಲಾಗಿದೆ. ಆದರೆ ಅದು ನಿಜವೋ ಇಲ್ಲವೋ ಎಂದು ಇನ್ನೂ ಕೂಡ ರಿವೀಲ್ ಆಗಿಲ್ಲ. ಆ ಕುತೂಹಲದ ಜೊತೆಗೆ ಧಾರಾವಾಹಿ ಸಾಗುತ್ತಿದೆ. ಇನ್ನು ರಾಜ ನಂದಿನಿ ಪಾತ್ರ ತುಂಬಾನೆ ಮುಖ್ಯ ಆದದ್ದು. ಆರ್ಯವರ್ಧನ್ ಎಲ್ಲಾ ಹಿನ್ನೆಲೆಯನ್ನು ಇದೇ ಬಿಚ್ಚಿಡಲಿದೆ.
ರಾಜನಂದಿನಿ ಬಗ್ಗೆ ತಿಳಿದುಕೊಳ್ಳಲು ಅನು ಸಿರಿಮನೆ ಹಲವು ಪ್ರಯತ್ನ ಮಾಡುತ್ತಾಳೆ. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ರಾಜ ನಂದಿನಿ ವಿಚಾರ ಬಂದಾಗಲೆಲ್ಲಾ ಅನು ಮತ್ತು ಆರ್ಯ ವರ್ಧನ್ ನಡುವೆ ಜಗಳ ಆಗುತ್ತೆ. ಆ ಬಗ್ಗೆ ಏನೂ ಕೇಳ ಬೇಡ ಎಂದು ಆರ್ಯ ವರ್ಧನ್ ಅನು ಬಾಯಿ ಮುಚ್ಚಿಸುತ್ತಾರೆ.

ರಾಜನಂದಿನಿ ಸೀರೆ ಕೊಟ್ಟು ಕುತೂಹಲ ಮೂಡಿಸಿದ ಆರ್ಯ ವರ್ಧನ್ ನಡೆ!
ನಾಯಕಿ ಅನು ಯಾವಾಗ ರಾಜನಂದಿನಿ ಬಗ್ಗೆ ಕೇಳಿದರು ಆರ್ಯ ವರ್ಧನ್ ಏನನ್ನು ಹೇಳುವುದಿಲ್ಲ. ಅನು ಇಂದ ರಾಜನಂದಿನಿ ವಿಚಾರವನ್ನು ಆರ್ಯವರ್ಧನ್ ಮುಚ್ಚಿಟ್ಟಿದ್ದಾರೆ. ರಾಜನಂದಿನಿ ವಿಚಾರವನ್ನು ಅನುಗೆ ತಿಳಿಸಲು ಆರ್ಯ ವರ್ಧನ್‌ಗೆ ಇಷ್ಟವಿಲ್ಲ. ಆದರೂ ಈಗ ತಾನಾಗಿಯೇ ಅನುಗೆ ರಾಜ ನಂದಿನಿ ಸೀರೆ ಉಡಲು ಕೊಟ್ಟಿದ್ದಾನೆ. ಅಂದರೆ ಈ ಮೂಲಕ ರಾಜ ನಂದಿನಿಯನ್ನು ಮತ್ತೆ ಆರ್ಯ ವರ್ಧನ್ ಅನುಗೆ ನೆನಪಿಸಿದ್ದಾನೆ. ಆರ್ಯ ವರ್ಧನ್ ಈ ನಡೆಯೆ ಕುತೂಹಲಕ್ಕೆ ಕಾರಣ ಆಗಿದೆ.

ರಾಜ ನಂದಿನಿ ಸೀರೆಯಲ್ಲಿ ಅನು ಸಿರಿಮನೆ: ಮನೆಯವರೆಲ್ಲ ಶಾಕ್!
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಆರ್ಯವರ್ಧನ್ ಮನೆಯವರೆಲ್ಲಾ ಹೊಸ ಬಟ್ಟೆ ತೊಟ್ಟು ರೆಡಿ ಆಗಿರುತ್ತಾರೆ. ಎಲ್ಲರೂ ಅನು ಬರುವಿಕೆಗೆ ಕಾಯುತ್ತಿದ್ದಾಗ. ಅಂದದ ರೇಷ್ಮೇ ಸೀರೆ ಉಟ್ಟು ಅನು ಬರುತ್ತಾಳೆ. ಆಗ ಅನು ಉಟ್ಟ ಸೀರೆ ಬಗ್ಗೆ ಮಾತು ಕತೆ ನಡೆಯುತ್ತದೆ. ಆದರೆ ಅನುಗೆ ಈ ಸೀರೆ ಯಾರದ್ದು ಎನ್ನುವುದು ಗೊತ್ತಿರುವುದಿಲ್ಲ. ಈ ಸೀರೆ ಯಾರದ್ದು ಎನ್ನುವ ಪ್ರಶ್ನೆ ಬಂದಾಗ, ಆರ್ಯ ವರ್ಧನ್ ಇದು ರಾಜ ನಂದಿನಿ ಸೀರೆ ಎಂದು ಹೇಳುತ್ತಾನೆ. ಆಗ ಅನುಗೆ ಶಾಕ್ ಆಗುತ್ತೆ. ರಾಜ ನಂದಿನಿ ಬಗ್ಗೆ ಏನು ಹೇಳುವುದಿಲ್ಲ. ಆದರೆ ಈ ಸೀರೆ ಯಾಕೆ ಕೊಟ್ಟಿದ್ದಾರೆ ಎನ್ನುವ ಶಂಕೆ ಮೂಡುತ್ತದೆ.

ಅನು ಮನೆಯಲ್ಲಿ ಆರ್ಯವರ್ಧನ್ ಸಂಕ್ರಾಂತಿ ಹಬ್ಬ!
ಸದ್ಯ ಆರ್ಯವರ್ಧನ್ ಮತ್ತು ಅನು ಸಿರಿಮನೆ ಇಬ್ಬರ ಮನೆಯಲ್ಲೂ ಸಂಕ್ರಾಂತಿ ಹಬ್ಬ ಜೋರಾಗಿ ಇದೆ. ಅನು ಮನೆಯಲ್ಲೇ ಹಬ್ಬ ಮಾಡಲು ನಿರ್ಧರಿಸಿದ್ದಾರೆ. ಹಾಗಾಗಿ ಇಡೀ ಆರ್ಯವರ್ಧನ್ ಕುಟುಂಬ ಅನು ಮನೆಗೆ ಭೇಟಿ ನೀಡಲಿದೆ. ಅಲ್ಲೇ ಹಬ್ಬವನ್ನು ಆಚರಿಸಲಿದ್ದಾರೆ ಅನು ಮತ್ತು ಆರ್ಯ ವರ್ಧನ್. ಹಾಗಾಗಿ ಅನು ಅಮ್ಮ, ಅಪ್ಪ ಮನೆಗೆ ಅಲಂಕಾರ ಮಾಡಿ ಮಗಳು, ಅಳಿಯನನ್ನು ಬರ ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಇಲ್ಲ ಕೂಡ ಟ್ವಿಸ್ಟ್ ಇರುವ ಮುನ್ಸೂಚನೆ ಕೊಟ್ಟಿದ್ದಾರೆ ನಿರ್ದೇಶಕ.

ರಾಜನಂದಿನಿ ಬಗ್ಗೆ ಅನುಗೆ ಹೇಳುತ್ತಾನಾ ಆರ್ಯವರ್ಧನ್!
ಆರ್ಯವರ್ಧನ್ ತಾನಾಗಿಯೇ ಅನುಗೆ ರಾಜ ನಂದಿಗೆ ಸೀರೆಯನ್ನು ಕೊಟ್ಟಿದ್ದಾನೆ. ಹಾಗಾಗಿ ಹಬ್ಬದ ಖುಷಿಯಲ್ಲಿ ಅನು ಪ್ರಶ್ನೆಗಳಿಗೆ ಆರ್ಯ ವರ್ಧನ್ ಉತ್ತರ ನೀಡಲಿದ್ದಾನೆ ಎನ್ನುವ ಸೂಚನೆ ಸಿಕ್ಕಿದೆ ಇಲ್ಲವಾದರೆ ಅನು ಈ ಸೀರೆಯನ್ನು ತನಗೆ ಆರ್ಯವರ್ಧನ್ ಯಾಕೆ ಕೊಟ್ಟರು ಎಂದು ಪ್ರಶ್ನಿಸಬಹುದು. ಆಗ ಅನು ಮತ್ತೆ ರಾಜನಂದಿನಿ ಬಗ್ಗೆ ಕೇಳುವ ಸಾಧ್ಯತೆ ಇದೆ. ಆಗ ಒಮದು ಆರ್ಯವರ್ಧನ್ ಎಲ್ಲವನ್ನು ಅನು ಮುಂದೆ ಹೇಳಬೇಕು. ಇಲ್ಲವಾದರೆ ಮಾತು ಮರೆಸಿ ಅನು ಇಂದ ಈ ಬಾರಿಯೂ ಸತ್ಯ ಹೇಳದೆ ನುಣುಚಿಕೊಳ್ಳಬಹುದು. ಈ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











