For Quick Alerts
  ALLOW NOTIFICATIONS  
  For Daily Alerts

  ಆರ್ಯವರ್ಧನ್ ಮುಖವೂ ಬದಲಾಯ್ತು: ನೆನಪೂ ಮರೆಯಾಯ್ತು..!!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಧಾರಾವಾಹಿಯಲ್ಲಿ ಈಗ ಆರ್ಯವರ್ಧನ್ ಮುಖವನ್ನು ಸರ್ಜರಿ ಮಾಡಿ ಬದಲಾಯಿಸಲಾಗಿದೆ. ಅಪಘಾತದಲ್ಲಿ ಆರ್ಯವರ್ಧನ್ ಅವರ ಮುಖ ಜಜ್ಜಿ ಹೋಗಿತ್ತು. ಹಾಗಾಗಿ ವೈದ್ಯರು ಪ್ರಿಯದರ್ಶಿನಿ ಅವರ ಒಪ್ಪಿಗೆ ಮೇರೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ.

  ವಿಶ್ವಾಸ್ ತಾನು ಮಾಡಿದ ಸಾಲದ ಹೊರೆಯನ್ನು ಹೊರಲಾಗದೇ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಆತನ ಚರ್ಮವನ್ನೇ ಆರ್ಯವರ್ಧನ್ ಮುಖಕ್ಕೆ ಬಳಸಿ ಸರ್ಜರಿ ಮಾಡಲಾಗಿದೆ. ಇದು ಈಗ ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ.

  ಅಪ್ಪ ಅಮ್ಮ ಮಾತನಾಡುವುದನ್ನು ಕದ್ದು ಕೇಳಿಸಿಕೊಂಡ ಆದಿ! ಮುಂದೇನು ಮಾಡುತ್ತಾನೆ?ಅಪ್ಪ ಅಮ್ಮ ಮಾತನಾಡುವುದನ್ನು ಕದ್ದು ಕೇಳಿಸಿಕೊಂಡ ಆದಿ! ಮುಂದೇನು ಮಾಡುತ್ತಾನೆ?

  ಇತ್ತ ಅನು ಗರ್ಭಿಣಿ . ಆಕೆಗೆ ಆರ್ಯವರ್ಧನ್ ವಿಚಾರ ತಿಳಿದರೆ ಸಹಿಸಿಕೊಳ್ಳುವ ಶಕ್ತಿ ಇಲ್ಲ ಎಂದು ತಿಳಿದು ಎಲ್ಲರೂ ಅನು ಸಿರಿಮನೆಯಿಂದ ಆರ್ಯವರ್ಧನ್ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಸಣ್ಣ ಅಪಘಾತವಾಗಿದೆ ಅಷ್ಟೇ ಎಂದು ಹೇಳಿದ್ದಾರೆ.

  ಆರ್ಯನಿಗಾಗಿ ಕಾಯುತ್ತಿರುವ ಅನು

  ಆರ್ಯನಿಗಾಗಿ ಕಾಯುತ್ತಿರುವ ಅನು

  ಅನು ಸಿರಿಮನೆ ಆರ್ಯನಿಗೆ ಏನಾಗಿದೆ ಎಂಬ ಚಿಂತೆಯಲ್ಲಿದ್ದಾಳೆ. ಫೋನ್ ಅನ್ನು ಕೊಡಿ ಎಂದರೂ ಮಾನ್ಸಿ ಕೊಡುತ್ತಿಲ್ಲ. ಚಿಕ್ಕ ಆಕ್ಸಿಡೆಂಟ್ ಆಗಿದೆ ಅಷ್ಟೇ ಎಂದು ಹೇಳಿದ್ದಾರೆ. ಇಲ್ಲಿಗೆ ಶಾರದಾ ದೇವಿ ಮತ್ತು ಆರ್ಯ ಬರುತ್ತಿದ್ದಾರೆ ಎಂದು ಕೂಡ ಹೇಳುತ್ತಿದ್ದಾರೆ. ಆದರೆ ಮನೆಗೆ ಮೀರಾ ಬೇರೆ ಬಂದಿದ್ದಾಳೆ. ನಿಜಕ್ಕೂ ಆರ್ಯನಿಗೆ ಏನಾಗಿದೆ ಎಂದು ಯೋಚಿಸುತ್ತಿದ್ದಾಳೆ. ಮೀರಾ ಬಳಿ ನೀನು ಬಂದಿದ್ದೀಯಾ ಎಂದರೆ ಏನೋ ಆಗಿದೆ ಎಂದರ್ಥ. ಹೇಳು ಮೀರಾ ಎನ್ನುತ್ತಾಳೆ. ಆದರೆ ಮೀರಾ ಏನನ್ನೂ ಹೇಳದಂತೆ ಮಾನ್ಸಿ ಸನ್ನೆ ಮಾಡಿ ಹೇಳುತ್ತಾಳೆ. ಮೀರಾ ಅನು ಬಳಿ ಏನನ್ನೂ ಹೇಳುವುದಿಲ್ಲ.

  ಗಣೇಶ ಹಬ್ಬ ಆಚರಿಸಲು ಪುಟ್ಟಕ್ಕನ ಮನೆಗೆ ಬಂದ ಕಂಠಿ!ಗಣೇಶ ಹಬ್ಬ ಆಚರಿಸಲು ಪುಟ್ಟಕ್ಕನ ಮನೆಗೆ ಬಂದ ಕಂಠಿ!

  ಬಿಕ್ಕಿ ಬಿಕ್ಕಿ ಅಳುತ್ತಿರುವ ಪ್ರಿಯದರ್ಶಿನಿ

  ಬಿಕ್ಕಿ ಬಿಕ್ಕಿ ಅಳುತ್ತಿರುವ ಪ್ರಿಯದರ್ಶಿನಿ

  ಇತ್ತ ಆಸ್ಪತ್ರೆಯಲ್ಲಿ ಪ್ರಿಯದರ್ಶಿನಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ನನ್ನ ಮಕ್ಕಳಿಗೆ ಹೀಗೆ ಯಾಕಾಯ್ತು.? ಅಂತಹ ಪಾಪ ನಾನೇನು ಮಾಡಿದ್ದೆ.? ಇಬ್ಬರೂ ಮಕ್ಕಳನ್ನು ಹಿಂಗೆ ನೋಡೋದು ನನ್ನ ಕರ್ಮ ಎಂದು ಅಳುತ್ತಿರುತ್ತಾಳೆ. ಇದೇ ವೇಳೆಗೆ ಶಾರದಾ ದೇವಿ ಕೂಡ ಅಳುತ್ತಿರುತ್ತಾಳೆ. ಸುದ್ದಿ ವಾಹಿನಿಗಳಲ್ಲಿ ಆರ್ಯ ಬದುಕಿಲ್ಲ ಎಂದು ತೋರಿಸುತ್ತಿದ್ದಾರೆ. ಆದರೆ, ಇಲ್ಲಿ ಡಾಕ್ಟರ್ ಗಳು ಏನೂ ಹೇಳುತ್ತಿಲ್ಲ. ಆರ್ಯನನ್ನು ನೋಡಲು ಸಹ ಬಿಡುತ್ತಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕುತ್ತಿರುತ್ತಾಳೆ.

  ಅನು ವಿರುದ್ಧ ದೂರು ನೀಡಿದ ಝೇಂಡೇ

  ಅನು ವಿರುದ್ಧ ದೂರು ನೀಡಿದ ಝೇಂಡೇ

  ಇನ್ನು ಝೇಂಡೇ ಆಕ್ಸಿಡೆಂಟ್ ಆದಾಗಲೇ ಪೊಲೀಸ್ ಠಾಣೆಗೆ ಹೋಗಿ ಆರ್ಯವರ್ಧನ್ ಮೇಲೆ ಕೊಲೆ ಪ್ರಯತ್ನ ನಡೆದಿದೆ ಎಂದು ದೂರು ನೀಡಿದ್ದ. ಅದಕ್ಕೆ ಕಾರಣ ಯಾರೂ ಎಂದೂ ಹೇಳಿದ್ದ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೆ ಪೊಲೀಸ್ ಠಾಣೆಗೆ ಬಂದ ಝೇಂಡೇ, ಆರ್ಯವರ್ಧನ್ ಗೆ ಬರೀ ಅಪಘಾತವಾಗಿದೆ ಎಂದು ಹೇಳಿದ್ದೆ, ಆದರೆ ಈಗ ಆರ್ಯ ಇನ್ನಿಲ್ಲ ಎನ್ನುತ್ತಿದ್ದಾರೆ. ಹೀಗಿದ್ದರೂ ನೀವ್ಯಾಕೆ ಇನ್ನು ಅನು ಮೇಲೆ ಯಾವ ಆಕ್ಷನ್ ಕೂಡ ತೆಗೆದುಕೊಂಡಿಲ್ಲ. ನಾನು ಹೇಳಿರಲಿಲ್ವಾ..? ಈ ಕೊಲೆಯನ್ನು ಅನು ಮಾಡಿಸಿದ್ದು, ಎಂದು ಪ್ರಶ್ನಿಸುತ್ತಾನೆ. ಆಗ ಪೊಲೀಸರು ಝೇಂಡೇಗೆ ಬೈಯುತ್ತಾರೆ.

  ಗಟ್ಟಿಮೇಳ: ಅಮ್ಮನ ಸಿಡಿ ಕೈಸೇರುವ ಮುನ್ನ ವಸಿಷ್ಠ ಕುಟುಂಬದಲ್ಲಿ ಮತ್ತೆ ಪ್ರಾಣಾಪಾಯವಾಗುತ್ತಾ..?ಗಟ್ಟಿಮೇಳ: ಅಮ್ಮನ ಸಿಡಿ ಕೈಸೇರುವ ಮುನ್ನ ವಸಿಷ್ಠ ಕುಟುಂಬದಲ್ಲಿ ಮತ್ತೆ ಪ್ರಾಣಾಪಾಯವಾಗುತ್ತಾ..?

  ಬದಲಾಯ್ತು ಆರ್ಯನ ಮುಖ

  ಬದಲಾಯ್ತು ಆರ್ಯನ ಮುಖ

  ಇನ್ನು ಆರ್ಯನ ಮುಖಕ್ಕೆ ವಿಶ್ವಾಸ್ ಮುಖದ ಚರ್ಮವನ್ನು ಹಾಕಲಾಗಿದೆ. ಆರ್ಯನ ಮುಖದ ಬ್ಯಾಂಡೇಜ್ ಅನ್ನು ಎಜೆ, ವೇದಾಂತ್ ಹಾಗೂ ಆದಿತ್ಯನ ಎದುರು ಬಿಚ್ಚಲಾಗಿದೆ. ಈಗ ಆರ್ಯನ ಪಾತ್ರದಲ್ಲಿ ವಿಶ್ವಾಸ್ ನಟಿಸುವುದು ಪಕ್ಕಾ ಆಗಿದೆ. ಇನ್ನು ಆರ್ಯನಿಗೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಿದೆ. ಹಾಗಾಗಿ ಆರ್ಯನಿಗೆ ಈಗ ಯಾವುದೂ ನೆನಪಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮೂವರು ಶಾಕ್ ಆಗಿದ್ದಾರೆ. ಇತ್ತ ಶಾರದಾ ದೇವಿ ವಿಶ್ವಾಸ್ ಹೆಣವನ್ನೇ ಆರ್ಯ ಎಂದು ತಿಳಿದು ಮನೆಗೆ ತಂದಿದ್ದಾರೆ.

  English summary
  jothe jotheyali serial aryavardhan face changed. And he lost his memory in accident. Everyone thaught arya is dead. Upcoming story is very interesting.
  Wednesday, September 14, 2022, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X