For Quick Alerts
  ALLOW NOTIFICATIONS  
  For Daily Alerts

  ಆರ್ಯನ ಜೀವದ ಜೊತೆಗೆ ನಿನ್ನ ಮೇಲಿನ ನಂಬಿಕೆಯೂ ಹೋಯ್ತು ಎಂದ ಶಾರದಾ ದೇವಿ

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಸತ್ತಿದ್ದಾನೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದನ್ನೇ ನಂಬಿರುವ ಮನೆಯವರು ಕೂಡ ವಿಶ್ವಾಸ್ ದೇಹವನ್ನೇ ಆರ್ಯವರ್ಧನ್ ಡೆಡ್ ಬಾಡಿ ಎಂದು ತಿಳಿದಿದ್ದಾರೆ. ಮನೆಗೆ ಬಂದ ಡೆಡ್ ಬಾಡಿಯನ್ನು ನೋಡಿದ ಅನು ಏನೂ ಅರ್ಥವಾಗದಂತೆ ಗೋಳಾಡುತ್ತಿದ್ದಾಳೆ.

  ಯಾರಿಗೂ ಆರ್ಯವರ್ಧನ್ ಸತ್ತಿದ್ದಾನೆ ಎಂಬುದು ನಂಬಲು ಸಾಧ್ಯವಾಗದಿದ್ದರೂ, ಸತ್ಯ ಎಂದು ಬಲವಂತವಾಗಿ ನಂಬುತ್ತಿದ್ದಾರೆ. ಆದರೆ ಅನು ಸಿರಿಮನೆಗೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಪ್ರೀತಿಸಿ, ಮಾತು ಕೊಟ್ಟವರು ಹೇಳದೇ ಕೇಳದೇ ಹೋದರು ಎಂದು ನಂಬಲಾಗುತ್ತಿಲ್ಲ.

  TV Serial TRP Ratings : ಜನ ಮೆಚ್ಚಿದ ಅತ್ತೆ ಸೊಸೆ: ಹಿಟ್ಲರ್ ಕಲ್ಯಾಣ, ಪುಟ್ಟಕ್ಕ, ಗಟ್ಟಿಮೇಳದ ಕಥೆಯೇನು?TV Serial TRP Ratings : ಜನ ಮೆಚ್ಚಿದ ಅತ್ತೆ ಸೊಸೆ: ಹಿಟ್ಲರ್ ಕಲ್ಯಾಣ, ಪುಟ್ಟಕ್ಕ, ಗಟ್ಟಿಮೇಳದ ಕಥೆಯೇನು?

  ಇತ್ತ ಆರ್ಯವರ್ಧನ್ ಹಿಂದಿನದ್ದು ನೆನಪಿಲ್ಲದೇ, ತನಗೇನು ಗೊತ್ತಿಲ್ಲದ ಹಾಗೆ ಮಲಗಿದ್ದಾರೆ. ನೆನಪು ಮರಳುವವರೆಗೂ ಯಾವ ಸತ್ಯವೂ ಹೇಳಲಾಗದು ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಈ ಕಥೆ ಮುಂದೆ ಹೇಗೆ ಸಾಗಬಹುದು ಎನ್ನು ಕುತೂಹಲ ಸೃಷ್ಟಿಯಾಗಿದೆ.

  ದಾದಾ ಎಂದು ಅಳುತ್ತಿರುವ ಹರ್ಷವರ್ಧನ್

  ದಾದಾ ಎಂದು ಅಳುತ್ತಿರುವ ಹರ್ಷವರ್ಧನ್

  ಹರ್ಷವರ್ಧನ್‌ ಬಳಿ ಶಾರದಾ ದೇವಿ ಎಲ್ಲಾ ಕೋಪವನ್ನು ಬದಿಗಿಟ್ಟು ನಿಮ್ಮ ಅಣ್ಣನ ಕಾರ್ಯವನ್ನು ನಡೆಸಿಕೊಡು ಎಂದು ಕೇಳುತ್ತಾಳೆ. ಇದರಿಂದ ಭಾವುಕನಾಗುವ ಹರ್ಷವರ್ಧನ್ ಅಳಲು ಪ್ರಾರಂಭಿಸುತ್ತಾನೆ. ನನಗೆ ನಿಮ್ಮ ಮೇಲೆ ಯಾವ ಕೋಪವೂ ಇಲ್ಲ ದಾದ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡದೇ ಹೀಗೆ ಹೋಗಬಾರದಿತ್ತು. ನನಗೋಸ್ಕರ ಅಲ್ಲದಿದ್ದರೂ ಅತ್ತಿಗೆಗೋಸ್ಕರ ಅವರ ಹೊಟ್ಟೆಯಲ್ಲಿರುವ ನಿಮ್ಮ ಮಗುವಿಗೋಸ್ಕರವಾದರೂ ವಾಪಸ್ ಬನ್ನಿ ದಾದ ಎಂದು ಹೇಳುತ್ತಾನೆ. ಆಗ ಅನು ಇಲ್ಲ ಭಾವ ಅವರು ಎಲ್ಲಾ ಪ್ರಶ್ನೆಗಳಿಗೂ ನನಗೆ ಉತ್ತರ ಕೊಟ್ಟಿದ್ದಾರೆ ಭಾವ, ಆದರೆ ನಾನು ಅವರನ್ನ ಕ್ಷಮಿಸುವ ಮುನ್ನವೇ ಹೀಗೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಇದು ಅವರು ನನಗೆ ಮಾಡಿದ ಅನ್ಯಾಯ ಎಂದು ಅಳುತ್ತಿರುತ್ತಾಳೆ.

  ಗಿಫ್ಟ್‌ ಹುಡುಕಲು ಬಾವಿಗೆ ಬಿದ್ದ ಮೇಷ್ಟ್ರು! ಕಂಗಾಲಾದ ಸಹನಾಗಿಫ್ಟ್‌ ಹುಡುಕಲು ಬಾವಿಗೆ ಬಿದ್ದ ಮೇಷ್ಟ್ರು! ಕಂಗಾಲಾದ ಸಹನಾ

  ರಮ್ಯಳನ್ನು ತಬ್ಬಿಕೊಂಡು ಅತ್ತ ಅನು

  ರಮ್ಯಳನ್ನು ತಬ್ಬಿಕೊಂಡು ಅತ್ತ ಅನು

  ಇದೇ ವೇಳೆಗೆ ರಮ್ಯ ಹಾಗೂ ಸಂಪತ್ ಬರುತ್ತಾರೆ. ಸಂಪತ್ ನಾವು ಅನುನ ಹೇಗೆ ಸಮಾಧಾನ ಮಾಡುವುದು ಎನ್ನುತ್ತಾನೆ. ಅದಕ್ಕೆ ರಮ್ಯಾ, ಅನು ಆರ್ಯ ಸರ್‌ನ ತುಂಬಾನೇ ಪ್ರೀತಿಸುತ್ತಿದ್ದಳು. ಈಗ ಅವಳಿಗೆ ಏನು ಹೇಳುವುದು ಎಂದೇ ಗೊತ್ತಿಲ್ಲ ಎನ್ನುತ್ತಾಳೆ. ಆಗ ಸಂಪತ್ ಇಬ್ಬರಿಗೂ ಇರುವ ವಯಸ್ಸಿನ ಅಂತರದಷ್ಟು ದಿನವೂ ಒಟ್ಟಿಗೆ ಬಾಳಲಿಲ್ಲ ಎನ್ನುತ್ತಾನೆ. ಅನು ರಮ್ಯಳನ್ನು ನೋಡಿದ ಕೂಡಲೇ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಮುಂದಿನ ಕಾರ್ಯ ಬೇಗ ಮಾಡಿ ಮುಗಿಸೋಣ ಎಂದು ಶಾರದಾ ದೇವಿ ಹೇಳುತ್ತಾಳೆ.

  ಎಲ್ಲಾ ಮುಗಿದ ಮೇಲೆ ಬಂದ ಝೇಂಡೇ

  ಎಲ್ಲಾ ಮುಗಿದ ಮೇಲೆ ಬಂದ ಝೇಂಡೇ

  ಅಷ್ಟರಲ್ಲಿ ಗೇಟ್ ಬಳಿ ಝೇಂಡೇ ಬರುತ್ತಾನೆ. ಆಗ ವಾಚ್ ಮ್ಯಾನ್ ಡೆಡ್ ಬಾಡಿ ಈಗ ಬಂತು ಎನ್ನುತ್ತಾರೆ. ಅದಕ್ಕೆ ಝೇಂಡೇ ಅನ್ನ ಕೊಟ್ಟ ಸಾಹೇಬರು ಅವರು. ಅವರನ್ನು ಯಾವತ್ತು ಹಾಗೆ ಕರೆಯಬಾರದು, ಯಾವತ್ತಿದ್ದರೂ ಅವರು ನಮ್ಮ ಸರ್ ಅಷ್ಟೇ ಎನ್ನುತ್ತಾನೆ. ಹಾಗೇ ಮನಸಲ್ಲಿ ಮಾತನಾಡಿಕೊಳ್ಳುವ ಝೇಂಡೇ, ಯಾಕೆ ಆರ್ಯ ಹೀಗೆ ನಮ್ಮನ್ನೆಲ್ಲಾ ಬಿಟ್ಟು ಹೋದೆ. ಅನಾಥನಾಗಿ ನನ್ನ ಬಳಿ ಬಂದವನು ಇವತ್ತು ನನ್ನನ್ನೇ ಅನಾಥನನ್ನಾಗಿ ಮಾಡಿ ಹೋದೆ. ನನ್ನ ಜೊತೆಗೆ ಇರುವಾಗ ನಿನಗೆ ಏನೂ ಆಗದಂತೆ ನೋಡಿಕೊಂಡಿದ್ದೆ. ಆದರೆ, ಆ ಅನು ಮಾತನ್ನು ಕೇಳಿ ಎಲ್ಲರನ್ನೂ ಬಿಟ್ಟು ಹೋದೆಯಲ್ಲ ಎಂದು ಹೇಳಿಕೊಳ್ಳುತ್ತಾನೆ.

  ಝೇಂಡೇ ವಿರುದ್ಧ ಕೂಗಾಡಿದ ಶಾರದಾ ದೇವಿ

  ಝೇಂಡೇ ವಿರುದ್ಧ ಕೂಗಾಡಿದ ಶಾರದಾ ದೇವಿ

  ಝೇಂಡೇ ಪೊಲೀಸರಿಗೆ ಕರೆ ಮಾಡುತ್ತಾನೆ. ನಾನು ಈಗಾಗಲೇ ನಿಮಗೆ ಆರ್ಯನ ಸಾವಿಗೆ ಕಾರಣ ಯಾರು ಎಂಬ ಎಲ್ಲಾ ಮಾಹಿತಿಯನ್ನೂ ಕೊಟ್ಟಿದ್ದೀನಿ. ಆರ್ಯನನ್ನು ಕೊಂದವರನ್ನು ಹಿಡಿಯಲು ನನ್ನಿಂದ ಯಾವ ಸಹಾಯ ಬೇಕಿದ್ದರೂ ಕೇಳಿ, ಆದರೆ ಆರೋಪಿಯನ್ನು ಮಾತ್ರ ಬಿಡಬೇಡಿ ಎನ್ನುತ್ತನೆ. ಪೊಲೀಸರು, ಅದು ನಮ್ಮ ಕೆಲಸ ನಾವು ಮಾಡುತ್ತೇವೆ ಎನ್ನುತ್ತಾರೆ. ಇದೇ ವೇಳೆಗೆ ಶಾರದಾ ದೇವಿ ಬರುತ್ತಾಳೆ. ಆಗ ಝೇಂಡೇ ನನಗೆ ಆರ್ಯನನ್ನು ನೋಡುವ ಹಕ್ಕಿಲ್ವಾ ಎಂದು ಕೇಳುತ್ತಾನೆ. ಆಗ ಶಾರದಾ, ನಿನ್ನ ಕರ್ತವ್ಯನ ಸರಿಯಾಗಿ ಮಾಡಿದ್ದರೆ, ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆರ್ಯನ ಜೀವದ ಜೊತೆಗೆ ನಿನ್ನ ಹಕ್ಕು ಹೋಗಾಯ್ತು. ಇನ್ಯಾವತ್ತೂ ನನಗೆ ನಿನ್ನ ಮುಖ ತೋರಿಸಬೇಡ ಎಂದು ಹೇಳುತ್ತಾರೆ.

  English summary
  jothe jotheyali serial anu and vardhan family thaught arya is dead. And jhende is also worried about aryas death. Upcoming story is very interesting
  Friday, September 16, 2022, 17:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X