For Quick Alerts
  ALLOW NOTIFICATIONS  
  For Daily Alerts

  ಜೈಲಿಗೆ ಹೋಗುತ್ತಾಳಾ ಅನು ಸಿರಿಮನೆ? ವರ್ಕೌಟ್ ಆಗುತ್ತಾ ಝೇಂಡೇ ಪ್ಲ್ಯಾನ್?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಯ ಕನಸುಗಳೆಲ್ಲವೂ ಕಮರಿ ಹೋಗಿವೆ. ಪ್ರೀತಿಯ ಪತಿಯನ್ನು ಕಳೆದುಕೊಂಡು ಕುಗ್ಗಿ ಹೋಗಿದ್ದಾಳೆ. ನಂಬಿಸಿ ನನ್ನ ಬಿಟ್ಟು ಹೋದರು ಎಂಬ ಹತಾಶೆಯಲ್ಲಿ ಗೋಳಾಡುತ್ತಿದ್ದಾಳೆ.

  ಮಗಳ ಬದುಕು ಹೀಗಾಯಿತಲ್ಲ ಎಂದು ಪುಷ್ಪಾ ಮತ್ತು ಸುಬ್ಬು ಇಬ್ಬರೂ ಒದ್ದಾಡುತ್ತಿದ್ದಾರೆ. ಮಗನಂತೆಯೇ ಇದ್ದ ಅಳಿಯನನ್ನು ಕಳೆದುಕೊಂಡಿದ್ದಕ್ಕೆ ಶಾರದಾ ದೇವಿಗೆ ಮುಂದಿನ ಪರಿಸ್ಥಿತಿಯ ಭಯ ಶುರುವಾಗಿದೆ. ಇನ್ನು ದಾದ ಬಗ್ಗೆ ಏನು ಹೇಳಬೇಕು ಎಂಬುದೇ ಅರಿಯದೇ ಹರ್ಷವರ್ಧನ್ ಮೌನಕ್ಕೆ ಜಾರಿದ್ದಾನೆ.

  ಪಾರುಗೆ ಗದರಿದ ಅಖಿಲಾಂಡೇಶ್ವರಿ! ಅಮ್ಮನ ಮೇಲೆ ಮುನಿಸಿಕೊಂಡ ಆದಿಪಾರುಗೆ ಗದರಿದ ಅಖಿಲಾಂಡೇಶ್ವರಿ! ಅಮ್ಮನ ಮೇಲೆ ಮುನಿಸಿಕೊಂಡ ಆದಿ

  ಇತ್ತ ಝೇಂಡೇಗೆ ಒಂದು ಕಡೆ ಜೀವದ ಗೆಳೆಯನನ್ನು ಕಳೆದುಕೊಂಡ ದುಃಖ ಮತ್ತೊಂದು ಕಡೆ ಅನುಳಿಂದ ಆರ್ಯ ಸಾವನ್ನಪ್ಪಿದ ಎಂಬ ದ್ವೇಷ ಕಾಡುತ್ತಿದೆ. ಹೀಗಾಗಿ ಆರ್ಯನನ್ನು ಕೊಂದ ಅನುಳನ್ನು ಜೈಲಿಗೆ ಅಟ್ಟಲು ಮುಂದಾಗಿದ್ದಾನೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದೇ ಪ್ರಶ್ನೆಯಾಗಿದೆ.

  ಆರ್ಯವರ್ಧನ್ ಅಂತ್ಯಕ್ರಿಯೆ!

  ಆರ್ಯವರ್ಧನ್ ಅಂತ್ಯಕ್ರಿಯೆ!

  ಆರ್ಯವರ್ಧನ್ ಸತ್ತಿದ್ದಾನೆ ಎಂದು ತಿಳಿದ ವರ್ಧನ್ ಮನೆಯವರು ವಿಶ್ವಾಸ್ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಹರ್ಷವರ್ಧನ್, ದಾದ ಕಾರ್ಯ ಮಾಡುತ್ತಿದ್ದಾನೆ. ಮೊದ ಮೊದಲು ದಾದಾ ದೇಹಕ್ಕೆ ಚಿತೆ ಇಡಲು ಹೆದರಿದ ಹರ್ಷ ಅನಿವಾರ್ಯವಾಗಿ ಅಂತ್ಯಸಂಸ್ಕಾರವನ್ನು ಮಾಡಿದನು. ಈ ವೇಳೆ ಎಲ್ಲರೂ ಜೋರಾಗಿ ಅಳುತ್ತಿದ್ದರು. ಅನುಳನ್ನು ಕಂಟ್ರೋಲ್ ಮಾಡಲು ಆಗುತ್ತಿರಲಿಲ್ಲ. ಆದರೆ ಝೇಂಡೇ ದೂರದಲ್ಲೆಲ್ಲೋ ನಿಂತು ನೋಡುತ್ತಿದ್ದಾನೆ.

  CEO ಆಗ್ಬೇಕು ಅನ್ನೋ ಆಸೆಗೆ ಅಕ್ಕನ ಜೀವನವನ್ನೇ ಹಾಳು ಮಾಡಿದ್ಲಾ ಮೈತ್ರಿ?CEO ಆಗ್ಬೇಕು ಅನ್ನೋ ಆಸೆಗೆ ಅಕ್ಕನ ಜೀವನವನ್ನೇ ಹಾಳು ಮಾಡಿದ್ಲಾ ಮೈತ್ರಿ?

  ಪ್ರಜ್ಞೆ ಇಲ್ಲದೇ ಮಲಗಿರುವ ಆರ್ಯ

  ಪ್ರಜ್ಞೆ ಇಲ್ಲದೇ ಮಲಗಿರುವ ಆರ್ಯ

  ಇತ್ತ ಆಸ್ಪತ್ರೆಯಲ್ಲಿ ಆರ್ಯವರ್ಧನ್ ಪ್ರಜ್ಞೆ ಇಲ್ಲದೇ ಮಲಗಿದ್ದಾನೆ. ಅವನ ಮುಖಕ್ಕೆ ವಿಶ್ವಾಸ್ ಮುಖದ ಚರ್ಮವನ್ನು ಹಾಕಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಈ ವಿಚಾರ ವಿಶ್ವಾಸ್ ತಂದೆ ಪ್ರಭು ದೇಸಾಯಿ ಅವರಿಗೆ ಗೊತ್ತಿಲ್ಲ. ಇನ್ನು ವಿಶ್ವಾಸ್ ಎಂದು ತಿಳಿದು ಮಗನನ್ನು ಮಾತನಾಡಿಸಲು ವಾರ್ಡ್ ಗೆ ಬಂದಿದ್ದಾನೆ. ನಿನಗೆ ನನಗಿಂತಲೂ ನಿನ್ನ ತಾಯಿಯೇ ಹೆಚ್ಚು. ಅವಳ ಬಳಿ ಎಲ್ಲವನ್ನೂ ಹೇಳಿಕೊಂಡು ಬಿಡುತ್ತೀಯಾ. ಆದರೆ, ಆರ್ಯವರ್ಧನ್‌ಗೆ ಇದ್ಯಾವ ಮಾತುಗಳು ಗೊತ್ತಾಗುತ್ತಿಲ್ಲ. ಪ್ರಭು ದೇಸಾಯಿ ಮಾತ್ರ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾನೆ.

  ಪೊಲೀಸರನ್ನು ತಡೆಯಲು ಯತ್ನಿಸಿದ ಮೀರಾ

  ಪೊಲೀಸರನ್ನು ತಡೆಯಲು ಯತ್ನಿಸಿದ ಮೀರಾ

  ಇತ್ತ ಝೇಂಡೇ ಏನಾದರೂ ಮಾಡಿ ಅನುಳನ್ನು ಜೈಲಿಗೆ ಅಟ್ಟಬೇಕು ಎಂದು ತೀರ್ಮಾನಿಸಿದ್ದಾನೆ. ನನ್ನ ಆರ್ಯನನ್ನು ನನ್ನಿಂದ ಕಿತ್ತುಕೊಂಡ ನೀನು ಜೈಲಿಗೆ ಹೋಗುತ್ತೀಯಾ ಎಂದು ಮನದಲ್ಲೇ ಮಾತನಾಡಿಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ ಪೊಲೀಸರು ಅಂತ್ಯ ಸಂಸ್ಕಾರ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಬರುತ್ತಾರೆ. ಪೊಲೀಸರು ಬರುತ್ತಿದ್ದಂತೆ ಮೀರಾ ಶಾಕ್ ಆಗುತ್ತಾಳೆ. ನೀವ್ಯಾಕೆ ಇಲ್ಲಿಗೆ ಬಂದಿದ್ದೀರಾ.? ಏನೇ ಇದ್ದರೂ ನಾನು ಆಮೇಲೆ ಮಾತನಾಡುತ್ತೇನೆ ಎಂದು ಹೇಳುತ್ತಾಳೆ. ಆದರೆ ಪೊಲೀಸರು ಕೇಳುವುದಿಲ್ಲ. ನಮ್ಮ ಡ್ಯೂಟಿ ಮಾಡೋದಕ್ಕೆ ಬಿಡಿ. ಆರ್ಯ ಸರ್ ಅವರದ್ದು ಆಕ್ಸಿಡೆಂಟ್ ಅಲ್ಲ ಅದೊಂದು ಕೊಲೆ ಪ್ರಯತ್ನ ಎಂದು ಹೇಳುತ್ತಾರೆ. ಆಗ ಎಲ್ಲರೂ ಶಾಕ್ ಆಗುತ್ತಾರೆ.

  ಪೊಲೀಸರನ್ನೇ ಪ್ರಶ್ನಿಸಿದ ಸುಬ್ಬ-ಪುಷ್ಪಾ

  ಪೊಲೀಸರನ್ನೇ ಪ್ರಶ್ನಿಸಿದ ಸುಬ್ಬ-ಪುಷ್ಪಾ

  ಪೊಲೀಸರು ಮಾತು ಮುಂದುವರಿಸಿ ಈ ಕೊಲೆಯನ್ನು ಮಾಡಲು ಯತ್ನಿಸಿರುವುದು ಬೇರೆ ಯಾರೂ ಅಲ್ಲ ಅನು ಅವರೇ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಕೂಡಲೇ ಶಾರದಾ ದೇವಿ ಅವರು ಶಾಕ್ ಆಗುತ್ತಾರೆ. ಏನ್ ಮಾತನಾಡುತ್ತಿದ್ದೀರಾ ಎಂದು ಕೇಳುತ್ತಾರೆ. ಅಷ್ಟರಲ್ಲಿ ಸುಬ್ಬು -ಪುಷ್ಪಾ ಕೂಡ ಕೂಗಾಡುತ್ತಾರೆ. ಅದು ಹೇಗೆ ಕರೆದುಕೊಂಡು ಹೋಗುತ್ತೀರೋ ಹೋಗಿ ಎಂದು ಹೇಳುತ್ತಾರೆ. ಆದರೆ ಅನು ಮಾತ್ರ ಇಷ್ಟೇ ಅನುಭವಿಸಿದ್ದೀನಿ ಜೀವನದಲ್ಲಿ ಇದೂ ಒಂದು ನಡೆದು ಬಿಡಲಿ ಎಂದು ಹೇಳಿ ಪೊಲೀಸರ ಜೊತೆಗೆ ಹೋಗಲು ಮುಂದಾಗುತ್ತಾಳೆ.

  English summary
  jothe jotheyali serial Serial 16th September Episode Written Update. jothe jotheyali serial anu and vardhan family thaught arya is dead. And police came to arrest anu. Everyone are in shock
  Sunday, September 18, 2022, 16:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X