ಅನು ಮುಂದೆ ಸತ್ಯ ಕ್ಕಕುತ್ತಾನಾ ಆರ್ಯ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಆರ್ಯ ವರ್ಧನ್‌ಗೆ ಎಚ್ಚರವಾಗಿದೆ. ಅನು ಹಾಗೂ ಶಾರದಾ ಅವರನ್ನು ಅಮ್ಮ ಮಗಳು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ನಂತರ ಆರ್ಯ ಎಲ್ಲರ ಮುಖ ನೋಡಿ, ತನ್ನ ಮಾತನ್ನು ಸರಿ ಮಾಡಿಕೊಂಡಿದ್ದಾನೆ.

ಆರ್ಯ ಝೇಂಡೆ ಜೊತೆಗೆ ಮಾತನಾಡಬೇಕು ಎಂದು ಹೇಳಿ ಎಲ್ಲರನ್ನು ಹೊರಗೆ ಕಳಿಸಿದ್ದಾನೆ. ರೂಮಿನ ಬಾಗಿಲನ್ನು ಕ್ಲೋಸ್ ಮಾಡಿ ಝೇಂಡೇ ಕೆನ್ನೆಗೆ ಭಾರಿಸಿದ್ದಾನೆ. ಝೇಂಡೆ, ಯಾಕೆ ಆರ್ಯ ಏನಾಯ್ತು.? ನನಗ್ಯಾಕೆ ಹೊಡೆಯುತ್ತಿದ್ದೀಯಾ ಎಂದು ಕೇಳುತ್ತಾನೆ.

ಇದಕ್ಕೆ ಉತ್ತರಿಸುವ ಆರ್ಯ, ನನ್ನಲ್ಲಿ ಶಕ್ತಿ ಇದ್ದಿದ್ದರೆ, ನಾನು ಇನ್ನೂ ನಾಲ್ಕು ಭಾರಿಸುತ್ತಿದ್ದೆ. ಆದರೆ ಏನು ಮಾಡಲಿ ನನ್ನ ಕೈಯಲ್ಲಿ ಶಕ್ತಿ ಇಲ್ಲ ಎಂದು ಹೇಳಿದ್ದಾನೆ. ಅಲ್ಲದೇ, ತನಗೆ ಕೆಟ್ಟ ಸಿಟ್ಟು ಬರುತ್ತಿದೆ. ಆದರೆ, ಏನೂ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದ್ದಾನೆ.

ಸತ್ಯ ಹೇಳಲು ಸಜ್ಜಾದ ಆರ್ಯ!

ಸತ್ಯ ಹೇಳಲು ಸಜ್ಜಾದ ಆರ್ಯ!

ಆರ್ಯ ಮಾತು ಮುಂದುವರಿಸಿ, ನಾನು ಎಲ್ಲ ಸತ್ಯವನ್ನು ಹೇಳಿ ಬಿಡುತ್ತೇನೆ. ಈ ಸುಳ್ಳಿನ ಬದುಕು ಸಾಕಾಯ್ತು. ಇನ್ನಾದರೂ ನೇರವಾಗಿ ಬದುಕುವುದನ್ನು ರೂಢಿಸಿಕೊಳ್ಳುತ್ತೇನೆ. ಅನು ತುಂಬಾ ಒಳ್ಳೆಯವಳು. ಎಲ್ಲವನ್ನು ಹೇಳಿದರೆ, ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಹೇಳುತ್ತಾನೆ. ಅದಕ್ಕೆ ಝೇಂಡೆ ಅದು ಎಲ್ಲಾ ಹೇಗೆ ಸಾಧ್ಯ ಆರ್ಯ, ಈಗಾಗಲೇ ಅನು ಬಳಿ ಕಥೆ ಕಟ್ಟಿ ಹೇಳಾಗಿದೆ ಅಲ್ವಾ ಎಂದು ಹೇಳುತ್ತಾನೆ. ಆಗ ಮತ್ತೆ ಆರ್ಯ ಕೋಪ ಮಾಡಿಕೊಳ್ಳುತ್ತಾನೆ. ಹೌದು ನೀನು ಹೇಳಿಕೊಟ್ಟ ಸುಳ್ಳನ್ನೇ ಹೇಳಿದ್ದೀನಿ ಅಲ್ವಾ ಎಂದು ಹೇಳುತ್ತಾನೆ. ಆಗ ಝೇಂಡೆ ಹೇಳುತ್ತಾನೆ. ಆರ್ಯ ನೀನು ಸತ್ಯ ಹೇಳಿದರೆ, ಅನು ನಿನ್ನ ಜೊತೆಗೆ ಇರುವುದಿಲ್ಲ. ಈ ಪ್ರಪಂಚಾನೇ ಬಿಟ್ಟು ಹೋಗುತ್ತಾಳೆ. ಅರ್ಥ ಮಾಡಿಕೋ ಎಂದು ಹೇಳುತ್ತಾನೆ.

ಆಕ್ಸಿಡೆಂಟ್ ಆಗಿದ್ದು ಹೇಗೆ ಎಂದು ರಿವೀಲ್!

ಆಕ್ಸಿಡೆಂಟ್ ಆಗಿದ್ದು ಹೇಗೆ ಎಂದು ರಿವೀಲ್!

ಹೀಗೆ ಮಾತು ಮುಂದುವರಿಸುತ್ತಾರೆ. ಆಗ ಆರ್ಯ ನೆನಪಿದ್ಯಾ ಝೇಂಡೆ ನನಗೆ ಆಕ್ಸಿಡೆಂಟ್ ಆದಾಗ ನಾವಿಬ್ಬರೇ ಇದ್ವಿ. ಆಗ ಏನಾಯ್ತು ಅಂತ ಗೊತ್ತಾ ಎಂದು ಹೇಳಿದಾಗ ಫ್ಲಾಶ್ ಬ್ಯಾಕ್ ಬರುತ್ತದೆ. ಅದರಲ್ಲಿ ಝೇಂಡೇ ಡ್ರೈವ್ ಮಾಡುತ್ತಿರುತ್ತಾನೆ. ಆಗ ಅನು ಸಾಮಾನ್ಯದವಳಲ್ಲ. ಅವಳನ್ನ ನಂಬಬೇಡ ಎಂದು ಹೇಳುತ್ತಿರುತ್ತಾನೆ. ಆರ್ಯ ಸುಮ್ಮನಿರೋ ಎಂದು ಹೇಳುತ್ತಾನೆ. ಆದರೆ, ಅನು ಮೇಲೆ ಆರೋಪ ಮಾಡುತ್ತಿದ್ದಂತೆ ಗಾಡಿ ನಿಲ್ಲಿಸು ಎನ್ನುವ ಆರ್ಯ ಸಡನ್ ಆಗಿ ಹ್ಯಾಂಡ್ ಬ್ರೇಕ್ ಹಾಕುತ್ತಾನೆ. ತಕ್ಷಣವೇ, ಕಾರ್ ಡೋರ್ ತೆಗೆದು ಜಂಪ್ ಮಾಡುತ್ತಾನೆ. ಅದರಿಂದ ಅಪಘಾತವಾಗುತ್ತದೆ.

ಅನು ಬಗ್ಗೆ ಝೇಂಡೆ ಅನುಮಾನ!

ಅನು ಬಗ್ಗೆ ಝೇಂಡೆ ಅನುಮಾನ!

ವೈದ್ಯರು ಮಾತ್ರೆಗಳನ್ನು ಬರೆದುಕೊಡುತ್ತಾರೆ. ಅದನ್ನು ಝೇಂಡೆ ತೆಗೆದುಕೊಂಡು ತಾನೇ ಮಾತ್ರೆಗಳನ್ನು ತರುವುದಾಗಿ ಹೇಳುತ್ತಾನೆ. ಆಗ ಅನು ಇಲ್ಲ ಕೊಡಿ ನಾನೇ ಇದನ್ನೇಲ್ಲಾ ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ. ಇಬ್ಬರೂ ಹೀಗೆ ವಾದ ಮಾಡುತ್ತಾರೆ. ಝೇಂಡೆಗೆ ಅರ್ಥವಾಗುತ್ತದೆ, ಅನು ತನ್ನನ್ನು ನಂಬುವುದಿಲ್ಲ ಎಂಬುದು. ಇತ್ತ ಅನು ಮನಸ್ಸಿನಲ್ಲಿ ಝೇಂಡೆ ಬಗ್ಗೆ ಗೊತ್ತಿರುವುದರಿಂದ ಹೀಗೆ ಮಾಡುತ್ತಾಳೆ.

ಮೋಸದ ಬಗ್ಗೆ ಹರ್ಷ ಚಿಂತೆ!

ಮೋಸದ ಬಗ್ಗೆ ಹರ್ಷ ಚಿಂತೆ!

ವೈದ್ಯರು ಬರುತ್ತಾರೆ. ರೆಸ್ಟ್ ಮಾಡಿ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳುತ್ತಾರೆ. ನಂತರ ಆರ್ಯ ಹರ್ಷನ ಮುಖ ನೋಡುತ್ತಾನೆ. ಯಾಕೆ ಹರ್ಷ ದಾದಾಗೆ ಹೀಗಾಯ್ತಲ್ಲ ಎಂದು ಹೆದರಿದ್ದೀಯಾ. ಹೆದರಬೇಡ ನಿನ್ನ ದಾದನಿಗೆ ಏನೂ ಆಗುವುದಿಲ್ಲ ಎನ್ನುತ್ತಾನೆ. ಆಗ ಹರ್ಷ ತಬ್ಬಿಬ್ಬಾಗಿ ಹಾ ದಾದಾ.. ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾನೆ. ಹರ್ಷನ ಮನದಲ್ಲಿ ತನಗೆ ದಾದಾ ಮಾಡಿದ ಮೋಸದ ಬಗ್ಗೆಯೇ ಓಡುತ್ತಿರುತ್ತದೆ.

More from Filmibeat

English summary
Jothe Jotheyali Serial Return Update Of June 5th Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X