ಝೇಂಡೇ ವಿರುದ್ಧ ಆರ್ಯವರ್ಧನ್ ಎತ್ತು ಕಟ್ಟಿದ ಅನು!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಅನು ಸಿರಿಮನೆ ನಡೆದದ್ದೇ ದಾರಿ. ಅನು ಸಿರಿಮನೆ ಪ್ಲಾನ್ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ರಾಜನಂದಿನಿಯ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು ಎಂದು ತೀರ್ಮಾನಿಸಿರುವ ಅನು, ಆರ್ಯ ತನ್ನ ತಪ್ಪನ್ನು ತಾನೇ ಒಪ್ಪಿಕೊಳ್ಳುವಂತೆ ಪ್ಲಾನ್ ಮಾಡಿದ್ದಾಳೆ.

ಅದಕ್ಕಾಗಿ ಅನು ಸಿರಿಮನೆ ಕೆಲ ಪ್ಲಾನ್ ಮಾಡಿದ್ದು, ಅದರಂತಯೇ ಹರ್ಷವರ್ಧನ್‌, ಮೀರಾ, ಶಾನುಭೋಗರು ಹಾಗೂ ಜಲಂಧರ್ ಸಹಾಯವನ್ನು ಪಡೆದಿದ್ದಾಳೆ. ಅನು ಸಿರಿಮನೆಯ ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಸಾಥ್ ಕೊಟ್ಟಿದ್ದಾರೆ. ಈಗ ಆರ್ಯವರ್ಧನ್ ಬಗ್ಗೆ ತಿಳಿದಿರುವ ಶಾರದಾ ಅವರು ಕೂಡ ಅನುಗೆ ಸಪೋರ್ಟ್ ಮಾಡಿದ್ದಾರೆ.

ಹಾಗಾಗಿ ಅನು ಸಿರಿಮನೆ ತಾನು ಅಪಹರಣ ಆದವಳಂತೆ ನಾಟಕವಾಡಿದ್ದಾಳೆ, ಜಲಂಧರ್ ಭೇಟಿಯಾಗಿದ್ದಾಳೆ. ಅದೆಲ್ಲವೂ ಝೇಂಡೇ ತಿಳಿಯುವಂತೆ ಮಾಡಿದ್ದಾಳೆ. ಆದರೆ ಇತ್ತ ಆರ್ಯನ ಎದುರಿಗೆ ಜಲಂಧರ್‌ನಿಂದ ತಪ್ಪಿಸಿಕೊಂಡು ಬರುವಂತೆ ಅನು ನಾಟಕ ಮಾಡಿದ್ದಾಳೆ.

ಅನು ಬಗ್ಗೆ ಝೇಂಡೆಗೆ ಅನುಮಾನ!

ಅನು ಬಗ್ಗೆ ಝೇಂಡೆಗೆ ಅನುಮಾನ!

ಝೇಂಡೆ, ಆರ್ಯನ ಬಳಿ ಬಂದು ಅನು ನಿನ್ನನ್ನು ಎಲ್ಲರ ಎದುರಿಗೂ ಸಿಕ್ಕಾಕಿಕೊಳ್ಳುವಂತೆ ಮಾಡುತ್ತಿದ್ದಾಳೆ. ಅದಕ್ಕೆ ಅವಕಾಶ ಮಾಡಿ ಕೊಡಬೇಡ. ನಿನ್ನ ಬಗ್ಗೆ ಜಗತ್ತಿಗೆ ಸತ್ಯ ಹೇಳುವ ಮುಂಚೆಯೇ, ನೀನು ಅನುನ ಕೊಂದು ಬಿಡು. ಅವಳು ನಿನ್ನ ಬದುಕಿಗೆ ದೊಡ್ಡ ಕಂಟಕವಾಗುತ್ತಾಳೆ ಎಂದು ಆಕ್ರೋಶದಿಂದ ಹೇಳುತ್ತಾನೆ. ಝೇಂಡೇ ಮಾತನ್ನು ನಂಬದ ಆರ್ಯ, ನೀನು ಮಾಡಿದ ಪಾಪಗಳು ನಿನ್ನನ್ನು ಕಾಡುತ್ತಿದೆ. ಆಸ್ತಿ ಪತ್ರವನ್ನು ಬದಲಾಯಿಸಿದ್ದಾರೆ ಎಂದು ಸಿಸಿಟಿವಿ ಪೋಟೆಜ್ ತೋರಿಸುತ್ತಾನೆ. ಅಲ್ಲಿಗೆ ಬಂದ ವ್ಯಕ್ತಿ ಜಲಂಧರ್ ಕಡೆಯವನು ಎಂದು ಹೇಳುತ್ತಾನೆ. ನಂತರ ಆರ್ಯ, ಜಲಂಧರ್ ಜೊತೆಗೆ ಝೇಂಡೆ ಸೆಲ್ಫಿ ತೆಗೆಸಿಕೊಂಡ ಫೋಟೋ ತೋರಿಸುತ್ತಾನೆ. ಇಬ್ಬರೂ ಜಗಳವಾಡಿ, ಇನ್ಯಾವತ್ತೂ ನನ್ನ ಹೆಂಡತಿ ಅನು ಬಗ್ಗೆ ಒಂದು ಮಾತೂ ಆಡಬೇಡ ಎಂದು ಬೈದು ಝೇಂಡೇ ಅನ್ನು ಕಳಿಸುತ್ತಾನೆ.

ಕಾಣೆಯಾಗಿರುವ ಅನು ಸಿರಿಮನೆ!

ಕಾಣೆಯಾಗಿರುವ ಅನು ಸಿರಿಮನೆ!

ಇದೇ ಸಮಯಕ್ಕೆ ಸರಿಯಾಗಿ ಶಾರದಾ ಅವರು ಆರ್ಯನಿಗೆ ಕರೆ ಮಾಡಿ, ಅನು ಎಲ್ಲೂ ಕಾಣಿಸುತ್ತಿಲ್ಲ ಎಂಬ ಆತಂಕದ ವಿಚಾರವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ಆರ್ಯ, ಝೇಂಡೇ ಮೇಲೆ ಅನುಮಾನ ವ್ಯಕ್ತಪಡಿಸುತ್ತಾನೆ. ಆದರೆ, ಝೇಂಡೆ ತನಗೇನು ಗೊತ್ತಿಲ್ಲ ಎನ್ನುತ್ತಾನೆ ಈ ಮಾತನ್ನು ನಂಬದ ಆರ್ಯ, ತಾನೇ ಅನುಗಾಗಿ ಹುಡುಕಿಕೊಂಡು ಹೊರಡುತ್ತಾನೆ. ದಾರಿ ಮಧ್ಯೆ ಜಲಂಧರ್ ಬಳಿಯಿಂದ ಅನು ಸಿರಿಮನೆ ತಪ್ಪಿಸಿಕೊಂಡು ಓಡಿ ಬರುತ್ತಾಳೆ. ಸೀದಾ ಆರ್ಯನ ಕಾರಿಗೆ ಅಡ್ಡ ಬಂದು ಬೀಳುತ್ತಾಳೆ. ಇದನ್ನು ಆರ್ಯ ನೋಡಿ ಶಾಕ್‌ ಆಗುತ್ತಾನೆ. ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ.

ಝೇಂಡೆ ಬಗ್ಗೆ ಫಿಟ್ಟಿಂಗ್ ಇಟ್ಟ ಅನು!

ಝೇಂಡೆ ಬಗ್ಗೆ ಫಿಟ್ಟಿಂಗ್ ಇಟ್ಟ ಅನು!

ಅನು ಸಿರಿಮನೆ ಎದ್ದು ತನಗೇನು ಆಗಿಲ್ಲ ಎಂಬಂತೆ ತೋರಿಸಿಕೊಳ್ಳುತ್ತಾಳೆ. ಜಲಂಧರ್ ಅವರೇ ಅವಳಿಗೆ ಕರೆ ಮಾಡಿ ಭೇಟಿಯಾಗಲು ಹೇಳಿದ್ದು, ಈ ಸಂದರ್ಭದಲ್ಲಿ ಝೇಂಡೆ ಕೂಡ ಅಲ್ಲೇ ಇದ್ದರು ಎಂದು ಹೇಳುತ್ತಾಳೆ. ಆರ್ಯ ಶಾಕ್‌ ಆಗಿ, ಒಳಗೊಳಗೆ ಯೋಚಿಸಲು ಶುರು ಮಾಡುತ್ತಾನೆ. ಝೇಂಡೆ ತನ್ನ ಬಳಿ ಮೊದಲಿನಂತಿಲ್ಲ. ನನ್ನನ್ನು ಒಂದು ಥರಾ ನೋಡುತ್ತಾರೆ. ನನ್ನ ಜೊತೆಗೆ ಸರಿಯಾಗಿಯೂ ಮಾತನಾಡುವುದಿಲ್ಲ ಎಂದು ಅನು ಸಿರಿಮನೆ ಆರ್ಯನ ಬಳಿ ಹೇಳುತ್ತಾಳೆ. ಈ ಮೂಲಕ ಆರ್ಯನಿಗೆ ಝೇಂಡೆ ಮೇಲಿನ ಬೇಸರ ಹೆಚ್ಚಾಗುವಂತೆ ಮಾಡುತ್ತಾಳೆ.

ಝೇಂಡೆಗೆ ಆರ್ಯ ಬುದ್ಧಿ ಮಾತು!

ಝೇಂಡೆಗೆ ಆರ್ಯ ಬುದ್ಧಿ ಮಾತು!

ಅನು ಮಲಗಿದ ಮೇಲೆ ಆರ್ಯ ಝೇಂಡೆಯನ್ನು ಭೇಟಿ ಮಾಡುತ್ತಾನೆ. ತನ್ನ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುವ ಆರ್ಯ, ಯಾಕೆ ಝೇಂಡೇ ನಿನಗೆ ಏನಾಗುತ್ತಿದೆ. ಇಂತಹದ್ದು ಬೇಕು ಎಂದು ಕೇಳಿದರೆ, ಇಲ್ಲ ಅನ್ನೊಲ್ಲ. ಆದರೆ ಇತ್ತೀಚೆಗೆ ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸುತ್ತಾನೆ.

More from Filmibeat

English summary
Jothe Jotheyali Serial Update On June 24th Episode, Aryavardhan Secret Reveal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X