ಜೊತೆ ಜೊತೆಯಲಿ: ರಾಜವರ್ಧನ್ ವಿಲ್ ಬದಲಿಸಲು ಆರ್ಯವರ್ಧನ್ ಕುತಂತ್ರ!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಾಜವರ್ಧನ್ ಸಾವಿನಿಂದ ಸೂತಕದ ಮನೆಯಾಗಿದೆ. ಇತ್ತ ಆರ್ಯವರ್ಧನ್ ಹೇಳಿದರೂ ಆಸ್ತಿ, ಕಂಪನಿ ಎಲ್ಲವನ್ನೂ ತನ್ನ ಸುಪರ್ದಿಗೆ ಪಡೆಯಬೇಕೆಂದು ಹರಸಾಹಸ ಪಡುತ್ತಿದ್ದಾನೆ. ರಾಜವರ್ಧನ್ ಸಾವಿಗೆ ತಾನೇ ಕಾರಣ ಎಂದು ಶಾರದ ಕಣ್ಣೀರು ಹಾಕುತ್ತಿದ್ದಾಳೆ.

ಮನೆಯಲ್ಲಿ ರಾಜನಂದಿನಿ ಹಾಗೂ ಶಾರದ ಕೂತು ಅಪ್ಪ ರಾಜವರ್ಧನ್ ಬಗ್ಗೆ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದ ಜೋಗ್ತವ್ವ ಹೇಳಿದ ಮಾತುಗಳು ಶಾರದಾ ದೇವಿಯನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದೆ. ಕೂತುಕೊ ಎಂದರೂ ಕೂರದ ಜೋಗ್ತವ್ವ, ಎಲ್ಲಾ ಸತ್ಯಗಳು ಒಂದಲ್ಲ ಒಂದು ದಿನ ಹೊರಗೆ ಬರಲೇ ಬೇಕು. ಸುಳ್ಳು ಕತ್ತಲೆ, ಸತ್ಯ, ವಜ್ರ, ಸಣ್ಣ ಬೆಳಕು ತಾಕಿದರೂ ಇಡೀ ಕೋಣೆಯಲ್ಲ ಹರಡುತ್ತದೆ.

ಆ ಸತ್ಯ ಮುಸುಕು ಹಾಕಿಕೊಂಡು ಮಲಗಿದೆ. ಉಸಿರು ಕಟ್ಟಿಸೋಕೆ ಶುರು ಮಾಡುತ್ತದೆ. ನಿನ್ನ ಮನಸಲ್ಲಿ ಮೂಡುವ ಯಾವ ಪ್ರಶ್ನೆಗಳನ್ನೂ ಕಡೆಗಣಿಸಬೇಡ. ಸತ್ಯನೇ ಯಾವತ್ತಿಗೂ ಗೆಲ್ಲುತ್ತೆ ಎಂದು ರಾಜನಂದಿನಿಗೆ ಹೊರಡುತ್ತಾಳೆ. ಈ ಮಾತುಗಳನ್ನು ಕೇಳಿ ಶಾರದ ಶಾಕ್ ಆಗುತ್ತಾಳೆ. ತಾನೇ ತನ್ನ ಪತಿಯ ಸಾವಿಗೆ ಕಾರಣ ಎಂದು ತಿಳಿದಿರುವ ಶಾರದ ಯೋಚಿಸಲು ಶುರು ಮಾಡುತ್ತಾಳೆ.

ವಿಲ್ ನೋಡಲು ಆರ್ಯವರ್ಧನ್ ಕಾತರ!

ವಿಲ್ ನೋಡಲು ಆರ್ಯವರ್ಧನ್ ಕಾತರ!

ಇತ್ತ ಸುಭಾಷ್ ಪಾಟೀಲ್ ಅಲಿಯಾಸ್ ಆರ್ಯವರ್ಧನ್ ನೇರವಾಗಿ ರಾಜವರ್ಧನ್ ವಕೀಲರ ಬಳಿ ಹೋಗುತ್ತಾನೆ. ಅಲ್ಲಿಗೆ ಹೋಗಿ ವಿಲ್ ಬಗ್ಗೆ ವಿಚಾರಿಸುತ್ತಾನೆ. ಆದರೆ ವಕೀಲರು ವಿಲ್ ನೋಡುವ ಅವಶ್ಯಕತೆ ಏನಿದೆ. ಕ್ಷಮಿಸಿ ನಾನು ವಿಲ್ ಬಗ್ಗೆ ಇರುವ ಮಾಹಿತಿಯನ್ನು ಕೊಡುವ ಹಾಗಿಲ್ಲ. ಈ ಬಗ್ಗೆ ರಾಜವರ್ಧನ್ ಸಾಹೇಬರು ಸ್ಪಷ್ಟವಾಗಿ ಹೇಳಿದ್ದಾರೆ. ರಾಜನಂದಿನಿ, ಶಾರದ ಹಾಗೂ ಹರ್ಷವರ್ಧನ್ ಹೊರತುಪಡಿಸಿ ಮಾತ್ಯಾರಿಗೂ ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿ ತಬ್ಬಿಬ್ಬಾದ ಆರ್ಯವರ್ಧನ್, ಮತ್ತೆ ಮತ್ತೆ ಕೇಳಿ ಬೇಸರ ಮಾಡಿಕೊಂಡು ಬರುತ್ತಾನೆ. ಇದೇ ವಿಚಾರವನ್ನು ಕೇಶವ ಅಲಿಯಾಸ್ ಝೇಂಡೆ ಬಳಿ ಮಾತನಾಡುತ್ತಾನೆ. ರಾಜವರ್ಧನ್ ಪ್ಲಾನ್ ಬಗ್ಗೆ ಹೇಳಿ ಬೇಸರ ಮಾಡಿಕೊಳ್ಳುತ್ತಾನೆ. ಹೇಗಾದರೂ ಮಾಡಿ ನನಗೆ ಬೇಕಿರುವುದನ್ನು ನಾನು ಪಡೆಯಲೇಬೇಕು ಎಂದು ಹೇಳುತ್ತಾ ಆರ್ಯವರ್ಧನ್ ಮನೆಗೆ ಹೊರಡುತ್ತಾನೆ.

ಸುಭಾಷ್ ಪಾಟೀಲ್ ಬಗ್ಗೆ ಹೇಳುವ ಜಲಂಧರ್!

ಸುಭಾಷ್ ಪಾಟೀಲ್ ಬಗ್ಗೆ ಹೇಳುವ ಜಲಂಧರ್!

ಇತ್ತ ರಾಜನಂದಿನಿಗೆ ಕರೆಯೊಂದು ಬಂದಿರುತ್ತದೆ. ಅದರಲ್ಲಿ ರಾಜವರ್ಧನ್ ಸಾವಿನ ಬಗ್ಗೆ ಮಹತ್ವದ ವಿಚಾರ ಹೇಳಲು ಈ ಅಡ್ರೆಸ್‌ಗೆ ಬನ್ನಿ ಎಂದು ಬರೆದಿರುತ್ತದೆ. ಇದನ್ನು ನೋಡಿ ರಾಜನಂದಿನಿ ಮನೆಯಿಂದ ಹೊರಡುತ್ತಾಳೆ. ಅಲ್ಲಿ ಹೋಗಿ ನೋಡಿದರೆ ಜಲಂಧರ್. ಜಲಂಧರ್ ನನ್ನು ನೋಡಿ ಕೋಪ ಮಾಡಿಕೊಳ್ಳುವ ರಾಜನಂದಿನಿ ಸಿಡುಕುತ್ತಾಳೆ. ಆದರೆ ಜಲಂಧರ್ ತುಂಬಾ ಸಮಾಧಾನವಾಗಿ ಮಾತನಾಡುತ್ತಾನೆ. ಸುಭಾಷ್ ಪಾಟೀಲ್ ಬಗ್ಗೆ ಹೇಳುತ್ತಾನೆ. ಆದರೆ ರಾಜನಂದಿನಿ ನಂಬುವುದಿಲ್ಲ. ಆಗ ಜಲಂಧರ್ ಮ್ಯಾನೇಜರ್ ನಂಬರ್ ಕೊಡುತ್ತಾನೆ. ಅವನನ್ನೇ ಕೇಳು ಎಲ್ಲಾ ಗೊತ್ತಾಗುತ್ತದೆ ಎಂದು ಹೇಳುತ್ತಾನೆ. ಈ ಮಾತು ಕೇಳಿಸಿಕೊಂಡು ರಾಜನಂದಿನಿ ಅಲ್ಲಿಂದ ಹೊರಡುತ್ತಾಳೆ.

ಶಾರದಾ ದೇವಿ ಮುಂದೆ ಅರ್ಯವರ್ಧನ್

ಶಾರದಾ ದೇವಿ ಮುಂದೆ ಅರ್ಯವರ್ಧನ್

ಇತ್ತ ಆರ್ಯವರ್ಧನ್ ಸೀದಾ ಶಾರದಾ ರೂಮಿಗೆ ಬಂದು ಮಳ್ಳನಂತೆ ಮಾತನಾಡುತ್ತಿರುತ್ತಾನೆ. ಈ ಮಾತನ್ನು ಕೇಳಿ ಶಾರದಾ ಜೋರಾಗಿ ಅಳುತ್ತಾಳೆ. ನನ್ನಿಂದ ನಂದಿನಿನ ಫೇಸ್ ಮಾಡೋಕೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಬೇಜವಾಬ್ದಾರಿಯಿಂದ ನಾನು ಅವಳ ಅಪ್ಪನನ್ನು ಕಳೆದುಕೊಂಡೆ ಅಂತ ನಂದಿನಿಗೆ ಹೇಗೆ ಹೇಳಿ ಎಂದು ಕಣ್ಣೀರಿಡುತ್ತಾಳೆ. ಆಗ ಆರ್ಯವರ್ಧನ್ ಮಾತನಾಡಿ, ಹೀಗೆಲ್ಲಾ ಮಾತನಾಡಬೇಡಿ. ರಾಜಾ ಸಾಹೇಬರು ಸಾವನ್ನಪ್ಪಿದ್ದು ಹೃದಯಾಘಾತದಿಂದ. ಬೇಡದೇ ಇರುವ ವಿಚಾರವನ್ನು ಯಾಕೆ ಕೆದಕುತ್ತೀರಿ. ಇನ್ಯಾವತ್ತೂ ಇದರ ಬಗ್ಗೆ ದಯವಿಟ್ಟು ಮಾತನಾಡಬೇಡಿ. ಯಾರೂ ನಿಮ್ಮನ್ನು ಪ್ರಶ್ನೆ ಮಾಡಲ್ಲ. ಅಂತಹ ಪರಿಸ್ಥಿತಿ ಬಂದರೂ ನಾನು ಎದುರಿಸುತ್ತೀನಿ ಎಂದು ಹೇಳುತ್ತಾನೆ.

ನಂದಿನಿ ನಡೆ ಬಗ್ಗೆ ಆರ್ಯನಿಗೆ ಅನುಮಾನ!

ನಂದಿನಿ ನಡೆ ಬಗ್ಗೆ ಆರ್ಯನಿಗೆ ಅನುಮಾನ!

ಇದಾದ ಮೇಲೆ ನಂದಿನಿ ಎಲ್ಲಿಗೆ ಹೋದಳು ಎಂಬ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಆಗ ಆರ್ಯ ಎಲ್ಲಿಗೆ ಹೋಗಿದ್ದಾಳೆ ಎಂದು ನಿಮಗೂ ಗೊತ್ತಿಲ್ವಾ. ಹೋಗುವ ಮುಂಚೆ ಮನೆಯಲ್ಲಿ ಹೇಳಿ ಹೋದರೆ ನಮಗೂ ಸಮಾಧಾನ ಎನ್ನುತ್ತಾನೆ. ಅದಕ್ಕೆ ಶಾರದಾ, ಅದನ್ನು ನೀನು ಅರ್ಥ ಮಾಡಿಸಬೇಕು. ಎಷ್ಟೇ ಆದರೂ ನೀನು ಅವಳ ಪತಿ ಎಂದು ಹೇಳುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Jothe Jotheyali Serial Return Update On April 18 2022, Rajanandini Father Refuse Her Marriege With Subhash Patil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X