ರಾಜನಂದಿನಿಗೆ ಮತ್ತೆ ಸುಳ್ಳು ಹೇಳಿದ ಆರ್ಯವರ್ಧನ್!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲೀಗ ಆರ್ಯವರ್ಧನ್ ಕಾರುಬಾರು ಶುರುವಾಗಿದೆ. ಅವನು ಹೇಳಿದ್ದೇ ಸತ್ಯ, ನಡೆದಿದ್ದೇ ದಾರಿ ಎಂಬಂತಾಗಿದೆ. ಆರ್ಯವರ್ಧನ್ ಆಟದ ಬಗ್ಗೆ ಗೊತ್ತಿಲ್ಲದ ರಾಜನಂದಿನಿ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾಳೆ.
ರಾಜನಂದಿನಿ ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಯಾರಿಗೂ ಹೇಳದೇ ಹೋಗಿದ್ದು ಹಾಗೂ ರೂಮಿನಲ್ಲಿ ಹೂ ಗುಚ್ಛವನ್ನು ನೋಡಿ ಆರ್ಯವರ್ಧನ್‌ಗೆ ಅನುಮಾನ ಬಂದು ಕೇಶವನಿಗೆ ಕರೆ ಮಾಡಿದ್ದಾನೆ. "ಕರೆ ಮಾಡಿ ನಾನು ಯಾಕೆ ಹೇಳುತ್ತೀನಿ ಅಂತೆಲ್ಲಾ ಪ್ರಶ್ನೆ ಮಾಡಬೇಡ ಹೇಳಿದ್ದಷ್ಟು ಮಾಡು. ರಾಜನಂದಿನಿ ಈಗಷ್ಟೇ ಮನೆಯಿಂದ ಹೊರಟಳು. ಅವಳು ಎಲ್ಲಿಗೆ ಹೋಗಿದ್ದಾಳೆ. ಯಾರನ್ನು ಭೇಟಿ ಮಾಡುತ್ತಾಳೆ ಎಂಬುದನ್ನು ತಿಳಿದುಕೊಂಡು ಹೇಳು" ಎಂದು ಹೇಳುತ್ತಾನೆ.
ಇತ್ತ ರಾಜನಂದಿನಿ, ಜಲಂಧರ್ ನೋಡಿ ಶಾಕ್ ಆಗುತ್ತಾಳೆ. ನೀವಾ ಕರೆಸಿದ್ದು ಎಂದು ಹೇಳುತ್ತಾಳೆ. ಆಗ ಜಲಂಧರ್ ಕೋಪ ಮಾಡಿಕೊಳ್ಳಬೇಡಿ ನಾನು ಹೀಗೆ ನಿಮ್ಮನ್ನು ಕರೆಸಿದ್ದು ತಪ್ಪು. ಆದರೆ ನನಗೆ ಬೇರೆ ದಾರಿ ಇರಲಿಲ್ಲ ಎಂದು ಹೇಳುತ್ತಾನೆ. ಜಲಂಧರ್ ತುಂಬಾ ಸಮಾಧಾನವಾಗಿ ಮಾತನಾಡುತ್ತಾನೆ.

ಜಲಂಧರ್ ಸುಭಾಷ್ ಪಾಟೀಲ್ ಬಗ್ಗೆ ರಾಜನಂದಿನಿಗೆ ಎಲ್ಲವನ್ನೂ ಹೇಳುತ್ತಾನೆ. ಯಶೋದಾ ಕಂಪನಿಗೆ ಫೋರ್ಜರಿ ಮಾಡಿ ಫೈಲ್ ಕಳಿಸಿದ್ದರ ಬಗ್ಗೆ ಹೇಳುತ್ತಾನೆ. ಇನ್ನು ಈ ವಿಚಾರದ ಬಗ್ಗೆ ರಾಜವರ್ಧನ್‌ಗೂ ಹೇಳಿದ್ದೆ. ರಾಜವರ್ಧನ್ ಸರ್ ಕೂಡ ಆರ್ಯನ ಬಗ್ಗೆ ಅರ್ಥ ಮಾಡಿಕೊಂಡಿದ್ದರು. ರಾಜ ಸರ್ ಸಾವು ಸಹಜ ಅಂತ ನನಗೆ ಅನಿಸುತ್ತಿಲ್ಲ ಎಂದು ಹೇಳುತ್ತಾನೆ. ಆದರೆ ರಾಜನಂದಿನಿ ನಂಬುವುದಿಲ್ಲ. ಅಪ್ಪನ ಸಾವಿಗೆ ಕಾರಣ ಆರ್ಯವರ್ಧನ್ ಅಂತ ಹೇಳಿದರೆ, ನಾನು ನಂಬುತ್ತೀನಿ ಎಂದುಕೊಳ್ಳಬೇಡಿ. ನೀವು ನನ್ನ ನಂಬಿಕೆಯನ್ನು ಕಳೆದುಕೊಂಡಿದ್ದೀರಾ. ನಾನು ಈಗ ವೀಕ್ ಇದ್ದೀನಿ ನಿಮ್ಮ ಮಾತನ್ನು ಕೇಳುತ್ತೀನಿ ಅಂತ ಮಾತ್ರ ನಂಬಬೇಡಿ ಎನ್ನುತ್ತಾಳೆ.
ಜಲಂಧರ್ ಸುಭಾಷ್ ಪಾಟೀಲ್ ಬಗ್ಗೆ ರಾಜನಂದಿನಿಗೆ ಹೇಳುತ್ತಾನೆ. ಯಶೋದಾ ಕಂಪನಿಗೆ ಮೋಸ ಮಾಡಿ ಫೈಲ್ ಕಳಿಸಿದ್ದರ ಬಗ್ಗೆ ಹೇಳುತ್ತಾನೆ. ಇನ್ನು ಈ ವಿಚಾರದ ಬಗ್ಗೆ ರಾಜವರ್ಧನ್ ಅವರಿಗೂ ಹೇಳಿದ್ದೆ. ರಾಜವರ್ಧನ್ ಸರ್ ಕೂಡ ಆರ್ಯನ ಬಗ್ಗೆ ಅರ್ಥ ಮಾಡಿಕೊಂಡಿದ್ದರು. ರಾಜ ಸರ್ ಸಾವು ಸಹಜ ಅಂತ ನನಗನ್ನಿಸುತ್ತಿಲ್ಲ ಎಂದು ಹೇಳುತ್ತಾನೆ. ಆದರೆ ರಾಜನಂದಿನಿ ನಂಬುವುದಿಲ್ಲ. ಅಪ್ಪನ ಸಾವಿಗೆ ಆರ್ಯವರ್ಧನ್ ಕಾರಣ ಅಂತ ಹೇಳಿದರೆ, ನಾನು ನಂಬುತ್ತೀನಿ ಎಂದುಕೊಳ್ಳಬೇಡಿ. ನೀವು ನನ್ನ ನಂಬಿಕೆಯನ್ನು ಕಳೆದುಕೊಂಡಿದ್ದೀರಾ. ನಾನು ಈಗ ವೀಕ್ ಇದ್ದೀನಿ ನಿಮ್ಮ ಮಾತನ್ನು ಕೇಳುತ್ತೀನಿ ಅಂತ ಮಾತ್ರ ನಂಬಬೇಡಿ ಎನ್ನುತ್ತಾಳೆ.
ಆಗ ಜಲಂಧರ್, ಪ್ಲೀಸ್ ಮೇಡಂ ನನ್ನ ತಪ್ಪಾಗಿ ತಿಳಿದುಕೊಳ್ಳಬೇಡಿ. ಈ ವಿಚಾರವನ್ನೆಲ್ಲಾ ನನಗೆ ಹೇಳಿದ್ದು ನಮ್ಮ ಮ್ಯಾನೇಜರ್. ಅವರನ್ನೇ ಕಾಂಟ್ಯಾಕ್ಟ್ ಮಾಡಿ ಸತ್ಯ ಏನು ಅಂತ ತಿಳಿದುಕೊಳ್ಳಿ. ಎನ್ನುತ್ತಾ ಮ್ಯಾನೇಜರ್ ನಂಬರ್ ಕೊಡುತ್ತಾನೆ. ಅವನನ್ನೇ ಕೇಳಿ ಎಲ್ಲಾ ಗೊತ್ತಾಗುತ್ತದೆ ಎಂದು ಹೇಳುತ್ತಾನೆ. ಪ್ಲೀಸ್ ಇದು ನಿಮ್ಮ ಒಳ್ಳೆಯದಕ್ಕೆ. ಆರ್ಯವರ್ಧನ್ ಸ್ನೇಹ, ನಂಬಿಕೆ, ದ್ರೋಹ ಎರಡೂ ಒಂದೇ ಎಂದು ಜಲಂಧರ್ ಹೇಳುತ್ತಾನೆ. ಈ ಮಾತು ಕೇಳಿಸಿಕೊಂಡು ರಾಜನಂದಿನಿ ಅಲ್ಲಿಂದ ಹೊರಡುತ್ತಾಳೆ.
ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಕೇಶವ, ಆರ್ಯವರ್ಧನ್‌ಗೆ ಫೋನ್ ಮಾಡುತ್ತಾನೆ. ಫೋನ್ ಮಾಡಿ ಎಲ್ಲಾ ಕೆಲಸ ಕೆಟ್ಟೋಯ್ತು ಎಂದು ಹೇಳಿ ನಡೆದದ್ದೆಲ್ಲವನ್ನೂ ವಿವರಿಸುತ್ತಾನೆ. ಇದನ್ನು ಕೇಳಿಸಿಕೊಂಡ ಆರ್ಯವರ್ಧನ್ ಶಾಕ್ ಆಗಿ, ಮ್ಯಾನೇಜರ್ ನಂದಿನಿಗೆ ಏನು ಹೇಳಬಾರದು, ನಂದಿನಿ ಏನನ್ನು ಕೇಳಬಾರದು ಹಾಗೆ ಏನಾದರೂ ಮಾಡಬೇಕು. ನೋ..ನೋ.. ನೋ ಅಂತ ಮಾತನಾಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ರಾಜನಂದಿನಿ ರೂಮ್ ಬಾಗಿಲ ಬಳಿ ಬರುತ್ತಾಳೆ. ಇದನ್ನು ನೋಡಿ ಆರ್ಯವರ್ಧನ್ ಶಾಕ್ ಆಗಿ ಫೋನ್ ಕಟ್ ಮಾಡುತ್ತಾನೆ.
ನಂತರ ರಾಜನಂದಿನಿಯನ್ನು ಸಮಾಧಾನವಾಗಿ ಮಾತನಾಡಿಸಲು ಮುಂದಾಗುತ್ತಾನೆ. ಆಗ ನಂದಿನಿ ನನ್ನನ್ನು ಸ್ವಲ್ಪ ಒಂಟಿಯಾಗಿ ಬಿಟ್ಟುಬಿಡು ಎಂದಾಗ ರೂಮಿನಿಂದ ಆರ್ಯ ಹೊರಡುತ್ತಾನೆ. ರಾಜನಂದಿನಿ ಮ್ಯಾನೇಜರ್‌ಗೆ ಫೋನ್ ಮಾಡುತ್ತಾಳೆ. ಅತ್ತ ಮ್ಯಾನೇಜರ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಕೇಶವ ಆತನ ಕುತ್ತಿಗೆ ಹಿಸುಕಿ ಕೊಂದುಬಿಡುತ್ತಾನೆ. ಈ ಕಡೆ ಮಾತನಾಡುತ್ತಿದ್ದ ರಾಜನಂದಿನಿಗೆ ಏನೂ ಕೇಳಿಸಲ್ಲ. ಕೊನೆಗೆ ಆರ್ಯವರ್ಧನ್ ಬಳಿ ಬಂದು ಕ್ಷಮೆ ಕೇಳುತ್ತಾಳೆ. ಹೀಗೆ ಮಾತು ಮುಂದುವರಿಸುತ್ತಾ, ಆರ್ಯವರ್ಧನ್ ವರ್ಧನ್ ಸಂಸ್ಥೆಯ ಆಸ್ತಿಯನ್ನು ಯಾವುದೇ ರೂಪದಲ್ಲೂ ನನಗೆ ದಕ್ಕುವುದು ಬೇಡ ಎಂದು ರಾಜ ಸಾಹೇಬರಿಗೆ ಕೇಳಿಕೊಂಡಿದ್ದೆ. ಅದೇ ರೀತಿ ಅವರು ಮಾಡಿದ್ದಾರೆ ಎಂದು ಸತ್ಯವನ್ನು ದೋಸೆ ಮಗುಚಿದಂತೆ ತಿರುಗಿಸಿಬಿಡುತ್ತಾನೆ. ಮುಂದೇನಾಗುತ್ತೆ ಅನ್ನೋ ಕುತೂಹಲವೇ ಈಗ ಧಾರಾವಾಹಿ ಪ್ರೇಕ್ಷಕರ ಪ್ರಶ್ನೆ.


Click it and Unblock the Notifications











