ಆರ್ಯನನ್ನು ತರಾಟೆಗೆ ತೆಗೆದುಕೊಂಡ ರಾಜ್ ವರ್ಧನ್: ಸೀಕ್ರೆಟ್ ಆಗಿ ವಿಲ್ ಬದಲು!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯ ಆಗಿ ಬದಲಾದ ಸುಭಾಷ್ ಪಾಟೀಲ್ ದರ್ಬಾರ್ ನಡೆಯುತ್ತಿದೆ. ರಾಜನಂದಿನಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ವರ್ಧನ್ ಕಂಪನಿಗೆ ಆರ್ಯನನ್ನು ಸಿಇಒ ಮಾಡಿ ಮನೆಯಲ್ಲಿದ್ದಾಳೆ. ಕನಸು-ನನಸು ಮಾಡಿಕೊಂಡ ಖುಷಿಯಲ್ಲಿ ಆರ್ಯ ಆರಾಮಾಗಿದ್ದಾನೆ.
ಸೂಟು ಬೂಟು ಹಾಕಿಕೊಂಡು ತನಗಿಷ್ಟ ಬಂದಂತೆ ಆರ್ಯ ನಡೆದುಕೊಳ್ಳುತ್ತಿದ್ದಾನೆ. ಝೇಂಡೆಯನ್ನು ಆಫೀಸಿಗೆ ಕರೆದುಕೊಂಡು ಬಂದು ಸುಮ್ಮನೆ ನನ್ನ ಜೊತೆಗೆ ಇರು ಎಂದಿದ್ದಾನೆ. ಆರ್ಯ ಬೆಳವಣಿಗೆಯನ್ನು ಕಂಡು ಝೇಂಡೆ ಖುಷಿ ಪಟ್ಟಿದ್ದಾನೆ. ಸಾಲ ಮಾಡಿಕೊಂಡು ಓಡಾಡುತ್ತಿರುವವರು ಏಕಾಏಕಿ ಸಿರಿವಂತನಾಗಿರುವ ಅಮಲಿನಲ್ಲಿ ಆರ್ಯ ಇದ್ದಾನೆ.
Recommended Video

ಶಾನುಭೋಗರನ್ನು ಕ್ಯಾಬಿನ್‌ಗೆ ಕರೆಸಿದ ಆರ್ಯ ಸರ್ ಎಂದು ಕರೆಯಲಿಲ್ಲ ಎಂದು ಗೋಳಾಡಿಸಿದ್ದಾನೆ. ಅಲ್ಲದೇ ಇನ್ಮುಂದೆ ಶಾನುಭೋಗರು ಮಾಡುವ ಕೆಲಸಗಳನ್ನೆಲ್ಲವನ್ನೂ ಝೇಂಡೆಗೆ ಒಪ್ಪಿಸುವಂತೆ ಹೇಳಿದ್ದಾನೆ. ಇದರಿಂದ ಶಾನುಭೋಗರಿಗೆ ಗೊಂದಲ ಉಂಟಾಗಿದ್ದು, ರಾಜನ್ ಸರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

ಆರ್ಯವರ್ಧನ್ ಬಗ್ಗೆ ರಾಜ್ ವರ್ಧನೆಗೆ ಚಿಂತೆ!
ಆರ್ಯನ ನಡವಳಿಕೆ ಕಂಡು ರಾಜ್ ವರ್ಧನ್ ಅವರಿಗೆ ಏನು ಮಾಡೋದು ಎಂಬ ಯೋಚನೆ ಶುರುವಾಗಿದೆ. ಶಾನುಭೋಗರು ರಾಜ್ ವರ್ಧನ್ ಅವರನ್ನು ಭೇಟಿ ಮಾಡಿ ವರ್ಧನ್ ಕಂಪನಿ ನೌಕರರು ಇಟ್ಟಿರುವ ಬೇಡಿಕೆಗಳ ಫೈಲ್ಸ್ ಅನ್ನು ನೀಡುತ್ತಾನೆ. ಹೊಸದಾಗಿ ಕೆಲ ಡಿಮ್ಯಾಂಡ್ಸ್ ಹಾಗೂ ಈ ವರ್ಷ ಬೋನಸ್ ಹೆಚ್ಚಿಗೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನೆಲ್ಲಾ ಹೊಸಬರು ಹ್ಯಾಂಡಲ್ ಮಾಡುವುದು ಅಷ್ಟು ಸರಿ ಅಲ್ಲ ಅನಿಸಿತು. ಅದಕ್ಕೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಸರ್ ಎಂದು ಶಾನುಭೋಗರು ರಾಜ್ ತಿಳಿಸುತ್ತಾರೆ.

ಹೊಸ ಯೋಜನೆ ರೂಪಿಸಿದ ಆರ್ಯವರ್ಧನ್!
ಅದಕ್ಕೆ ರಾಜ್ ವರ್ಧನ್ ವರ್ಕರ್ಸ್‌ಗಳ ಯಾವ ಬೇಡಿಕೆನ್ನೂ ಈಡೇರಿಸಬೇಡಿ ಎಂದು ಹೇಳಿದ್ದಾರೆ. ಶಾನುಭೋಗರು ಶಾಕ್ ಆಗಿ, ಈಡೇರಿಸದಿದ್ದರೆ ಕಾರ್ಮಿಕರು ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಇದರಿಂದ ನಮಗೇ ತೊಂದರೆಯಾಗುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ರಾಜ್, ನಾವು ರಾಜನಂದಿನಿನಾ ಮತ್ತೆ ಆಫೀಸಿಗೆ ಕರೆಸಿಕೊಳ್ಳುವುದಕ್ಕೆ ಇರುವುದು ಇದೊಂದೇ ದಾರಿ. ಸಿಕ್ಕಿರೋ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳುವುದು ಬೇಡ. ಹೆಚ್ಚೆಂದರೆ ನಮಗೆ ಸ್ವಲ್ಪ ಲಾಸ್ ಆಗಬಹುದು ಅಷ್ಟೇ, ರಾಜನಂದಿನಿ ಮತ್ತೆ ಆಫೀಸಿಗೆ ಬರೋದಕ್ಕಿಂತ ಲಾಸ್ ಹೆಚ್ಚಲ್ಲ. ಇದರ ಜೊತೆಗೆ ಸುಭಾಷ್ ಹೇಗೆ ಈ ಪರಿಸ್ಥಿತಿಯನ್ನ ಹ್ಯಾಂಡಲ್ ಮಾಡುತ್ತಾನೆ ಎಂಬುದನ್ನು ನಾನು ನೋಡಬೇಕು ಎಂದು ರಾಜ್ ಹೇಳಿದ್ದಾರೆ.

ರಾಜ ನಂದಿನಿಗೆ ಆರ್ಯ ಮೊಬೈಲ್ ಗಿಫ್ಟ್!
ಇತ್ತ ಆರ್ಯ ರಾಜನಂದಿನಿಗೆ ಹೊಸ ಮೊಬೈಲ್ ಫೋನ್ ಅನ್ನು ಗಿಫ್ಟ್ ಮಾಡಿದ್ದಾನೆ. ಖುಷಿ ಪಟ್ಟ ರಾಜನಂದಿನಿ ತನ್ನ ತಂದೆ ತಾಯಿಗೆ ತೋರಿಸಿದ್ದಾಳೆ. ಶಾರದ ಫೋನ್ ನೋಡಿ ಖುಷಿ ಪಟ್ಟರೆ, ರಾಜ್ ನಾನೇ ನಿನಗೆ ಗಿಫ್ಟ್ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ನೀನೇ ತಗೊಂಡಿದೀಯಾ. ಯಾರು ಗಿಫ್ಟ್ ಮಾಡಿದ್ದು ಎಂದು ಕೇಳಿದರು. ಇದಕ್ಕೆ ರಾಜನಂದಿನಿ, ಆರ್ಯ ಕೊಡಿಸಿದ್ದು, ಅವನೂ ಕೂಡ ನಿಮ್ಮ ಹಾಗೇನೆ. ಮಾರ್ಕೆಟ್ ನಲ್ಲಿ ಹೊಸದೇನೆ ಬಂದರೂ ಅದನ್ನು ಬಳಸುತ್ತಾರೆ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ರಾಜ್ ವರ್ಧನ್ ಗೆ ಬೇಸರವಾಗುತ್ತೆ.

ಶಾನುಭೋಗರಿಂದ ಹೊಸ ಬೇಡಿಕೆ!
ಈ ನಡುವೆ ಬಂದ ಶಾನುಭೋಗರು ಮನೆಗೆ ಬಂದು ರಾಜನಂದಿನಿ ಅವರನ್ನು ಈ ಕೂಡಲೇ ಆಫೀಸಿಗೆ ಬರಬೇಕು ಎಂದು ಮನವಿ ಮಾಡುತ್ತಾನೆ. ಕಾರ್ಮಿಕರು ತಿರುಗಿ ಬಿದ್ದಿದ್ದು, ಎಲ್ಲರೂ ಸ್ಟ್ರೈಕ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ರಾಜ್ ವರ್ಧನ್ ಕೂಡ ಮಾತನಾಡಿ, ಹೌದು ರಾಜನಂದಿನಿ, ಈಗ ಆಫೀಸಿಗೆ ನಿನ್ನ ಅಗತ್ಯ ತುಂಬಾ ಇದೆ. ದಯವಿಟ್ಟು ಹೋಗಿ ಸಮಸ್ಯೆ ಬಗೆ ಹರಿಸು ಎಂದು ಹೇಳುತ್ತಾನೆ. ಕೂಡಲೇ ರಾಜನಂದಿನಿ ಕಾರ್ಮಿಕರ ಮನೆಗಳಿಗೆ ತೆರಳಿ ಬಾಗಿನ ಕೊಟ್ಟು ಆಫೀಸ್ ಗೆ ಬರುತ್ತಾಳೆ. ಅಲ್ಲಿ ಆರ್ಯ ಪೊಲೀಸರನ್ನು ಕರೆಸಿ ಲಾಠಿ ಚಾರ್ಜ್ ಮಾಡಿಸುವಂತೆ ಝೇಂಡೆಗೆ ಸೂಚಿಸುತ್ತಿರುತ್ತಾನೆ. ಆಗ ಬಂದ ರಾಜ್ ವರ್ಧನ್ ಹಾಗೂ ರಾಜನಂದಿನಿ ಅದರ ಅವಶ್ಯಕತೆ ಇಲ್ಲ. ಸಮಸ್ಯೆ ಬಗೆ ಹರಿದಿದೆ. ಎಂದು ಹೇಳುತ್ತಾರೆ. ರಾಜ್ ವರ್ಧನ್ ತನ್ನ ಕ್ಯಾಬಿನ್ ಗೆ ಆರ್ಯನನ್ನು ಕರೆಸಿ, ರಾಜನಂದಿನಿಯನ್ನ ನೋಡಿ ಕಲಿ. ಹೇಗೆ ಆಫೀಸ್ ಕೆಲಗಳನ್ನ ನಿಭಾಯಿಸಬೇಕು ಎಂದು. ರಾಜನಂದಿನಿಗೋಸ್ಕರ ಸುಮ್ಮನಿದ್ದೀನಿ. ಇಲ್ಲ ಅಂದಿದ್ದರೆ ಇಷ್ಟು ಹೊತ್ತಿಗೆ ನೀನು ಜೈಲಿನಲ್ಲಿರಬೇಕಿತ್ತು ಎಂದೆಲ್ಲಾ ಬೈದು ಕಳಿಸುತ್ತಾನೆ. ನಂತರ ರಾಜ್ ವರ್ಧನ್ ಸೀದಾ ಲಾಯರ್ ಬಳಿ ಹೋಗಿ. ನಾನು ಹೇಳಿದ ಹಾಗೆ ವಿಲ್ ಬದಲಾಯಿಸಿದ್ದೀರಾ.? ಯಾರಿಗೂ ಹೇಳಬೇಡಿ, ನಾನೇ ಸಮಯ ನೋಡಿಕೊಂಡು ಮನೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿ ವಿಲ್ ಗೆ ಸಹಿ ಹಾಕುತ್ತಾನೆ. ಅಳಿಯನಿಗೆ ಹೊರತು ಪಡಿಸಿ ಆಸ್ತಿಯನ್ನು ಯಾರ ಹೆಸರಿಗೆ ಬೇಕಿದ್ದರೂ ಬರೆಯಬಹುದು ಎಂದು ವಿಲ್ ಬರೆಸಿರುತ್ತಾನೆ.


Click it and Unblock the Notifications











