ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ರೋಚಕ ತಿರುವು, ಆರ್ಯ ಮತ್ತೆ ಕಥೆ ಕಟ್ಟುತ್ತಿದ್ದಾನೆ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇಷ್ಟು ದಿನ ರಾಜನಂದಿನಿ ಕಥೆ ಕೇಳಿ ಆರ್ಯವರ್ಧನ್ ವಿಲನ್ ಎಂದು ಬಿಂಬಿಸಲಾಗಿತ್ತು. ಆದರೆ ಇದೀಗ ಇದು ಬದಲಾಗುತ್ತಿದೆ. ಸದ್ಯ ಝೇಂಡೇ ಎಲ್ಲರ ದೃಷ್ಟಿಯಲ್ಲೂ ವಿಲನ್ ಆಗಿದ್ದಾರೆ. ಅನುಳನ್ನು ಕೊಲ್ಲಲು ಯತ್ನಿಸಿ ಸೋತಿದ್ದಾರೆ.

ಅನುಗೆ ಆರ್ಯನ ಮೇಲೆ ಕೋಪಕ್ಕಿಂತಲೂ ಬೇಸರವಿದೆ. ರಾಜನಂದಿನಿಗೆ ಆಸ್ತಿಗಾಗಿ ಮೋಸ ಮಾಡಿದವರು, ಈಗ ನನ್ನ ಮಗುವಿಗೆ ತಂದೆಯಾಗುತ್ತಿದ್ದಾರೆ. ಆರ್ಯನ ಮೇಲೆ ಹಳೆಯ ದ್ವೇಷ ಸಾಧಿಸಬೇಕಾ ಇಲ್ಲವೇ ನನ್ನ ಮಗುವಿನ ತಂದೆ ಎಂದು ಕ್ಷಮಿಸಬೇಕಾ ಎಂಬ ಗೊಂದಲದಲ್ಲಿದ್ದಾಳೆ.

ಇದೀಗ ಅನು ಆರ್ಯನ ಬಾಯಲ್ಲಿ ಎಲ್ಲಾ ಸತ್ಯವನ್ನು ಬಾಯಿ ಬಿಡಿಸಲು ಮುಂದಾಗಿದ್ದಾಳೆ. ಹೀಗಾಗಿ ರಾಜನಂದಿನಿ ಬೆಟ್ಟದ ಮೇಲಿನಿಂದ ಉರುಳಿ ಬಿದ್ದು ಸಾವನ್ನಪ್ಪಿದ ಜಾಗಕ್ಕೆ ಆರ್ಯನನ್ನು ಬರುವಂತೆ ಹೇಳಿದ್ದಾಳೆ. ಆರ್ಯ ಆ ಜಾಗಕ್ಕೆ ಬಂದಿದ್ದಾನೆ.

ಅನು ತಾಯಿಗೆ ಸಂಕಷ್ಟ!

ಅನು ತಾಯಿಗೆ ಸಂಕಷ್ಟ!

ಪುಷ್ಪ ಮನೆಯಲ್ಲಿ ಮುತ್ತೈದೆ ಪೂಜೆಯನ್ನು ನಡೆಸುತ್ತಿದ್ದಾಳೆ. ಹೀಗಾಗಿ ವಠಾರದವರನ್ನೆಲ್ಲಾ ಮನೆಗೆ ಕರೆದು ಕುಂಕುಮ ನೀಡುತ್ತಿದ್ದಾಳೆ. ಆದರೆ, ಅನುಗೆ ಎಷ್ಟೇ ಕರೆ ಮಾಡಿದರು, ಅನು ಪುಷ್ಪ ಕರೆಯನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಆತಂಕಗೊಂಡ ಪುಷ್ಪಾ, ಶಾರದಾ ದೇವಿಗೆ ಕರೆ ಮಾಡಿದ್ದಾಳೆ. ಶಾರದಾ ಗೋಡೌನ್‌ನಲ್ಲಿ ಪ್ರಾಬ್ಲಮ್ ಆಗಿದೆ. ಹಾಗಾಗಿ ಅನು ಹೋಗಿದ್ದಾಳೆ. ಆಕೆ ಬರುವುದು ತಡವಾಗಬಹುದು ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಪುಷ್ಪಾ ನನ್ನ ಮಗಳ ಜೊತೆಗೆ ಮಾತನಾಡಲು ಕೂಡ ನಾನು ಕಾಯಬೇಕಾ ಎಂದು ಬೇಸರ ಮಾಡಿಕೊಳ್ಳುತ್ತಾಳೆ.

ಟ್ರಿಪ್‌ಗೆ ಹೊರಟ ಹರ್ಷ!

ಟ್ರಿಪ್‌ಗೆ ಹೊರಟ ಹರ್ಷ!

ಹರ್ಷ ಮತ್ತು ಮಾನ್ಸಿ ಆನಿವರ್ಸರಿ ಎಂದು ಮನೆಯಿಂದ ಹೊರಗೆ ಹೋಗಿದ್ದಾರೆ. ಮಾನ್ಸಿ ಅಂತೂ ಖುಷಿಯಾಗಿದ್ದಾಳೆ. ಇಬ್ಬರೇ ಏಕಾಂತದಲ್ಲಿ ಅರಾಮವಾಗಿ ಇರಬಹುದು ಎಂಬ ಸಮಯದಲ್ಲೇ ಹರ್ಷನಿಗೆ ಮೀರಾ ಕರೆ ಮಾಡಿದ್ದಾಳೆ. ಮೊದಲು ಮಾನ್ಸಿ ಕರೆಯನ್ನು ಸ್ವೀಕರಿಸಲು ಬಿಡುವುದಿಲ್ಲ. ಆದರೆ, ಹರ್ಷ ಮಾನ್ಸಿ ಕರೆಯನ್ನು ಸ್ವೀಕರಿಸಿದಾಗ. ಆದಷ್ಟು ಬೇಗ ಟ್ರಿಪ್ ಕ್ಯಾನ್ಸಲ್ ಮಾಡಿ ಬನ್ನಿ. ನಿಮ್ಮ ಬಳಿ ಕೆಲ ವಿಚಾರಗಳನ್ನು ಹೇಳಬೇಕಿದೆ ಎಂದು ಹೇಳುತ್ತಾಳೆ. ಆಗ ಹರ್ಷ ಫೋನ್‌ನಲ್ಲಿ ಮಾತನಾಡುವುದು ಬೇಡ, ನಾನೇ ಬರುತ್ತೀನಿ ಎಂದು ಹರ್ಷ ಹೇಳುತ್ತಾನೆ. ಈ ಮಾತುಗಳನ್ನು ಕೇಳಿದ ಮಾನ್ಸಿ ಮತ್ತೆ ಬೇಸರಗೊಳ್ಳುತ್ತಾಳೆ.

ಝೇಂಡೇಯ ಮುಂದಿನ ಹೆಜ್ಜೆಏನು..?

ಝೇಂಡೇಯ ಮುಂದಿನ ಹೆಜ್ಜೆಏನು..?

ಝೇಂಡೇ ಮೀರಾ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದಾನೆ. ಆರ್ಯ ಸರ್ ಬದಲು ಅನು ಮೇಡಂ ಅವರನ್ನು ಯಾಕೆ ಕಳಿಸಿದ್ದೀರಿ ಎಂದು ಕೇಳುತ್ತಾನೆ. ಆಗ ಮೀರಾ, ಇದು ಅನು ನಿರ್ಧಾರ ನಾನೇನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಫೋನ್ ಕಟ್ ಮಾಡುವ ಝೇಂಡೇ, ನಾನೀಗ ಎಲ್ಲಾ ಕೆಲಸ ಬಿಟ್ಟು ಅನು ಹಿಂದೆ ಹೋಗುವಂತಾಗಿದೆ ಎಂದು ಅನುಳನ್ನು ಬೈದುಕೊಳ್ಳುತ್ತಾನೆ.

ಸುಳ್ಳು ಕಟ್ಟುತ್ತಿರುವ ಆರ್ಯ!

ಸುಳ್ಳು ಕಟ್ಟುತ್ತಿರುವ ಆರ್ಯ!

ಅನು ಕರೆಸಿದ ಜಾಗ ನೋಡಿ ಆರ್ಯ ನನ್ನ ಹಳೆಯ ನೆನಪುಗಳ ಜಾಗವಿದು. ನಾನು ಸಾಯುವವರೆಗೂ ಆ ನೆನಪು ನನ್ನೊಂದಿಗೆ ಶಾಶ್ವತವಾಗಿ ಉಳಿದು ಬಿಡುತ್ತದೆ ಎಂದು ಹೇಳುತ್ತಾನೆ. ಸಿಟ್ಟಲ್ಲಿರುವ ಅನು ಆರ್ಯನ ಮಾತುಗಳಿಗೆ ಜೋರಾಗಿಯೇ ಉತ್ತರಿಸುತ್ತಾ ಹಳೆಯ ಕಥೆಯನ್ನು ಹೇಳುವಂತೆ ಒತ್ತಾಯದಿಂದ ಪ್ರಶ್ನಿಸುತ್ತಾಳೆ. ಅನು ಪ್ರಶ್ನೆಗೆ ಉತ್ತರಿಸುವ ಆರ್ಯ ವರ್ಧನ್ ತನ್ನ ತಂದೆಯ ಕಥೆಯನ್ನು ಹೇಳಲು ಶುರು ಮಾಡುತ್ತಾನೆ. ಆರ್ಯ ವರ್ಧನ್ ಕುಟುಂಬದ ಭಾಗವಾಗಲು ತಮ್ಮ ತಂದೆ ಹಾಗೂ ರಾಜವರ್ಧನ್ ಕಾರಣ ಎಂದು ಹೇಳುತ್ತಾನೆ. ಅನುಗೆ ಇದ್ಯಾವುದಿದು ಹೊಸ ಕಥೆ ಎಂದು ಕೋಪದಲ್ಲೇ ಕೇಳುತ್ತಿರುತ್ತಾಳೆ.

More from Filmibeat

English summary
Jothe Jotheyali Serial Update On August 15th, Anu Is In Confusion, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X