ಅನು ಅನುಮಾನ, ಆರ್ಯನಿಗೆ ಅತೀವ ನೋವು, ಝೇಂಡೆಗೆ ರೋಷ!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಗೆ ಆರ್ಯನ ಮಾತುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಜವಾಗಿಯೂ ಆರ್ಯ ಹೇಳುತ್ತಿರುವ ಮಾತುಗಳು ಎಷ್ಟು ಸತ್ಯ..? ಸುಮ್ಮನೆ ನನ್ನಿಂದ ಎಸ್ಕೇಪ್ ಆಗಲು ಸುಳ್ಳು ಹೇಳುತ್ತಿದ್ದಾರಾ ಎಂಬ ಅನುಮಾನದಲ್ಲಿದ್ದಾಳೆ.
ಇನ್ನು ಆರ್ಯನಿಗೆ ಅನುಳನ್ನು ಕಳೆದುಕೊಳ್ಳುವ ಭಯ ಶುರುವಾಗಿದೆ. ಅನು ತನ್ನ ಮಾತುಗಳನ್ನು ನಂಬುತ್ತಿಲ್ಲ. ನನ್ನನ್ನು ದೂರ ಮಾಡುತ್ತಾಳಾ..? ನಾನು ಈ ಹಿಂದೆ ಸುಳ್ಳು ಹೇಳಿ ದೊಡ್ಡ ತಪ್ಪು ಮಾಡಿದ್ದೀನಿ. ಈಗ ಸತ್ಯ ಹೇಳಿದರೂ ಅನು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಬೇಸರಗೊಂಡಿದ್ದಾನೆ.
ಇತ್ತ ಪುಷ್ಪಾಳಿಗೆ ಮಗಳು ಅನುಳದ್ದೇ ಯೋಚನೆಯಾಗಿದೆ. ಫೋನ್ ಮಾಡಿದರೆ ಸರಿಯಾಗಿ ಮಾತನಾಡುವುದಿಲ್ಲ. ಒಮ್ಮೊಮ್ಮೆ ಫೋನ್ ಕೂಡ ರಿಸೀವ್ ಮಾಡೊಲ್ಲ. ಯಾಕೆ ಅನು ಹೀಗಾಡುತ್ತಾಳೆ. ಅವಳಿಗೆ ಮನೆಯಲ್ಲಿ ಅದೇನು ಕಷ್ಟವೋ ಎಂಬ ಯೋಚನೆಯಲ್ಲೇ ದಿನ ಕಳೆಯುತ್ತಾಳೆ.

ಶಾರದಾ ದೇವಿಗೆ ಎಚ್ಚರಿಸಿದ ಜೋಗ್ತವ್ವ!
ಅಷ್ಟಮಿ ದಿನದಂದೇ ಮನೆಗೆ ಜೋಗ್ತವ್ವ ಬಂದಿದ್ದಾಳೆ. ಆರ್ಯನನ್ನು ಬಿಟ್ಟು ಬಂದ ಅನು ಜೋಗ್ತವ್ವನಿಗೆ ಉಡಿ ತುಂಬಿದ್ದಾಳೆ. ಈ ವೇಳೆ ಜೋಗ್ತವ್ವ ಶಾರದಾ ದೇವಿ ಬಳಿ ಮಗಳು ಅಳಿಯನನ್ನು ಬೇರೆ ಆಗಲು ಬಿಡಬೇಡ. ಇಬ್ಬರೂ ಒಟ್ಟಿಗೆ ಒಂದಾಗಿ ಬಾಳುವಂತೆ ನೋಡಿಕೋ ಎಂದು ಹೇಳಿದ್ದು, ಇತ್ತ ಅನುಗೆ ಇವತ್ತು ಅಷ್ಟಮಿ. ಈ ರಾತ್ರಿ ನಿನ್ನ ಜೀವನದಲ್ಲಿ ಅತೀ ಮುಖ್ಯವಾದ ದಿನ. ಎಚ್ಚರವಾಗಿರು ಮಗಳೇ ಎಂದು ಹೇಳುತ್ತಾಳೆ. ಇದಕ್ಕೆ ಅನು ನನಗೆ ನೆನಪಿದೆ ಎನ್ನುತ್ತಾಳೆ.

ಅನು ಮೇಲೆ ಝೆಂಡೇ ಕೋಪ!
ಝೇಂಡೇಗೆ ಈಗ ಅನು ಮೇಲಿನ ಸಿಟ್ಟು, ಕೋಪ ಎರಡರಷ್ಟಾಗಿದೆ. ಆರ್ಯನ ಬಾಯಿಂದ ಎಲ್ಲಾ ಸತ್ಯವನ್ನೂ ಹೇಳಿಸುತ್ತಿದ್ದಾಳೆ. ಎಲ್ಲಾ ಸತ್ಯವನ್ನು ಆರ್ಯ ಅನು ಮುಂದೆ ಹೇಳಿಕೊಂಡರೆ, ಇನ್ನು ನನಗೂ ಆರ್ಯನಿಗೂ ಬದುಕುವುದೇ ಕಷ್ಟ. ಆದರೆ ಇದು ಆರ್ಯನಿಗೆ ಗೊತ್ತಾಗುತ್ತಿಲ್ಲ. ಇದನ್ನೆಲ್ಲಾ ಹೇಳಿದರೂ ಆರ್ಯ ಅರ್ಥ ಮಾಡಿಕೊಳ್ಳುತ್ತಿಲ್ಲ. ಅನುಗೆ ಒಂದು ಗತಿ ಕಾಣಿಸಲೇ ಬೇಕು ಎಂದು ಝೇಂಡೇ ಆಲೋಚಿಸುತ್ತಿದ್ದಾನೆ.

ಸಾವಿನ ಸತ್ಯ ಹೇಳಿದ ಆರ್ಯ!
ಅನು ಮೌನವನ್ನು ಸಹಿಸಿಕೊಳ್ಳಲು ಆಗದ ಆರ್ಯ ತನ್ನ ಮಾತುಗಳನ್ನು ಮುಂದುವರಿಸಿದ್ದಾನೆ. ನಾನು ಹೇಳುತ್ತಿರುವುದೆಲ್ಲಾ ಸತ್ಯ. ನನ್ನನ್ನು ನಂಬು ಅನು. ನೀನು ನನ್ನಿಂದ ಎಲ್ಲಿ ದೂರಾಗುತ್ತೀಯೋ ಎಂದು ಹೆದರಿ ಒಂದು ಸುಳ್ಳು ಹೇಳಿ ತಪ್ಪು ಮಾಡಿದ್ದೀನಿ. ಆದರೆ ಮತ್ತದೇ ತಪ್ಪು ಮಾಡಲು ನನಗೆ ಇಷ್ಟವಿಲ್ಲ. ಆವತ್ತು ರಾಜ ವರ್ಧನ್ ಅವರ ರೂಮಿಗೆ ಕೋಪದಲ್ಲೇ ಹೋದೆ. ಹೋಗಿ ನಾನು ಯಾರು..? ನನ್ನ ತಂದೆ ಯಾರು ಎಂಬ ಸತ್ಯವನ್ನು ಹೇಳಿದೆ. ಆ ಸತ್ಯ ಕೇಳಿದ ರಾಜ ಸಾಹೇಬರಿಗೆ ಶಾಕ್ ಆಯ್ತು. ಏನು ಹೇಳಬೇಕು ಎನ್ನುವುದೇ ಗೊತ್ತಾಗಲಿಲ್ಲ. ಬೆವರಲು ಶುರು ಮಾಡಿದರು. ಇದ್ದಕ್ಕಿದ್ದ ಹಾಗೆ ಎದೆ ಹಿಡಿದುಕೊಂಡರು.

ಆರ್ಯನ ಮೇಲೆ ಅನು ಮುನಿಸು!
ಆರ್ಯ ಸತ್ಯ ಹೇಳಿದ ಮೇಲೂ ಅನು ಮೌನವಾಗಿದ್ದಾಳೆ. ಅನು ಮುನಿಸನ್ನು ಆರ್ಯನ ಕೈಯಲ್ಲಿ ಸಹಿಸಲು ಆಗುತ್ತಿಲ್ಲ. ಹೀಗಾಗಿ ಆರ್ಯ ಅನು ಬಳಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ಆದರೆ ಇನ್ನೂ ರಾಜನಂದಿನಿ ಸತ್ತ ಬಗ್ಗೆ ಅನುಗೆ ಅನುಮಾನ ಬಗೆ ಹರಿದಿಲ್ಲ. ಆದರೆ ಆರ್ಯನಿಗೂ ರಾಜನಂದಿನಿ ಸಾಯಲು ತಾನು ಕಾರಣ ಎಂದು ಅನು ಭಾವಿಸಿರುವ ವಿಚಾರ ಗೊತ್ತಾಗಿಲ್ಲ.


Click it and Unblock the Notifications











