For Quick Alerts
  ALLOW NOTIFICATIONS  
  For Daily Alerts

  ಕೊನೆಯ ಹಂತ ತಲುಪಿತಾ 'ಜೊತೆ ಜೊತೆಯಲಿ' ಧಾರಾವಾಹಿ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲವೂ ಕೊನೆಯ ಹಂತವನ್ನು ಬಂದು ತಲುಪಿದಂತಾಗಿದೆ. ಆರ್ಯವರ್ಧನ್ ತಾನಾಗಿಯೇ ಎಲ್ಲಾ ಜವಾಬ್ದಾರಿಯನ್ನು ಹರ್ಷವರ್ಧನ್‌ಗೆ ವರ್ಗಾಯಿಸುವಂತೆ ಸೂಚಿಸಿದ್ದಾನೆ. ಅನು ಸಿರಿಮನೆಯಂತೂ ತನಗೇನು ಬೇಡ ಎಂಬಂತೆ ಮೌನವಾಗಿ ಉಳಿದು ಬಿಟ್ಟಿದ್ದಾಳೆ.

  ಮಾನ್ಸಿ ಮನೆಯ ತಮ್ಮ ಭಾಗವನ್ನು ಈಗಲೇ ನೀಡುವಂತೆ ಕೇಳಿದ್ದಾಳೆ. ತಾನೂ ಮತ್ತೆ ತನ್ನ ಗಂಡ ಬೇರೆ ಬದುಕುವ ನಿರ್ಧಾರ ಮಾಡಿರುವುದಾಗಿ ಹೇಳಿರುವುದು ಅನುಗೆ ಶಾಕ್ ಆಗುವಂತೆ ಮಾಡಿದೆ. ಅದರಲ್ಲೂ ಮಾನ್ಸಿ ಸ್ವಲ್ಪ ಹೆಚ್ಚೇ ಮಾತನಾಡಿದ್ದು, ಇದರಿಂದ ಅನುಗೆ ಬೇಸರವಾಗಿದೆ.

  ಏಜೆ-ಲೀಲಾ ಮಧ್ಯೆ ಪ್ರೀತಿ ಚಿಗುರೊಡೆಯಿತಾ?ಏಜೆ-ಲೀಲಾ ಮಧ್ಯೆ ಪ್ರೀತಿ ಚಿಗುರೊಡೆಯಿತಾ?

  ಝೇಂಡೆಗೆ ಸೂಕ್ಷ್ಮತೆಗಳು ಅರ್ಥವಾಗಿದೆ. ಹೀಗಾಗಿ ತಾನು ಇಷ್ಟು ವರ್ಷ ಕೂಡಿಟ್ಟ ಹಣ, ಚಿನ್ನವನ್ನೆಲ್ಲಾ ಈಗ ಬಳಸಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಆರ್ಯವರ್ಧನ್ ನಿಂದ ದೂರ ಉಳಿದಿರುವ ಝೇಂಡೆ ಏನೇನು ಮಾಡುತ್ತಾನೆ ಎಂಬ ಕುತೂಹಲ ಮೂಡಿದೆ.

  ಮೀರಾಗೆ ಶಾಕಿಂಗ್ ಸುದ್ದಿ!

  ಮೀರಾಗೆ ಶಾಕಿಂಗ್ ಸುದ್ದಿ!

  ಆಫೀಸಿಗೆ ಯಾರೂ ಬರದೇ ಇರುವುದನ್ನು ನೋಡಿ ಮೀರಾ ಶಾಕ್ ಆಗುತ್ತಾಳೆ. ಅನುಗೆ ಎಷ್ಟೇ ಕರೆ ಮಾಡಿದರೂ ರಿಸೀವ್ ಮಾಡುವುದಿಲ್ಲ. ಆರ್ಯ ಫೋನ್ ನೋಡಿ ಅನುಗೆ ತಂದು ಕೊಡುತ್ತಾನೆ. ಆಗ ಅನು ರಿಸೀವ್ ಮಾಡಿ ಮಾತನಾಡುತ್ತಾಳೆ. ನಾವಂದುಕೊಂಡಂತೆ ಏನೂ ಆಗುತ್ತಿಲ್ಲ. ಆರ್ಯ ಸರ್ ಸ್ಟೆಪ್ ಬ್ಯಾಕ್ ಮಾಡಿದ್ದಾರೆ. ಎಲ್ಲಾ ಜವಾಬ್ದಾರಿಯನ್ನು ಹರ್ಷ ಸರ್ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಹೀಗೆಲ್ಲಾ ಯಾಕೆ ಆಗುತ್ತಿದೆ ಎಂದು ಕೇಳುತ್ತಾಳೆ. ಆಗ ಅನು ಇನ್ಮೇಲಿಂದ ಆಫೀಸ್ ಕೆಲಸಗಳೆಲ್ಲವೂ ಹರ್ಷವರ್ಧನ್ ನೋಡಿಕೊಳ್ಳುತ್ತಾರೆ. ಇನ್ಮೇಲಿಂದ ಆರ್ಯ ಸರ್ ಆಫೀಸಿಗೆ ಬರುವುದು ಡೌಟ್ ಎನ್ನುತ್ತಾಳೆ. ಈ ಮಾತನ್ನು ಕೇಳಿ ಶಾಕ್ ಆಗಿ ನೀನಾದರೂ ಆಫೀಸಿಗೆ ಬಾ ಎಂದು ಕರೆಯುತ್ತಾಳೆ ಮೀರಾ.

  ಅನು ಪಾನಿಪೂರಿ ಪಾರ್ಟಿ!

  ಅನು ಪಾನಿಪೂರಿ ಪಾರ್ಟಿ!

  ರಮ್ಯಾಗೆ ಕೆಲಸ ಸಿಕ್ಕಿದೆ. ಹೀಗಾಗಿ ರಮ್ಯಾ ಪಾನಿ ಪೂರಿ ಪಾರ್ಟಿ ಮಾಡಲು, ಸಂಪತ್‌ಗೆ ಹಾಗೂ ಅನುಳನ್ನು ಕರೆದಿದ್ದಾಳೆ. ಮೂವರು ಕೂಡ ತಮ್ಮ ಫೇವರಿಟ್ ಸ್ಪಾಟ್ ನಲ್ಲಿ ಭೇಟಿಯಾಗಿದ್ದಾರೆ. ಪಾನಿಪೂರಿ ತಿನ್ನುತ್ತಾ ಕೊಂಚ ಹರಟೆಯನ್ನೂ ಹೊಡೆದಿದ್ದಾರೆ. ರಮ್ಯಾಗೆ ಕೆಲಸ ಸಿಕ್ಕಿರುವುದು, ತನ್ನ ಕಾನ್ಫಿಡೆನ್ಸ್ ಅನ್ನು ಹೆಚ್ಚು ಮಾಡಿದೆ. ಸಂಪತ್ ಗೆ ಎಲ್ಲರೂ ಜೀವನದಲ್ಲಿ ಬ್ಯುಸಿಯಾಗುತ್ತಿದ್ದಾರೆ. ತಾನೊಬ್ಬನೇ ಒಂಟಿ ಎಂಬ ಭಾವವೂ ಶುರುವಾಗಿದೆ. ಇನ್ನು ಅನು ತನ್ನ ಮುಂದಿನ ಜೀವನದ ಬಗ್ಗೆ ಯೋಚಿಸುತ್ತಿದ್ದು, ಜನ್ಮಾಷ್ಟಮಿಯಂದು ತನ್ನ ನಿರ್ಧಾರವನ್ನು ಎಲ್ಲರಿಗೂ ಹೇಳಲು ಮುಂದಾಗಿದ್ದಾಳೆ. ಈ ಬಗ್ಗೆ ತನ್ನ ಬೆಸ್ಟ್ ಫ್ರೆಂಡ್ಸ್ ಆದ ಸಂಪತ್ ಹಾಗೂ ರಮ್ಯಾ ಬಳಿ ಹೇಳಿಕೊಂಡಿದ್ದಾಳೆ.

  ಮಗಳ ಬಗ್ಗೆ ಪುಷ್ಪಗೆ ಹೆಮ್ಮೆ!

  ಮಗಳ ಬಗ್ಗೆ ಪುಷ್ಪಗೆ ಹೆಮ್ಮೆ!

  ಪುಷ್ಪಾಗೆ ಈಗ ಮಗಳು ಗರ್ಭಿಣಿ ಆಗಿರುವ ಸತ್ಯ ಗೊತ್ತಾಗಿದೆ. ಹೀಗಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಮುಂದಾಗಿದ್ದಾಳೆ. ಈ ವೇಳೆ ಅಂಗಡಿಗೆ ಬಂದು ಕೃಷ್ಣನ ಗೊಂಬೆಯನ್ನು ಖರೀದಿಸಿದ್ದಾಳೆ. ಇದನ್ನು ನೋಡಿದ ಸುಬ್ಬುಗೆ ಆಶ್ಚರ್ಯವಾಗಿದೆ. ಇನ್ನು ಅನು ಕೂಡ ದಾರಿ ಮಧ್ಯೆ ಕೃಷ್ಣನನ್ನು ನೋಡಿ ಒಂದು ಕೃಷ್ಣ ಗೊಂಬೆಯನ್ನು ಖರೀದಿಸಿದ್ದಾಳೆ. ಈ ವೇಳೆ ಒಬ್ಬಳೇ ಯೋಚನೆ ಮಾಡುತ್ತಾ ರಸ್ತೆ ದಾಟುತ್ತಿದ್ದಾಳೆ. ಈ ವೇಲೆ ವೇಗವಾಗಿ ಜೀಪ್ ಬಂದಿದ್ದು, ಜೋಗ್ತವ್ವ ಆಕೆಯನ್ನು ಕಾಪಾಡಿದ್ದಾಳೆ. ಆದಷ್ಟು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾಳೆ.

  ಝೇಂಡೆ ಮಾಸ್ಟರ್ ಪ್ಲಾನ್!

  ಝೇಂಡೆ ಮಾಸ್ಟರ್ ಪ್ಲಾನ್!

  ಇತ್ತ ಝೇಂಡೆ ಯಾವ ಲೆಕ್ಕಚಾರ ಹಾಕುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ವ್ಯಕ್ತಿಯೊಬ್ಬನಿಗೆ ಸೂಟ್ ಕೇಸ್ ತುಂಬಾ ಹಣ ಕೊಟ್ಟು, ಪ್ರಾಪರ್ಟಿ ನೋಡಿ ಖರೀದಿಸಲು ಹೇಳಿದ್ದಾನೆ. ಅದೂ ಕೂಡ ಬೇಗ ನೋಡು ಎಂದು ಹೇಳಿದ್ದಾನೆ. ಬಹುಷಃ ಝೇಂಡೆ ಎಲ್ಲರಿಂದಲೂ ದೂರ ಉಳಿಯಲು ಮುಂದಾಗಿದ್ದಾನೆ ಎಂದು ಊಹಿಸಲಾಗಿದೆ.

  English summary
  Jothe Jotheyali Serial Update On August 23rd, Anu Is In Confusion, KNow More,
  Thursday, August 25, 2022, 0:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X