ಆರ್ಯ, ಝೇಂಡೆಗೆ ಶಾಕ್ ಕೊಟ್ಟ ಅನು, ಎಲ್ಲಾ ಪ್ಲ್ಯಾನ್ ಉಲ್ಟಾ ಪಲ್ಟಾ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಅನು ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ಪುಷ್ಪಗೆ ಗೊತ್ತಾಗುವ ಸಮಯ ಬಂದಿದೆ. ಮಂದ ಬಳಿ ಮಾವಿನಕಾಯಿ ಗೊಜ್ಜು ಮಾಡಿಸಿಕೊಂಡ ವಿಚಾರ ಪುಷ್ಪಾ ಕೇಳಿ ಮನದೊಳಗೇ ಲೆಕ್ಕಾಚಾರ ಹಾಕಿದ್ದಾಳೆ. ಅನು ಗರ್ಭಿಣಿಯಾಗಿದ್ದು, ಮುಚ್ಚಿಡುತ್ತಿದ್ದಾಳೆ ಎಂದು ಯೋಚಿಸುತ್ತಿದ್ದಾಳೆ.

ಇತ್ತ ಹರ್ಷವರ್ಧನ್, ಅನು ನಡವಳಿಕೆಯನ್ನು ವಿರೋಧಿಸುತ್ತಿದ್ದಾನೆ. ಆದರೆ, ಅನು ನಮ್ಮ ಬಳಿ ಸತ್ಯ ಎಂಬ ಆಯುಧವಿದೆ ಅದೊಂದೇ ಸಾಕು ಎಂದು ಹೇಳಿದ್ದಾಳಿದ್ದಾಳೆ. ಅನು ಮಾತುಗಳು ಹರ್ಷನಿಗೆ ಅರ್ಥವಾಗುತ್ತಿಲ್ಲ.

ಆರ್ಯನಿಗೆ ಈಗ ಝೇಂಡೆ ವಾಪಸ್ ಬಂದ ಖುಷಿ ಹೆಚ್ಚಾಗಿದೆ. ಹಾಗಾಗಿ ಅನುಳನ್ನು ಕರೆಸಿದ್ದಾನೆ. ಝೇಂಡೆ ಹಾಗೂ ಅನು ಮಧ್ಯೆ ಇರುವ ಭಿನ್ನಾಭಿಪ್ರಾಯವನ್ನು ಸರಿ ಮಾಡಲು ಮುಂದಾಗಿದ್ದಾನೆ.

ಜಲಂಧರ್‌ಗೆ ಬೇಲ್ ಕೊಡಿಸಿದ ಅನು

ಜಲಂಧರ್‌ಗೆ ಬೇಲ್ ಕೊಡಿಸಿದ ಅನು

ಅನು ಹಾಗೂ ಝೇಂಡೆಯನ್ನು ಮುಖಾ ಮುಖಿಯಾಗಿ ಭೇಟಿ ಮಾಡಿಸಿದ ಆರ್ಯವರ್ಧನ್ ಖುಷಿ ಮೂಡಿನಲ್ಲಿದ್ದಾರೆ. ಝೇಂಡೆ ಹೀಗೆ ಹೇಳದೇ ಕೇಳದೇ ಬಿಟ್ಟು ಹೋದಂತೆ ಮತ್ಯಾವತ್ತೂ ಬಿಟ್ಟು ಹೋಗುವುದಿಲ್ಲ ಎನ್ನುತ್ತಾನೆ. ಅದಕ್ಕೆ ಅನು ಹಾಗಾಗುವುದಕ್ಕೆ ನಾನು ಮತ್ತೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುತ್ತಾಳೆ. ಯಾಕಿಷ್ಟು ಲೇಟ್ ಎಂದು ಆರ್ಯ ಕೇಳಿದ ಪ್ರಶ್ನೆಗೆ ಯಾಕೆ ನಿಮಗ್ಯಾರಿಗೂ ಗೊತ್ತಾಗಲಿಲ್ವಾ. ನಾವು ಜಲಂಧರ್ ಅನ್ನು ಬೇಲ್ ಕೊಟ್ಟು ಬಿಡಿಸುವುದಕ್ಕೆ ಹೋಗಿದ್ದೆವು ಎಂದು ಹೇಳುತ್ತಾಳೆ. ಈ ಮಾತಿನಿಂದ ಆರ್ಯ ಎದ್ದು ಹೋಗುತ್ತಾನೆ.

ರಮ್ಯಾ ಸ್ಟೋರಿಗೆ ಹೊಸ ಆಯಾಮ!

ರಮ್ಯಾ ಸ್ಟೋರಿಗೆ ಹೊಸ ಆಯಾಮ!

ಇತ್ತ ರಮ್ಯಾ, ಸಂಪತ್ ಕರೆ ಮಾಡಿ, ಅನು ತುಂಬಾ ಕಷ್ಟ ಪಡುತ್ತಿದ್ದಾಳೆ. ಅವಳಿಗೆ ಹುಷಾರಿಲ್ಲ. ನೀನು ಇಲ್ಲಿಗೆ ಬಾ ಎಂದು ಕರೆಯುತ್ತಾನೆ. ಇನ್ನು ರಮ್ಯಾ ಮದುವೆ ಮಾಡಲು ಅವರ ತಾಯಿ ಮುಂದಾಗಿದ್ದಾಳೆ. ಆದರೆ, ರಮ್ಯಾಗೆ ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲ. ಗಂಡಿನ ಕಡೆಯವರು ಬರುತ್ತಿದ್ದಾರೆ ರೆಡಿಯಾಗಿರು. ಇನ್ಮೇಲೆ ಹೆಚ್ಚು ಫೋನ್ ಬಳಸಬೇಡ ಎಂದು ಹೇಳುತ್ತಾಳೆ. ಅದಕ್ಕೆ ರಮ್ಯಾ ಕೂಗಾಡುತ್ತಾಳೆ. ನನಗೆ ಮದುವೆ ಇಷ್ಟವಿಲ್ಲ. ನಿನ್ನ ಗಂಡ ಬಿಟ್ಟು ಹೋದಂತೆ, ನನ್ನ ಮದುವೆಯಾಗುವವನು ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ಏನು ಗ್ಯಾರೆಂಟಿ. ನನ್ನ ಪಾಡಿಗೆ ನನ್ನ ಬಿಟ್ಟು ಬಿಡು. ಮದುವೆಯಾಗಿರುವವರಲ್ಲಿ ಯಾರು ತಾನೇ ಸುಖವಾಗಿದ್ದಾರೆ ಎಂದು ಹೇಳುತ್ತಾಳೆ.

ಝೇಂಡೆಗೆ ಶಾಕ್ ಕೊಟ್ಟ ಅನು!

ಝೇಂಡೆಗೆ ಶಾಕ್ ಕೊಟ್ಟ ಅನು!

ಆರ್ಯ ಕ್ಯಾಬಿನ್‌ಗೆ ಎಲ್ಲರೂ ಬರುತ್ತಾರೆ. ಆಗ ಆರ್ಯ, ಝೇಂಡೆ ಬಂದ ಸಂತೋಷವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಎಂದು ಕರೆದರೆ, ನೀನು ನೋಡಿದರೆ ಇಂತಹ ಸುದ್ದಿ ಕೊಟ್ಟೆಯಲ್ಲ. ಆದರೆ ನಾನು ನಿನ್ನ ಪ್ರಶ್ನೆ ಮಾಡುವುದಿಲ್ಲ ಅನು. ಯಾಕೆಂದರೆ ನೀನು ಏನೇ ಮಾಡಿದರೂ ಅದಕ್ಕೆ ಅರ್ಥ ಇರುತ್ತೆ ಅಂತ ನಂಬಿದ್ದೀನಿ ನಾನು ಎಂದು ಹೇಳುತ್ತಾನೆ. ಅದಕ್ಕೆ ಅನು ಝೇಂಡೇ ಸರ್ ವಾಪಸ್ ಬಂದ ಮೇಲೆ ವರ್ಧನ್ ಕುಟುಂಬಕ್ಕೆ ಯಾವುದೇ ಅಪಾಯವೂ ಇಲ್ಲ. ನಾನು ಯಾಕೆ ಹೀಗೆ ಮಾಡಿದೆ ಎಂದರೆ, ಅದು ನಿಮಗೋಸ್ಕರನೇ ಸರ್ ಎಂದು ಹೇಳುತ್ತಾಳೆ.

ಅನು ಮಾತಿಗೆ ಆರ್ಯ ಶಾಕ್!

ಅನು ಮಾತಿಗೆ ಆರ್ಯ ಶಾಕ್!

ಜಲಂಧರ್ ಯಾವತ್ತಿದ್ದರೂ ನಿಮ್ಮ ಭೇಟೆ ಅಲ್ವಾ ಸರ್. ನನ್ನ ಕಾರಣದಿಂದ ಅವರು ಪೊಲೀಸರ ಕಸ್ಟಡಿಗೆ ಸೇರಿದ್ದು ಇಷ್ಟವಾಗಲಿಲ್ಲ. ಜಲಂಧರ್ ಹೊರಗೆ ಬರಬೇಕು. ನಿಮ್ಮ ಇಬ್ಬರ ಮುಂದೆಯೇ ನಾನು ಅವರನ್ನ ಪ್ರಶ್ನೆ ಮಾಡಬೇಕು. ಇಷ್ಟು ವರ್ಷ ಕಳೆದರೂ ತಣ್ಣಗಾಗದೇ ಇರುವಂತಹ ದ್ವೇಷ ಎಂತಹದ್ದು ಎಂದು ನಾನು ಕೇಳಬೇಕು. ಅದ್ಯಾವ ಬ್ಯುಸಿನೆಸ್ ರಿಲೇಟೆಡ್ ದ್ವೇಷ ಅನ್ನೋದನ್ನ ತಿಳಿದುಕೊಳ್ಳಬೇಕು ಎಂದು ಹೇಳುತ್ತಾಳೆ. ನಂತರ ಆರ್ಯವರ್ಧನ್ ಝೇಂಡೇ ಬಳಿ ಕೂಗಾಡುತ್ತಾನೆ. ನಾನು ಆವತ್ತೇ ಅನು ಹತ್ತಿರ ಇರೋ ಸತ್ಯ ಹೇಳುತ್ತೀನಿ ಎಂದು ಹೇಳಿದ್ದೆ. ಆದರೆ ನೀನೇ ಕೇಳಲಿಲ್ಲ. ಈಗ ನೋಡು ಅನು ನನ್ನ ಎದುರಿಗೇ ಜಲಂಧರ್ ನನ್ನ ಪ್ರಶ್ನೆ ಮಾಡುತ್ತಾಳಂತೆ. ಕಾರಣ ತಿಳಿದುಕೊಳ್ಳುತ್ತಾಳಂತೆ. ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಕೂಗಾಡುತ್ತಾನೆ. ಆದರೂ ಝೇಂಡೆ ಆರ್ಯನನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಆರ್ಯ ಝೇಂಡೆ ಮಾತುಗಳನ್ನು ಕೇಳುವುದಿಲ್ಲ.

More from Filmibeat

English summary
Jothe Jotheyali Serial Update On August 2nd, Anu Is In Confusion, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X