ಜೊತೆ-ಜೊತೆಯಲಿ: ಅನು ಗರ್ಭಿಣಿ ಎಂದು ಹೇಳಿಬಿಟ್ಟ ಜೋಗ್ತವ್ವ!

By ಪ್ರಿಯಾ ದೊರೆ

ಅನು ಕದ್ದು ಮುಚ್ಚಿ ಮಾವಿನಕಾಯಿ ಗೊಜ್ಜು ತಿಂದಿರುವುದು ಮಾನ್ಸಿಗೆ ಗೊತ್ತಾಗಿದೆ. ಈ ವಿಚಾರವನ್ನು ಮಾನ್ಸಿ ನೇರವಾಗಿ ಅನು ಬಳಿ ಕೇಳಿದ್ದಾಳೆ. ಇದು ಅನುಗೆ ಮುಜುಗರವನ್ನುಂಟು ಮಾಡಿದೆ.

ಇದೇ ಸಂದರ್ಭದಲ್ಲಿ ಸಂಪತ್ ಕೂಡ ಅನುಗೆ ಹೊಟ್ಟೆ ನೋವು ಬಂದ ವಿಚಾರ ಇದರಿಂದ ಏನಾಯ್ತು ಎಂದೆಲ್ಲಾ ಹೇಳಿದ್ದಾನೆ. ಇದು ನಿಜಕ್ಕೂ ಅನುಗೆ ಇಬ್ಬಂದಿ ಸ್ಥಿತಿಯನ್ನು ತಂದೊಡ್ಡಿದೆ. ಇನ್ನು ಮಾನ್ಸಿ ಅನುಮಾನ ದಿನ ದಿನಕ್ಕೂ ಗೊಂದಲಮಯವಾಗುತ್ತಿದೆ.

ಅನು ಪ್ರೇಗ್ನೆಂಟ್ ಆಗಿರಬಹುದು ಎಂದು ಮಾನ್ಸಿ ಅನುಮಾನಗೊಂಡಿದ್ದಾಳೆ. ಅನು ಪ್ರೆಗ್ನೆಂಟ್ ನಡೆದುಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾಳೆ. ಅದರ ಜೊತೆಗೆ ಊಟ ಬಿಟ್ಟು ಹೆಚ್ಚು ಹುಳಿ ಪದಾರ್ಥಗಳನ್ನು ಸೇವಿಸುತ್ತಿದ್ದಾಳೆ. ಇದೆಲ್ಲವೂ ಮಾನ್ಸಿಗೆ ಅನುಮಾನ ಬರುವಂತೆ ಮಾಡಿದೆ.

ಮಾನ್ಸಿ ಬೇಸರ!

ಮಾನ್ಸಿ ಬೇಸರ!

ಮಾನ್ಸಿ ಹಾಗೂ ಹರ್ಷನ ಮದುವೆ ವಾರ್ಷಿಕೋತ್ಸವ ಈ ಸಲವೂ ಮನೆಯಲ್ಲೇ ಸೆಲಬ್ರೇಟ್ ಮಾಡಲಾಗುತ್ತಿದೆ. ಇದರಿಂದ ಮಾನ್ಸಿ ಬೇಸರ ಮಾಡಿಕೊಂಡಿದ್ದಾಳೆ. ತನ್ನ ತಂದೆ ತಾಯಿಯನ್ನು ನೋಡಲು ಹೋಗಬೇಕು ಎಂದುಕೊಂಡಿದ್ದ ಮಾನ್ಸಿಯನ್ನು ಹರ್ಷ ತಡೆದಿದ್ದಾನೆ. ಅನು ಅಪ್ಪ-ಅಮ್ಮ ಇಲ್ಲೇ ಇದ್ದಾರೆ. ಸೋ ಇಲ್ಲೇ ಸೆಲಬ್ರೇಟ್ ಮಾಡೋಣ ಎಂದು ಹೇಳಿದ್ದಾನೆ. ಇಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸ್ವಾರ್ಥವಾಗಿ ಇರುವುದಕ್ಕಿಂತ ಹರ್ಷ ಹೇಳಿದಂತೆ ಇರಬೇಕು ಎಂಬ ಅರ್ಥ ಮಾಡಿಕೊಂಡಿದ್ದಾಳೆ. ಈ ಎಲ್ಲಾ ವಿಚಾರವನ್ನು ಮಾನ್ಸಿ ತಮ್ಮ ತಾಯಿ ಬಳಿ ಫೋನಿನಲ್ಲಿ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದಾಳೆ. ಈ ಮಾತುಗಳನ್ನು ಪುಷ್ಪಾ ಕದ್ದು ಕೇಳಿಸಿಕೊಂಡಿದ್ದಾಳೆ.

ಮಾನ್ಸಿ ಮಾತಿಗೆ ಪುಷ್ಪಾ ಬೇಸರ!

ಮಾನ್ಸಿ ಮಾತಿಗೆ ಪುಷ್ಪಾ ಬೇಸರ!

ಮಾನ್ಸಿ ಮಾತುಗಳನ್ನು ಕೇಳಿಸಿಕೊಂಡ ಪುಷ್ಪಾ ಬೇಸರಗೊಂಡಿದ್ದಾಳೆ. ಹೀಗಾಗಿ ಸೀದಾ ಸುಬ್ಬು ಬಳಿ ಹೋಗಿ ಮನೆಗೆ ಹೋಗೋಣ ಎಂದು ಹಠ ಹಿಡಿದಿದ್ದಾಳೆ. ಪುಷ್ಪಾ ಮಾತು ಅರ್ಥವಾಗದ ಸುಬ್ಬು, ಮೊದಮೊದಲು ತಮಾಷೆಯಾಗಿದ್ದರು. ನಂತರ ನಮ್ಮ ಮನೆಯೇ ನಮಗೆ ಚೆಂದ ಈಗಲೇ ಹೋಗೋಣ ಎಂದು ಹೇಳುತ್ತಾಳೆ. ಆಗ ನಾಳೆ ಹರ್ಷ ಹಾಗೂ ಮಾನ್ಸಿ ಮದುವೆ ವಾರ್ಷಿಕೋತ್ಸವ ಮುಗಿಸಿಕೊಂಡು ಹೋಗಲು ಹೇಳಿದ್ದಾರಲ್ಲ ಎನ್ನುತ್ತಾನೆ. ಅದಕ್ಕೆ ಪುಷ್ಪಾ, ಬೇಡ ನಮ್ಮ ಮನೆಯ ಮಗಳು ಇದ್ದಾಳೆ ಅಂತ ಬಂದು ಬೇರೆ ಮನೆ ಹೆಣ್ಣು ಮಗಳಿಗೆ ಬೇಜಾರು ಮಾಡುವುದು ಬೇಡ ಎಂದು ಹೇಳುತ್ತಾಳೆ. ಇದಕ್ಕೆ ಸುಬ್ಬು ಒಪ್ಪುತ್ತಾನೆ.

ಜೋಗ್ತವ್ವ ಬಂದು ಹೇಳಿದ್ದೇನು..?

ಜೋಗ್ತವ್ವ ಬಂದು ಹೇಳಿದ್ದೇನು..?

ಪುಷ್ಪಾ ಮಾನ್ಸಿ ಹಾಗೂ ಹರ್ಷನ ಮದುವೆ ವಿವಾಹವಾರ್ಷಿಕೋತ್ಸವಕ್ಕೆ ಲಡ್ಡು ತಯಾರಿಸುತ್ತಿದ್ದಾಳೆ. ಅಲ್ಲದೇ, ಮಳೆಯ ಕಾರಣ ಕೊಟ್ಟು ಮನೆಗೆ ಹೋಗುತ್ತಿರುವ ವಿಚಾರವನ್ನು ಶಾರದಾ ದೇವಿ ಬಳಿ ಹೇಳುತ್ತಾಳೆ. ಶಾರದಾ ದೇವಿ ಬೇಸರ ಮಾಡಿಕೊಂಡಿದ್ದಾರೆ. ಇದೇ ವೇಳೆಗೆ ಜೋಗ್ತವ್ವ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೂವರು ತಾಯಂದಿರು ಸೇರುವ ಹೊತ್ತಿಗೆ ಯಲ್ಲವ್ವ ನನ್ನನ್ನು ಇಲ್ಲಿಗೆ ಕಳಿಸಿದ್ದಾಳೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಪುಷ್ಪಾ, ಶಾರದಾ ಹಾಗೂ ಅನು ಮೂವರೂ ಶಾಕ್ ಆಗುತ್ತಾರೆ. ಅನುಗೆ ನಿಧಾನವಾಗಿ ಸತ್ಯ ಅರ್ಥವಾಗುತ್ತದೆ. ಏನು ಗೊತ್ತಿಲ್ಲದವಳಂತೆ ಸುಮ್ಮನಿರುತ್ತಾಳೆ.

ಹರ್ಷನಿಗೆ ಟೆನ್ಷನ್!

ಹರ್ಷನಿಗೆ ಟೆನ್ಷನ್!

ಮಾನ್ಸಿ ಮನೆಯ ವಿಚಾರಗಳಿಂದ ತುಂಬಾನೇ ಫಸ್ಟ್ರೇಟ್ ಆಗಿರುತ್ತಾಳೆ. ಹಾಗಾಗಿ ಹರ್ಷನಿಗೆ ಕರೆ ಮಾಡಿ ಕೋಪದಲ್ಲಿ ಮಾತನಾಡುತ್ತಾಳೆ. ಈ ಮಾತುಗಳು ಹರ್ಷನಿಗೆ ನೋವುಂಟು ಮಾಡುತ್ತಾದೆ. ತುಂಬಾ ನಂಬಿದ್ದ ದಾದಾ ದ್ರೋಹ ಮಾಡಿದರು. ಈಗ ಮಾನ್ಸಿ ಯಾಕೆ ಹೀಗೆ ಮಾಡುತ್ತಿದ್ದಾಳೆ ಎಂದು ಯೋಚನೆ ಮಾಡುತ್ತಾ ಕೂತಿರುತ್ತಾನೆ. ಈ ವೇಳೆಗೆ ಆರ್ಯ ಬಂದು ತಮಾಷೆಯಾಗಿ ಮಾತನಾಡಿ ಕಳಿಸುತ್ತಾನೆ. ಹರ್ಷನ ರಿಯಾಕ್ಷನ್ ನೋಡಿ ಬದಲಾವಣೆಯನ್ನು ಗುರುತು ಹಿಡಿಯುತ್ತಾನೆ ಆರ್ಯ.

More from Filmibeat

English summary
Jothe Jotheyali Serial Update On August 7nth, Anu Is In Confusion, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X