For Quick Alerts
  ALLOW NOTIFICATIONS  
  For Daily Alerts

  ಆರ್ಯನೇ ದಾದನಾ? ಹರ್ಷವರ್ಧನ್ ಡೈಲಾಗ್‌ನಲ್ಲಿ ಸಖತ್ ಟ್ವಿಸ್ಟ್

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹರ್ಷನ ತಾಳ್ಮೆ ಕೊನೆ ಮುಟ್ಟಿದೆ. ಹರ್ಷವರ್ಧನ್ ಈಗ ದಾದನ ಬಣ್ಣ ಬಯಲು ಮಾಡುವ ತವಕದಲ್ಲಿದ್ದಾನೆ. ಆದರೆ, ಅನು ಹಾಗೂ ಶಾರದಾ ದೇವಿ ಇದಕ್ಕೆ ಕೊಂಚವೂ ಸಪೋರ್ಟ್ ಮಾಡುತ್ತಿಲ್ಲ.

  ಹರ್ಷನ ತಲೆ ಕೆಟ್ಟು ಗೊಬ್ಬರ ಆದಂತಾಗಿದೆ. ಮಾನ್ಸಿ ಕೂಡ ಹರ್ಷನ ಮಾತುಗಳನ್ನು ಕೇಳುತ್ತಿಲ್ಲ. ಇದೆಲ್ಲದರಿಂದ ಹರ್ಷ ಬೇಸತ್ತು ಹೋಗಿದ್ದಾನೆ. ಆರ್ಯನ ಮುಖ ನೋಡಿ ಮಾತನಾಡಲೂ ಹರ್ಷನಿಗೆ ಹಿಂಸೆಯಾಗುತ್ತಿದೆ.

  ಸ್ವಾತಿ ಕೈ ಹಿಡಿದ ಮಾಡರ್ನ್ ರೈತ ಶಶಿ ಕುಮಾರ್!ಸ್ವಾತಿ ಕೈ ಹಿಡಿದ ಮಾಡರ್ನ್ ರೈತ ಶಶಿ ಕುಮಾರ್!

  ಇನ್ನು ಪುಷ್ಪಾ ಹಾಗೂ ಸುಬ್ಬುಗೆ ಮಗಳು ಅನುಳದ್ದೇ ಯೋಚನೆಯಾಗಿದೆ. ರಾಜನಂದಿನಿ ಎಂದು ಅನು ತಲೆ ಕೆಡಿಸಿದ್ದಾರೆ. ಅನು ಸುಖವಾಗಿದ್ದಾಳೋ ಇಲ್ಲವೋ ಎಂದು ಕೇಳಲು ಮನೆಗೆ ಬಂದಿದ್ದಾರೆ. ಆದರೆ ಕೇಳಲಾಗದೆ ಒದ್ದಾಡುತ್ತಿದ್ದಾರೆ.

  ಹರ್ಷನ ಮಾತಿಗೆ ದಂಗಾದ ಆರ್ಯ!

  ಹರ್ಷನ ಮಾತಿಗೆ ದಂಗಾದ ಆರ್ಯ!

  ಆರ್ಯ ಆಫೀಸಿನಿಂದ ಮನೆಗೆ ಬಂದರೂ, ಹರ್ಷ ಇನ್ನು ಮನಗೆ ಬಂದಿರುವುದಿಲ್ಲ. ಮಾನ್ಸಿ ಬೇಸರದಲ್ಲಿ ಬಾಗಿಲ ಬಳಿ ಕುಳಿತಿರುತ್ತಾಳೆ. ಆರ್ಯ ಮಾನ್ಸಿಯನ್ನು ಮಾತನಾಡಿಸಿ, ಹರ್ಷ ಎಲ್ಲಿ ಎಂದು ಕೇಳುತ್ತಾನೆ. ಆಗ ಮಾನ್ಸಿ ನನಗೇನು ಗೊತ್ತಿಲ್ಲ. ನಾವಿಬ್ಬರು ಗಂಡ-ಹೆಂಡತಿಯರಂತೆ ಮಾತನಾಡುವುದಿಲ್ಲ ಎಂದೆಲ್ಲಾ ತನ್ನ ಅಸಮಧಾನವನ್ನು ಹೊರ ಹಾಕುತ್ತಾಳೆ. ಆಗ ಆರ್ಯ ಸಮಾಧಾನ ಮಾಡುತ್ತಿರುತ್ತಾನೆ. ಇದೇ ವೇಳೆಗೆ ಬಂದ ಹರ್ಷ ಆಫೀಸಿನಿಂದ ಬರುವುದಕ್ಕೆ ಸಮಯ ಹಿಡಿಯುತ್ತದೆ. ಅರ್ಜೆಂಟ್ ಮಾಡಬೇಡ. ನಿನ್ನಿಷ್ಟದಂತೆ ನಮ್ಮ ವಿವಾಹ ವಾರ್ಷಿಕೋತ್ಸವ ನಡೆಯುತ್ತದೆ. ಯಾರ ನಂಬಿಕೆಗೂ ಮೋಸ ಮಾಡುವುದಿಲ್ಲ ಎಂದು ಆರ್ಯನಿಗೆ ಹೇಳಿದಂತೆ ಮಾನ್ಸಿಗೆ ಒತ್ತಿ ಒತ್ತಿ ಹೇಳುತ್ತಾನೆ. ಈ ಮಾತುಗಳು ಆರ್ಯನನ್ನು ಚುಚ್ಚುತ್ತದೆ. ಮೌನವಾಗಿ ಮನೆಯೊಳಗೆ ಬರುತ್ತಾನೆ. ಒಳಗೂ ಕೂಡ ಪುಷ್ಪಾ ನಂಬಿಕೆ ಎಂಬ ಪದ ಬಳಸುತ್ತಾಳೆ. ಇದು ಮತ್ತೆ ಆರ್ಯನಿಗೆ ಗಾಬರಿಯನ್ನುಂಟು ಮಾಡುತ್ತದೆ.

  ನಾನೀಗ ಎರಡು ಜೀವ ಎಂದ ಅನು!

  ನಾನೀಗ ಎರಡು ಜೀವ ಎಂದ ಅನು!

  ಅಪ್ಪ ಹಾಗೂ ಅಮ್ಮ ಇಬ್ಬರೂ ವಾಪಸ್ ಮನೆಗೆ ಹೊರಟಿದ್ದಾರೆ ಎಂದು ಅನು ಅಪ್ಪನ ಬಳಿ ಕೂತು ಮಾತನಾಡುತ್ತಿರುತ್ತಾಳೆ. ಈ ವೇಳೆಗೆ ಸುಬ್ಬು ನಾವು ಇಲ್ಲಿಗೆ ಬಂದಿದ್ದು, ನಿನ್ನ ಬಗ್ಗೆ ವಿಚಾರಿಸುವುದಕ್ಕೆ. ನೀನಿಲ್ಲಿ ಚೆನ್ನಾಗಿದ್ದೀಯಾ ಮಗಳೇ. ನೀನು ಯಾವತ್ತಿದ್ದರೂ ನನ್ನ ಬಂಗಾರವೇ. ಇಲ್ಲಿ ರಾಜನಂದಿನಿ ಅದು ಇದು ಅಂತ ಹೇಳಿ ನಿನ್ನ ತಲೆಗೆ ತುಂಬುತ್ತಿದ್ದಾರೆ ಎಂದು ಏನೇನೋ ತಲೆಗೆ ಹಚ್ಚಿಕೊಳ್ಳಬೇಡ ಎಂದು ಹೇಳುತ್ತಾನೆ. ಆಗ ಅನು ನೀವು ನಂಬಿದರೂ, ನಂಬದಿದ್ದರೂ ಕೆಲವೊಂದು ವಿಚಾರಗಳು ಸತ್ಯವೇ. ನಾನೀಗ ಒಬ್ಬಳಲ್ಲ ಎರಡು ಜೀವ. ಅದರ ಹೊಣೆಯೂ ನನ್ನದು ಎಂದು ಹೇಳುತ್ತಾಳೆ. ಆದರೆ ಈ ಮಾತು ಸುಬ್ಬುಗೆ ಕೊಂಚವೂ ಅರ್ಥವಾಗುವುದಿಲ್ಲ.

  ಸಂಪತ್ ಮಾತುಗಳನ್ನು ಕೇಳಿ ಅನು ಶಾಕ್!

  ಸಂಪತ್ ಮಾತುಗಳನ್ನು ಕೇಳಿ ಅನು ಶಾಕ್!

  ಇತ್ತ ಸಂಪತ್ ಅನು ಬಳಿ ಏನೇನೋ ಮಾತನಾಡುತ್ತಾನೆ. ನೀನು, ಹರ್ಷ ಸರ್ ಸೇರಿ ಆರ್ಯ ಅವರನ್ನು ಅರೆಸ್ಟ್ ಮಾಡಿಸಲು ಪೊಲೀಸ್ ಸ್ಟೇಷನ್‌ಗೆ ಹೋಗಿದ್ದು ಅಲ್ವಾ. ಆರ್ಯ ಸರ್ ಅರೆಸ್ಟ್ ಆದ ಮೇಲೆ ನೀನಿಲ್ಲಿ ಏನು ಮಾಡುತ್ತೀಯಾ. ನೀನು ತುಂಬಾ ಧೈರ್ಯವಂತೆ. ನಮ್ಮ ವಠಾರಕ್ಕೆ ಬಂದು ಬಿಡು ಎಂದೆಲ್ಲಾ ಮನಸ್ಸಿಗೆ ಬಂದಂತೆ ಮಾತನಾಡುತ್ತಾನೆ. ಈ ಮಾತುಗಳನ್ನು ಕೇಳಿ ಅನು ಶಾಕ್ ಆಗುತ್ತಾಳೆ. ನಂತರ ಸಂಪತ್ ಬಳಿ ಈ ವಿಚಾರವನ್ನು ಎಲ್ಲೂ ಯಾರಿಗೂ ಹೇಳಬೇಡ ಎಂದು ಭಾಷೆ ತೆಗೆದುಕೊಳ್ಳುತ್ತಾಳೆ.

  ಆರ್ಯನ ವಿರುದ್ಧ ಹರ್ಷ ಮಾತು!

  ಆರ್ಯನ ವಿರುದ್ಧ ಹರ್ಷ ಮಾತು!

  ಇನ್ನು ಪುಷ್ಪಾ ಹಾಗೂ ಸುಬ್ಬು ಹೊರಡುತ್ತಾರೆ. ಈ ವೇಳೆ ನಮ್ಮಿಂದ ತೊಂದರೆ ಏನಾದರೂ ಆಗಿ ಬೇಸರವಾಗಿದ್ದರೆ ಕ್ಷಮಿಸಿ ಎಂದು ಸುಬ್ಬು ಹೇಳುತ್ತಾರೆ. ನಂತರ ಅವರೆಲ್ಲಾ ಹೊರಟ ಮೇಲೆ, ಮಾನ್ಸಿ ಹಾಗೂ ಹರ್ಷ ಕೂಡ ಒಳಗೆ ಹೋಗಲು ಮುಂದಾಗುತ್ತಾರೆ. ಆಗ ಅವರನ್ನು ತಡೆದ ಆರ್ಯ ನಾಳೆ ನಿಮ್ಮ ವಿವಾಹ ವಾರ್ಷಿಕೋತ್ಸವ ಇಟ್ಟುಕೊಂಡು ಯಾಕೆ ಹೀಗಾಡುತ್ತಿದ್ದೀರಾ..? ಏನು ನಿಮ್ಮ ಸಮಸ್ಯೆ ಎಂದು ಕೇಳುತ್ತಾನೆ. ಆಗ ಹರ್ಷ ಹಿಂದೆ ಮುಂದೆ ನೋಡದೇ ನೀವೇ ದಾದ ಎಂದು ಹೇಳುತ್ತಾನೆ. ಈ ಮಾತು ಮನೆಯವರೆಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತದೆ.

  English summary
  Jothe Jotheyali Serial Update On August 8th, Anu Is In Confusion, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X