ಆರ್ಯವರ್ಧನ್ ಪರ ಶಾರದಾ ದೇವಿ ಬ್ಯಾಟಿಂಗ್!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆಗೆ ತನ್ನ ಪತಿ ಆರ್ಯನಿಗೆ ತಾನು ತಾಯಿಯಾಗುತ್ತಿರುವ ವಿಷಯವನ್ನು ಹೇಳಿಕೊಳ್ಳುವ ತವಕದಲ್ಲಿದ್ದಾಳೆ. ಆದರೆ, ಸಂದರ್ಭಗಳು ಅನುಗೆ ಅವಕಾಶ ಮಾಡಿಕೊಡುತ್ತಿಲ್ಲ.

ಪುಷ್ಪಾ, ಮಾನ್ಸಿ ಹಾಗೂ ಹರ್ಷ ಆನಿವರ್ಸರಿಗೆ ಲಾಡು ಕಟ್ಟಿ, ಮನೆಗೆ ಹೊರಟಿದ್ದಾಳೆ. ಮಾನ್ಸಿಗೆ ತನ್ನ ಆನಿವರ್ಸರಿ ತನ್ನಿಷ್ಟದಂತೆ ನಡೆಯುತ್ತಿಲ್ಲವಲ್ಲ ಎಂದೆಲ್ಲಾ ಮಾನ್ಸಿ ನೊಂದುಕೊಂಡಿದ್ದಾಳೆ. ಮಾನ್ಸಿ ನಡುವಳಿಕೆಯಿಂದ ಹರ್ಷ ತುಂಬಾ ಬೇಸರಗೊಂಡಿದ್ದಾನೆ.

ಪುಷ್ಪಾ ಸುಬ್ಬು ಹೋಗುತ್ತಿದ್ದಂತೆ ಆರ್ಯ, ಮಾನ್ಸಿ ಮತ್ತು ಹರ್ಷನನ್ನು ನಿಮ್ಮಿಬ್ಬರ ಮಧ್ಯೆ ಏನಾಗಿದೆ. ಯಾವ ಸಮಸ್ಯೆ ಇದೆ ಹೇಳಿ ಎಂದು ಕೇಳುತ್ತಾನೆ. ಆಗ ಹರ್ಷ ಏಕಾಏಕಿ ನೀವೇ ಕಾರಣ. ಎಲ್ಲದಕ್ಕೂ ನೀವೇ ದಾದ ಕಾರಣ ನನ್ನನ್ನು ಮತ್ತೇನು ಕೇಳಬೇಡಿ ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಾನೆ.

ಆರ್ಯನತ್ತ ಬೊಟ್ಟು ಮಾಡಿದ ಹರ್ಷ!

ಆರ್ಯನತ್ತ ಬೊಟ್ಟು ಮಾಡಿದ ಹರ್ಷ!

ಆಗ ಅನು ಹರ್ಷನನ್ನು ಕೈ ಹಿಡಿದು ಭಾವ ಎಂದು ಕಣ್ಣಾಡಿಸುತ್ತಾಳೆ. ಇನ್ನೇನು ನನ್ನ ಕೇಳ ಬೇಡಿ ಎಂದು ಹೇಳಿ ಹರ್ಷ ಅಲ್ಲಿಂದ ಹೊರಟು ಹೋಗುತ್ತಾನೆ. ಈ ಮಾತುಗಳನ್ನು ಕೇಳಿದ ಆರ್ಯ ಶಾಕ್ ಆಗುತ್ತಾನೆ. ತನ್ನಿಂದ ಏನಾಯ್ತು ಎಂಬ ಪ್ರಶ್ನೆಯನ್ನು ತನ್ನನ್ನೇ ತಾನು ಕೇಳಿಕೊಳ್ಳುತ್ತಾನೆ. ಇನ್ನು ಆರ್ಯ ಶಾರದಾ ದೇವಿ ಹಾಗೂ ಅನು ಬಳಿ ತನ್ನ ತಪ್ಪೇನಿದೆ.? ಯಾಕೆ ಹರ್ಷ ತನ್ನ ಮೇಲೆ ಅಷ್ಟೊಂದು ಕೋಪ ಮಾಡಿಕೊಂಡಿದ್ದಾನೆ. ಏನಾಯ್ತು ಅವನಿಗೆ? ನಾನೇನು ಮಾಡಿದೆ ಎಂದು ಕೇಳುತ್ತಾನೆ.

ಸತ್ಯ ಮುಚ್ಚಿಟ್ಟ ಶಾರದಾ, ಅನು!

ಸತ್ಯ ಮುಚ್ಚಿಟ್ಟ ಶಾರದಾ, ಅನು!

ಅನು ಯಾಕೆ ಎಲ್ಲಾ ಗೊತ್ತಿದ್ದು, ನಾಟಕ ಮಾಡುತ್ತಿದ್ದೀರಾ..? ಅಥವಾ ಏನೂ ಗೊತ್ತೇ ಇಲ್ವಾ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಆರ್ಯ ಮತ್ತಷ್ಟು ಶಾಕ್ ಆಗುತ್ತಾನೆ. ಅನು ಬಳಿ ಹೋದಾಗ ಅನು ಮತ್ತೆ ಬದಲಾಗಿ ನಿಮ್ಮಿಂದ ಯಾವ ತಪ್ಪೂ ಆಗಿಲ್ಲ ಎಂದು ಹೇಳುತ್ತಾಳೆ. ನೀವು ಮನೆಯಲ್ಲಿ ಪರಿಸ್ಥಿತಿ ಸರಿ ಇಲ್ಲದಾಗ ಝೇಂಡೇಯನ್ನು ಹುಡುಕಿಕೊಂಡು ಹೋಗಿದ್ದೇ ತಪ್ಪಾಗಿದ್ದು. ಇದರಿಂದ ಹರ್ಷ ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಾಳೆ. ಅದೇ ಸಮಯದಲ್ಲಿ ಶಾರದಾ ಕೂಡ ಹರ್ಷನಿಗೆ ನೀನೆಲ್ಲಾ ಕೊಟ್ಟಿದ್ದೀಯಾ ಎಂದು ಹೇಳುತ್ತಾಳೆ.

ಝೇಂಡೇ ಕೈಗೆ ರೆಕಾರ್ಡರ್ ಸಿಕ್ಕಿತು!

ಝೇಂಡೇ ಕೈಗೆ ರೆಕಾರ್ಡರ್ ಸಿಕ್ಕಿತು!

ಆರ್ಯನ ಕ್ಯಾಬಿನ್‌ನಲ್ಲಿ ಅವರು ಮಾತನಾಡಿದ್ದೆಲ್ಲಾ ಕೇಳಿಸಲಿ ಎಂದು ಹಾಕಿರುವ ರೆಕಾರ್ಡರ್, ಟೇಬಲ್ ಕ್ಲೀನ್ ಮಾಡುವಾಗ ಕೆಲಸದವನಿಗೆ ಸಿಗುತ್ತದೆ. ಅದನ್ನು ಆತ ಮೀರಾಗೆ ಕೊಡಲು ಹೋಗುವಾಗ ಝೇಂಡೇ ಸಿಗುತ್ತಾನೆ. ಝೇಂಡೇ ಕೈಗೆ ಕೊಟ್ಟು ಹೋಗುತ್ತಾನೆ. ಝೇಂಡೇಗೆ ಇದರಿಂದ ಅನುಮಾನ ಬರುತ್ತದೆ. ಅಲ್ಲದೇ ಆತ ಮೀರಾ ಬಳಿ ಹೋಗಿ ರೆಕಾರ್ಡರ್ ಅನ್ನು ಝೇಂಡೇಗೆ ಕೊಟ್ಟಿರುವುದಾಗಿ ಹೋಗಿ ಹೇಳುತ್ತಾನೆ. ಮೀರಾ ಶಾಕ್ ಆಗುತ್ತಾಳೆ. ಇನ್ನು ಝೇಂಡೇ ಇದನ್ನು ತೆಗೆದುಕೊಂಡು ಆರ್ಯನಿಗೆ ತಂದು ತೋರಿಸುತ್ತಾನೆ. ಆದರೆ ಆರ್ಯ ತಮಾಷೆ ಮಾಡಿ ಕಳಿಸುತ್ತಾನೆ.

ಅನು ಆಸೆಗಳಿಗೆ ಸ್ಪಂದಿಸುತ್ತಾನಾ ಆರ್ಯ?

ಅನು ಆಸೆಗಳಿಗೆ ಸ್ಪಂದಿಸುತ್ತಾನಾ ಆರ್ಯ?

ಇನ್ನು ಅನು ಮನಸಲ್ಲಿ ಈಗ ತನ್ನ ಮಗುವಿನದ್ದೇ ಚಿಂತೆಯಾಗಿದೆ. ಆರ್ಯನ ಬಣ್ಣ ಬಯಲು ಮಾಡಿದರೆ, ತನ್ನ ಮಗುವಿನ ಭವಿಷ್ಯ ಹಾಳಾಗುತ್ತದೆ ಎಂದು ಯೋಚಿಸುತ್ತಿದ್ದಾಳೆ. ಇದೇ ವೇಳೆಗೆ ಆರ್ಯ ಬಂದು ಮಾತನಾಡಿಸಿದ್ದಾನೆ. ಆಗ ಅನು ತನಗೆ ಆರ್ಯನ ಜೊತೆಗೆ ಹೇಗಿರಬೇಕು ಎಂಬ ಆಸೆಗಳನ್ನು ಹೇಳಿಕೊಂಡಿದ್ದಾಳೆ. ಇಬ್ಬರೂ ಸಿನಿಮಾಗೆ ಹೋಗಬೇಕು. ಒಟ್ಟಿಗೆ ಕಾಲ ಕಳೆಯಬೇಕು ಎಂಬ ಆಸೆಗಳನ್ನು ಅನು ಆರ್ಯನ ಬಳಿ ಹೇಳುತ್ತಿರುತ್ತಾಳೆ.

More from Filmibeat

English summary
Jothe Jotheyali Serial Update On August 9th, Anu Is In Confusion, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X