ಆರ್ಯವರ್ಧನ್‌ಗೆ ಆಕ್ಸಿಡೆಂಟ್‌, ಸ್ಕೆಚ್ ಹಾಕಿದ ಸ್ನೇಹಿತ ಝೇಂಡೇ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಿತ್ಯ ಒಂದೊಂದು ಸತ್ಯ ಹೊರ ಬರುತ್ತಿದೆ. ಆದರೆ ಈಗ ಧಾರಾವಾಹಿಯ ವಿಲನ್ ಬಗ್ಗೆ ಗೊಂದಲ ಶುರುವಾಗಿದೆ. ಝೇಂಡೇ ಹಾಗೂ ಆರ್ಯ ಇಬ್ಬರೂ ವಿಲನ್ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ಒಮ್ಮೊಮ್ಮೆ ಝೇಂಡೇ ಮಾತ್ರಾನೇ ವಿಲನ್ ಎಂಬಂತೆ ಕಾಣುತ್ತಿದೆ.

ಝೇಂಡೇ ಅನುಳನ್ನು ಕೊಲ್ಲಲು ಪ್ಲಾನ್ ಮಾಡಿ ಕೆಲಸವಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಆರ್ಯನಿಗೆ ಗುಂಡೇಟು ತಗುಲಿದ್ದರಿಂದ ಝೇಂಡೇ ಭಯ ಪಟ್ಟಿದ್ದಾನೆ. ಹೇಗೆ ಎಲ್ಲರನ್ನೂ ಎದುರಿಸುವುದು ಎಂಬ ಭಯದಲ್ಲಿ ಊರಿಂದ ಆಚೆ ಹೋಗಿದ್ದಾನೆ.

ಆರ್ಯ, ಝೇಂಡೇಯನ್ನು ಹುಡುಕಿಕೊಂಡು ಹೋಗಿದ್ದಾನೆ. ಅನು ಆರ್ಯನನ್ನು ಹುಡುಕಾಡುತ್ತಿದ್ದಾಳೆ. ಆದರೆ ಹರ್ಷವರ್ಧನ್‌ ಅನು ಬಗ್ಗೆ ಯೋಚಿಸುತ್ತಿದ್ದಾನೆ. ಅನು ಒಬ್ಬಳೇ ಆರ್ಯನನ್ನು ಹುಡುಕಿಕೊಂಡು ಹೋಗಿದ್ದು, ಮುಂದೇನಾಗುತ್ತೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ.

ಅನುಗೆ ಸಾಥ್ ನೀಡಿದ ಮೀರಾ!

ಅನುಗೆ ಸಾಥ್ ನೀಡಿದ ಮೀರಾ!

ಅನು ಮತ್ತು ಮೀರಾ ಇಬ್ಬರೂ ಒಟ್ಟಿಗೆ ಆರ್ಯವರ್ಧನ್ ಹುಡುಕಿಕೊಂಡು ಹೊರಟಿದ್ದಾರೆ. ಜೋಗ್ತವ್ವ ಹೇಳಿದ ಮಾರ್ಗದಲ್ಲಿ ಅನು ಆರ್ಯನನ್ನು ಹುಡುಕಾಡುತ್ತಿದ್ದು. ಝೇಂಡೇ ಮನೆ ಬಳಿ ಹೋಗಿದ್ದಾರೆ. ಆರ್ಯ ಝೇಂಡೇಯನ್ನು ಬಿಟ್ಟಿರೋದಿಲ್ಲ. ಇಬ್ಬರೂ ಒಟ್ಟಿಗೇನೇ ಇರುತ್ತಾರೆ ಎಂದು ತಿಳಿದು ಅಲ್ಲಿಗೆ ಬರುತ್ತಾರೆ. ಸ್ಥಳ ನೋಡಿದ ಮೀರಾ ಈ ಜಾಗದಲ್ಲಿ ಝೇಂಡೇ ಸರ್‌ ಇರುತ್ತಾರಾ..? ಸ್ಲಂ ಥರ ಇದೆ ಎಂದು ಹೇಳುತ್ತಾಳೆ. ಅನು ಇಲ್ಲೆ ಮುಂದೆ ವಠಾರದಲ್ಲಿ ಝೇಂಡೇ ಮನೆ ಇದೆ ಎಂದು ಕರೆದುಕೊಂಡು ಹೋಗುತ್ತಾಳೆ. ಆದರೆ, ಅರ್ಧಕ್ಕೆ ಮೀರಾ ಈ ಜಾಗ ತುಂಬಾ ಡೇಂಜರಸ್ ಆಗಿದೆ ಅನ್ಸತ್ತೆ. ಇಲ್ಲಿಂದ ಹೋಗೋಣ ಬಾ ಎಂದು ಬಲವಂತದಿಂದ ಕರೆದುಕೊಂಡು ಹೋಗುತ್ತಾಳೆ.

ರಾಜನಂದಿನಿಯಂತೆ ಮಾತನಾಡಿದ ಅನು!

ರಾಜನಂದಿನಿಯಂತೆ ಮಾತನಾಡಿದ ಅನು!

ಅನುಗೆ ಅಲ್ಲಿಂದ ಹೋಗೋದಕ್ಕೆ ಇಷ್ಟ ಪಡೋದಿಲ್ಲ. ಮೀರಾ ಎಷ್ಟು ಹೇಳಿದರೂ ಕೇಳೋದಿಲ್ಲ. ಆರ್ಯ ಸರ್‌ ಇಲ್ಲೇ ಇದ್ದಾರೆ. ಅದು ನನಗೆ ಫೀಲ್ ಆಗುತ್ತಿದೆ. ಅವರು ಇಲ್ಲೇ ಎಲ್ಲೋ ಇದ್ದಾರೆ ಎಂದು ಹೇಳುತ್ತಾಳೆ. ಈ ಮಾತಿಗೆ ವಿರುದ್ಧವಾಗಿ ಮೀರಾ ಮಾತನಾಡಿದ್ದಕ್ಕೆ, ಅನು ರಾಜನಂದಿನಿಯಂತೆ ಬದಲಾಗಿ ಮಾತನಾಡುತ್ತಾಳೆ. ನನಗೆ ಆರ್ಯ ಸರ್‌ ಇಪ್ಪತ್ತು ವರ್ಷದಿಂದ ಗೊತ್ತು. ಅವರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೀನಿ ಎಂದು ವಿಚಿತ್ರವಾಗಿ ಮಾತನಾಡುತ್ತಾಳೆ. ಗಾಬರಿಯಾಗುವ ಮೀರಾ ಅನುಳನ್ನು ಅಲ್ಲಿಂದ ಕರೆದುಕೊಂಡು ಹೋಗಲು ಮುಂದಾಗುತ್ತಾಳೆ.

ಝೇಂಡೇಯ ಹೊಸ ಪ್ಲ್ಯಾನ್!

ಝೇಂಡೇಯ ಹೊಸ ಪ್ಲ್ಯಾನ್!

ಇತ್ತ ಝೇಂಡೇ ಎಲ್ಲರಿಂದ ದೂರ ತಪ್ಪಿಸಿಕೊಂಡಿದ್ದು, ಫೋನ್‌ ನಂಬರ್‌ ಕೂಡ ಬದಲಾಯಿಸಿದ್ದಾನೆ. ತನ್ನ ಚೇಳಗಳಿಗೆ ಆರ್ಯವರ್ಧನ್‌ನನ್ನು ಫಾಲೋ ಮಾಡುವಂತೆ ಹೇಳಿದ್ದಾನೆ. ಆರ್ಯ ಮನೆಯಿಂದ ಹೊರಟವನೇ ಸೀದಾ, ಝೇಂಡೇ ಮನೆ ಬಳಿ ಬಂದು ಅಳುತ್ತಾ ಕುಳಿತಿರುತ್ತಾನೆ. ಈ ಬಗ್ಗೆ ಫೋನ್‌ ಮಾಡಿ ತಿಳಿಸಿದಾಗ ಝೇಂಡೇ, ಆರ್ಯ ನನಗೋಸ್ಕರ ಅಳಬೇಕು. ನಾನು ಇಲ್ಲ ಎಂದರೆ, ಎಷ್ಟು ಕಷ್ಟವಾಗುತ್ತೆ ಎಂಬುದನ್ನು ತಿಳಿಯಬೇಕು ಎಂದುಕೊಂಡು, ಆರ್ಯನ ಕಾರನ್ನು ಆಕ್ಸಿಡೆಂಟ್‌ ಮಾಡಿಸುವಂತೆ ಸೂಚಿಸುತ್ತಾನೆ. ಇದರ ಹಿಂದೆ ಝೇಂಡೇ ದೊಡ್ಡ ಪ್ಲಾನ್ ಒಂದನ್ನು ಇಟ್ಟುಕೊಂಡಿದ್ದಾನೆ.

ಕಂಗೆಟ್ಟ ಅನು ತಾಯಿ!

ಕಂಗೆಟ್ಟ ಅನು ತಾಯಿ!

ಇನ್ನು ಇತ್ತೀಚೆಗೆ ಅನು ನಡೆದುಕೊಳ್ಳುತ್ತಿರುವುದು. ಅನು ಮಾತನಾಡುವುದು ಎಲ್ಲವೂ ಪುಷ್ಪಾಳಿಗೆ ನೋವಿನ ಜೊತೆಗೆ ಸಂಕಟವನ್ನೂ ಉಂಟು ಮಾಡುತ್ತಿದೆ. ಮಗಳಿಗೆ ಏನಾಗುತ್ತಿದೆ.? ಯಾಕೆ ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾಳೆ ಎಂಬ ಪ್ರಶ್ನೆಗಳು ಪುಷ್ಪಾಳನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಜೋಗ್ತವ್ವ ಮನೆಗೆ ಬಂದಿದ್ದಾಳೆ. ಜೋಗ್ತವ್ವಳನ್ನು ಅನು ಬಗ್ಗೆ ಕೇಳುತ್ತಾಳೆ. ಇದಕ್ಕೆ ಉತ್ತರಿಸುವ ಜೋಗ್ತವ್ವ ಆಕೆ ತನ್ನ ಅರಿಶಿನ ಕುಂಕುಮವನ್ನ ಹುಡುಕಿಕೊಂಡು ಹೊರಟಿದ್ದಾಳೆ. ಎಲ್ಲಾ ಶುರುವಾಗಿದ್ದು, ಅರಿಶಿನದಿಂದ ನೆನಪು ಮಾಡಿಕೋ ಪುಷ್ಪ ಎಂದು ಹೇಳುತ್ತಾಳೆ.

More from Filmibeat

English summary
Jothe Jotheyali Serial Update On July 11th Episode, Anu Is In Confusion, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X