ಜೊತೆ ಜೊತೆಯಲಿ: ವಿಲನ್ ಯಾರು?, ಬೇಗ ರಿವೀಲ್ ಮಾಡಿ ಎನ್ನುತ್ತಿರುವ ಪ್ರೇಕ್ಷಕರು!
ಅನು ಸಿರಿಮೆನೆ, ಆರ್ಯವರ್ಧನ್ ಹುಡುಕುತ್ತಿದ್ದಾಳೆ. ಆದರೆ ಒಂದು ಕ್ಷಣ ಅನು ಆಗಿದ್ದರೆ, ಮತ್ತೊಂದು ಕ್ಷಣ ರಾಜನಂದಿನಿಯಂತೆ ನಡೆದುಕೊಳ್ಳುತ್ತಾಳೆ. ಇದು ಮನೆಯವರೆಲ್ಲರನ್ನು ಆತಂಕಕ್ಕೆ ಒಳಮಾಡುತ್ತಿದೆ.
ಇನ್ನು ಶಾರದಾ ದೇವಿ ಅವರ ನಡವಳಿಕೆಯಲ್ಲೂ ಬದಲಾವಣೆ ಕಾಣುತ್ತಿದೆ. ಎಲ್ಲರಿಂದಲೂ ಶಾರದಾ ದೇವಿ ಏನೋ ಮುಚ್ಚಿಡುತ್ತಿದ್ದಾರೆ ಎಂಬಂತೆ ಅನಿಸುತ್ತದೆ. ಆದರೆ, ಶಾರದಾ ದೇವಿ ಅವರ ನಡವಳಿಕೆ ಬಗ್ಗೆ ಇನ್ನೂ ಯಾರಿಗೂ ಅನುಮಾನ ಬಂದಿಲ್ಲ.
ಝೇಂಡೇ ಆರ್ಯವರ್ಧನ್‌ನನ್ನು ನಿದ್ದೆಯಲ್ಲಿ ಮುಳುಗಿಸಿದ್ದಾನೆ. ಮುಂದಿನ ಝೇಂಡೇ ಪ್ಲಾನ್ ಏನು ಎಂಬುದೇ ಗೊತ್ತಾಗುತ್ತಿಲ್ಲ. ಝೇಂಡೇ ತನ್ನ ಮೇಲೆ ಮತ್ತಷ್ಟು ತೊಂದರೆಗಳನ್ನು ಎಳೆದುಕೊಳ್ಳುತ್ತಿದ್ದಾನೆ ಎಂಬುದಂತೂ ಸತ್ಯ ಎಂಬುದು ಗೋಚರಿಸುತ್ತಿದೆ.

ಆರ್ಯ ಬಗ್ಗೆ ಮಾತಾಡಿದ ಅನು!
ಆರ್ಯನನ್ನು ಹುಡುಕಲು ಅನು ಸಿರಿಮನೆ ಹೊರಟಿದ್ದಾಳೆ. ಗೋಡೌನ್, ಫಾರ್ಮ್ ಹೌಸ್ ಸೇರಿದಂತೆ ತಮ್ಮೆಲ್ಲಾ ಪ್ರಾಪರ್ಟಿ ಇರುವ ಜಾಗಗಳಲ್ಲೂ ಹುಡುಕೋಕೆ ಮುಂದಾಗಿದ್ದಾಳೆ. ಆದರೆ, ಆರ್ಯನನ್ನು ಹುಡುಕುವ ಅವಶ್ಯಕತೆ ಇಲ್ಲ ಎಂದು ಶಾರದಾ ದೇವಿ ಹೇಳಿದ್ದಾರೆ. ಆರ್ಯ ಮಾಡಿರೋ ಕೆಲಸಗಳ ಬಗ್ಗೆ ಗೊತ್ತಿದ್ದರೂ ಅವನನ್ನು ಹುಡುಕುವ ಅಗತ್ಯವೇನಿದೆ ಎಂದು ಕೇಳುತ್ತಾಳೆ. ಅದಕ್ಕೆ ಅನು, ಹುಡುಕಬೇಕು. ಝೇಂಡೇ ಬಗ್ಗೆ ನಿಮಗೆ ಗೊತ್ತಿಲ್ಲ. ಆರ್ಯನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಾನೆ ಎಂದು ಹೇಳುತ್ತಾಳೆ. ಇತ್ತ ಅನು ಹೊರಟ ಮೇಲೆ ಶಾರದಾ ದೇವಿ ಕೂಡ ಹೊರಗಡೆ ಹೊರಟಿದ್ದಾಳೆ. ಎಲ್ಲಿಗೆ ಹೊರಟಿದ್ದಾಳೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ.

ಅನುಳನ್ನು ಕೊಲ್ಲುತ್ತಾನಾ ಝೇಂಡೆ?
ಆರ್ಯನಿಗಾಗಿ ಅನು ಒಬ್ಬಳೇ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟಿದ್ದಾಳೆ. ಈ ಬಗ್ಗೆ ಮಾಹಿತಿ ಸಿಕ್ಕ ಝೇಂಡೆ ಅನುಳನ್ನು ಕೊಲ್ಲಲು ಪ್ಲ್ಯಾನ್ ಮಾಡುತ್ತಾನೆ. ಆರ್ಯನಿಂದ ಅನುಳನ್ನು ದೂರ ಮಾಡಲು ಇದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಝೇಂಡೆ ಈ ಪ್ಲ್ಯಾನ್ ಮಾಡಿದ್ದಾನೆ. ಆದರೆ, ಝೇಂಡೆ ಮತ್ತು ಆರ್ಯ ಯಾವ ಜಾಗದಲ್ಲಿದ್ದಾರೆ? ಆರ್ಯ ಯಾಕೆ ಪ್ರಜ್ಞೆ ಇಲ್ಲದೆ ಮಲಗಿದ್ದಾನೆ? ಹೀಗೆಲ್ಲಾ ಮಾಡುವುದರಿಂದ ಝೇಂಡೆಗೆ ಏನು ಲಾಭ ಅನ್ನೋ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಷ್ಟೇ ಉತ್ತರ ಸಿಗಬೇಕಿದೆ.

ವಠಾರದಲ್ಲಿ ಜೋಗ್ತವ್ವ!
ಪುಷ್ಪಾ ವಠಾರದಲ್ಲಿ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ. ಜೋಗ್ತವ್ವನನ್ನು ನ್ಯಾಯ ಸಿಗುವವರೆಗೂ ಹೋಗದಂತೆ ತಡೆದಿದ್ದಾರೆ. ಮನೆಯಲ್ಲಿ ಬೆಳ್ಳಿ ಬಟ್ಟಲು ಹಾಗೂ ಸ್ಪೂನ್ ಕಳೆದು ಹೋಗಿದೆ. ಎದುರು ಮನೆಯವರೇ ಕಳ್ಳರು ಎಂದು ಒಬ್ಬರಿಗೊಬ್ಬರು ಆರೋಪ ಮಾಡಿಕೊಂಡು ಜಗಳವಾಡುತ್ತಿದ್ದಾರೆ. ಪುಷ್ಪಾ ಬಂದು ಜಗಳ ಬಿಡಿಸಲು ಪ್ರಯತ್ನಿಸಿದ್ದಾಳೆ. ಆದರೆ ಎರಡೂ ಮನೆಯವರು ಹಠ ಬಿಡದೇ ಮಾತಿಗೆ ಮಾತು ಸೇರಿಸಿ ಕಿತ್ತಾಡುತ್ತಿದ್ದಾರೆ. ಪೊಲೀಸರು ಬರಲಿ, ಪಂಚಾಯ್ತಿ ಆಗಲಿ ಎಂದು ಜೋರಾಗಿ ಮಾತನಾಡುತ್ತಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡು ಜೋಗ್ತವ್ವ ಅಲ್ಲೇ ಕುಳಿತಿದ್ದಾಳೆ.

ವಿಲನ್ ಯಾರು ಎನ್ನುವ ಗೊಂದಲ!
ಅನುಳನ್ನು ಕೊಲ್ಲುವ ವಿಚಾರವಾಗಿ ಝೇಂಡೆ ಒಬ್ಬನೇ ಮಾತನಾಡುತ್ತಿದ್ದಾನೆ. ಅನು ಕಾಲ ಮುಗಿದಿದೆ. ಈಗ ಆರ್ಯನನ್ನು ಹುಡುಕಾಡಿ, ಗಂಡ ಸಿಗದೇ ನೊಂದು-ಬೆಂದು ಅನು ಸತ್ತಿದ್ದಾಳೆ ಎಂಬಂತೆ ಆಗಬೇಕು. ಅದೇ ನನಗೆ ಬೇಕಿರುವುದು ಎಂದು ಹೇಳಿಕೊಳ್ಳುತ್ತಿದ್ದಾನೆ. ಅನು ಕಾರನ್ನು ಬ್ರೇಕ್ ಫೇಲ್ಯೂರ್ ಮಾಡಿಸಿದ್ದಾನೆ. ಈ ಮೂಲಕ ಅನು ಸತ್ತರೆ, ಆರ್ಯ ಹಾಗೂ ತಾನು ಅರಾಮವಾಗಿರಬಹುದು. ಹೀಗಾಗಿ ಝೇಂಡೇ ಅನುಳನ್ನು ಕೊಲ್ಲುವ ಪ್ಲಾನ್ ಮಾಡಿದ್ದಾನೆ. ಆದರೆ, ಅನುಳನ್ನು ಯಾರು ಕಾಪಾಡುತ್ತಾರೆ? ಮುಂದೆ ಏನಾಗುತ್ತದೆ? ನಿಜಕ್ಕೂ ಈ ಧಾರಾವಾಹಿಯಲ್ಲಿ ಯಾರು ವಿಲನ್? ಯಾರು ಹೀರೋ ಅನ್ನೋ ಇನ್ನೂ ಗೊಂದಲದಲ್ಲಿದೆ.


Click it and Unblock the Notifications











