ಅನುಗೆ ಕಾರಿಗೆ ಆ್ಯಕ್ಸಿಡೆಂಟ್: ಶಾರದಾ ದೇವಿ ಒಡಲಲ್ಲಿ 22 ವರ್ಷದ ರಹಸ್ಯ!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಎಲ್ಲಾ ಘಟನೆಗಳೂ ವಿಚಿತ್ರವಾಗಿ ನಡೆಯುತ್ತಿವೆ. ಧಾರಾವಾಹಿಯಲ್ಲಿನ ಪ್ರತಿಯೊಬ್ಬರ ಆಲೋಚನೆಗಳು ಕೂಡ ವಿಭಿನ್ನವಾಗಿದೆ. ಧಾರಾವಾಹಿ ಕೊನೆಯ ಹಂತ ತಲುಪಿದೆ ಎಂಬಂತೆ ಬಿಂಬಿತವಾಗುತ್ತಿದೆ.
ಒಬ್ಬರೇ ಎಲ್ಲಿಗೂ ಹೋಗಬೇಡಿ ಎಂದು ಹರ್ಷವರ್ಧನ್ ಹೇಳಿದರೂ ಕೇಳದ ಅನು, ಆರ್ಯನನ್ನು ಹುಡುಕಿಕೊಂಡು ಹೋಗಿದ್ದಾಳೆ. ಶಾರದಾ ದೇವಿ ಕೂಡ ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನೂ ಹೇಳದೆ ಹೋಗಿದ್ದಾಳೆ. ಇದು ಮನೆಯಲ್ಲಿ ಹೊಸ ಗೊಂದಲವನ್ನು ಸೃಷ್ಟಿಸಿದೆ.
ಮಾನ್ಸಿಗೆ ಮನೆಯ ಪರಿಸ್ಥಿತಿ ನೋಡಿ ತಲೆ ಕೆಟ್ಟು ಹೋಗಿದೆ. ಎಲ್ಲರೂ ಮಾನ್ಸಿಯನ್ನು ಮನೆಯ ವಿಚಾರಗಳಿಂದ ದೂರವಿಟ್ಟಂತೆ ಆಕೆಗೆ ಭಾಸವಾಗುತ್ತಿದೆ. ಇದೆಲ್ಲಾ ವಿಚಾರಗಳೂ ಮಾನ್ಸಿಗೆ ಕೋಪ ಬರುವಂತೆ ಮಾಡಿದೆ.

ಶಾರದಾ ದೇವಿ ಮನಸಲ್ಲಿರೋ ರಹಸ್ಯ!
ಶಾರದಾ ದೇವಿ ಇತ್ತೀಚೆಗೆ ತನ್ನ ನಡವಳಿಕೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣ ಏನು ಎಂಬುದೇ ಅರ್ಥವಾಗುತ್ತಿಲ್ಲ. ಇದೀಗ ಮನೆಯವರಿಗೆ ಗೊತ್ತಿಲ್ಲದಂತೆ ಗುರೂಜಿ ಒಬ್ಬರನ್ನು ಶಾರದಾ ದೇವಿ ಭೇಟಿಯಾಗಿದ್ದಾರೆ. ಅಲ್ಲಿ 22 ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ರಹಸ್ಯದ ಬಗ್ಗೆ ಮಾತನಾಡಿದ್ದಾಳೆ. ತನ್ನ ಮನದ ಮಾತುಗಳನ್ನು ಗುರೂಜಿ ಬಳಿ ಹೇಳಿಕೊಂಡಿದ್ದು, ಇನ್ನು ಕಥೆಯಲ್ಲಿ ಟ್ವಿಸ್ಟ್ ಇದೆ ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಶಾರದಾ ದೇವಿಯ ಈ ಮಾತುಗಳು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಮನೆ ಬಿಟ್ಟು ಹೋದ ಮಾನ್ಸಿ!
ಮಾನ್ಸಿ ಹರ್ಷನನ್ನು ಆಫೀಸಿನಿಂದ ಮನೆಗೆ ಕರೆಸಿಕೊಂಡಿದ್ದಾಳೆ. ಒತ್ತಡದಲ್ಲಿರುವ ಹರ್ಷ ಏನಾಯ್ತೋ ಎಂಬ ಭಯದಲ್ಲಿ ಮನೆಗೆ ಬಂದಿದ್ದಾನೆ. ಮಾನ್ಸಿ ನಮ್ಮ ಪರ್ಸನಲ್ ಲೈಫ್ ಬಗ್ಗೆ ಗಮನಕೊಡಬೇಕು. ಮನೆಯಲ್ಲಿ ಯಾರೂ ಇಲ್ಲ. ಇಲ್ಲಿ ನನಗೊಬ್ಬಳಿಗೆ ಇರೋದು ಕಷ್ಟ. ನಾವಿಬ್ಬರು ನಮಗಾಗಿ ಬದುಕುವುದು ಯಾವಾಗ ಎಂದೆಲ್ಲಾ ಪ್ರಶ್ನಿಸುತ್ತಾಳೆ. ಮಾನ್ಸಿ ಮಾತುಗಳು ಅರ್ಥವಾಗದ ಕಾರಣ, ಹರ್ಷ ಯಾರು ಎಲ್ಲಿಗೆ ಬೇಕಿದ್ದರೂ ಹೋಗಬಹುದು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಮಾನ್ಸಿ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾಳೆ.

ಹರ್ಷನ ಮಾತು ಕೇಳದ ಮಾನ್ಸಿ!
ಮಾನ್ಸಿಗೆ ಎಷ್ಟು ಹೇಳಿದರೂ ಕೇಳುವುದಿಲ್ಲ. ಹರ್ಷ ಹೋಗಬೇಡ ಎಂದರೂ ಕೇಳದೇ ಹೊರಟು ಹೋಗುತ್ತಾಳೆ. ಇದರಿಂದ ಹರ್ಷ ಟೆನ್ಷನ್ ಮಾಡಿಕೊಳ್ಳುತ್ತಾನೆ. ತನ್ನ ಮಾತನ್ನು ಮಾನ್ಸಿ ಕೂಡ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ. ಇನ್ನು ನನಗೆ ಯಾರಿದ್ದಾರೆ ಎಂದು ಒಬ್ಬನೇ ಕೊರಗುತ್ತಾನೆ. ಈ ವೇಳೆ ಮಾನ್ಸಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡು, ಅಮ್ಮನನ್ನು ಕೇಳುತ್ತಾನೆ. ಆಗ ಹೊಸಮನಿ ನನಗೆ ಗೊತ್ತಿಲ್ಲ ಎನ್ನುತ್ತಾನೆ. ಮಂದಾ ಹೊರಗೆ ಹೋಗಿ ಬರುತ್ತೀನಿ ಎಂದು ಹೇಳಿ ಹೋದರು, ಎಲ್ಲಿಗೆ ಎಂದು ಗೊತ್ತಿಲ್ಲ ಎನ್ನುತ್ತಾಳೆ. ಈ ಮಾತುಗಳನ್ನು ಕೇಳಿದ ಹರ್ಷ ಅನು ಹಾಗೂ ಅಮ್ಮನ ಮೇಲೆ ಬೇಸರ ಮಾಡಿಕೊಳ್ಳುತ್ತಾನೆ.

ಅನುಗೆ ಆಕ್ಸಿಡೆಂಟ್ ಆಗೇ ಹೋಯ್ತು!
ಝೇಂಡೆ ಆರ್ಯನಿಗೆ ಮತ್ತೆ ಇಂಜಕ್ಷನ್ ಕೊಟ್ಟ ಪ್ರಜ್ಞೆ ತಪ್ಪಿಸಿದ್ದಾನೆ. ಅನುಳನ್ನು ಕೊಲ್ಲಲು ಸಖತ್ ಪ್ಲಾನ್ ಕೂಡ ಮಾಡಿಕೊಂಡಿದ್ದಾನೆ. ಅನು ಕಾರಿನ ಬ್ರೇಕ್ ವರ್ಕ್ ಆಗುತ್ತಿಲ್ಲ. ಇದರಿಂದ ಅನು ಗಾಬರಿಗೊಂಡಿದ್ದು, ದೇವರ ಮೇಲೆ ಭಾರ ಹಾಕಿದ್ದಾಳೆ. ದೇವಸ್ಥಾನದ ಬಳಿ ಇದ್ದ ಮರವೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಅನು ಪ್ರಜ್ಞೆ ತಪ್ಪಿದ್ದಾಳೆ. ಆದರೆ, ಬಾಡಿ ಗಾರ್ಡ್ಸ್ ಕಾರು ನಿಂತಿದೆ ಎಂದು ಝೇಂಡೆಗೆ ಕರೆ ಮಾಡಿ ಹೇಳಿದ್ದಾರೆ. ಝೇಂಡೆ ಕೋಪದಲ್ಲಿ ಅನು ಇವತ್ತು ಸಾಯಬೇಕು ಅಷ್ಟೇ ಎಂದು ಹೇಳಿದ್ದಾನೆ. ನಿಜವಾಗಿಯೂ ಅನುಗೆ ಏನಾಗಿದೆ ಎಂಬುದು ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











