ಆರ್ಯನನ್ನು ಕೊಂದ ಅನು: ಜೊತೆ ಜೊತೆಯಲಿ ಧಾರಾವಾಹಿ ಮುಗಿದೇ ಹೋಯ್ತು!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಜಲಂಧರ್ ಅರೆಸ್ಟ್ ಮಾಡಲಾಗಿದೆ. ಜಲಂಧರ್ ನನ್ನು ಭೇಟಿಯಾಗುವ ಸಲುವಾಗಿ ಅನು ಕರೆಸಿಕೊಂಡಿದ್ದಳು. ಆದರೆ ಅನು ಮರೆತು ಹೋಗಿದ್ದು ಇದೇ ವೇಳೆಗೆ ಜಲಂಧರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಝೇಂಡೇ ಪ್ಲ್ಯಾನ್ ಮಾಡಿ ವಾಯ್ಸ್ ಮೆಸೇಜ್ ಕಳಿಸಿದ್ದಾನೆ. ಇದನ್ನು ಕೇಳಿದ ಆರ್ಯ ಟೆಂನ್ಷನ್ ಮಾಡಿಕೊಂಡಿದ್ದಾನೆ. ಹೀಗಾಗಿ ಗುಂಡು ಹಾರಿಸಿ ತನ್ನ ಬಗ್ಗೆ ತಾನೇ ಬೇಸರಗೊಂಡಿದ್ದಾನೆ. ಸುಮ್ಮನೆ ಝೇಂಡೇ ಮೇಲೆ ಅನುಮಾನ ಪಟ್ಟೆ ಎಂದು ನೊಂದುಕೊಂಡಿದ್ದಾನೆ.
ಆರ್ಯನ ನಡವಳಿಕೆ ನೋಡಿದ ಪುಷ್ಪಾ ಹಾಗೂ ಸುಬ್ಬು ಭಯಗೊಂಡಿದ್ದಾರೆ. ಮಗಳನ್ನು ಎಂಥಾ ಮನೆಗೆ ಕೊಟ್ವಿ ಅವಳಿಗೆ ಏನಾದರೂ ಆದರೆ ಏನು ಗತಿ ಎಂದು ಯೋಚಿಸುತ್ತಿದ್ದಾರೆ. ಮನದೊಳಗೆ ತುಂಬಾ ಭಯಗೊಂಡಿರುವ ಪುಷ್ಪಾ ಮಗಳನ್ನು ಹೇಗೆ ವಿಚಾರಿಸುವುದು ಎಂದು ಗೊಂದಲಕ್ಕೊಳಗಾಗಿದ್ದಾರೆ.

ಅನುಗೆ ಸಂಕಷ್ಟ!
ಅನು ವಾಂತಿ ಮಾಡಿಕೊಂಡಿದ್ದು, ಇದನ್ನು ಸಂಪತ್ ನೋಡಿದ್ದಾನೆ. ಸಂಪತ್‌ಗೆ ಸತ್ಯ ಗೊತ್ತಾಯಿತಲ್ಲ ಎಂದು ಹೆದರಿದ್ದಾಳೆ. ಆದರೆ, ಸಂಪತ್‌ಗೆ ಅನು ಯಾಕೆ ವಾಂತಿ ಮಾಡಿದ್ದಾಳೆ ಎಂಬುದು ಗೊತ್ತಿಲ್ಲ. ಹುಷಾರಿಲ್ಲ ಎಂದುಕೊಂಡಿದ್ದು, ಕಷಾಯ ಕುಡಿ, ಹೊಟ್ಟೆ ಸರಿ ಹೋಗುತ್ತೆ ಎಂದು ಹೇಳುತ್ತಾನೆ ಈ ಮಾತುಗಳನ್ನು ಕೇಳುವ ಅನು ಸಮಾಧಾನ ಪಟ್ಟುಕೊಳ್ಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಹರ್ಷವರ್ಧನ್ ಬರುತ್ತಾನೆ.

ಮತ್ತೆ ರಾಜನಂದಿಯಾದ ಅನು!
ಹರ್ಷವರ್ಧನ್ ಅನು ಇರುವಲ್ಲಿಗೆ ಬಂದು ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆಲ್ಲಾ ಮಾತನಾಡುತ್ತಾನೆ. ತನಗೆ ಕಮೀಷನರ್ ಸರ್ ಕಾಲ ಮಾಡಿದ್ದರು. ಜಲಂಧರ್ ನನ್ನು ಅರೆಸ್ಟ್ ಮಾಡಿದ್ದಾರಂತೆ. ಇನ್ಯಾವ ಭಯವೂ ಇಲ್ಲ. ಕ್ಷೇಮವಾಗಿರಿ ಎಂದು ಹೇಳಿದರು ಎಂದು ಹರ್ಷವರ್ಧನ್ ಹೇಳುತ್ತಾನೆ. ಈ ಮಾತನ್ನು ಕೇಳಿದ ಅನು ಮತ್ತೆ ರಾಜನಂದಿಯಾಗಿ ಬದಲಾಗುತ್ತಾಳೆ. ನಾನು ಜಲಂಧರ್ ಭೇಟಿ ಮಾಡುವಷ್ಟರಲ್ಲಿ ಹೀಗಾಯ್ತಲ್ಲ. ನಾನು ಸುಮ್ಮನೆ ಬಿಡಲ್ಲ ಎಂದು ಕೂಗಾಡಿದ್ದಾಳೆ. ಸಿಟ್ಟಿನಲ್ಲಿ ಮನೆಯ ಒಳಗಡೆಗೆ ಹೋಗಿದ್ದಾಳೆ.

ಝೇಂಡೇ ಖುಷಿಗೆ ಪಾರವೇ ಇಲ್ಲ!
ಈಗ ಝೇಂಡೇ ಫುಲ್ ಖುಷಿಯಾಗಿದ್ದಾನೆ. ತಾನು ಅಂದುಕೊಂಡಂತೆಯೇ ನಡೆಯಿತು. ಇನ್ನು ತನ್ನದೇ ಸಾಮ್ರಾಜ್ಯ ಎಂದು ಖುಷಿ ಪಟ್ಟಿದ್ದಾನೆ. ಕಾರು ಹತ್ತಿ ವಾಪಸ್ ಸಿಟಿ ಕಡೆಗೆ ಹೊರಟಿದ್ದಾನೆ. ಈ ಮಧ್ಯೆ ಜಲಂಧರ್ ತನ್ನದೇನೂ ತಪ್ಪಿಲ್ಲ ಎಂದು ಪೊಲೀಸರಿಗೆ ಎಷ್ಟು ಹೇಳಿದರೂ ಕೇಳುವುದಿಲ್ಲ. ನಿನ್ನಿಂದಲೇ ವರ್ಧನ್ ಕುಟುಂಬಕ್ಕೆ ಥ್ರೆಟ್ ಶುರುವಾಗಿದೆ. ನಿನ್ನನ್ನು ಬಿಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಪೊಲೀಸರು ಜಲಂಧರ್‌ಗೆ ಹೇಳಿದ್ದಾರೆ.

ಆರ್ಯನನ್ನು ಕೊಂದೇ ಬಿಟ್ಟಳು ಅನು!
ಅನು ಜಲಂಧರ್‌ನ ಅರೆಸ್ಟ್ ಮಾಡಿದ್ದನ್ನು ಸಹಿಸುತ್ತಿಲ್ಲ. ಆ ಜನ್ಮದಲ್ಲಿ ಮಾಡಿದ ತಪ್ಪನ್ನೇ ಈಗಲೂ ಮಾಡುತ್ತಿದ್ದೇನೆ ಎಂದು ತನಗೆ ತಾನೇ ಮಾತನಾಡಿದ್ದಾಳೆ. ಕೋಪದಲ್ಲೇ ರೂಮಿಗೆ ಬಂದಿದ್ದು, ಆರ್ಯ ಹಾಡು ಕೇಳುತ್ತಾ ಕಣ್ಣು ಮುಚ್ಚಿ ಕುಳಿತಿದ್ದಾನೆ. ಇದನ್ನು ನೋಡಿದ ಅನುಳ ಸಿಟ್ಟು ಇನ್ನಷ್ಟು ಹೆಚ್ಚಾಗಿದೆ. ಹಿಂದೆ ನಡೆದದ್ದೆಲ್ಲವನ್ನೂ ಒಂದೊಂದಾಗಿ ನೆನಪು ಮಾಡಿಕೊಂಡಿದ್ದಾಳೆ. ತನ್ನ ನಂಬಿಕೆ, ಪ್ರೀತಿಗೆ ಮೋಸ ಮಾಡಿದ ಆರ್ಯನನ್ನು ಕೊಲ್ಲಬೇಕು ಎಂದುಕೊಂಡ ಅನು, ಅಲ್ಲೇ ಇದ್ದ ಗನ್ ಅನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದಿದ್ದಾಳೆ. ಆರ್ಯನಿಗೆ ಗುರಿ ಇಟ್ಟು ಯಾಕೆ ಹೀಗೆ ಮಾಡಿದ್ರಿ ಅಂತ ಪ್ರಶ್ನಿಸಿದ್ದಾಳೆ. ಗೊತ್ತಿದ್ದು, ನಟಿಸುತ್ತಿದ್ದೀರಾ. ನಂಬಿಕೆ ಎಂಬ ಮೂರಕ್ಷರದ ಪದಕ್ಕೆ ದ್ರೋಹ ಮಾಡಿದ್ದೀರಾ. ರಾಜನಂದಿನಿಗೆ ಮೋಸ ಮಾಡಿದೀರಾ ಎಂದು ಹೇಳಿ ಆರ್ಯನ ಹಣೆಗೆ ಗುಂಡು ಹಾರಿಸಿದ್ದಾಳೆ. ಆರ್ಯ ಕೆಳಗೆ ಬಿದ್ದ ಮೇಲೆ ಗೊಂದಲದಲ್ಲಿ ನೋಡುತ್ತಿದ್ದಾಳೆ.


Click it and Unblock the Notifications











