ಆರ್ಯವರ್ಧನ್ ಮೇಲೆ ಅನುಗೆ ಅನುಕಂಪ, ಹರ್ಷನಿಗೆ ಕೋಪ!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಅನು ಸಿರಿಮನೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಳೆ. ಆರ್ಯವರ್ಧನ್ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದಾಳೆ. ತಾನು ಗರ್ಭಿಣಿ ಎಂಬ ಕಾರಣಕ್ಕೆ ಈ ಗೊಂದಲಕ್ಕೊಳಗಾಗಿದ್ದಾಳೆ ಎಂದು ಮೇಲ್ನೋಟಕ್ಕೆ ಊಹಿಸಬಹುದಾಗಿದೆ.
ಝೇಂಡೆ ಏನೇ ಆಗಲಿ ಅನು ಸಿರಿಮನೆಯನ್ನು ಉಳಿಸಬಾರದು. ಉಳಿಸಿದರೆ ತನಗೆ ಹಾಗೂ ಆರ್ಯವರ್ಧನ್‌ಗೆ ಮುಂದೆ ತುಂಬಾ ಕಷ್ಟವಾಗುತ್ತದೆ. ಅನು ತಮ್ಮ ಬದುಕನ್ನು ಜಾಲಾಡುತ್ತಿದ್ದಾಳೆ. ಆಕೆಯನ್ನು ಕೊಲ್ಲಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫೇಲ್ಯೂರ್ ಆಗಿದೆ.
ಇತ್ತ ಆರ್ಯವರ್ಧನ್ ಇನ್ಮುಂದೆ ಅನು ಸಿರಿಮನೆ ಬಳಿ ಯಾವ ಸತ್ಯವನ್ನು ಮುಚ್ಚಿಡಬಾರದು. ಎಲ್ಲವನ್ನೂ ಹೇಳಿಕೊಳ್ಳಬೇಕು ಎಂದು ಮುಂದೆ ಬಂದಿದ್ದಾನೆ. ಇದೇ ಸಮಯದಲ್ಲಿ ಅನು ಸಿರಿಮನೆಯನ್ನು ಝೇಂಡೆ ಕಡೆಯವರು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದು, ಈ ವೇಳೆ ಆರ್ಯನ ಕೈಗೆ ಗುಂಡೇಟು ತಗುಲಿದೆ.

ಆರ್ಯ ಬಗ್ಗೆ ಗೊಂದಲದಲ್ಲಿರುವ ಅನು!
ಆರ್ಯ ಈಗ ಪ್ರಜ್ಞೆ ಇಲ್ಲದೆ ಮಲಗಿದ್ದಾನೆ. ಅನು ಸಿರಿಮನೆ ಆರ್ಯನ ಎದುರಿಗೇ ಅವರಿಗೆ ಎಚ್ಚರವಾಗಲಿ ಎಂದು ಕಾಯುತ್ತಿದ್ದಾಳೆ. ನಿದ್ದೆಯಲ್ಲೂ ನನ್ನ ಬಗ್ಗೆಯೇ ಕನವರಿಸುತ್ತಿರುವ ನಿಮ್ಮ ಬಗ್ಗೆ ಅರ್ಥ ಮಾಡಿಕೊಳ್ಳೋದಕ್ಕೆ ಆಗುತ್ತಿಲ್ಲ. ಪದೇ ಪದೇ ಜೋಗ್ತವ್ವ ಬೇರೆ ಸರಿಯಾದ ಹೆಜ್ಜೆ ಇಡೋದಕ್ಕೆ ಹೇಳುತ್ತಿದ್ದಾಳೆ. ಪ್ರತಿ ಬಾರಿ ಇವರ ವಿರುದ್ಧ ನಡೆದಾಗಲೂ ಆರ್ಯ ಸರ್ ಹತ್ರ ಆಗುತ್ತಿದ್ದಾರೆ. ಯಾವುದು ಸರಿಯಾದ ದಾರಿ ಅನ್ನೊದೇ ಗೊತ್ತಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಾಳೆ.

ಅನುಮಾನ ವ್ಯಕ್ತಪಡಿಸಿದ ಹರ್ಷವರ್ಧನ್!
ಹರ್ಷವರ್ಧನ್ ರೂಮಿಗೆ ಬಂದು ಆರ್ಯವರ್ಧನ್ ಮೇಲೆ ಅನುಮಾನಗೊಳ್ಳುತ್ತಾಳೆ. ದಾದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಷ್ಟು ನಮಗೆ ಅಪಾಯಗಳು ಹೆಚ್ಚಾಗುತ್ತಿದೆ. ಇದೆಲ್ಲಾ ಇವರದ್ದೇ ಪ್ಲಾನ್ ಇರಬೇಕು ಎನ್ನುತ್ತಾನೆ. ಆದರೆ ಈ ಶೂಟೌಟ್ ಇವರ ಪ್ಲಾನ್ ಅಲ್ಲ ಎಂದು ಅನು ಸಿರಿಮನೆ ಹೇಳಿದ್ದಕ್ಕೆ ಸಿಟ್ಟಾಗುವ ಹರ್ಷವರ್ಧನ್, ಮತ್ತೆ ಮತ್ತೆ ನೀವು ಅವರ ನಂಬಿಕೆಯ ಸುಳಿಯಲ್ಲಿ ಸಿಲುಕುತ್ತಿದ್ದೀರಾ. ಯೋಚನೆ ಮಾಡಿ ಅತ್ತಿಗೆ, ನಿಮ್ಮನ್ನು ಕಾಪಾಡಿದ ಇವರು ನನ್ನ ಅಕ್ಕ ರಾಜನಂದಿನಿಯನ್ನು ಸಾಯಿಸಲು ಕಾರಣವೇನು ಆಸ್ತಿ ಅಲ್ವಾ.? ಹಾಗಾದರೆ ನಿಮ್ಮ ಕಾಪಾಡೊದಕ್ಕೂ ಕಾರಣ ಇರಬೇಕು ಅಲ್ವಾ ಯೋಚಿಸಿ ಎನ್ನುತ್ತಾನೆ. ತಮ್ಮ ಪ್ಲಾನ್ ಜಾರಿಗೆ ತರಬೇಕು ಎಂದು ಹೇಳಿದ್ದಕ್ಕೆ ಅನು ಸ್ವಲ್ಪ ತಾಳ್ಮೆ ತಂದುಕೊಳ್ಳೋಣ ಎಂದು ಹೇಳುತ್ತಾಳೆ. ಅನು ಮಾತು ಕೇಳಿ ಹರ್ಷ ಕೋಪ ಮಾಡಿಕೊಂಡು ಹೋಗುತ್ತಾನೆ.

ನೊಂದುಕೊಂಡ ಅನು ಸಿರಿಮನೆ
ಹರ್ಷ ಭಾವ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಒದ್ದಾಡುತ್ತಿದ್ದಾಳೆ. ಆರ್ಯವರ್ಧನ್ ಪರ ಅವಳ ಮನಸ್ಸು ಮಿಡಿಯುತ್ತಿದೆ. ಇದೇ ಹೊತ್ತಿಗೆ ರಾಜನಂದಿನಿ ಪ್ರತಿರೂಪ ಬಂದು, ಅನುಳನ್ನು ಸ್ವಾರ್ಥಿಯಾಗೋಗಿದ್ದೀಯಾ. ನಿನಗೋಸ್ಕರ ನೀನೀಗ ಆರ್ಯ ಬಗ್ಗೆ ಮರುಗುತ್ತಿದ್ದೀಯಾ. ದಾನ ಧರ್ಮ ಎಲ್ಲಾ ನಾಟಕ. ನನ್ನ ಸಾಯಿಸಿದ ಆರ್ಯ, ನಿನ್ನಗಾಗಿ ಗುಂಡೇಟು ತಿಂದ ಎಂದು ಹೇಳುತ್ತಾಳೆ. ಈ ವೇಳೆಗೆ ಆರ್ಯನ ಪ್ರತಿ ರೂಪ ಬಂದು. ಅನು ನಾನು ತಪ್ಪು ಮಾಡಿಲ್ಲ. ನಾನು ನಿಜ ಹೇಳೋದಕ್ಕೇ ಬಂದೆ ಅನು, ನನ್ನನ್ನು ನಂಬು ಅನು. ನಾನು ಇದಕ್ಕೂ ಮುನ್ನ ಹೇಳಿದ್ದೆಲ್ಲಾ ಸುಳ್ಳು ಎಂದು ಹೇಳುತ್ತಾನೆ. ಆಗ ಅನು ಈ ಎರಡೂ ಪ್ರತಿರೂಪದ ಬಗ್ಗೆ ಕನ್‌ಫ್ಯೂಸ್ ಆಗಿ ಕಿರುಚಾಡುತ್ತಾಳೆ.

ಒದ್ದಾಡುತ್ತಿರುವ ಝೇಂಡೆ
ಅನು ಸಿರಿಮನೆಯನ್ನು ಕೊಲ್ಲಲು ಹೋಗಿ ಈಗ ಆರ್ಯವರ್ಧನ್‌ಗೆ ಏಟಾಗಿದೆ. ಇದೇ ಸಂದರ್ಭದಲ್ಲಿ ಝೇಂಡೆ ಎಲ್ಲರಿಂದ ಕಾಣೆಯಾಗಿದ್ದಾನೆ. ಅಲ್ಲೇಲೂ ಕೂತು ಮುಂದೇನು ಮಾಡುವುದು. ಅನುಳನ್ನು ಕೊಲ್ಲಲು ಆಗಲಿಲ್ಲ. ನನ್ನ ಪ್ಲಾನ್ ಫ್ಲಾಪ್ ಆಯ್ತಲ್ಲ. ರಕ್ಷಣೆ ಕೊಡಬೇಕಿದ್ದ ನನ್ನಿಂದಲೇ ಆರ್ಯನಿಗೆ ಗುಂಡೇಟು ಬೀಳುವಂತಾಯ್ತಲ್ಲ ಎಂದು ಒದ್ದಾಡುತ್ತಿದ್ದಾನೆ. ತಾನೇ ಕುದ್ದಾಗಿ ಆರ್ಯನನ್ನು ನೋಡೋದಕ್ಕೆ ಹೊರಟಿದ್ದಾನೆ.


Click it and Unblock the Notifications











