ಮತ್ತೆ ಆರ್ಯನ ಬುಟ್ಟಿಗೆ ಬಿದ್ದ ಅನು ಸಿರಿಮನೆ!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಅನು ಸಿರಿಮನೆ ಆರ್ಯವರ್ಧನ್ ಪರ ಮಾತನಾಡಲು ಶುರು ಮಾಡಿದ್ದಾಳೆ. ಇದು ಹರ್ಷವರ್ಧನ್‌ಗೆ ಕೋಪ ಬರುವಂತೆ ಮಾಡಿದೆ. ಅನು ಈಗ ತನ್ನೆಲ್ಲಾ ಆಲೋಚನೆಗಳ ದಿಕ್ಕನ್ನು ಬದಲಾಯಿಸುತ್ತಿದ್ದಾಳೆ. ಇದೆಲ್ಲವೂ ಹರ್ಷನನ್ನು ಗೊಂದಲಗೊಳಿಸಿದೆ.
ಇನ್ನು ಮಾನ್ಸಿ ಹರ್ಷನ ಜೊತೆಗೆ ಕೋಪ ಮಾಡಿಕೊಂಡಿದ್ದಾಳೆ. ಪೊಲೀಸರ ಎದುರಿಗೆ ಅನು ಹಾಗೂ ಶಾರದಾ ದೇವಿ ಸುಳ್ಳು ಹೇಳಿರುವುದಕ್ಕೆ ಸಿಟ್ಟಾಗಿದ್ದಾಳೆ. ಯಾಕೆ ಮನೆಯಲ್ಲಿ ಎಲ್ಲರೂ ಒಂದೊಂದು ಸಲ, ಒಂದೊಂದು ರೀತಿ ಆಡುತ್ತೀರಾ ಎಂದು ಹೇಳಿದ್ದಾಳೆ.
ಇತ್ತ ಝೇಂಡೆ ಆರ್ಯವರ್ಧನ್ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದಾನೆ. ಮನೆಗೂ ಹೋಗಲಾಗದೇ, ಯಾವ ಫೋನಿಗೂ ಉತ್ತರಿಸಲಾಗದೇ ಒದ್ದಾಡುತ್ತಿದ್ದಾನೆ. ಮನೆಗೆ ಹೋಗಿ ಅಲ್ಲಿ ಪೊಲೀಸರು ಇರುವುದನ್ನು ಕಂಡು ವಾಪಸ್ ಓಡಿ ಬಂದಿದ್ದಾನೆ.

ಅನು ವಿಚಿತ್ರವಾದ ಮಾತುಗಳು!
ಅನು ರೆಡಿಯಾಗಿ ರೂಮಿನಿಂದ ಆಚೆ ಬಂದಿದ್ದಾಳೆ. ಆಗ ಹರ್ಷ ದಾದಾ ಇನ್ನೂ ಬಂದಿಲ್ವಾ ಎಂದು ಕೇಳಿದ್ದಕ್ಕೆ ಅನು ಇಲ್ಲ ಎಂದಿದ್ದಾಳೆ. ಈ ನಡುವೆ ಬಂದ ಮಾನ್ಸಿ ಸತ್ಯ ಗೊತ್ತಿದ್ದರೂ ಮುಚ್ಚಿಟ್ಟಿದ್ದು ಯಾಕೆ? ನೀವು ಮಾಡುತ್ತಿರುವುದು ಎಷ್ಟು ಸರಿ ಎಂದು ಅನುಳನ್ನು ಪ್ರಶ್ನಿಸಿದ್ದಾಳೆ. ಇದಕ್ಕೆ ಅನು ಆರ್ಯನ ಮೇಲೆ ಪ್ರೀತಿಯ ಮಾತುಗಳನ್ನು ಆಡಿದ್ದು, ಅವರನ್ನು ಹುಡುಕಲು ಹೋಗುವುದಾಗಿ ಹೇಳಿದ್ದಾಳೆ. ಆರ್ಯ ಬರಲಿಲ್ಲವೆಂದರೆ, ದೇವರನ್ನು ಕೇಳಿದರೆ ಸಿಗುತ್ತಾರೆ ಎಂಬಂತೆ ವಿಚಿತ್ರವಾಗಿ ಮಾತನಾಡಿದ್ದಾಳೆ.

ಅತ್ತಿಗೆ ನಡೆಯಿಂದ ಹರ್ಷನಿಗೆ ಗೊಂದಲ!
ಇತ್ತ ಮಾನ್ಸಿ, ಅನು ವರ್ತನೆಗೆ ಬೇಸತ್ತಿದ್ದು, ಆರ್ಯನ ಮೇಲೆ ಅನು ಇಟ್ಟಿರುವ ಪ್ರೀತಿ ನೋಡು ಎಂದು ಹರ್ಷನಿಗೆ ಬುದ್ಧಿವಾದ ಹೇಳಿದ್ದಾಳೆ. ಹರ್ಷ ಅನುಳನ್ನು ತಡೆದಿದ್ದಕ್ಕೆ, ಕೂಗಾಡಿದ್ದಾಳೆ. ನನ್ನನ್ನು ತಡೆಯಬೇಡ ಎಂದು ಹೇಳಿದ್ದಾಳೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ್ದಕ್ಕೆ ದೇವರನ್ನು ಹುಡುಕಿಕೊಂಡು ಹೊರಟಿರುವುದಾಗಿ ಹೇಳಿದ್ದಾಳೆ. ಇಷ್ಟೊತ್ತಿನಲ್ಲಿ ಬೇಡ ಎಂದಿದ್ದಕ್ಕೆ ನನಗೆ ಯಾವ ಭಯ ಇಲ್ಲ. ನಾನ್ಯಾರು ಅಂತ ಗೊತ್ತಾ..? ಸಾವನ್ನೇ ಗೆದ್ದು ಬಂದವಳು ಎಂದು ರಾಜನಂದಿನಿಯಂತೆ ಮಾತನಾಡುತ್ತಾಳೆ.

ಮರುಕಳಿಸಿದ ಘಟನೆ!
ಅನು ತಾನೇ ಕಾರನ್ನು ಓಡಿಸಿಕೊಂಡು ಹೋಗಿದ್ದಾಳೆ. ಇದನ್ನು ನೋಡಿದ ಹರ್ಷ ಶಾಕ್ ಆಗಿದ್ದಾನೆ. ಈ ಬಗ್ಗೆ ಅವರ ತಾಯಿ ಬಳಿ ಹೋಗಿ ಕೇಳಿದ್ದಾನೆ. ಆದರೆ ಶಾರದಾ ದೇವಿ ತಲೆಕೆಡಿಸಿಕೊಳ್ಳದೆ, ನಾನು ಕರೆಯದೇ ಬಂದವಳು ನನ್ನ ಮಗಳು. ಅವಳು ಎಲ್ಲಿಗೆ ಹೋದರೂ ಮತ್ತೆ ಬರುತ್ತಾಳೆ. ಆ ನಂಬಿಕೆ ನನಗಿದೆ. ದೇವರೇ ಅವಳನ್ನು ಕರೆಸಿಕೊಂಡಿರಬೇಕು. ಅದಕ್ಕೆ ದೇವರನ್ನು ಹುಡುಕಿಕೊಂಡು ಹೋಗಿದ್ದಾಳೆ ಎಂದು ಹೇಳುತ್ತಾಳೆ. ಇತ್ತ ಹೊಸಮನಿ ಅಜ್ಜಯ್ಯ ಹಳೆ ಘಟನೆಗಳು ಮರುಕಳಿಸುತ್ತಿದೆ. ಯಾವುದೋ ದೊಡ್ಡ ಅಪಾಯ ಕಾದಿದೆ ಎಂದು ಹೆದರಿಕೊಳ್ಳುತ್ತಾರೆ.


Click it and Unblock the Notifications











