ಪತಿಯಿಂದ ಸತ್ಯ ಮುಚ್ಚಿಟ್ಟ ಅನು ಸಿರಿಮನೆ!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯ ಹಾಗೂ ಝೇಂಡೇ ಬಣ್ಣವನ್ನು ಬಯಲು ಮಾಡಲು ಅನು ದೊಡ್ಡ ಪ್ಲಾನ್ ಒಂದನ್ನು ಮಾಡಿದ್ದಾಳೆ. ಇದೇ ವಿಚಾರವಾಗಿ ಮಾತನಾಡಲು ಹರ್ಷ, ಶಾನುಭೋಗರು, ಮೀರಾ ಎಲ್ಲರೂ ಒಟ್ಟಿಗೆ ಸೇರಿದ್ದಾರೆ.

ಇತ್ತ ಆರ್ಯವರ್ಧನ್ ಖುಷಿಯಲ್ಲಿರುತ್ತಾನೆ. ಇದಕ್ಕೆ ಕಾರಣ ಅನು ತನ್ನ ಪಾಲಿನ ಆಸ್ತಿಯನ್ನು ಕೇಳಿರುವುದು. ಈ ವಿಚಾರವನ್ನು ಝೇಂಡೇ ಬಳಿ ಆರ್ಯ ಹೇಳುತ್ತಿರುತ್ತಾನೆ. ಬಹಳ ವರ್ಷಗಳ ತನ್ನ ಕನಸು ನನಸಾಗುತ್ತಿದೆ ಎಂದು ಖುಷಿಪಟ್ಟಿರುತ್ತಾನೆ.

ಇನ್ನು ಮಾನ್ಸಿ ಹಾಗೂ ಹರ್ಷ ಇಬ್ಬರೂ ಮಾತನಾಡುವುದಕ್ಕಾಗಿ ಹೊರಟಿರುತ್ತಾರೆ. ಅದೂ ಕೂಡ ಮೀರಾ ಮನೆಗೆ ಎಂದು ತಿಳಿದ ಕೂಡಲೇ ಮಾನ್ಸಿ ನಾನು ಬರುವುದಿಲ್ಲ ಎಂದು ಹೇಳುತ್ತಾಳೆ. ಮೀರಾ ಮನೆಗೆ ನಾನು ಬರುವುದಿಲ್ಲ ಎಂದು ಹಠ ಮಾಡುತ್ತಾಳೆ.

ಝೇಂಡೇ ಇದ್ಯಾವುದನ್ನೂ ನಂಬುವುದಿಲ್ಲ!

ಝೇಂಡೇ ಇದ್ಯಾವುದನ್ನೂ ನಂಬುವುದಿಲ್ಲ!

ಆರ್ಯನ ಮಾತುಗಳನ್ನು ಝೇಂಡೇ ನಂಬುವುದಿಲ್ಲ ಇದಕ್ಕೆ ಕಾರಣ ಝೇಂಡೇಗೆ ಅನು ಮೇಲೆ ನಂಬಿಕೆಯೇ ಇರುವುದಿಲ್ಲ. ಅನು ಆಸ್ತಿಕೇಳಿದ್ದರೂ ಅದಕ್ಕೆ ಕಾರಣ ನಾನು. ನೀನು ಅನು ಬಳಿ ಇರುವ ಸತ್ಯವನ್ನೆಲ್ಲಾ ಹೇಳಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳುತ್ತಾನೆ. ಅಲ್ಲದೇ, ಅನು ನಾಟಕ ಮಾಡುತ್ತಿದ್ದಾಳೆ. ನೋಡುತ್ತಿರು ಆರ್ಯ ನಿನ್ನನ್ನು ಒಂದಲ್ಲ ಒಂದು ದಿನ ಬೀದಿಗೆ ತಂದು ನಿಲ್ಲಿಸುತ್ತಾಳೆ ಎಂದು ಝೇಂಡೇ ಎಷ್ಟು ಹೇಳಿದರೂ ಆರ್ಯ ನಂಬುವುದಿಲ್ಲ. ಆದರೆ ಆರ್ಯ ನಾನು ಅನುಳನ್ನು ನಂಬುತ್ತೀನಿ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಆರ್ಯನ ನಡೆ ಝೇಂಡೇಗೆ ಆತಂಕವನ್ನು ಹೆಚ್ಚು ಮಾಡುತ್ತದೆ.

ಅನು ಟೀಂ ಸೀಕ್ರೆಟ್ ಮೀಟಿಂಗ್!

ಅನು ಟೀಂ ಸೀಕ್ರೆಟ್ ಮೀಟಿಂಗ್!

ಇನ್ನು ಹರ್ಷವರ್ಧನ್, ಅನು ಸಿರಿಮನೆ, ಶಾನುಭೋಗರು ಹಾಗೂ ಮೀರಾ ಎಲ್ಲರೂ ಸೀಕ್ರೆಟ್ ಆಗಿ ಸೇರಿದ್ದಾರೆ. ಮೀರಾ ಮನೆಯಲ್ಲಿ ಎಲ್ಲರೂ ಭೇಟಿ ಮಾಡಿದ್ದಾರೆ. ಅನು ತನ್ನ ಮುಂದಿನ ಯೋಜನೆ ಬಗ್ಗೆ ಎಲ್ಲರಿಗೂ ವಿವರಿಸುತ್ತಾಳೆ. ಅಷ್ಟೇ ಅಲ್ಲದೇ, ಇಲ್ಲಿ ನಾವು ನಾಲ್ಕು ಜನರೂ ಮಾತನಾಡಿದ ಈ ವಿಚಾರ ಯಾವುದೇ ಕಾರಣಕ್ಕೂ ಈ ಮನೆಯಿಂದ ಎಲ್ಲೂ ಹೊರಗೆ ಹೋಗಬಾರದು ಎಂದು ಹೇಳುತ್ತಾಳೆ.

ಆಸ್ತಿ ಬಗ್ಗೆ ಸತ್ಯ ಬಿಚ್ಚಿಟ್ಟ ಅನು!

ಆಸ್ತಿ ಬಗ್ಗೆ ಸತ್ಯ ಬಿಚ್ಚಿಟ್ಟ ಅನು!

ಈ ಮಾತುಗಳೊಂದಿಗೆ ಮತ್ತೊಂದು ವಿಚಾರವನ್ನೂ ಅನು ಹೇಳುತ್ತಾಳೆ. ಅದೇನೆಂದರೆ ತಾನು ಆಸ್ತಿಯನ್ನು ತನ್ನ ಪಾಲಿಗೆ ಕೇಳಿದ್ದ ವಿಚಾರವನ್ನು ಹೇಳುತ್ತಾಳೆ. ಅದೇನೆಂದರೆ, ತಾನು ಆಸ್ತಿಯನ್ನು ತೆಗೆದುಕೊಳ್ಳುತ್ತಿಲ್ಲ. ಅದು ಸುಮ್ಮನೆ ತಾನು ಮಾಡಿದ್ದು ನಾಟಕ. ಯಾಕೆಂದರೆ, ತಾನು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದಿರುವುದರಿಂದ ಆರ್ಯ ನಡವಳಿಕೆಯಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳಲು ಈ ರೀತಿ ಯೋಜನೆ ಮಾಡಿದ್ದೇನೆ ಎಂದು ಹೇಳುತ್ತಾಳೆ.

ಆರ್ಯನಿಂದ ಮತ್ತೆ ಸತ್ಯ ಮುಚ್ಚಿಟ್ಟ ಅನು!

ಆರ್ಯನಿಂದ ಮತ್ತೆ ಸತ್ಯ ಮುಚ್ಚಿಟ್ಟ ಅನು!

ಇನ್ನು ಅನು ಹಾಗೂ ಆರ್ಯ ಇಬ್ಬರೂ ಮಾತನಾಡುತ್ತಿರುತ್ತಾರೆ. ಈ ವೇಳೆ ಅನುಗೆ ಆಗಾಗ ವಾಂತಿ ಮಾಡುವಂತೆ ಆಗುತ್ತಿರುತ್ತದೆ. ಆದರೆ, ಈ ವಿಚಾರ ಆರ್ಯನಿಗೆ ತಿಳಿಯದಂತೆ ನೋಡಿಕೊಳ್ಳುತ್ತಾಳೆ. ಅನು ಪ್ರಯತ್ನ ಪಡುತ್ತಿರುತ್ತಾಳೆ. ಇದನ್ನು ಆರ್ಯ ಗಮನಿಸುತ್ತಾನೆ. ಏನಾಯ್ತು ಅನು? ಏನಾದರೂ ಸಮಸ್ಯೆನಾ ಎಂದು ಕೇಳುತ್ತಾನೆ. ಆದರೆ, ಏನು ಎಂಬುದನ್ನು ಹೇಳುವುದಕ್ಕಾಗದೇ ಅನು ಆರ್ಯನನ್ನೇ ನೋಡುತ್ತಿರುತ್ತಾಳೆ. ಮುಂದಿನ ಎಪಿಸೋಡ್‌ನಲ್ಲಿ ಏನಾಗುತ್ತದೆ. ಆರ್ಯ ಹಾಗೂ ಮನೆಯವರಿಗೆಲ್ಲಾ ಅನು ಗರ್ಭಿಣಿ ಎಂಬ ವಿಚಾರ ಗೊತ್ತಾಗುತ್ತಾ ಎಂಬ ಕುತೂಹಲವಂತೂ ಸೃಷ್ಟಿಯಾಗಿದೆ.

More from Filmibeat

English summary
Jothe Jotheyali Serial Return Update On June 10th Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X