ಜೊತೆ ಜೊತೆಯಲಿ: ಅನುಗೆ ಆಟ, ಝೇಂಡೆಗೆ ಪ್ರಾಣ ಸಂಕಟ!

By ಪ್ರಿಯಾ ದೊರೆ

ಈಗ 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಮೊದಲಿನಂತೆ ಏನೂ ಇಲ್ಲ. ಆದರೂ ಎಲ್ಲವೂ ನಾರ್ಮಲ್ ಆಗಿಯೇ ಇದೆ ಎಂಬಂತೆ ಗೋಚರಿಸುತ್ತದೆ. ಯಾಕೆಂದರೆ, ಅನು ಸಿರಿಮನೆ, ಹರ್ಷವರ್ಧನ್, ಮೀರಾ ಎಲ್ಲರಿಗೂ ಆರ್ಯವರ್ಧನ್ ಹಾಗೂ ಝೇಂಡೇ ಆಟ ಗೊತ್ತಾಗಿದೆ. ಇನ್ನು ಪುಷ್ಪ ಹಾಗೂ ಶಾರದಾಗೆ ಅನು ರಾಜನಂದಿನಿ ಪುನರ್ಜನ್ಮ ಎಂದು ಅರ್ಥವಾಗಿದೆ.

ಅನು ಸಿರಿಮನೆ ಆಸ್ತಿಯಲ್ಲಿ ಪಾಲನ್ನು ಕೇಳಿದ್ದಾಳೆ. ಇದು ಆರ್ಯವರ್ಧನ್‌ಗೆ ಸಂತೋಷವನ್ನು ನೀಡಿದರೆ, ಮಾನ್ಸಿಗೆ ಅನುಮಾನ ಶುರುವಾಗಿದೆ. ಮೊದಲು ಬೇಡ ಎಂದಿದ್ದ ಅನು ಈಗ ಯಾಕೆ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾಳೆ ಎಂಬ ಹುಳ ಮಾನ್ಸಿ ತಲೆಯಲ್ಲಿದೆ. ಆದರೆ ಅನು ಆಸ್ತಿ ವಿಚಾರದಲ್ಲಿ ನಾಟಕವಾಡುತ್ತಿದ್ದಾಳೆ ಎಂಬುದು ಗೊತ್ತಿಲ್ಲ.

ಇನ್ನು ಮೀರಾ ಆರ್ಯವರ್ಧನ್‌ಗೆ ಫೈಲ್ ಒಂದನ್ನು ನೀಡಿ, ಸಹಿ ಹಾಕಲು ಹೇಳಿದ್ದಾಳೆ. ಆರ್ಯ ಸಹಿ ಹಾಕಿದ ಮೇಲೆ ಚೆಕ್ ಮಾಡಿಕೋ ಎಂದು ಹೇಳಿದ್ದಾರೆ. ಅದಕ್ಕೆ ಮೀರಾ ಇಲ್ಲ ಸರ್, ನೀವು ನೋಡಿರುವ ಫೈಲ್ ಅನ್ನು ನಾನ್ಯಾವತ್ತೂ ಚೆಕ್ ಮಾಡಿಲ್ಲ, ಮಾಡೋದು ಇಲ್ಲ. ನಂಬಿಕೆ ಇದೆ ಎಂದು ಹೇಳುತ್ತಾಳೆ. ಹಾಗೆಯೇ ಮನಸ್ಸಿನಲ್ಲಿ ನನಗಂತೂ ನಿಮ್ಮನ್ನು ಮೊದಲಿನಂತೆ ನೋಡೋದಕ್ಕೆ ಆಗುತ್ತಿಲ್ಲ. ನಿಮಗಾದರೂ ನಾನು ಮೊದಲಿನ ಮೀರಾಳಂತೆಯೇ ಇರುತ್ತೇನೆ ಎಂದು ಹೇಳಿಕೊಳ್ಳುತ್ತಾಳೆ.

ಆಸ್ತಿ ಪೇಪರ್‌ಗೆ ಸಹಿ ಹಾಕುವುದಷ್ಟೇ ಬಾಕಿ!

ಆಸ್ತಿ ಪೇಪರ್‌ಗೆ ಸಹಿ ಹಾಕುವುದಷ್ಟೇ ಬಾಕಿ!

ಅನು ಸಿರಿಮನೆ ಲಾಯರ್ ಬಳಿ ಹೋಗಿದ್ದಾಳೆ. ತನ್ನ ಪಾಲಿನ ಆಸ್ತಿಯ ಪೇಪರ್‌ಗಳನ್ನು ಸಿದ್ಧಪಡಿಸಿ ಬಂದಿದ್ದಾಳೆ. ಸಹಿ ಹಾಕುವುದಷ್ಟೇ ಬಾಕಿ ಇದೆ. ಇನ್ನು ಈ ವಿಚಾರವಾಗಿ ಶಾರದಾ ಕೇಳಿದ್ದಕ್ಕೆ, ಅನು ನಾಳೆ ಅಷ್ಟಮಿ ಅಂದೇ ಸಹಿ ಹಾಕುತ್ತೇನೆ. ಅಷ್ಟಮಿ ದಿನ ಸಹಿ ಹಾಕಿದರೆ, ಏನೋ ಸಮಾಧಾನ ಎನ್ನುತ್ತಾಳೆ. ಅದಕ್ಕೆ ಶಾರದಾ ಒಳ್ಳೆಯದಾಯ್ತು ಹಾಗಿದ್ದರೆ, ನಾಳೆ ಮನೆಯಲ್ಲಿ ವಿಶೇಷವಾದ ಪೂಜೆಯನ್ನು ಇಟ್ಟುಕೊಳ್ಳೋಣ ಎಂದು ಹೇಳುತ್ತಾಳೆ. ಇದಕ್ಕೆ ಅನು ಕೂಡ ಸರಿ ಹಾಗೆ ಮಾಡೋಣ ಎನ್ನುತ್ತಾಳೆ.

ಕಾಣೆಯಾಗಿರುವ ಹೊಸಮನಿ ಅಜ್ಜಯ್ಯ!

ಕಾಣೆಯಾಗಿರುವ ಹೊಸಮನಿ ಅಜ್ಜಯ್ಯ!

ಅಜ್ಜಯ್ಯನನ್ನು ಅನು ಸಿರಿಮನೆ ಕರೆಯುತ್ತಾಳೆ. ಆದರೆ ಕಾಣಿಸುವುದಿಲ್ಲ. ಆಗ ಮನೆಯೆಲ್ಲಾ ಹುಡುಕಾಡಿದರೂ ಅಜ್ಜಯ್ಯ ಎಲ್ಲಿಯೂ ಕಾಣಿಸುವುದಿಲ್ಲ. ಇದರಿಂದ ಭಯಗೊಳ್ಳುವ ಮನೆಯವರೆಲ್ಲಾ ಹುಡುಕಾಡುತ್ತಾರೆ. ಆದರೆ, ಅನು ನನಗೆ ಗೊತ್ತಿದೆ. ಇದನ್ನು ನಾನು ಹ್ಯಾಂಡಲ್ ಮಾಡುತ್ತೇನೆ. ಯಾರೂ ಯೋಚನೆ ಮಾಡಬೇಡಿ ಎಂದು ಹೇಳಿ, ಊಟ ತೆಗೆದುಕೊಂಡು ಆಫೀಸಿಗೆ ಹೋಗುತ್ತಾಳೆ.

ಅಜ್ಜಯ್ಯನಿಗೆ ಝೇಂಡೆ ಬೆದರಿಕೆ!

ಅಜ್ಜಯ್ಯನಿಗೆ ಝೇಂಡೆ ಬೆದರಿಕೆ!

ಇತ್ತ ಹೊಸಮನಿಯನ್ನು ಝೇಂಡೇ ಕರೆದುಕೊಂಡು ಹೋಗಿರುತ್ತಾನೆ. ಅನು ಯಾರು ಎಂಬ ಬಗ್ಗೆ ಪ್ರಶ್ನೆ ಮಾಡುತ್ತಾನೆ. ರಾಜನಂದಿನಿ ಪುನರ್ಜನ್ಮವೇ ಅನುನಾ ಎಂದು ಕೇಳುತ್ತಾನೆ. ಆದರೆ ಹೊಸಮನಿ ಏನೂ ಗೊತ್ತಿಲ್ಲ ಎಂಬಂತೆ ನಟಿಸುತ್ತಾನೆ. ಇದರಿಂದ ಕೋಪಗೊಳ್ಳುವ ಝೇಂಡೇ, ಹೊಸಮನಿ ಮಗನ ವಿಚಾರ ತೆಗೆದು ಹೆದರಿಸುತ್ತಾನೆ. ಆದರೆ, ಹೊಸಮನಿ ಹೆದರುವುದಿಲ್ಲ. ನನ್ನ ಮಗನೂ ದೊಡ್ಡವನಾಗಿದ್ದಾನೆ. ಅವನಿಗೂ ಎಲ್ಲಾ ಗೊತ್ತಾಗುತ್ತೆ. ನೀನೇನೂ ಮಾಡೋಕೆ ಆಗಲ್ಲ ಎಂದು ಹೇಳುತ್ತಾನೆ. ಇದರಿಂದ ಝೇಂಡೇ ಶಾಕ್ ಆಗುತ್ತಾನೆ.

ಅನು ಆಟಕ್ಕೆ ಝೇಂಡೆಗೆ ಕುತ್ತು!

ಅನು ಆಟಕ್ಕೆ ಝೇಂಡೆಗೆ ಕುತ್ತು!

ಆಫೀಸಿನಲ್ಲಿ ಆರ್ವರ್ಧನ್‌ಗೆ ಪ್ರೀತಿಯಿಂದ ಅಡುಗೆ ಮಾಡಿ ತಂದಿದ್ದೇನೆ. ಊಟ ಮಾಡಿ ಬನ್ನಿ ಎಂದು ಅನು ಕರೆಯುತ್ತಾಳೆ. ಅಷ್ಟೇ ಅಲ್ಲದೇ, ಝೇಂಡೇನೂ ಕರೆಯಿರಿ ಎನ್ನುತ್ತಾಳೆ. ಆಗ ಆರ್ಯವರ್ಧನ್ ಝೇಂಡೇಗೆ ಕರೆ ಮಾಡುತ್ತಾನೆ. ಎಲ್ಲಿದ್ದೀಯಾ ಎಂದು ಕೇಳುತ್ತಾನೆ. ಆಗ ಝೇಂಡೇ ತಾನಿರುವ ಜಾಗದ ಬಗ್ಗೆ ಹೇಳುತ್ತಾನೆ. ಇದನ್ನು ಕೇಳಿಸಿಕೊಳ್ಳುವ ಅನು, ಮೆಲ್ಲಗೆ ಮೆಸೇಜ್ ಮಾಡುತ್ತಾಳೆ. ಆದರೆ ಯಾರಿಗೆ ಮೆಸೇಜ್ ಮಾಡಿ ತಿಳಿಸುತ್ತಾಳೆ ಎಂಬುದು ಗೊತ್ತಾಗುವುದಿಲ್ಲ.

More from Filmibeat

English summary
Jothe Jotheyali Serial Update On June 14th Episode. Anu Making New Plan To Trap Arya Vardhan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X