ಅನುಗೆ ಆಸ್ತಿ ದಕ್ಕಲು ಬಿಡ್ತಾನಾ ಆರ್ಯವರ್ಧನ್?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಶಾರದಾ ದೇವಿಗೂ ಆರ್ಯನ ಬಗ್ಗೆ ಅರ್ಥವಾಗಿದೆ. ಅನು ಸಿರಿಮನೆ ಕಳೆದ 22 ವರ್ಷದಿಂದ ರಹಸ್ಯವಾಗಿದ್ದ ವಿಚಾರಗಳನ್ನೆಲ್ಲಾ ಈಗ ಬಯಲು ಮಾಡುತ್ತಿದ್ದಾಳೆ. ಒಬ್ಬೊಬ್ಬರಾಗೇ ಎಲ್ಲರಿಗೂ ಸತ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದು, ಇದೀಗ ಶಾರದಾ ದೇವಿಗೂ ಗೊತ್ತಾಗಿದೆ.
ಹೊಸಮನಿ ಅಜ್ಜಯ್ಯನನ್ನು ಝೇಂಡೇ ಕಿಡ್ನ್ಯಾಪ್ ಮಾಡಿದ್ದು ಎಂದು ತಿಳಿದ ಮೇಲೆ, ಮಾತ್ರೆ ಬದಲಾಯಿಸಿದ ವಿಚಾರ ಹಾಗೆಯೇ ಡೆತ್ ನೋಟ್ ಚೇಂಜ್ ಮಾಡಿದ್ದು ಗೊತ್ತಾಗಿದೆ. ಅಷ್ಟೇ ಅಲ್ಲದೇ, ಇದೆಲ್ಲಾ ಸತ್ಯ ಆರ್ಯನಿಗೂ ಗೊತ್ತಿದೆ ಎಂಬ ವಿಚಾರವನ್ನೂ ಅನು ಅರ್ಥ ಮಾಡಿಸಿದ್ದಾಳೆ. ಇದೀಗ ಮನೆಯಲ್ಲಿ ಅಷ್ಟಮಿ ಪೂಜೆ ಏರ್ಪಡಿಸಲಾಗಿದೆ.
ಆದರೆ ಶಾರದಾ ದೇವಿ ಬೇಸರಗೊಂಡಿದ್ದಾಳೆ. ತನ್ನ ಪರಿಸ್ಥಿತಿಯನ್ನು ನೆನೆದು ತಾನೇ ದುಃಖಿತಗೊಂಡಿದ್ದಾಳೆ. ಆರ್ಯನಿಗೆ ಗೊತ್ತಿದ್ದೂ ತನ್ನ ಮೇಲೆ ಆರೋಪ ಮಾಡಿದನಲ್ಲಾ ಎಂಬ ನೋವಿನಲ್ಲಿ ಶಾರದಾ ದೇವಿ ಇದ್ದಾಳೆ. ಈಗೇನು ಮಾಡಬೇಕು. ಯಾರನ್ನು ನಂಬಬೇಕು. ಯಾವುದು ಸರಿ ಎಂಬ ಗೊಂದಲ ಶಾರದಾ ಅವರ ಮನಸ್ಸಲ್ಲಿ ಮೂಡಿದೆ.

ಆತಂಕದಲ್ಲಿ ಅನು ಪೋಷಕರು!
ಇತ್ತ ಸುಬ್ಬು ಮತ್ತು ಪುಷ್ಪ ಅನು ಬಗ್ಗೆ ಯೋಚಿಸುತ್ತಿದ್ದಾರೆ. ಸುಬ್ಬು ಮಗಳ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಮಗಳಿಗೆ ಪುನರ್ಜನ್ಮದ ಕಥೆ ಹೇಳಿದ್ದಾರೆ. ಇದನ್ನೇ ನಂಬಿಕೊಂಡಿರುವ ಅನು ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾಳೆ. ಆ ಮನೆಯಲ್ಲಿ ಅವಳಿಗೆ ಏನು ಕಷ್ಟವಾಗುತ್ತಿದೆಯೋ ಏನೋ. ಮದುವೆಯಾದ ಮೇಲೆ ಅವಳ ಕಷ್ಟದ ಬಗ್ಗೆ ನಾವು ಒಂದು ದಿನವೂ ವಿಚಾರಿಸಿಕೊಂಡಿಲ್ಲ. ಪಾಪ ಅನು, ಹೇಗಾದರೂ ಮಾಡಿ ಅನುಳನ್ನು ಮನೆಗೆ ಕರೆದುಕೊಂಡು ಬರೋಣ. ಬಂದು ಅಲ್ಲಿ ಅವಳು ಸುಖವಾಗಿದ್ದಾಳಾ ಇಲ್ಲವಾ ಎಂದು ಕೇಳೋಣ. ಅಲ್ಲೇ ಕೇಳಿದರೆ, ಭಯಕ್ಕೆ ಹೌದು ಎನ್ನುತ್ತಾಳೆ.

ಶಾರದಾದೇವಿಯಿಂದ ಕಂಗಲಾದ ಅನು!
ಆರ್ಯನ ವಿಚಾರ ತಿಳಿದು ಶಾರದಾದೇವಿ ಶಾಕ್ ಆಗಿದ್ದಾಳೆ. ಹೀಗಿದ್ದರೂ, ಅಷ್ಟಮಿ ಪೂಜೆಗೆ ಶಾರದಾ ರೆಡಿಯಾಗಿದ್ದಾಳೆ. ಆದರೆ, ಅನು ಎಷ್ಟು ಮಾತನಾಡಿಸಿದರೂ ಹೆಚ್ಚೇನು ಮಾತನಾಡದ ಶಾರದಾ, ಆರ್ಯನ ಬಳಿ ನಾರ್ಮಲ್ ಆಗಿಯೇ ರಿಯಾಕ್ಟ್ ಮಾಡುತ್ತಾಳೆ. ಶಾರದಾ ಅವರ ಈ ನಡವಳಿಕೆಯನ್ನು ನೋಡಿ ಮಾನ್ಸಿ, ಹರ್ಷ ಹಾಗೂ ಅನು ಕೊಂಚ ಶಾಕ್ ಆಗಿದ್ದಾರೆ. ಪೂಜೆಗೆ ರೆಡಿಯಾಗಿ ಎಲ್ಲರೂ ಬಂದಿದ್ದಾರೆ. ಇದೇ ವೇಳೆಗೆ ಪುಷ್ಪ ಹಾಗೂ ಸುಬ್ಬು ಕೂಡ ಬರುತ್ತಾರೆ.

ಆಸ್ತಿ ವಿಚಾರ ತಿಳಿಸಿದ ಅನು!
ಅನು ಸಿರಿಮನೆ ತನ್ನ ಪಾಲಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಪುಷ್ಪ ಹಾಗೂ ಸುಬ್ಬುಗೆ ಗೊತ್ತಿಲ್ಲ. ಆದರೆ, ಅಷ್ಟಮಿ ದಿನದಂದು ಪೇಪರ್ ಗಳಿಗೆ ಸಹಿ ಹಾಕಲಿದ್ದು, ಅದಕ್ಕೋಸ್ಕರವೇ ಪೂಜೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗಿದೆ. ಮನೆಗೆ ಬಂದ ಸುಬ್ಬು ಹಾಗೂ ಪುಷ್ಪಗೆ ಈ ವಿಚಾರವನ್ನು ಅನು ಹೇಳಲು ಹೇಳುತ್ತಾಳೆ. ಶಾರದಾ ಅವರ ಪಾಲಿನ ಆಸ್ತಿಯನ್ನು ನನಗೆ ಬರೆಯಲು ಮುಂದಾದಾಗ ನಾನು ಬೇಡ ಎಂದು ಹೇಳಿದ್ದೆ. ಆದರೆ ಈಗ ನನಗೆ ಬೇಕು ಎಂದು ಕೇಳಿದ್ದು, ಅದರ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವುದಕ್ಕಾಗಿಯೇ ಈ ಪೂಜೆಯನ್ನು ಇಟ್ಟುಕೊಳ್ಳಲಾಗಿದೆ. ಈ ವಿಚಾರವನ್ನು ನಿಮಗೆ ಹೇಳಲು ಆಗಿರಲಿಲ್ಲ. ಆದರೆ, ಸಹಿ ಹಾಕುವ ಮುಂಚೆ ಹೇಳುವುದು ನನ್ನ ಧರ್ಮ ಎಂದು ಅನು ಹೇಳುತ್ತಾಳೆ.

ಆಸ್ತಿ ವಿಚಾರಕ್ಕೆ ಏನೆಲ್ಲಾ ಆಗುತ್ತೆ!
ಅನು ಪ್ಲಾನ್ ಒಂದನ್ನು ಮಾಡಿದ್ದು, ಸರಿಯಾದ ಸಮಯಕ್ಕೆ ಮೀರಾಗೆ ಕರೆ ಮಾಡಲು ಸೂಚಿಸಿದ್ದಾಳೆ. ಹಾಗಾಗಿ ಹರ್ಷ ಮೀರಾಗೆ ಫೋನ್ ಮಾಡಿ ಪೂಜೆಯ ಲೈವ್ ಶೇರ್ ಮಾಡಿದ್ದು, ಸರಿಯಾದ ಟೈಮ್‌ಗೆ ಕಾಲ್ ಮಾಡುವಂತೆ ಹೇಳಿದ್ದಾನೆ. ಮೀರಾ ಕೂಡ ಇದಕ್ಕೆ ಒಪ್ಪಿಕೊಂಡಿದ್ದು, ಪೂಜೆಯೂ ಇದೇ ಎಪಿಸೋಡ್ ನಲ್ಲಿ ಮುಗಿದಿದೆ. ಬಟ್ ಏನಾಗುತ್ತದೋ ಎಂಬ ಕುತೂಹಲ ಉಳಿಸಿದೆ.


Click it and Unblock the Notifications











