ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಪ್ಲಾನ್ ಸಕ್ಸಸ್: ಈಗೇನ್ ಮಾಡ್ತಾನೋ ಆರ್ಯವರ್ಧನ್?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಶಾರದಾದೇವಿ ಮನೆಯಲ್ಲಿ ಅಷ್ಟಮಿ ದಿನದಂದು ಹೋಮ ಮಾಡಲಾಗಿದೆ. ಮನೆಗೆ ಸುಬ್ಬು-ಪುಷ್ಪ ಕೂಡ ಬಂದಿದ್ದಾರೆ. ಝೇಂಡೆ ಕೂಡ ಉಪಸ್ಥಿತಿಯಲ್ಲಿದ್ದು, ಅನು ಮಾಡಿರುವ ಪ್ಲಾನ್ ಝೇಂಡೇಗೆ ಅರ್ಥವಾಗುತ್ತಿಲ್ಲ. ಇನ್ನು ಆರ್ಯನಿಗೆ ಇದ್ಯಾವ ವಿಚಾರವೂ ಗೊತ್ತಿಲ್ಲ.

ಶಾರದಾದೇವಿಗೆ ಎಲ್ಲಾ ಸತ್ಯವೂ ಅರ್ಥವಾಗಿದ್ದು, ಅನು ಹಾಗೂ ಹರ್ಷನ ಜೊತೆಗೆ ಮಾತನಾಡುತ್ತಿಲ್ಲ. ಶಾರದಾ ಅವರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಇಬ್ಬರೂ ಮೌನವಾಗಿದ್ದಾರೆ. ಮಾನ್ಸಿಗೆ ಈಗ ಆರ್ಯ ಹಾಗೂ ಅನು ನಡೆಯನ್ನು ತಿಳಿದುಕೊಳ್ಳಲಾಗದೇ ಗೊಂದಲಗೊಂಡಿದ್ದಾಳೆ. ಝೆಂಡೆ ಮಾತುಗಳನ್ನು ನಂಬಿದ ಆರ್ಯನ ಕಥೆ ಮುಂದೇನಾಗುತ್ತದೆಯೋ ಗೊತ್ತಿಲ್ಲ.

ಹೋಮ ಮುಗಿಯುತ್ತಿದ್ದಂತೆ ಮನೆಗೆ ಜೋಗ್ತವ್ವ ಬಂದಿದ್ದಾಳೆ. ಇದರಿಂದ ಶಾರದಾ ಹಾಗೂ ಅನು ಸಿರಿಮನೆ ಖುಷಿಪಟ್ಟಿದ್ದಾರೆ. ಜೋಗ್ತವ್ವ ನೀನು ಮಾಡುತ್ತಿರುವ ಕೆಲಸದ ಮೇಲೆ ಗಮನವಿರಲಿ. ಗೊತ್ತಿಲ್ಲದೇ ಮಾಡುವ ತಪ್ಪಿಗೂ ಗೊತ್ತಿದ್ದೂ ಮಾಡುವ ತಪ್ಪಿಗೂ ವ್ಯತ್ಯಾಸವಿದೆ. ಮೊದಲು ಮಾಡಿದ ತಪ್ಪನ್ನೇ ಈಗಲೂ ಮಾಡಬೇಡ. ಹಾಗೇನಾದರೂ ಮಾಡಿದರೆ ಕೆಲಸ ಕೆಟ್ಟೀತು ಜೋಕೆ ಎಂದು ಹೇಳಿದ್ದಾಳೆ.

ಜೋಗ್ತವ್ವ ಅನುಗೆ ಎಚ್ಚರಿಕೆ!

ಜೋಗ್ತವ್ವ ಅನುಗೆ ಎಚ್ಚರಿಕೆ!

ಈಗೇನು ಮಾಡುತ್ತಿದ್ದಿಯೋ ಅದರ ತಪ್ಪು ಸರಿಗಳನ್ನು ತಿಳಿದುಕೊಂಡು ಮುಂದುವರಿ. ಎಲ್ಲಾ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾಳೆ. ಮಹಾಮಂಗಳಾರತಿ ಮಾಡಿ ಅನು ಜೋಗ್ತವ್ವನಿಗೆ ಆರತಿ ನೀಡುತ್ತಾಳೆ. ನಂತರ ಜೋಗ್ತವ್ವ ಅಲ್ಲಿಂದ ಹೊರಡುತ್ತಾಳೆ. ಪೂಜೆ ಎಲ್ಲಾ ಮುಗಿದ ಮೇಲೆ ಆಸ್ತಿ ಪತ್ರಗಳಿಗೆ ಸಹಿ ಹಾಕುತ್ತಾಳೆ. ಶಾರದಾದೇವಿ ಖುಷಿ ಪಟ್ಟು ಈಗ ನನಗೆ ಸಮಾಧಾನವಾಯ್ತು. ನನ್ನ ಹೆಗಲ ಮೇಲಿದ್ದ ಹೊರೆಯನ್ನು ಇಳಿಸಿದಂತಾಯ್ತು ಎಂದು ಹೇಳುತ್ತಾಳೆ.

ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು!

ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು!

ಸುಬ್ಬು-ಪುಷ್ಪ, ಮಾನ್ಸಿ-ಹರ್ಷ ಎಲ್ಲರೂ ಈ ಸಂದರ್ಭದಲ್ಲಿ ಅಲ್ಲೇ ಇರುತ್ತಾರೆ. ಅನು ಸಹಿ ಹಾಕುವ ಮುಂಚೆ ಮಾತನಾಡುವ ಆರ್ಯ, ಅನುಗೆ ಕಂಗ್ರಾಟ್ಸ್ ಹೇಳುತ್ತಾನೆ. ಕಂಗ್ರಾಟ್ಸ್ ಹೇಳಿ, ಅನು ನೀನು ಏನೇ ಮಾಡಿದರೂ ಸರಿ ಇರುತ್ತದೆ. ನಿನ್ನ ನಿರ್ಧಾರವನ್ನು ನಾನೆಂದಿಗೂ ನಂಬುತ್ತೇನೆ ಎಂದು ಹೇಳುತ್ತಾನೆ. ನಂತರ ಅನು ಸಿರಿಮನೆ ಎಲ್ಲಾ ಪೇಪರ್ಸ್ ಗಳಿಗೂ ಸಹಿ ಹಾಕುತ್ತಾಳೆ.

ಪ್ಲ್ಯಾನ್ ಪ್ರಕಾರ ಆರ್ಯನಿಗೆ, ಮೀರಾ ಕಾಲ್!

ಪ್ಲ್ಯಾನ್ ಪ್ರಕಾರ ಆರ್ಯನಿಗೆ, ಮೀರಾ ಕಾಲ್!

ಬಳಿಕ ಆ ಪೇಪರ್ಸ್ ಗಳನ್ನು ಆರ್ಯನ ಕೈಗೆ ಕೊಡುತ್ತಾಳೆ. ಯಾಕೆ ಎಂದು ಕೇಳಿದ್ದಕ್ಕೆ ನೀವೊಮ್ಮೆ ಚೆಕ್ ಮಾಡಿ ಎಂದು ಹೇಳುತ್ತಾಳೆ. ಆರ್ಯ ನಾನ್ಯಾಕೆ ಎಂದು ಚೆಕ್ ಮಾಡುವುದು, ಎಂದರೂ ಬಿಡದ ಅನು ಚೆಕ್ ಮಾಡಿ ಸರ್ ಆಗಲೇ ನನಗೆ ಸಮಾಧಾನವಾಗುವುದು ಎನ್ನುತ್ತಾಳೆ. ಆಗ ಆರ್ಯ ಪೇಪರ್ಸ್‌ಗಳನ್ನು ಚೆಕ್ ಮಾಡಲು ಮುಂದಾಗುತ್ತಾನೆ. ಅದೇ ಸಮಯಕ್ಕೆ ಮೀರಾ ಕರೆ ಮಾಡುತ್ತಾಳೆ. ಅರ್ಜೆಂಟ್ ಆಗಿ ಆಫೀಸಿಗೆ ಬರಬೇಕು ಸಿಎಂ ಜೊತೆ ಮೀಟಿಂಗ್ ಇದೆ ಎನ್ನುತ್ತಾಳೆ. ಆರ್ಯ ಆಗಲ್ಲ ಎಂದರೂ ಬಿಡದ ಮೀರಾ ಬಲವಂತ ಮಾಡುತ್ತಾಳೆ. ಅನು ಕೂಡ ಆಫೀಸಿಗೆ ಹೋಗುವಂತೆ ಹೇಳುತ್ತಾಳೆ. ದಾರಿಯಲ್ಲೇ ಪೇಪರ್ಸ್ ಗಳನ್ನು ಚೆಕ್ ಮಾಡಲು ಹೇಳುತ್ತಾಳೆ.

ಪೇಪರ್ಸ್ ಓದಲು ಬಿಡದ ಮೀರಾ!

ಪೇಪರ್ಸ್ ಓದಲು ಬಿಡದ ಮೀರಾ!

ಆಫೀಸಿಗೆ ಹೋದ ಆರ್ಯ ಪೇಪರ್‌ಗಳನ್ನು ಓದಲು ಯತ್ನಿಸುತ್ತಾನೆ. ಆದರೆ ಮೀರಾ ಇದಕ್ಕೆ ಬಿಡದೇ, ಏನಾದರೂ ಒಂದು ಹೇಳುತ್ತಾ ಮಾತು ಗಮನವನ್ನು ತನ್ನತ್ತ ಸೆಳೆಯುತ್ತಿರುತ್ತಾಳೆ. ಆದರೆ ಆರ್ಯ ಪೇಪರ್‌ಗಳನ್ನು ಓದುತ್ತಿರುತ್ತಾನೆ. ಅಷ್ಟರಲ್ಲಿ ಝೇಂಡೇ ಕರೆ ಮಾಡಿ ಆರ್ಯನನ್ನು ಡಿಸ್ಟರ್ಬ್ ಮಾಡುತ್ತಾನೆ. ಆಗ ಆರ್ಯ ಪೇಪರ್ಸ್ ಗಳನ್ನು ಮೀರಾ ಚೆಕ್ ಮಾಡಲು ಹೇಳುತ್ತಾನೆ. ಮೀರಾ ಚೆಕ್ ಮಾಡಿ ಎಲ್ಲಾ ಸರಿ ಇದೆ. ಅನು ಮೇಲೆ ನಂಬಿಕೆ ಇದೆ ಎಂದಾಗ ಆರ್ಯ ಆ ಫೈಲ್ ಅನ್ನು ಎತ್ತಿಡುತ್ತಾನೆ.

More from Filmibeat

English summary
Jothe Jotheyali Serial Update On June 17th Episode, Aryavardhan Secret Reveal,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X