ಜೊತೆಜೊತೆಯಲಿ: ಹರ್ಷನಿಗೆ ವಿಷವಿಟ್ಟ ಆರ್ಯವರ್ಧನ್!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೆ ಕೊಟ್ಟ ಟೀಯಲ್ಲಿ ಮತ್ತು ಬರುವ ಔಷಧಿ ಇತ್ತು ಎಂಬುದು ಮೀರಾಗೆ ಗೊತ್ತಾಗಿದೆ. ಈಗ ಅದೇ ವಿಚಾರವನ್ನು ಅನುಗೆ ತಿಳಿಸಲು ಮನೆಗೆ ಬಂದಿದ್ದಾಳೆ.

ಆರ್ಯನ ಸ್ಥಿತಿಯನ್ನು ನೋಡಿ ನೊಂದುಕೊಂಡ ಮೀರಾ, ಬೇಸರ ಮಾಡಿಕೊಳ್ಳುತ್ತಾಳೆ. ಅವರ ಮೇಲೆ ನನಗೆ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ. ನನಗೆ ಅವರ ಮುಂದೆ ಯಾವ ವಿಚಾರವನ್ನೂ ಮಾತನಾಡಲು ಇಷ್ಟವಿಲ್ಲ ಎನ್ನುತ್ತಾಳೆ.

ಅದಕ್ಕೆ ಅನು ಸಿರಿಮನೆ ಮಾತನಾಡಿ, ನೀನು ಆರ್ಯ ಸರ್‌ನ ಪ್ರೀತಿಸುತ್ತಿದ್ದೀಯಾ. ಅದಕ್ಕೆ ನಿನಗೆ ನೋವಾಗುತ್ತಿದೆ. ಸಂಕಟ ಅನುಭವಿಸುತ್ತಿದ್ದೀಯಾ ಎಂದು ಅನು, ಮೀರಾಗೆ ಇರುವ ಸತ್ಯವನ್ನು ಹೇಳುತ್ತಾಳೆ.

Recommended Video

'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ ಹೊಸ ಸಿನಿಮಾ ಹೇಗಿರುತ್ತೆ? | #meghashetty

ಹರ್ಷ ಕುಡಿಯುವ ಟೀಯಲ್ಲಿ ಏನಿತ್ತು..?

ಹರ್ಷ ಕುಡಿಯುವ ಟೀಯಲ್ಲಿ ಏನಿತ್ತು..?

ಝೇಂಡೇ ನಿತ್ಯ ಹರ್ಷನಿಗೆ ತಂದು ಕೊಡುತ್ತಿದ್ದ ಟೀಯಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸುತ್ತಿದ್ದರು. ಅನುಮಾನಗೊಂಡ ಮೀರಾ ಹಾಗೂ ಅನು ಆ ಟೀಯನ್ನು ಲ್ಯಾಬ್‌ಗೆ ಕಳಿಸಿದ್ದರು. ಈಗ ಅದರ ರಿಪೋರ್ಟ್ ಬಂದಿದ್ದು, ಅದರಲ್ಲಿ ಮತ್ತು ಬರುವ ಔಷಧಿ ಬೆರೆಸಲಾಗಿತ್ತು ಎಂಬ ಸತ್ಯ ತಿಳಿಯುತ್ತದೆ. ಇದರಿಂದ ಅನು ಸಿರಿಮನೆ ಶಾಕ್ ಆಗುತ್ತಾಳೆ.

ಮೀರಾಗೆ ಆರ್ಯನ ಬಗ್ಗೆ ಅನುಮಾನ ಹೆಚ್ಚಾಯ್ತು!

ಮೀರಾಗೆ ಆರ್ಯನ ಬಗ್ಗೆ ಅನುಮಾನ ಹೆಚ್ಚಾಯ್ತು!

ಇನ್ನು ಮೀರಾ ಮಾತು ಮುಂದುವರೆಸುತ್ತಾ, "ಝೇಂಡೆ ಸದಾ ಹರ್ಷ ಕೆಲಸ ಮಾಡುವುದು ಪ್ರಯೋಜನವಿಲ್ಲ ಎಂದು ಪ್ರೂವ್ ಮಾಡುವುದಕ್ಕೆ ಕಾಯುತ್ತಿದ್ದಾರೆ. ಯಾಕೆ ಆರ್ಯ ಸರ್ ಹಾಗೂ ಝೇಂಡೇ ಒಟ್ಟಿಗೆ ಇರುತ್ತಾರೆ? ಇಬ್ಬರ ನಡುವಿನ ಸಂಬಂಧವೇನು? ನನಗೆ ಈ ಆಕ್ಸಿಡೆಂಟ್ ಕೂಡ ನಿಜ ಅನ್ನಿಸುತ್ತಿಲ್ಲ" ಎಂದು ಹೇಳುತ್ತಾಳೆ. ಇದಕ್ಕೆ ಅನು ನನಗೆಲ್ಲಾ ಅರ್ಥವಾಗುತ್ತದೆ. ಎಲ್ಲವನ್ನೂ ಹುಷಾರಾಗಿ ಹ್ಯಾಂಡಲ್ ಮಾಡಬೇಕು. ಇನ್ನೊಂದು ಪ್ಲ್ಯಾನ್ ಇದೆ. ಅದನ್ನು ಎಕ್ಸಿಕ್ಯೂಟ್ ಮಾಡಬೇಕು ಎಂದರೆ, ಆರ್ಯ ಎಚ್ಚರವಾಗಬೇಕು ಎಂದು ಅನು ಹೇಳುತ್ತಾಳೆ.

ಅನು, ರಾಜನಂದಿನಿ ಮರುಜನ್ಮ ಎಂದ ಶಾರದ!

ಅನು, ರಾಜನಂದಿನಿ ಮರುಜನ್ಮ ಎಂದ ಶಾರದ!

ರಾಜನಂದಿನಿ ಹಾಗೂ ಅನು ಸಿರಿಮನೆ ಇಬ್ಬರೂ ಒಬ್ಬರೇ ಎಂಬ ಸತ್ಯ ಶಾರದಾಗೆ ಗೊತ್ತಾಗಿದೆ. ಆದರೆ, ಪುಷ್ಪಾಗೆ ಗೊತ್ತಿಲ್ಲ. ಪುಷ್ಪ ತಮ್ಮ ಮನೆಯಲ್ಲಿ ಅನು ಇದ್ದಾಗ ಏನೆಲ್ಲಾ ಆಯಿತು ಎಂಬುದನ್ನು ಹೇಳಿದ್ದಾಳೆ. ಪುಷ್ಪ ಮಾತನ್ನು ಕೇಳಿ, ಇದೆಲ್ಲವೂ ನನಗೆ ಗೊತ್ತು ಪುಷ್ಪ. ರಾಜನಂದಿನಿಯೇ ಅನು. ಇದು ಇವಳ ಪುನರ್ಜನ್ಮ ಎಂದು ಹೇಳುತ್ತಾಳೆ. ಶಾರದಾ ಈ ಬಗ್ಗೆ ಉದಾಹರಣೆಗಳನ್ನು ಕೊಟ್ಟು ಅರ್ಥಮಾಡಿಸುತ್ತಾಳೆ. ನಂತರ ಇಬ್ಬರೂ ಮನೆಗೆ ಬರುತ್ತಾರೆ.

ಸಿಹಿ ಸುದ್ಧಿ ಕೊಡುತ್ತಾರಾ ಅನುಸಿರಿಮನೆ?

ಸಿಹಿ ಸುದ್ಧಿ ಕೊಡುತ್ತಾರಾ ಅನುಸಿರಿಮನೆ?

ಇನ್ನು ಅನುಗೆ ಯಾವ ಊಟವೂ ಸೇರುತ್ತಿಲ್ಲ. ಮನೆಯವರೆಲ್ಲರೂ ಅನುಗೆ ಆರ್ಯಗೆ ಆಕ್ಸಿಡೆಂಟ್ ಆಗಿರುವುದಕ್ಕೆ ಹೀಗೆ ನಡೆದುಕೋಳ್ಳುತ್ತಿದ್ದಾಳೆ ಎಂದು ಅಂದುಕೊಂಡಿದ್ದಾರೆ. ಆದರೆ ಅನು ನನಗೆ ಮಾವಿನಕಾಯಿ ಗೊಜ್ಜು, ಉಪ್ಪಿನಕಾಯಿ, ಹುಳಿ ತಿನ್ನಬೇಕು ಎನ್ನಿಸುತ್ತಿದೆ ಎಂದು ಮಂದಾರ ಬಳಿ ಹೇಳುತ್ತಾಳೆ. ಈ ಮಾತನ್ನು ಕೇಳಿ ಮಂದಾರ ಖುಷಿ ಪಟ್ಟಿದ್ದಾಳೆ. ಈ ಮಾತಿನ ಅರ್ಥ ಅನು ತಾಯಿಯಾಗುತ್ತಿದ್ದಾಳೆ ಎಂಬುದನ್ನು ಸೂಚಿಸಿದೆ.

ಅನುನೇ ರಾಜನಂದಿನಿ ಎಂದು ಒಪ್ಪಿದ ಪುಷ್ಪ!

ಅನುನೇ ರಾಜನಂದಿನಿ ಎಂದು ಒಪ್ಪಿದ ಪುಷ್ಪ!

ಇತ್ತ ಸುಬ್ಬುಗೆ ಅಂಗಡಿಯ ಮಾಲೀಕ ಹೇಳಿದ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ಝೇಂಡೆ ಹಾಗೂ ಆರ್ಯವರ್ಧನ್ ಬಗ್ಗೆ ಕೆಲ ವಿಚಾರಗಳನ್ನು ಹೇಳುತ್ತಾನೆ. ಹುಚ್ಚನ ಬಗ್ಗೆ ಹೇಳಿದ್ದಲ್ಲದೆ, ತನಗೆ ಝೇಂಡೆ ಧಮ್ಕಿ ಹಾಕಿದ್ದರ ಬಗ್ಗೆಯೂ ಹೇಳುತ್ತಾನೆ. ಇತ್ತ ಅನು ಬಳಿ ಬಂದು ಶಾರದಾ ಹಾಗೂ ಪುಷ್ಪ ನಡೆದಿದ್ದನ್ನೆಲ್ಲಾ ಹೇಳುತ್ತಾರೆ. ಪುಷ್ಪ ಅನುಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ. ತನಗೆ ರಾಜನಂದಿನಿ ಹಾಗೂ ಅನು ಜನ್ಮದ ಬಗ್ಗೆ ಹೇಳುತ್ತಾಳೆ.

More from Filmibeat

English summary
Jothe Jotheyali Serial Return Update On June 2nd Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X