ಆರ್ಯನಿಗೆ ಆಕ್ಸಿಡೆಂಟ್ ಆಗೇ ಇಲ್ಲ: ಇದೂ ಸುಳ್ಳು ಕಥೆ!?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಪುಷ್ಪ ಹಾಗೂ ಶಾರದಾ ಇಬ್ಬರೂ ಮಗಳನ್ನು ತಮ್ಮ ಮಗಳೆಂದು ಒಪ್ಪಿಕೊಂಡಿದ್ದಾರೆ. ಇದರಿಂದ ಖುಷಿಪಟ್ಟಿರುವ ಅನು, ನನ್ನ ಕೆಲಸವನ್ನು ಸುಲಭ ಮಾಡಿದ್ದೀರಾ ಎಂದು ಪುಷ್ಪಾಗೆ ಹೇಳಿದ್ದಾಳೆ.
ಪುಷ್ಪಾ ಅಳುತ್ತಾ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ನನ್ನನ್ನು ಕ್ಷಮಿಸು ಮಗಳೇ ಎಂದು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾರೆ. ಅನು ಪುಷ್ಪ ಅವರನ್ನು ಸಮಾಧಾನ ಮಾಡುತ್ತಾಳೆ.
ನಂತರ ಅನು ಈ ವಿಚಾರವನ್ನು ಯಾವುದೇ ಕಾರಣಕ್ಕೂ ಆರ್ಯವರ್ಧನ್ ಅವರಿಗೆ ಹೇಳಬಾರದು. ನಾನಾಗೇ, ನನ್ನದೇ ರೀತಿಯಲ್ಲಿ ನಾನು ಅವರಿಗೆ ಹೇಳುತ್ತೇನೆ ಎಂದು ಅನು ಪುಷ್ಪ ಹಾಗೂ ಶಾರದಾ ಬಳಿ ಮಾತು ತೆಗೆದುಕೊಳ್ಳುತ್ತಾಳೆ.
Recommended Video


ಝೇಂಡೆ ಕೈಗೆ ಸಿಕ್ಕಿ ಬಿದ್ದ ಸುಬ್ಬು!
ಈಗ ಸುಬ್ಬು ತಲೆಯಲ್ಲಿ ಆರ್ಯನ ಹಿಂದಿನ ಜೀವನದ ಬಗ್ಗೆ ಅಂಗಡಿ ಮಾಲೀಕ ಹೇಳಿರುವ ಮಾತುಗಳೇ ಸುತ್ತುತ್ತಿವೆ. ನಿಜಕ್ಕೂ ಆರ್ಯನ ಜೀವನದ ಬಗ್ಗೆ ತಿಳಿದುಕೊಳ್ಳುವ ತರಾತುರಿಯಲ್ಲಿರುವ ಸುಬ್ಬು ಕಣ್ಣಿಗೆ ಝೇಂಡೆ ಬಿದ್ದಿದ್ದಾರೆ. ಝೇಂಡೆ ಸುಬ್ಬು ಬಳಿ ಬಂದು ಒಟ್ಟಿಗೆ ಕಾರಿನಲ್ಲಿ ಹೋಗೋಣ ಬನ್ನಿ ಎಂದು ಕರೆದಿದ್ದಾನೆ. ಆದರೆ, ಸುಬ್ಬು ನಿಮಗೂ ಆರ್ಯಸರ್ ಗೂ ಎಷ್ಟು ವರ್ಷದ ಸ್ನೇಹ ಎಂದು ಕೇಳಿದ್ದಾನೆ. ಅದಕ್ಕೆ ಝೇಂಡೆ ಎಷ್ಟು ವರ್ಷ ಅಂತ ಹೇಳಿ, ಸುಮಾರು ವರ್ಷಗಳಿಂದ ಆರ್ಯ ಜೊತೆಗೆ ಇದ್ದೇನೆ. ಅವರ ಬದುಕಿನ ಆಗುಹೋಗುಗಳು ತಿಳಿದಿವೆ ಎಂದು ಝೇಂಡೆ ಹೇಳುತ್ತಾರೆ. ಮುಂದೆ ಏನು ಕೇಳಬೇಕು ಎಂಬುದು ಗೊತ್ತಾಗದೇ, ಸುಬ್ಬು ಸುಮ್ಮನೆ ಕಾರನ್ನು ಹತ್ತುತ್ತಾನೆ.

ಆರ್ಯನ ಆರೋಗ್ಯದ ಬಗ್ಗೆ ವೈದ್ಯರು ನಕಲಿ ರಿಪೋರ್ಟ್!
ಆರ್ಯ ಮಲಗಿದ್ದಲ್ಲೇ ಪ್ರಜ್ಞೆ ಇಲ್ಲದೇ ಮಲಗಿದ್ದಾನೆ. ವೈದ್ಯರು ಮನೆಗೆ ಬಂದು ಆರ್ಯನ ಪರೀಕ್ಷೆ ಮಾಡಿದ್ದಾರೆ. ಚಿಕಿತ್ಸೆಯ ಅವಶ್ಯಕತೆ ಬಿದ್ದರೆ, ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಫಾರಿನ್‌ಗೂ ಕರೆದುಕೊಂಡು ಹೋಗಬೇಕಾಗ ಬರಬಹುದು. ಮುಂದೆ ನೋಡೋಣ ಎನ್ನುತ್ತಾರೆ. ಇದಕ್ಕೆ ಹರ್ಷವರ್ಧನ್ ಸರಿ ಡಾಕ್ಟರ್ ನೀವು ಹೇಳಿದಂತೆ ಮಾಡುತ್ತೇವೆ. ದಾದಾಗೋಸ್ಕರ ಎಲ್ಲಿಗೆ ಬೇಕಿದ್ದರು ಕರೆದುಕೊಂಡು ಹೋಗುತ್ತೇವೆ ಎನ್ನುತ್ತಾನೆ. ಅದಕ್ಕೆ ಡಾಕ್ಟರ್ ಸ್ವಲ್ಪ ಹಳೆಯ ವಿಚಾರಗಳನ್ನು ಅವರ ಎದುರಿಗೆ ಮಾತನಾಡಲು ಶುರು ಮಾಡಿ ಎಂದು ಹೇಳಿ ಹೋಗುತ್ತಾರೆ.

ಅನು ನಡವಳಿಕೆಯಿಂದ ಆರ್ಯ ಅಚ್ಚರಿ!
ಯಾರೂ ಇಲ್ಲದಾಗ ಅನು ನಾನ್ ಸತ್ತಮೇಲೆ ನನ್ನದೇ ಮನೆಯಲ್ಲೇ ಎಷ್ಟು ಅರಾಮಾಗಿ ಬದುಕುತ್ತಿದ್ದೀಯಾ ಅಲ್ವಾ ಆರ್ಯ.? ನಾನು ಅದನ್ನ ಬೇಕಿದ್ದರೂ ಕ್ಷಮಿಸುತ್ತೀನಿ. ಆದರೆ ನನ್ನ ತಾಯಿಯನ್ನ ಯಾಮಾರಿಸಿದ್ದೀಯಾ. ನನ್ನ ತಮ್ಮ ಹರ್ಷನ ಬದುಕನ್ನು ಹಾಳು ಮಾಡಿದ್ದೀಯಾ. ಅದನ್ನ ಯಾವತ್ತೂ ಕ್ಷಮಿಸಲ್ಲ. ಬಹುಷಃ ನೀನು ಇಷ್ಟು ನೆಮ್ಮದಿಯಾಗಿ ನಿದ್ದೆ ಮಾಡಿದ್ದೇ ಇಲ್ಲ ಅನ್ಸತ್ತ. ಒಬ್ಬರನ್ನ ನಂಬಿ, ನಂಬಿಕೆ ದ್ರೋಹ ಆಗೋದು ಹೇಗೆ ಅನ್ನೋದನ್ನ ನೀನು ನೋಡೇ ನೋಡುತ್ತೀಯಾ. ನೀನು ಮಾಡಿದ ಪಾಪದ ಲೆಕ್ಕಗಳೇಲ್ಲಾ ಚುಪ್ತ ಆಗೇ ಆಗುತ್ತೆ. ಆಗಲೇ ಬೇಕು ಆರ್ಯ ಎಂದು ಕರೆಯುತ್ತಾಳೆ. ಆಗ ಆರ್ಯ ಎಚ್ಚರಗೊಳ್ಳುತ್ತಾನೆ.

ಎಚ್ಚರಗೊಂಡ ಆರ್ಯ!
ಆರ್ಯ ಎದ್ದ ಮೇಲೆ ಅನು ನನ್ನ ಬಿಟ್ಟು ಹೋಗಬೇಡ ಅನು. ಪ್ಲೀಸ್ ಅನು ನನ್ನ ಬಿಟ್ಟು ಹೋಗಬೇಡ ಎಂದು ಹೇಳುತ್ತಾನೆ. ಅನು ನೀನು ನನ್ನ ಆರ್ಯ ಎಂದು ಕರೆದೆಯಾ ಎಂದು ಕೇಳುತ್ತಾನೆ ಅದಕ್ಕೆ ಅನು ಇಲ್ಲ ಸರ್ ನಾನು ನಿಮ್ಮನ್ನ ಹೆಸರಿಟ್ಟು ಕರೆಯುವುದಿಲ್ಲ. ಯಾವತ್ತಿದ್ದರೂ ಅನುಗೆ ನೀವು ಆರ್ಯ ಸರ್ ಎಂದು ಹೇಳುತ್ತಾಳೆ. ಇನ್ನು ಆರ್ಯ, ನಾನು ಬದುಕಿರುವುದಕ್ಕೆ ಡಾಕ್ಟರ್ ಕೊಟ್ಟ ಟ್ರೀಟ್ ಮೆಂಟ್ ಕಾರಣವಲ್ಲ, ನಿನ್ನ ಪ್ರೀತಿ, ಭಕ್ತಿ ನನ್ನನ್ನು ಉಳಿಸಿಕೊಂಡಿದೆ ಎಂದು ಹೇಳುತ್ತಾನೆ.

ಅನುಗೆ ಶಾಕ್ ಗೊಟ್ಟ ಆರ್ಯ!
ಇನ್ನು ಶಾರದಾ, ಆರ್ಯನನ್ನು ರೆಸ್ಟ್ ಮಾಡುವಂತೆ ಹೇಳುತ್ತಾಳೆ. ಆಗ ಆರ್ಯ ಶಾರದಾ ಅವರ ಬಳಿ ಅಮ್ಮ, ಮಗಳು ಸೇರಿಕೊಂಡು ನನ್ನನ್ನು ಇನ್ನು ಎಷ್ಟು ಕಟ್ಟಾಕಬೇಕು ಅಂದುಕೊಂಡಿದ್ದೀರಾ ಎಂದು ಹೇಳುತ್ತಾನೆ. ಈ ಮಾತಿಗೆ ಶಾರದಾ ಹಾಗೂ ಅನು ಶಾಕ್ ಆಗುತ್ತಾರೆ.


Click it and Unblock the Notifications











