ಗರ್ಭಿಣಿ ಆದ ಕೂಡಲೇ ತನ್ನ ಪಾಲಿನ ಆಸ್ತಿ ಕೇಳಿದ ಅನು!

By ಪ್ರಿಯಾ ದೊರೆ

ರಾಜನಂದಿನಿ ಆತ್ಮ ಅನುಗೆ ಆಗಾಗ್ಗೆ ತನ್ನ ರೂಪದಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಅನು ಮಾಡುತ್ತಿರುವ ಕೆಲ ನಿರ್ಧಾರಗಳನ್ನು ಹಿಯಾಳಿಸುತ್ತಿದೆ. ಅನು ತಾಯಿಯಾಗುತ್ತಿರುವುದಕ್ಕೆ ಕಂಗ್ರ್ಯಾಟ್ಸ್ ಹೇಳುವ ಮೂಲಕ ಎಲ್ಲವನ್ನೂ ಬಿಟ್ಟು ಬಿಡು. ಆರ್ಯ ನನಗೆ ಮಾಡಿದ ಮೋಸ, ಅನ್ಯಾಯವನ್ನು ಮರೆತು ಬಿಡು. ಅರಾಮಾಗಿರು, ಈಗ ನೀನು ತಾಯಿಯಾಗುತ್ತಿದ್ದೀಯಾ, ಅದನ್ನು ಸಂಭ್ರಮಿಸು ಎಂದು ಚುಚ್ಚು ಮಾತುಗಳನ್ನು ಆಡಿದೆ ರಾಜನಂದಿನಿ ಆತ್ಮ. ಈ ಮಾತುಗಳನ್ನು ಕೇಳಿ ಅನುಗೆ ತಲೆ ಕೆಟ್ಟಂತಾಗಿ ಏನಾದರೂ ಒಂದು ನಿರ್ಧಾರಕ್ಕೆ ಬರಲೇಬೇಕು. ಈಗ ನಾನು ಒಬ್ಬಳಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.

ಇದರಿಂದ ಶಾಕ್ ಆಗಿರುವ ಅನು, ಈ ವಿಚಾರವನ್ನು ಯಾರ ಬಳಿ ಶೇರ್ ಮಾಡಿಕೊಳ್ಳಬೇಕು.? ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾಳೆ. ಮುಂದೆ ಹೇಗೆ ಎಲ್ಲವನ್ನೂ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದಾಳೆ ಅನು ಸಿರಿಮನೆ. ಈ ಸೇಡು, ಧ್ವೇಷ ಎಲ್ಲವನ್ನೂ ಬಿಟ್ಟು ಬಿಡೋಣ.

ಈಗ ಎಲ್ಲವೂ ಹೇಗೆ ಇದಿಯೋ ಅದೆಲ್ಲವೂ ಹಾಗೆಯೇ ಇದ್ದುಬಿಡಲಿ ಎಂಬ ಆಲೋಚನೆಯನ್ನೂ ಅನು ಮಾಡುತ್ತಿದ್ದಾಳೆ. ಇದರಿಂದ ಅನು ಈಗ ತುಂಬಾನೇ ತಲೆ ಕೆಡಿಸಿಕೊಂಡಿದ್ದಾಳೆ.

ರಾಜನಂದಿನಿ ಆತ್ಮ ಅನು ರೂಪದಲ್ಲಿ!

ರಾಜನಂದಿನಿ ಆತ್ಮ ಅನು ರೂಪದಲ್ಲಿ!

ಅನು ಮಾಡುತ್ತಿರುವ ಕೆಲ ನಿರ್ಧಾರಗಳನ್ನು ಹಿಯಾಳಿಸುತ್ತಿದೆ ರಾಜನಂದಿನಿ ಆತ್ಮ. ಈಗ ಕಂಗ್ರ್ಯಾಟ್ಸ್ ಹೇಳುವ ಮೂಲಕ ಎಲ್ಲವನ್ನೂ ಬಿಟ್ಟು ಬಿಡು, ಆರ್ಯ ನನಗೆ ಮಾಡಿದ ಮೋಸ, ಅನ್ಯಾಯವನ್ನು ಮರೆತು ಬಿಡು, ಅರಾಮಾಗಿರು, ಈಗ ನೀನು ತಾಯಿಯಾಗುತ್ತಿದ್ದೀಯಾ, ಅದನ್ನು ಸಂಭ್ರಮಿಸು ಎಂದು ಚುಚ್ಚು ಮಾತುಗಳನ್ನು ಆಡಿದೆ. ಈ ಮಾತುಗಳನ್ನು ಕೇಳಿ ಅನುಗೆ ತಲೆ ಕೆಟ್ಟಂತಾಗಿ ಏನಾದರೂ ಒಂದು ನಿರ್ಧಾರಕ್ಕೆ ಬರಲೇಬೇಕು. ಈಗ ನಾನು ಒಬ್ಬಳಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.

ಮಗಳಿಗೆ ಏನೋ ಮಾಡುತ್ತಾರೆ ಎಂಬ ಆತಂಕದಲ್ಲಿ ಸುಬ್ಬು!

ಮಗಳಿಗೆ ಏನೋ ಮಾಡುತ್ತಾರೆ ಎಂಬ ಆತಂಕದಲ್ಲಿ ಸುಬ್ಬು!

ಇತ್ತ ಸುಬ್ಬು ಹಾಗೂ ಪುಷ್ಪ ಇಬ್ಬರೂ ಮಗಳ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಪುಷ್ಪ, ರಾಜನಂದಿನಿಯೇ ಮರುಜನ್ಮ ಪಡೆದು ಬಂದಿದ್ದಾಳೆ ಎಂಬುದನ್ನು ನಂಬಿದ್ದು, ಖುಷಿಯಾಗಿದ್ದಾಳೆ. ತನ್ನ ಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ನಂಬಿದ್ದಾಳೆ. ಆದರೆ, ಸುಬ್ಬು ಹಾಗಲ್ಲ. ತಮ್ಮ ಯಜಮಾನ ಹೇಳಿದ ಮಾತುಗಳನ್ನು ತಲೆಯಲ್ಲಿಟ್ಟುಕೊಂಡು ಸಂಕಟ ಅನುಭವಿಸುತ್ತಿದ್ದಾನೆ. ನಮ್ಮ ಮಗಳನ್ನು ಆರ್ಯನಿಗೆ ಕೊಟ್ಟು ತಪ್ಪು ಮಾಡಿದ್ವಿ. ಅಲ್ಲಿ ನಮ್ಮ ಮಗಳಿಗೆ ಯಾವ ಕಷ್ಟ ಕಾದಿದೆಯೋ ಎಂಬ ಯೋಚನೆಯಲ್ಲಿದ್ದಾರೆ. ಬೇಕಂತಲೇ ಅನು ತಲೆಯಲ್ಲಿ ರಾಜನಂದಿನಿ ಕಥೆಯನ್ನು ತುಂಬಿದ್ದಾರೆ. ಮಗಳಿಗೆ ಏನೋ ಮಾಡುತ್ತಾರೆ ಎಂಬ ಆತಂಕದಲ್ಲಿ ಸುಬ್ಬು ಇದ್ದಾನೆ. ಇದೇ ವಿಚಾರವನ್ನು ಪುಷ್ಪಾ ಬಳಿಯೂ ಹೇಳಿಕೊಂಡಿದ್ದು, ಇಬ್ಬರೂ ಕಿತ್ತಾಡಿದ್ದಾರೆ.

ಒಳಗೊಳಗೆ ಖುಷಿ ಪಟ್ಟ ಆರ್ಯ!

ಒಳಗೊಳಗೆ ಖುಷಿ ಪಟ್ಟ ಆರ್ಯ!

ಇನ್ನು ಅನು ತನಗೆ ಬರಬೇಕಿರುವ ಆಸ್ತಿಯ ಪಾಲನ್ನು ಕೇಳಲು ಮುಂದಾಗಿದ್ದಾಳೆ. ಹೀಗಾಗಿ ಮನೆಯವರೆಲ್ಲರನ್ನೂ ಕರೆದು ಮಾತನಾಡಿದ್ದಾಳೆ. ಅಂದು ಬೇಡ ಅಂದಿದ್ದೆ. ಆದರೆ, ಇವತ್ತು ಕೇಳುತ್ತಿದ್ದೇನೆ. ನನ್ನನ್ನು ತಪ್ಪು ತಿಳಿಯಬೇಡಿ, ನನ್ನ ಪಾಲಿನ ಆಸ್ತಿಯನ್ನು ನಾನು ತೆಗೆದುಕೊಳ್ಳುವುದಕ್ಕೆ ಸಿದ್ಧವಿದ್ದೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಆರ್ಯ, ಶಾರದಾ, ಹರ್ಷ ಎಲ್ಲರೂ ಖುಷಿ ಪಡುತ್ತಾರೆ. ಶಾರದಾ ಮನಸ್ಸಲ್ಲಂತೂ ಒಂದು ನಿರಾಳತೆಯ ಭಾವ ಮೂಡುತ್ತದೆ. ಇನ್ನು ಆರ್ಯ ಒಳಗೊಳಗೆ ಖುಷಿ ಪಡುತ್ತಾನೆ. ಕೊನೆಗೂ ತಾನು ಪಟ್ಟ ಕನಸು ನನಸಾಗುತ್ತಿದೆ ಎಂದು ನಂಬಿದ್ದಾನೆ. ಇನ್ನು ಮಾನ್ಸಿ ಅನುಳನ್ನು ಪ್ರಶ್ನೆ ಮಾಡಿದ್ದಾಳೆ. ಆವತ್ತು ಬೇಡ ಎಂದು ಹೇಳಿ ಇವತ್ತು ತೆಗೆದುಕೊಳ್ಳುವುದಕ್ಕೆ ಕಾರಣವೇನು ಎಂದು ಕೇಳಿದ್ದಾಳೆ. ಇದಕ್ಕೆ ಅನು, ಆವತ್ತಿನ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ವ್ಯತ್ಯಾಸವಿದೆ ಎಂದು ಹೇಳಿದ್ದಾಳೆ.

ಮಾತನಾಡಲು ಸಿಗೋಣ ಎಂದಿರುವ ಅನು!

ಮಾತನಾಡಲು ಸಿಗೋಣ ಎಂದಿರುವ ಅನು!

ಹರ್ಷ ಅನು ಜೊತೆ ಮಾತನಾಡುತ್ತಾ, ಯಾಕೆ ಒಂದು ಸಲ ತೆಗೆದುಕೊಳ್ಳುವ ನಿರ್ಧಾರವನ್ನು ಮತ್ತೊಂದು ಸಲ ಬದಲಿಸುತ್ತಿದ್ದೀರಾ ಎಂದು ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಅನು, ನನಗಿರುವ ಗುರಿ ಒಂದೇ ಭಾವ, ಅದು ನನ್ನ ಪ್ರತಿಕಾರ. ಅದೆಲ್ಲವನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತೀನಿ. ನಾನು ಶಾನುಭೋಗರು, ಮೀರಾ ಹಾಗೂ ನಿಮ್ಮ ಜೊತೆಗೆ ಮಾತನಾಡಬೇಕು. ಸಿಗೋಣ ಎಂದಿದ್ದಾಳೆ.

More from Filmibeat

English summary
Jothe Jotheyali Serial Written Update On June 9th Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X