ಜೊತೆ ಜೊತೆಯಲಿ ಮಾರ್ಚ್ 15ರ ಸಂಚಿಕೆ: ಆರ್ಯವರ್ಧನ್ ಮೋಸಗಾರ ಎಂದು ಗುಡುಗಿದ್ಯಾರು?
'ಜೊತೆ ಜೊತೆಯಲಿ' ಧಾರಾವಾಹಿ ಸಾಕಷ್ಟು ತಿರುವುಗಳಿಂದ ಸಾಗುತ್ತಿದೆ. ಸದ್ಯ ಆರ್ಯವರ್ಧನ್ ಅಸಲಿ ಮುಖವಾಡ ಕಳಚಿ ಬೀಳುವ ಸಮಯ ಹತ್ತಿರ ಬಂದಿದೆ. ಅನು ಸಿರಿ ಮನೆಗೆ ಒಂದೊಂದೆ ಅರ್ಥ ಆಗುತ್ತಿದೆ. ಹಾಗಾಗಿ ಆರ್ಯವರ್ಧನ್ ಅಸಲಿ ರೂಪ ತಿಳಿಯಲು ಅನು ಎಲ್ಲಿಲ್ಲದ ಸಾಹಸ ಮಾಡುತ್ತಿದ್ದಾಳೆ.
ಅನು ಎಲ್ಲಾ ಸತ್ಯ ಗೊತ್ತಿರುವ ಜಲಂದರ್ ಹಿಂದೆ ಬಿದ್ದಿದ್ದಾಳೆ. ಹೇಗಾದರು ಮಾಡಿ ರಾಜನಂದಿನಿ ಮತ್ತು ಆರ್ಯವರ್ಧನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂದು ಪಣ ತೊಟ್ಟಿದ್ದಾಳೆ. ಒಂದು ಕಡೆ ಅನುಗೆ ರಾಜನಂದಿನಿ ಜೀವನದ ಬಗ್ಗೆ ಕನಸು ಬೀಳುತ್ತಿದೆ. ರಾಜನಂದಿಯ ಬಗ್ಗೆ ಕನಸು ಕಂಡು ಕಕ್ಕಾ ಬಿಕ್ಕಿ ಆಗಿದ್ದಾಳೆ.
ಹಾಗಾಗಿ ರಾತ್ರೋ ರಾತ್ರಿ ಅನು ಜಲಂದರ್ ಅವರನ್ನು ಹುಡುಕಿಕೊಂಡು ಹೊರಟಿದ್ದಾಳೆ. ಎಲ್ಲಾ ಸತ್ಯವನ್ನು ಜಲಂದರ್ ಬಳಿಬಂದು ತಿಳಿದುಕೊಳ್ಳಲು ಅನು ಕಾತರಳಾಗಿದ್ದಾಳೆ. ಅನು ಮಾರ್ಚ್ 17ರ ಸಂಚಿಕೆಯಲ್ಲಿ ಜಲಂದರ್‌ನನ್ನು ಭೇಟಿ ಆಗುತ್ತಾಳೆ. ಆದರೆ ಎಷ್ಟರ ಮಟ್ಟಿಗೆ ಆಕೆಯ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಎನ್ನುವುದನ್ನು ಮುಂದೆ ಓದಿ..

ಸತ್ಯದ ಹಿಂದೆ ಹೊರಟ ಅನು!
ಅನು ಸಿರಿಮನೆ ಆರ್ಯವರ್ಧನ್ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾ ಇದ್ದಾಳೆ. ಹಾಗಾಗಿ ಅನು ಆರ್ಯವರ್ಧನ್ ಎಷ್ಟೇ ಪ್ರೀತಿ ತೋರಿಸಿದರು, ಎಷ್ಟೇ ಮಾತನಾಡಿಸಿದರು ಆತನ ಮಾತಿಗೆ ಕರಗುತ್ತಾ ಇಲ್ಲಾ. ಸತ್ಯವನ್ನು ತಿಳಿದುಕೊಳ್ಳಲು ಅನು ಮತ್ತೆ ಜಲಂದರ್ ಭೇಟಿ ಮಾಡಿದ್ದಾಳೆ. ನಿಮಗೆ ಎಲ್ಲಾ ಸತ್ಯ ಗೊತ್ತು. ರಾಜನಂದಿನಿ ಬಗ್ಗೆಯೂ ಗೊತ್ತು, ಅದನ್ನು ದಯವಿಟ್ಟು ಹೇಳಿ ಎಂದು ಬೇಡಿಕೊಳ್ಳುತ್ತಾಳೆ.

ಅನುಗೆ ಸತ್ಯ ಹೇಳುತ್ತಾನಾ ಜಲಂದರ್?
ಆರ್ಯವರ್ಧನ್ ಬಗ್ಗೆ ಅನು ಕೇಳಿದಾಗ, ಅವನೊಬ್ಬ ಮೋಸಗಾರ ಎಂದು ಜಲಂದರ್ ಗುಡುಗುತ್ತಾನೆ. ಈ ಮೊದಲೆ ಅನುಗೆ ಆರ್ಯವರ್ಧನ್ ಮದುವೆ ಆಗದೇ ಇರಲು ಹೇಳಿರುತ್ತಾರೆ. ಅದರ ಬಗ್ಗೆ ಮಾತನಾಡುವ ಜಲಂದರ್, ನಾನು ಮೊದಲೇ ಆರ್ಯವರ್ಧನ್ ಜೊತೆಗೆ ನಿಮ್ಮ ಮದುವೆ ತಪ್ಪಿಸೋ ಪ್ರಯತ್ನ ಮಾಡಿದ್ದೆ. ಮೊದಲೇ ನನ್ನ ಮಾತು ಕೇಳಿದ್ದರೆ ಈ ಕಷ್ಟ ಇರುತ್ತಾ ಇರಲಿಲ್ಲ. ಲವ್ ಬ್ರೇಕಪ್ ನೋವು ಮಾತ್ರವೇ ಇರುತ್ತಿತ್ತು ಎನ್ನುತ್ತಾನೆ.

ಜಲಂದರ್ ಮಾತಿಗೆ ಶಾಕ್ ಆದ ಅನು!
ಜಲಂದರ್ ನೀನು ಆರ್ಯವರ್ಧನ್ ಎನ್ನುವ ಮೋಸಗಾರನನ್ನು ಮದುವೆ ಆಗಿದ್ದೀಯಾ ಎಂದು ಅನುಗೆ ಹೇಳುತ್ತಾನೆ. ಅದನ್ನು ಕೇಳಿದ ಅನುಗೆ ಒಂದು ಕ್ಷಣ ಶಾಕ್ ಆಗುತ್ತದೆ. ಆರ್ಯವರ್ಧನ್ ನಂಬಿಕೆ ದ್ರೋಹಿ, ಮೋಸಗಾರ ಎಂದು ಹೇಳುವ ಜಲಂದರ್, ರಾಜನಂದಿನಿ ಸಾವು ಮತ್ತು ಆರ್ಯವರ್ಧನ್ ಬಗ್ಗೆ ಎಲ್ಲಾ ವಿಚಾರಗಳನ್ನು ಅನುಗೆ ಹೇಳುತ್ತಾನೆ ಎನ್ನುವ ಸೂಚನೆ ಸಿಕ್ಕಿದೆ.

ಈಗಲಾದರೂ ಅನುಗೆ ಸತ್ಯ ತಿಳಿಯುತ್ತಾ?
ಇಷ್ಟು ದಿನದ ಬಳಿಕ ಈಗ ಆರ್ಯವರ್ಧನ್ ಮೇಲೆ ಅನುಗೆ ಅನುಮಾನ ಬಂದಿದೆ. ಹಾಗಾಗಿ, ಸತ್ಯದ ದಾರಿಗಳನ್ನು ಹುಡುಕುತ್ತಿದ್ದಾಳೆ. ಅದರೆ ಅನುಗೆ ಸತ್ಯ ತಿಳಿಯಲು ಆರ್ಯವರ್ಧನ್ ಬಿಡುತ್ತಾನಾ?, ಜಲಂದರ್ ತನಗೆ ಗೊತ್ತಿರುವ ಎಲ್ಲಾ ಸತ್ಯಗಳನ್ನು ಮುಚ್ಚು ಮರೆ ಮಾಡದೇ, ಅನು ಮುಂದೆ ಬಾಯಿ ಬಿಡುತ್ತಾನಾ ಎನ್ನುವುದು ರಿವೀಲ್ ಆಗಲಿದೆ. ಒಂದು ವೇಳೆ ಸತ್ಯ ತಿಳಿದರೆ ಅನು ಮುಂದಿನ ನಡೆ ಏನು ಎನ್ನುವುದು ಕುತೂಹಲ.


Click it and Unblock the Notifications











